ಕಳ್ಳ ಯೂಟ್ಯೂಬರ್‌ಗಳಿಗೆ ಬಿಗ್ ಶಾಕ್ ನೀಡಿದ ಯೂಟ್ಯೂಬ್!
ಸುಳ್ಳುಸುದ್ದಿ ಮತ್ತು ಅತಿರಂಜಕ ಸುದ್ದಿಗಳ ಮೂಲಕ ಹಣ ಗಳಿಕೆ ಅಥವಾ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿದ್ದ ಯೂಟ್ಯೂಬರ್‌ಗಳಿಗೆ ಜನಪ್ರಿಯ ಯೂಟ್ಯೂಬ್ ಸಂಸ್ಥೆ ಶಾಕ್ ನೀಡಿದೆ. ನಕಲಿ ವಿಡಿಯೋ ಮತ್ತು ನಕಲಿ ಪೋಸ್ಟ್‌ಗಳ ತಡೆಗೆ ಗೂಗಲ್ ಒಡೆತನದ ವಿಡಿಯೋ ತಾಣ ಯೂಟ್ಯೂಬ್ ದೇಶದಲ್ಲಿ ಗಂಭೀರ ಕ್ರಮ ಕೈಗೊಳ್ಳುತ್ತಿದ್ದು, ನೂತನವಾಗಿ ಫ್ಯಾಕ್ಟ್ ಚೆಕ್ ಪಾಪ್ ಅಪ್ ಫೀಚರ್ ಅನ್ನು ಪರಿಶೀಲಿಸುತ್ತಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿದೆ.
ಚುನಾವಣೆಯ ಸಂದರ್ಭದಲ್ಲಿ ಪ್ರಚಾರಕ್ಕೆ ಮತ್ತು ಸಮಾಜದಲ್ಲಿ ತಪ್ಪು ಸಂದೇಶ ಹರಡಿ ಜನರಲ್ಲಿ ದ್ವೇಷ ಮೂಡಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನು ತಡೆಯಲು ಯೂಟ್ಯೂಬ್ ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ. ಹಾಗಾಗಿ, ಇದೇ ಮೊದಲ ಬಾರಿಗೆ ಭಾರತದಲ್ಲಿ ಫ್ಯಾಕ್ಟ್ ಚೆಕ್ ಪಾಪ್ ಅಪ್ ಫೀಚರ್ ಅನ್ನು ಯೂಟ್ಯೂಬ್ ಪರಿಶೀಲಿಸುತ್ತಿದ್ದು, ತಪ್ಪು ಮಾಹಿತಿ, ತಿರುಚಿದ ವಿಡಿಯೋ ಮತ್ತು ಸುಳ್ಳುಸುದ್ದಿ ಹರಿಯಬಿಡುವ ವಿಡಿಯೋಗಳ ಕುರಿತು ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಯೂಟ್ಯೂಬ್ ಬಳಕೆದಾರರು ನೋಡುವ ಯಾವುದೇ ವಿಡಿಯೋ ನೈಜವಾಗಿರುವುದೇ ಮತ್ತು ನಂಬಲರ್ಹ ಮೂಲವೇ ಎನ್ನುವ ಬಗ್ಗೆ ಇನ್ಮುಂದೆ ಪ್ರತಿ ವಿಡಿಯೋದಲ್ಲಿ ಸೂಚನೆ ಬರಲಿದೆ ಎಂದು ಹೇಳಲಾಗಿದೆ. ಯೂಟ್ಯೂಬ್ ಬಳಕೆದಾರರು ವಿಡಿಯೋ ವೀಕ್ಷಿಸುವ ಆಧಾರದ ಮೇಲೆ ಯೂಟ್ಯೂಬ್ ವಿಡಿಯೋಗಳ ಫ್ಯಾಕ್ಟ್ ಚೆಕ್ ಮಾಡಲಿದೆ. ಒಂದು ವೇಳೆ ನಕಲಿ ಮತ್ತು ಸುಳ್ಳು ಸಂದೇಶ ಹೊತ್ತಿರುವ ವಿಡಿಯೋ ಕಾಣಿಸಿಕೊಂಡರೆ, ಅದರಲ್ಲಿ ಎಚ್ಚರಿಕೆಯ ಸಂದೇಶ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.
ಇನ್ನು ಯೂಟ್ಯೂಬ್‌ನಲ್ಲಿ ಜನರು ವಿಡಿಯೋ ವೀಕ್ಷಿಸುವ ಆಧಾರದ ಮೇಲೆ ಯೂಟ್ಯೂಬ್ ತನ್ನ ವಿಡಿಯೋಗಳ ಫ್ಯಾಕ್ಟ್ ಚೆಕ್ ಮಾಡಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟತೆ ನೀಡಲಾಗಿಲ್ಲ. ಹಾಗಾಗಿ, ಯೂಟ್ಯೂಬ್‌ನಲ್ಲಿ ನಕಲಿ ಮತ್ತು ತಿರುಚಿದ ವಿಡಿಯೋ ಹರಿಯಬಿಡುವ ಯಾವುದೇ ವಿಡಿಯೋ ನೈಜವಾಗಿರುವುದೇ ಎಂಬುದನ್ನು ಯೂಟ್ಯೂಬ್ ಹೇಗೆ ಪತ್ತೆ ಹಚ್ಚಲಿದೆ ಮತ್ತು ಅದನ್ನು ಫ್ಯಾಕ್ಟ್ ಚೆಕ್ ಪಾಪ್ ಅಪ್ ಫೀಚರ್ ಮೂಲಕ ಹೇಗೆ ತೋರಿಸಲಿದೆ ಎಂಬುದು ಇದೀಗ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಏನೇ ಆದರೂ, ಸುಳ್ಳುಸುದ್ದಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಯೂಟ್ಯೂಬ್ ತರುತ್ತಿರುವ ಈ ಕ್ರಮ ಸಹಕಾರಿಯಾಗಲಿದೆ. ಯೂಟ್ಯೂಬ್‌ಗೆ ಯಾರು ಬೇಕಾದರೂ ವಿಡಿಯೋ ಅಪ್‌ಲೋಡ್ ಮಾಡಬಹುದಾಗಿದ್ದು, ಅದರಿಂದ ಪ್ರತಿ ಬಾರಿಯೂ ವಿಡಿಯೋಗಳ ಸತ್ಯಾಸತ್ಯತೆ ಪರಿಶೀಲನೆ ಅಗತ್ಯವಾಗಿದೆ. ಅದರಲ್ಲಿಯೂ ಇದೀಗ ಚುನಾವಣಾ ಸಂಧರ್ಭದಲ್ಲಿ ಸಾರ್ವಜನಿಕರನ್ನು ದಾರಿತಪ್ಪಿಸುವ ಕಳ್ಳರಿಗೆ ಬ್ರೇಕ್ ಹಾಕಲೇಬೇಕಿದೆ.


Click it and Unblock the Notifications








