Home
ಸುದ್ದಿಜಾಲ

ಭಾರತದಲ್ಲಿ ಈ ಫೀಚರ್ ನ್ನು ಟೆಸ್ಟ್ ಮಾಡುತ್ತಿರುವ ಯುಟ್ಯೂಬ್

By Gizbot Bureau

ಗೂಗಲ್ ಸಂಸ್ಥೆ ಭಾರತವು ಪರೀಕ್ಷೆಗಳಿಗೆ ಒಳಪಡಿಸಲು ಇರುವ ಉತ್ತಮ ತಾಣ. ಕಳೆದ ಎರಡು ವರ್ಷಗಳಲ್ಲಿ ಕಂಪೆನಿಯು ಹಲವಾರು ಫೀಚರ್ ಗಳನ್ನು ಭಾರತದಲ್ಲೇ ಮೊದಲು ಬಿಡುಗಡೆಗೊಳಿಸಿದೆ. ಅದರಲ್ಲಿ ಕೆಲವು ಹೊಸ ಸರ್ಚ್ ಫೀಚರ್ ಗಳು, ಯುಟ್ಯೂಬ್ ಫೀಚರ್ ಗಳು ಮತ್ತು ಇತ್ಯಾದಿಗಳು ಸೇರಿವೆ. ಇದೀಗ ಮತ್ತೊಮ್ಮೆ ಭಾರತದಲ್ಲಿ ಒಂದು ಫೀಚರ್ ನ್ನು ಯುಟ್ಯೂಬ್ ಟೆಸ್ಟ್ ಮಾಡುತ್ತಿದೆ. ಎಕ್ಸ್ ಡಿಎ ಡೆವಲಪರ್ಸ್ ವರದಿಯು ಹೇಳುವ ಪ್ರಕಾರ ಇದೀಗ ಗೂಗಲ್ ವೀಡಿಯೋ ಪಬ್ಲಿಷರ್ ಗಳಿಗೆ ಕಮೆಂಟ್ ಗಳನ್ನು ಹೈಡ್ ಮಾಡುವುದಕ್ಕೆ ಅವಕಾಶ ನೀಡುವ ಫೀಚರ್ ವೊಂದನ್ನು ಟೆಸ್ಟ್ ಮಾಡುತ್ತಿದೆ. ಈ ಫೀಚರ್ ಸದ್ಯ ಭಾರತದ ಆಂಡ್ರಾಯ್ಡ್ ಯುಟ್ಯೂಬ್ ಆಪ್ ಗಳಲ್ಲಿ ಕಾಣಿಸಿದೆ.

ಭಾರತದಲ್ಲಿ ಈ ಫೀಚರ್ ನ್ನು ಟೆಸ್ಟ್ ಮಾಡುತ್ತಿರುವ ಯುಟ್ಯೂಬ್

ಯಾವಾಗ ಬಳಕೆದಾರರು ಕಮೆಂಟ್ ಗಳನ್ನು ನೋಡುವುದಕ್ಕಾಗಿ ವೀಡಿಯೋದಿಂದ ಸ್ಕ್ರೋಲ್ ಡೌನ್ ಮಾಡುತ್ತಾರೋ ಕೂಡಲೇ ಅವಳು/ನು ಅದನ್ನು ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಅವರಿಗೆ ಸ್ಕ್ರೋಲ್ ಡೌನ್ ಮಾಡಿದ ನಂತರ ಕೆಳಭಾಗದಲ್ಲಿ ಪ್ರಾಮ್ಟ್ ವೊಂದು ಕಾಣಿಸುತ್ತದೆ.ಅದರಲ್ಲಿ "ನೀವು ಕಮೆಂಟ್ಸ್ ನ್ನು ಹುಡುಕಾಡುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಟ್ಯಾಪ್ ಮಾಡಿ" ಎಂದು ಬರೆಯಲಾಗಿರುತ್ತದೆ.

ಇದನ್ನು ಟ್ಯಾಪ್ ಮಾಡುವುದರಿಂದ ಬಳಕೆದಾರರನ್ನು ವೀಡಿಯೋ ಸೆಕ್ಷನ್ನಿನ ಮೇಲ್ಬಾಗಕ್ಕೆ ಕರೆದೊಯ್ಯಲಾಗುತ್ತದೆ ಮತ್ತು ಕೆಲವು ಬಟನ್ ಗಳ ಸೆಟ್ ನ್ನು ತೋರಿಸಲಾಗುತ್ತದೆ. ಅದರಲ್ಲಿ ಲೈಕ್, ಅನ್ ಲೈಕ್, ಕಮೆಂಟ್, ಶೇರ್ ಮತ್ತು ಡೌನ್ ಲೋಡ್ ಗಳು ಸೇರಿವೆ. ಕಮೆಂಟ್ಸ್ ಟ್ಯಾಬ್ ನ್ನು ಟ್ಯಾಪ್ ಮಾಡುವುದರಿಂದಾಗಿ ನೀವು ವೀಡಿಯೋಗೆ ಮಾಡಲಾಗಿರುವ ಎಲ್ಲಾ ಕಮೆಂಟ್ ಗಳನ್ನು ವೀಕ್ಷಿಸಬಹುದು.ಕಮೆಂಟ್ ಸೆಕ್ಷನ್ ನ್ನು ಕ್ಲೋಸ್ ಮಾಡುವುದಕ್ಕೂ ಕೂಡ ವಿಭಿನ್ನ ಬಟನ್ ಇರುತ್ತದೆ ಮತ್ತು ಅದನ್ನು ಸ್ವೈಪ್ ಮಾಡುವುದರಿಂದಾಗಿ ರಿಫ್ರೆಶ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಹೊಸ ಕಮೆಂಟ್ ಬಟನ್ ನ್ನು ಸೇರಿಸುವುದರ ಜೊತೆಗೆ ಯುಟ್ಯೂಬ್ "ಸೇವ್ ಟು ವಾಚ್ ಲೇಟರ್" ಆಯ್ಕೆಯನ್ನು ಹೈಡ್ ಮಾಡಲಿದೆ. ಸದ್ಯ ಈ ಬಟನ್ ನ್ನು ಡೌನ್ ಲೋಡ್ ಆಯ್ಕೆಯನ್ನು ಟ್ಯಾಪ್ ಮಾಡುವಾಗ ನೋಡಬಹುದಾಗಿದೆ.

ಯಾವಾಗ ಈ ಫೀಚರ್ ಸಂಪೂರ್ಣ ಬಿಡುಗಡೆಗೊಳ್ಳುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಮೆಂಟ್ ಸೆಕ್ಷನ ನ್ನು ಡೀಫಾಲ್ಟ್ ಆಗಿ ಹೈಡ್ ಮಾಡುವುದರಿಂದಾಗಿ ಪೇಜ್ ನ್ನು ವೇಗವಾಗಿ ಲೋಡ್ ಮಾಡುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಒಟ್ಟಾರೆ ಅನುಭವವನ್ನು ಅಧಿಕವಾಗಿಸುವುದಕ್ಕೆ ಸಾಧ್ಯವಾಗುತ್ತದೆ.

ಕಮೆಂಟ್ ಸೆಕ್ಷನ್ ನಲ್ಲಿ ಹೆಚ್ಚಾಗಿ ಜನರು ಟ್ರಾಲ್ ಮಾಡುವ ಕಟೆಂಟ್ ಗಳನ್ನು ಹಾಕುತ್ತಾರೆ ಮತ್ತು ಸೈಬರ್ ಸಮಸ್ಯೆ ಮತ್ತು ನಿಂದನೆ ಮಾಡುವಂತಹ ಕಮೆಂಟ್ ಗಳು ಇರುತ್ತದೆ. ಈಗ ಬರುವ ಹೊಸ ಫೀಚರ್ ನಿಂದಾಗಿ ಬದಲಾವಣೆ ಹೇಗೆ ಸಾಧ್ಯವಾಗುತ್ತದೆ ಅಥವಾ ಈ ಮೇಲಿನ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದೇ ಎಂಬ ಬಗ್ಗೆ ಖಾತ್ರಿ ಇಲ್ಲ.

ಗೂಗಲ್ ಸಿಇಏ ಸುಂದರ್ ಪಿಚೈ ಕಂಪೆನಿಯು ಸುಮಾರು 9 ಮಿಲಿಯನ್ ದುಷ್ಪರಿಣಾಮ ಬೀರುವಂತಹ ವೀಡಿಯೋಗಳನ್ನು ಯುಟ್ಯೂಬ್ ನಿಂದ ರಿಮೂವ್ ಮಾಡಿಲಾಗಿದೆ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ ಫ್ಲ್ಯಾಟ್ ಫಾರ್ಮ್ ನ್ನು ಸಂಪೂರ್ಣ ಸ್ವಚ್ಛಗೊಳಿಸುವುದು ಸಾಧ್ಯವಿಲ್ಲ ಎಂಬುದನ್ನೂ ಕೂಡ ತಿಳಿಸಿದ್ದರು.

Best Mobiles in India

English summary
YouTube spotted testing new 'Comments' button in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+