ರಾಹುಲ್‌ ಗಾಂಧಿ ವಿಡಂಬನಾ ವಿಡಿಯೋ ತೆಗೆದು ಹಾಕಿದ ಯೂಟ್ಯೂಬ್

Written By:

ರಾಹುಲ್‌ ಗಾಂಧಿ ಭಾಷಣವನ್ನು ವಿಡಂಬಿಸಿ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿದ್ದ ವಿಡಿಯೋವನ್ನು ಯೂ ಟ್ಯೂಬ್‌ ತನ್ನ ಸೈಟ್‌ನಿಂದ ತೆಗೆದುಹಾಕಿದೆ.

ರಾಹುಲ್‌ ಗಾಂಧಿ ನವದೆಹಲಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ(ಎಐಸಿಸಿ) ಸಭೆಯಲ್ಲಿ ಮಾತನಾಡಿದ್ದ ಪದಗಳಿಗೆ ಕೆಲವು ಹಿನ್ನಲೆ ಧ್ವನಿಯನ್ನು ಸೇರಿಸಿ ಎಡಿಟ್‌ ಮಾಡಲಾಗಿದ್ದ ವಿಡಿಯೋ ಒಂದು ವಾರದ ಹಿಂದೆ ಅಪ್‌ಲೋಡ್‌ ಆಗಿತ್ತು. ರಾಜ್ಯಸಭಾ ಲೋಗೋವಿದ್ದ Rahul Gandhi Sing.. ವಿಡಿಯೋವನ್ನು ಇದುವರೆಗೆ 2,29,319 ಜನ ವೀಕ್ಷಿಸಿದ್ದರೆ, 276 ಕಾಮೆಂಟ್‌,2,853 ಲೈಕ್‌,128 ಜನ ಡಿಸ್‌ಲೈಕ್‌‌ ಮಾಡಿದ್ದರು.

 ರಾಹುಲ್‌ ಗಾಂಧಿ ವಿಡಂಬನಾ ವಿಡಿಯೋ ತೆಗೆದು ಹಾಕಿದ ಯೂಟ್ಯೂಬ್

ನಕಲಿ ರಾಜ್ಯಸಭಾ ಲೋಗೋದ ಜೊತೆಗೆ ಕಾಂಗ್ರೆಸ್‌ ಪಕ್ಷದ ಬಗ್ಗೆ ಅವಹೇಳನಕಾರಿ ಅಂಶ ವಿಡಿಯೋದಲ್ಲಿರುವುದರಿಂದ ಯೂ ಟ್ಯೂಬ್‌‌ ಇದನ್ನು ತೆಗೆದಿದೆ. ಭಾರತೀಯ ಮೂಲದ ದುಬೈ ಕಲಾವಿದ ರೋಹಿತ್‌ ಐಯ್ಯಂಗಾರ್‌ ಈ ವಿಡಿಯೋವನ್ನು ಯೂ ಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot