Home
ಸುದ್ದಿಜಾಲ

ಸಾಫ್ಟ್‌ವೇರ್‌ ಇಂಜಿಯರ್‌ಗೆ ನಾಮ ಹಾಕಿದ ಆನ್‌ಲೈನ್‌ ವಂಚಕರು! ದೋಚಿದ್ದು ಎಷ್ಟು ಗೊತ್ತಾ?

ಟೆಕ್ನಾಲಜಿ ಮುಂದುವರೆದಂತೆ ವಂಚಕರು ಕೂಡ ಸಾಕಷ್ಟು ಸ್ಮಾರ್ಟ್‌ ಆಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯವೂ ಆನ್‌ಲೈನ್‌ ವಂಚನೆಗಳ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ ಹರಿಯಾಣದ ಗುರುಗ್ರಾಮ್‌ನಿಂದ ಮತ್ತೊಂದು ಪ್ರಕರಣ ದಾಖಲಾಗಿದೆ. ಇಲ್ಲಿ ಟೆಕ್ಕಿಯೊಬ್ಬರೂ 42ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಹೌದು, ಗುರಗ್ರಾಮ್‌ದ ಟೆಕ್ಕಿಯೊಬ್ಬರು ಆನ್‌ಲೈನ್‌ ವಂಚಕರ ಜಾಲದಲ್ಲಿ ಸಿಲುಕಿ 42 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ವಾಟ್ಸಾಪ್‌ನಲ್ಲಿ ಬಂದ ಪಾರ್ಟ್‌ ಟೈಂ ಜಾಬ್‌ ಸಂದೇಶವನ್ನು ನಂಬಿ ಮೋಸ ಹೋಗಿದ್ದಾರೆ. ಹಾಗಾದ್ರೆ ವಂಚಕರು ಟೆಕ್ಕಿಯನ್ನು ವಂಚಿಸಿದ್ದು ಹೇಗೆ? ಟೆಕ್ಕಿ ಸುಲಭವಾಗಿ ವಂಚಕರ ಜಾಲಕ್ಕೆ ಸಿಲುಕಲು ಕಾರಣವೇನು? ಇದೆಲ್ಲದರ ಕಂಪ್ಲೀಟ್‌ ಡಿಟೇಲ್ಸ್‌ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಸಾಫ್ಟ್‌ವೇರ್‌ ಇಂಜಿಯರ್‌ಗೆ ನಾಮ ಹಾಕಿದ ವಂಚಕರು! ದೋಚಿದ್ದು ಎಷ್ಟು ಗೊತ್ತಾ?

ಯೂಟ್ಯೂಬ್‌ ವೀಡಿಯೊ ಲೈಕ್‌ ಮಾಡಿದರೆ ಹಣ ನೀಡುತ್ತೇವೆ ಎಂದು ಹೇಳಿ ವಂಚಿಸುತ್ತಿರುವ ಪ್ರಕರಣಗಳಿಗೆ ಇದು ಮತ್ತೊಂದು ಉದಾಹರಣೆಯಾಗಿದೆ. ಆದರೆ ಇಲ್ಲಿ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವುದು ಒಬ್ಬ ವೃತ್ತಿಪರ ಟೆಕ್ಕಿ ಅನ್ನೊದು ಗಮನಿಸಬೇಕಾದ ಸಂಗತಿಯಾಗಿದೆ. ಗುರುಗ್ರಾಮದ ಟೆಕ್ಕಿ ಹೆಚ್ಚುವರಿ ಆದಾಯಗಳಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಜಾಬ್‌ಗಾಗಿ ಸರ್ಚ್‌ ಮಾಡಿದ್ದಾರೆ. ಇದೇ ಸಮಯದಲ್ಲಿ ಟೆಕ್ಕಿಯ ವಾಟ್ಸಾಪ್‌ಗೆ ಪಾರ್ಟ್‌ಟೈಂ ಜಾಬ್‌ ಕುರಿತ ಸಂದೇಶ ಬಂದಿದೆ. ಈ ಸಂದೇಶವನ್ನು ನಂಬಿದ ಟೆಕ್ಕಿ ಮೋಸ ಹೋಗಿದ್ದಾನೆ.

ಇನ್ನು ಟೆಕ್ಕಿಗೆ ಬಂದ ವಾಟ್ಸಾಪ್‌ ಸಂದೇಶದಲ್ಲಿ ಪಾರ್ಟ್‌ ಟೈಂ ಜಾಬ್‌ಗೆ ಸಂಬಂಧಿಸಿದ ಮಾಹಿತಿ ನೀಡಲಾಗಿದೆ. ಇದರಲ್ಲಿ ನೀವು ನೀವು ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದು ಎಂದು ಹೇಳಲಾಗಿದೆ. ಇದನ್ನು ನಂಬಿದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಟೆಕ್ಕಿ ಸಂದೇಶದ ಲಿಂಕ್‌ ಅನ್ನು ಕ್ಲಿಕ್‌ ಮಾಡಿದ್ದಾರೆ. ನಂತರ ದಿವ್ಯಾ ಎಂಬ ಮಹಿಳೆ ಟೆಲಿಗ್ರಾಮ್‌ ಗ್ರೂಪ್‌ಗೆ ಟೆಕ್ಕಿಯನ್ನು ಸೇರ್ಪಡೆ ಮಾಡಿದ್ದಾಳೆ. ಗುಂಪಿಗೆ ಸೇರಿದ ಕೂಡಲೇ, ಕಮಲ್, ಅಂಕಿತ್, ಭೂಮಿ ಮತ್ತು ಹರ್ಷ್ ಎಂಬ ಹೆಸರಿನ ಗುಂಪಿನ ಸದಸ್ಯರು, ಖಚಿತವಾದ ಆದಾಯದ ಭರವಸೆ ನೀಡುವ ಮೂಲಕ ಟೆಕ್ಕಿಯನ್ನು ಹಣ ಹೂಡಿಕೆ ಮಾಡಲು ಪ್ರೇರೆಪಿಸಿದ್ದಾರೆ.

ಸಾಫ್ಟ್‌ವೇರ್‌ ಇಂಜಿಯರ್‌ಗೆ ನಾಮ ಹಾಕಿದ ವಂಚಕರು! ದೋಚಿದ್ದು ಎಷ್ಟು ಗೊತ್ತಾ?

ವಂಚಕರು ನೀಡಿದ ಲಾಭದಾಯಕ ಭರವಸೆ ಹಾಗೂ ಅಧಿಕ ಆದಾಯದ ವ್ಯಾಮೋಹದಿಂದ ಟೆಕ್ಕಿ ತನ್ನ ಮತ್ತು ಪತ್ನಿಯ ಬ್ಯಾಂಕ್ ಖಾತೆಗಳ ಮೂಲಕ 42,31,600 ರೂ.ಗಳನ್ನು ಹೂಡಿಕೆ ಮಾಡಿದ್ದಾನೆ. ಟೆಕ್ಕಿ ಹಣ ಹೂಡಿಕೆ ಮಾಡಿದ ನಂತರ 69 ಲಕ್ಷ ರೂ. ಲಾಭ ನಿಮಗೆ ಬಂದಿದೆ ಎಂದು ಹೇಳಿದ್ದಾರೆ. ಅದರಂತೆ ಆ ಹಣವನ್ನು ಹಿಂಪಡೆಯಲು ಟೆಕ್ಕಿ ಪ್ರಯತ್ನಿಸಿದಾಗ ವಂಚಕರು ಹಣ ಮರಳಿ ಪಡೆಯಲು 11 ಸಾವಿರ ರೂ. ಹೆಚ್ಚುವರಿಯಾಗಿ ಪಾವತಿಸುವಂತೆ ಹೇಳಿದ್ದಾರೆ. ಈ ಹಂತದಲ್ಲಿ ಟೆಕ್ಕಿಗೆ ತಾನು ಮೋಸ ಹೋಗಿರುವುದು ತಿಳಿದಿದೆ.

ಸದ್ಯ ಅಪರಿಚಿತ ವಂಚಕರ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇಂತಹ ವಂಚನೆ ಪ್ರಕರಣಗಳುನ ದೇಶದಲ್ಲಿ ಹೊಸತಲ್ಲ, ಆದರೆ ಆನ್‌ಲೈನ್‌ ವಹಿವಾಟು ಮತ್ತು ಸೊಶೀಯಲ್‌ ಮೀಡಿಯಾ ಜಾಬ್‌ ಆಫರ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಅದರಲ್ಲೂ ಕೊರೊನಾ ನಂತರದ ವರ್ಷಗಳಲ್ಲಿ ಉದ್ಯೋಗದ ಹೆಸರಿನಲ್ಲಿ ಆನ್‌ಲೈನ್‌ ಮೂಲಕ ಹಣ ಕಳೆದುಕೊಂಡವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಸಾಫ್ಟ್‌ವೇರ್‌ ಇಂಜಿಯರ್‌ಗೆ ನಾಮ ಹಾಕಿದ ವಂಚಕರು! ದೋಚಿದ್ದು ಎಷ್ಟು ಗೊತ್ತಾ?

ಆದರಿಂದ ತಾವುಗಳು ಯಾವುದೇ ಆನ್‌ಲೈನ್‌ ಪಾರ್ಟ್‌ ಟೈಂ ಜಾಬ್‌ ಇಲ್ಲವೇ ಅಪರಿಚಿತ ವ್ಯಕ್ತಿಗಳ ಮಾತನ್ನು ನಂಬಿ ಹಣ ಹೂಡಿಕೆ ಮಾಡುವುದನ್ನು ನಿಲ್ಲಿಸಬೇಕು. ಅಲ್ಲದೆ ತಮಗೆ ತಿಳಿಯದವರ ಮಾತುಗಳಿಗೆ ಬೆಲೆ ಕೊಟ್ಟು ಹೆಚ್ಚುವರಿ ಆದಾಯದ ಆಸೆಯಿಂದ ಬ್ಯಾಂಕ್‌ ವಿವರಗಳನ್ನು ನೀಡುವುದು ಕೂಡ ತಪ್ಪಿಸಬೇಕಿದೆ.

Best Mobiles in India

English summary
YouTube Videos Scam: Software Engineer Lost Rs.42 Lakhs After Liking YouTube Videos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+