ಇನ್ಮುಂದೆ YouTube ವೀಕ್ಷಣೆ ಬಲು ‘ದುಬಾರಿ’; ಪ್ರೀಮಿಯಂ ಬೆಲೆ ಹೆಚ್ಚಳ
YouTube Premium Price Hike: ಯೂಟ್ಯೂಬ್ ಬಳಕೆದಾರರಿಗೆ ದೊಡ್ಡ ಶಾಕ್! ಇನ್ಮುಂದೆ ಯೂಟ್ಯೂಬ್ ವೀಕ್ಷಣೆ ಬಲು 'ದುಬಾರಿ'. ಹೌದು, ಗೂಗಲ್‌ನ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ತನ್ನ ಜಾಹೀರಾತು ಮುಕ್ತ ಚಂದಾದಾರಿಕೆ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. ಇದು ಗ್ರಾಹಕರಿಗೆ ಬಲವಾದ ಹೊಡೆತವನ್ನು ನೀಡಿದೆ. ಯೂಟ್ಯೂಬ್‌ನ ನಿರ್ಧಾರವು ವೈಯಕ್ತಿಕ, ವಿದ್ಯಾರ್ಥಿ ಮತ್ತು ಫ್ಯಾಮಿಲಿ (ಕುಟುಂಬ) ಪ್ಲಾನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಯೋಜನೆಗಳ ಬೆಲೆ ಸ್ವಲ್ಪ ಹೆಚ್ಚಾಗಿದೆ. ಇನ್ನೂ, ಕೆಲವು ಯೋಜನೆಗಳ ಬೆಲೆ 200 ರೂ.ಗಳ ವರೆಗೆ ಹೆಚ್ಚಾಗಿದೆ.
ಹೌದು, ಯೂಟ್ಯೂಬ್ ಪ್ರೀಮಿಯಂ ಯೋಜನೆಗಳ ಬೆಲೆಯನ್ನು ಶೇ.58 ರಷ್ಟು ಹೆಚ್ಚಿಸಲಾಗಿದೆ. ಕಂಪನಿಯು ಪ್ರಸ್ತುತ ಬಳಕೆದಾರರಿಗೆ ಮಾಸಿಕ, 3 ತಿಂಗಳು ಮತ್ತು 12 ತಿಂಗಳ ಚಂದಾದಾರಿಕೆ ಯೋಜನೆಗಳನ್ನು ಹೊಂದಿದೆ. ಹೊಸ ಪ್ಲಾನ್ ಪರಿಷ್ಕರಣೆಯು ವೈಯಕ್ತಿಕ, ವಿದ್ಯಾರ್ಥಿಗಳು ಮತ್ತು ಕುಟುಂಬದ YouTube ಪ್ರೀಮಿಯಂ ಆಫರ್‌ಗಳಿಗೆ ಅನ್ವಯಿಸುತ್ತದೆ. ನೀವು ತಿಂಗಳಿಗೆ 110 ರೂಪಾಯಿಗಳವರೆಗೆ ಹೆಚ್ಚು ಪಾವತಿಸಬೇಕಾಗುತ್ತದೆ. ಹಾಗಿದ್ರೆ, ಈ ಯೋಜನೆಗಳಿಗೆ ನೀವು ಈಗ ಎಷ್ಟು ಹಣವನ್ನು ಖರ್ಚು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

YouTube ಪ್ರೀಮಿಯಂ ಯೋಜನೆ: ಹಳೆಯ ಬೆಲೆ
- ವಿದ್ಯಾರ್ಥಿ ಪ್ಲಾನ್ (ಮಾಸಿಕ) = 79 ರೂ.
- ವೈಯಕ್ತಿಕ ಪ್ಲಾನ್ (ಮಾಸಿಕ) = 129 ರೂ.
- ಫ್ಯಾಮಿಲಿ ಪ್ಲಾನ್ (ಮಾಸಿಕ) = 189 ರೂ.
- ವೈಯಕ್ತಿಕ ಪ್ರಿಪೇಯ್ಡ್ ಪ್ಲಾನ್ (ಮಾಸಿಕ) = 139 ರೂ.
- ವೈಯಕ್ತಿಕ ಪ್ರಿಪೇಯ್ಡ್ ಪ್ಲಾನ್ (ತ್ರೈಮಾಸಿಕ) = 399 ರೂ.
- ವೈಯಕ್ತಿಕ ಪ್ರಿಪೇಯ್ಡ್ ಪ್ಲಾನ್ (ವಾರ್ಷಿಕ) = 1,290 ರೂ.
YouTube ಪ್ರೀಮಿಯಂ ಯೋಜನೆ: ಪರಿಷ್ಕೃತ ಬೆಲೆ (ಹೊಸ ಬೆಲೆ)
- ವಿದ್ಯಾರ್ಥಿ ಪ್ಲಾನ್ (ಮಾಸಿಕ) = 89 ರೂ.
- ವೈಯಕ್ತಿಕ ಪ್ಲಾನ್ (ಮಾಸಿಕ) = 149 ರೂ.
- ಫ್ಯಾಮಿಲಿ ಪ್ಲಾನ್ (ಮಾಸಿಕ) = 299 ರೂ.
- ವೈಯಕ್ತಿಕ ಪ್ರಿಪೇಯ್ಡ್ ಪ್ಲಾನ್ (ಮಾಸಿಕ) = 159 ರೂ.
- ವೈಯಕ್ತಿಕ ಪ್ರಿಪೇಯ್ಡ್ ಪ್ಲಾನ್ (ತ್ರೈಮಾಸಿಕ) = 459 ರೂ.
- ವೈಯಕ್ತಿಕ ಪ್ರಿಪೇಯ್ಡ್ ಪ್ಲಾನ್ (ವಾರ್ಷಿಕ) = 1,490 ರೂ.
ಯೂಟ್ಯೂಬ್ ಪ್ರೀಮಿಯಂ ಪ್ಲಾನ್‌ಗಳು ಹೊಸ ಬೆಲೆಯೊಂದಿಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ವೈಯಕ್ತಿಕ ಪ್ಲಾನ್‌ನ (ಮಾಸಿಕ) ಹಳೆಯ ಬೆಲೆ 129 ರೂ. ಇತ್ತು. ಪ್ರಸ್ತುತ ಹೊಸ ಬೆಲೆ 149 ರೂ. ಆಗಿದೆ. ವಿದ್ಯಾರ್ಥಿ ಪ್ಲಾನ್‌ನ (ಮಾಸಿಕ) ಹಳೆಯ ಬೆಲೆ 79 ರೂ. ಇತ್ತು. ಇದೀಗ ಹೊಸ ಬೆಲೆ 89 ರೂ. ಆಗಿದೆ. ಫ್ಯಾಮಿಲಿ ಪ್ಲಾನ್‌ನ (ಮಾಸಿಕ) ಯೋಜನೆಯ ಹಳೆಯ ಬೆಲೆ 189 ರೂ. ಆಗಿದೆ.

ವೈಯಕ್ತಿಕ ಪ್ರಿಪೇಯ್ಡ್ ಪ್ಲಾನ್‌ನ (ಮಾಸಿಕ) ಹಳೆಯ ಬೆಲೆ 139 ರೂ. ಇದೆ. ಆದರೆ, ಈಗ ನೀವು ಈ ಯೋಜನೆ ಪಡೆಯಲು 159 ರೂ. ಪಾವತಿಸಬೇಕು. 3 ತಿಂಗಳ ಪ್ಲಾನ್ ಪ್ರಸ್ತುತ 399 ರೂ.ಗಳ ಬದಲು 459 ರೂ. ಆಗಿದೆ. ಕಂಪನಿಯು ಬಳಕೆದಾರರಿಗಾಗಿ ವಾರ್ಷಿಕ ಯೋಜನೆಯನ್ನು ಸಹ ನೀಡುತ್ತದೆ. ವೈಯಕ್ತಿಕ ಪ್ರಿಪೇಯ್ಡ್ (ವಾರ್ಷಿಕ) ಪ್ಲಾನ್‌ನ ಹಳೆಯ ಬೆಲೆ 1,290 ರೂ. ಇತ್ತು. ಆದರೆ, ಈಗ ಈ ಯೋಜನೆ 200 ರೂ.ಗಳಷ್ಟು ದುಬಾರಿಯಾಗಿದೆ. ಬೆಲೆ ಹೆಚ್ಚಳದ ನಂತರ, ಪ್ರಸ್ತುತ ಈ ಪ್ಲಾನ್‌ಗೆ 1,490 ರೂ.ಗಳನ್ನು ಪಾವತಿಸಬೇಕಾಗಿದೆ.
YouTube Premiumನ ಅನುಕೂಲಗಳೇನು?
ನೀವು (ಬಳಕೆದಾರರು) ಯೂಟ್ಯೂಬ್ ಪ್ರೀಮಿಯಂನೊಂದಿಗೆ ವಿಡಿಯೋಗಳನ್ನು ನೋಡುವಾಗ ಜಾಹೀರಾತು ಮುಕ್ತ ಸ್ಟ್ರೀಮಿಂಗ್ ಅನುಭವವನ್ನು ಪಡೆಯಬಹುದು. ಇದಲ್ಲದೆ, ಪ್ರೀಮಿಯಂ ಬಳಕೆದಾರರು ಹಿನ್ನೆಲೆ ವಿಡಿಯೋಗಳು (Background videos) ಮತ್ತು ಸಂಗೀತವನ್ನು ಸಹ ಕೇಳಬಹುದು. ಮತ್ತೊಂದೆಡೆ, ಚಂದಾದಾರಿಕೆ ಯೋಜನೆ ಇಲ್ಲದವರು ಹಿನ್ನೆಲೆ ಸಂಗೀತ ಕೇಳುವ ಸೌಲಭ್ಯದ ಪ್ರಯೋಜನವನ್ನು ಪಡೆಯುವುದಿಲ್ಲ. ಇದಲ್ಲದೆ, ನೀವು ಯೂಟ್ಯೂಬ್ ಪ್ರೀಮಿಯಂನೊಂದಿಗೆ ಪಿಕ್ಚರ್ ಇನ್ ಪಿಕ್ಚರ್ ಮೋಡ್ ಮತ್ತು ವರ್ಧಿತ ಹೈ ಡೆಫಿನಿಷನ್ ವಿಡಿಯೋ ಸ್ಟ್ರೀಮಿಂಗ್ ಸೌಲಭ್ಯವನ್ನು ಪಡೆಯಬಹುದು.


Click it and Unblock the Notifications








