Home
ಸುದ್ದಿಜಾಲ

ಇನ್ಮುಂದೆ ಯೂಟ್ಯೂಬ್‌ನಲ್ಲಿ ಈ ಒಂದು ಆಯ್ಕೆ ನಿಮಗೆ ಕಾಣೋದಿಲ್ಲ!

ಗೂಗಲ್‌ ಒಡೆತನದ ಜನಪ್ರಿಯ ಸೇವೆಗಳಲ್ಲಿ ಯೂಟ್ಯೂಬ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಯೂಟ್ಯೂಬ್‌ ಜನಪ್ರಿಯ ವೀಡಿಯೊ ಸ್ಟ್ರಿಮಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಿಡಿಯೋ ಮಾತ್ರವಲ್ಲದೆ ಮ್ಯೂಸಿಕ್‌ ಸೇವೆಯನ್ನು ಕೂಡ ಯೂಟ್ಯೂಬ್‌ನಲ್ಲಿ ಪಡೆಯಬಹುದಾಗಿದೆ. ಜೊತಗೆ ಎಲ್ಲಾ ಮಾದರಿಯ ವಿಷಯಗಳ ಬಗ್ಗೆ ಯೂಟ್ಯೂಬ್‌ನಲ್ಲಿ ತಿಳಿಯುವುದಕ್ಕೆ ಅವಕಾಶವಿದೆ. ಇದೇ ಕಾರಣಕ್ಕೆ ಯೂಟ್ಯೂಬ್‌ ಹೆಚ್ಚಿನ ಜನರನ್ನು ಆಕರ್ಷಿಸಿದೆ. ಅಲ್ಲದೆ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸಾಮಾನ್ಯವಾಗಿ ಯೂಟ್ಯೂಬ್‌ನಲ್ಲಿ ನೀವು ವಿಕ್ಷಣೆ ಮಾಡುವ ವೀಡಿಯೋ ಇಷ್ಟವಾದರೆ ಲೈಕ್‌ ಮಾಡುವ ಇಷ್ಟವಿಲ್ಲದಿದ್ದರೆ ಡಿಸ್‌ಲೈಕ್‌ ಮಾಡುವ ಆಯ್ಕೆಯನ್ನು ಕಾಣಬಹುದಿತ್ತು. ಆದರೆ ಇನ್ಮುಂದೆ ಯೂಟ್ಯೂಬ್‌ನಲ್ಲಿ ನೀವು ಡಿಸ್‌ಲೈಕ್‌ ಮಾಡಿದ ಆಯ್ಕೆಯನ್ನು ಹೈಡ್‌ ಮಾಡುವುದಕ್ಕೆ ಮುಂದಾಗಿದೆ. ಯೂಟ್ಯೂಬ್‌ನಲ್ಲಿ ಡಿಸ್‌ಲೈಕ್‌ ಪಡೆದ ಕೌಂಟ್‌ಗಳು ಇನ್ಮುಂದೆ ಯೂಟ್ಯೂಬ್‌ ವೆಬ್‌ಸೈಟ್ ಮತ್ತು ಆಪ್‌ನಲ್ಲಿ ಕಾಣುವುದಿಲ್ಲ ಎನ್ನಲಾಗಿದೆ. ಹಾಗಾದ್ರೆ ಯೂಟ್ಯೂಬ್‌ನ ಈ ನಿರ್ಧಾರಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯೂಟ್ಯೂಬ್‌

ಯೂಟ್ಯೂಬ್‌ನಲ್ಲಿ ನೀವು ಇಷ್ಟ ಪಡದಿರುವ ವೀಡಿಯೋಗಳನ್ನು ಡಿಸ್‌ಲೈಕ್‌ ಮಾಡಿದರೂ ಸಹ ಅದು ಕೌಂಟ್‌ ಅನ್ನು ತೋರಿಸುವುದಿಲ್ಲ. ಬದಲಿಗೆ ಕೇವಲ ವೀಡಿಯೋ ಲೈಕ್‌ ಪಡೆದ ಸಂಖ್ಯೆಗಳನ್ನು ಮಾತ್ರ ಕಾಣಲಿದೆ. ಡಿಸ್‌ಲೈಕ್‌ ಸಂಖ್ಯೆಗಳನ್ನು ಹೈಡ್‌ ಮಾಡಲು ಯೂಟ್ಯೂಬ್‌ ಮುಂದಾಗಿದೆ. ಇದರಿಂದ ವೀಡಿಯೋ ಕ್ರಿಯೆಟ್‌ ಮಾಡುವ ಡಿಜಿಟಲ್‌ ಕ್ರಿಯೆಟರ್ಸ್‌ಗಳಿಗೆ ಗುಡ್‌ ನ್ಯೂಸ್‌ ನೀಡಿದೆ. ಇದರಿಂದ ಯಾವುದೇ ವೀಡಿಯೋ ಡಿಸ್‌ಲೈಕ್‌ ಪಡೆಯುವುದನ್ನು ತಪ್ಪಿಸಲಿದೆ ಎಂದು ಹೇಳಲಾಗಿದೆ.

ಡಿಸ್‌ಲೈಕ್

ಎಲ್ಲಾ ವೀಡಿಯೊಗಳ ಮೇಲಿನ ಡಿಸ್‌ಲೈಕ್ ಎಣಿಕೆಗಳನ್ನು ಹೈಡ್‌ ಮಾಡಲು ನಿರ್ಧರಿಸಲಾಗಿದೆ ಎಂದು ಯೂಟ್ಯೂಬ್ ಘೋಷಿಸಿದೆ. ನವೆಂಬರ್‌ 11 ರಿಂದಲೇ ಯೂಟ್ಯೂಬ್‌ ತನ್ನ ವೀಡಿಯೋಗಳಲ್ಲಿ ಡಿಸ್‌ಲೈಕ್ ಬಟನ್ ಅನ್ನು ಹೈಡ್‌ ಮಾಡಿದೆ. ಆದಾಗ್ಯೂ, ವೀಡಿಯೋ ಕ್ರಿಯೆಟರ್ಸ್‌ ಮಾತ್ರ YouTube ಸ್ಟುಡಿಯೋದಲ್ಲಿ ಡಿಸ್‌ಲೈಕ್‌ ಸಂಖ್ಯೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಇದರಿಂದ ಕ್ರಿಯೆಟರ್ಸ್‌ ತಮ್ಮ ಕಂಟೆಂಟ್‌ ಹೇಗೆ ಕಾರ್ಯನಿರ್ವಹಿಸುತ್ತಿದೆ ಅನ್ನೊದನ್ನ ಅರ್ಥಮಾಡಿಕೊಳ್ಳಬಹುದಾಗಿದೆ.

ಯೂಟ್ಯೂಬ್‌

ಇಷ್ಟು ದಿನ ಯೂಟ್ಯೂಬ್‌ನಲ್ಲಿ ನೀವು ವೀಕ್ಷಿಸುವ ವೀಡಿಯೋಗಳಿಗೆ ಲೈಕ್‌ ಹಾಗೂ ಡಿಸ್‌ಲೈಕ್‌ ನೀಡಬಹುದಾಗಿತ್ತು. ಹೆಚ್ಚಿನ ಲೈಕ್‌ಗಳು ಬಂದರೆ ಸಾಮಾನ್ಯವಾಗಿ ಬೇರೆಯವರು ಕೂಡ ಕುತೂಹಲದಿಂದ ವೀಡಿಯೋಗಳನ್ನು ವೀಕ್ಷಣೆ ಮಾಡುತ್ತಾರೆ. ಆದರೆ ಹೆಚ್ಚಿನ ಡಿಸ್‌ಲೈಕ್‌ ಬಂದರೆ ಅಂತಹ ವೀಡಿಯೊಗಳನ್ನು ಜನ ವೀಕ್ಷಿಸುವುದಕ್ಕೆ ಹೋಗುವುದಿಲ್ಲ. ಇದೇ ಕಾರಣಕ್ಕೆ ವೀಡಿಯೊ ಕಂಟೆಂಟ್‌ ಕ್ರಿಯೆಟರ್ಸ್‌ಗಳ ಒಳಿತಿಗಾಗಿ ಡಿಸ್‌ಲೈಕ್‌ ಬಟನ್‌ ಅನ್ನು ಹೈಡ್‌ ಮಾಡುವುದಾಗಿ ಯೂಟ್ಯೂಬ್‌ ಹೇಳಿದೆ. ಇದರಿಂದ ವೀಡಿಯೋ ಕ್ರಿಯೆರ್ಟಸ್‌ಗಳಿಗೆ ಡಿಸ್‌ಲೈಕ್‌ ದಾಳಿ ಕಡಿಮೆ ಆಗಲಿದೆ.

ಡಿಸ್‌ಲೈಕ್‌

ಡಿಸ್‌ಲೈಕ್‌ ಸಂಖ್ಯೆ ಇನ್ಮುಂದೆ ಬಳಕೆದಾರರಿಗೆ ಕಾಣುವುದಿಲ್ಲ ನಿಜ. ಆದರೆ ಬಳಕೆದಾರರು ಈಗಲೂ ಕೂಡ ಡಿಸ್‌ಲೈಕ್‌ ಥಂಬ್ಸ್ ಡೌನ್ ಬಟನ್ ಅನ್ನು ಕ್ಲಿಕ್ ಮಾಡಬಹುದು. ಆದರೆ ನೀವು ಡಿಸ್‌ಲೈಕ್‌ ಮಾಡಿದರೂ ಸಹ ನಿಜವಾದ ಡಿಸ್‌ಲೈಕ್‌ ಸಂಖ್ಯೆಯನ್ನು ಅದು ಹೈಡ್‌ ಮಾಡಲಿದೆ. ಇದರ ನಿಜವಾದ ಸಂಖ್ಯೆ ಕ್ರಿಯೆಟರ್ಸ್‌ಗಳಿಗೆ ಮಾತ್ರ YouTube ಸ್ಟುಡಿಯೋ ಮೂಲಕ ಲಭ್ಯವಾಗಲಿದೆ. ಯೂಟ್ಯೂಬ್‌ ಸ್ಟಡಿಯೋದಲ್ಲಿ ಅವರ ವೀಡಿಯೊಗೆ ಸಂಬಂಧಿಸಿದ ಇತರ ಅಂಕಿಅಂಶಗಳನ್ನು ನೋಡಬಹುದಾಗಿದೆ.

ಬಟನ್‌

ಡಿಸ್‌ಲೈಕ್‌ ಬಟನ್‌ ಹೈಡ್‌ ಮಾಡುವ ಸಂಬಂಧ ಯೂಟ್ಯೂಬ್‌ ಈ ವರ್ಷದ ಆರಂಭದಿಂದಲೂ ಪ್ರಯೋಗ ನಡೆಸಿದೆ. ಈ ಪ್ರಯೋಗ ನಡೆಸಿದ ನಂತರ ದೊರೆತ ಪಲಿತಾಂಶದ ಆಧಾರದ ಮೇಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಬದಲಾವಣೆಯಿಂದ ಡಿಜಿಟಲ್‌ ಕ್ರಿಯೆಟರ್ಸ್‌ಗಳು ಮುಕ್ತವಾಗಿ ತಮ್ಮ ಕಂಟೆಟ್‌ ಅನ್ನು ಹಂಚಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಸುಖಾಸುಮ್ಮನೆ ಡಿಸ್‌ಲೈಕ್‌ ಮಾಡುವ ಮೂಲಕ ಉತ್ತಮ ಕಂಟೆಂಟ್‌ಗಳನ್ನು ಕೂಡ ಹಾದಿ ತಪ್ಪಿಸುವ ಮಂದಿಯಿಂದ ಕ್ರಿಯೆಟರ್ಸ್‌ಗಳ ಮೇಲೆ ನಡೆಯುವ ದಾಳಿ ತಪ್ಪಲಿದೆ.

ಯುಟ್ಯೂಬ್‌

ಯುಟ್ಯೂಬ್‌ನ ಈ ಕ್ರಮ ಉತ್ತಮ ಎನಿಸಿದರೂ ಡಿಸ್‌ಲೈಕ್‌ ಬಟನ್ ಸಾಕಷ್ಟು ಕಾರಣಗಳಿಗಾಗಿ ಉಪಯುಕ್ತ ಎನಿಸಲಿದೆ. ಅನಗತ್ಯ ಎನಿಸುವ ವೀಡಿಯೊಗಳು, ಅಸಂಬಧ್ದ ಎನಿಸುವ ಹಾಗೂ ದಾರಿತಪ್ಪಿಸುವ ವೀಡಿಯೋಗಳನ್ನು ಹೆಚ್ಚಿನ ಜನರು ನೋಡದೆ ಇರುವಂತೆ ಮಾಡುವುದಕ್ಕೆ ಡಿಸ್‌ಲೈಕ್‌ ಬಟನ್‌ ಸಹಾಯಕವಾಗಿತ್ತು. ಅಲ್ಲದೆ ಡಿಸ್‌ಲೈಕ್‌ ಮಾಡುವುದರಿಂದ ವೀಡಿಯೋ ಕಂಟೆಟ್‌ ಇನ್ನಷ್ಟು ಉತ್ತಮ ಪಡಿಸುವುದಕ್ಕೆ ಸೂಚಿಸುವುದಕ್ಕೆ ಸಾಧ್ಯವಾಗುತ್ತಿತ್ತು. ಆದರೂ ಯೂಟ್ಯೂಬ್‌ನ ಈ ಕ್ರಮ ವೀಡಿಯೋ ಕಂಟೆಂಟ್‌ ಕ್ರಿಯೆಟರ್ಸ್‌ ಪಾಲಿಗೆ ಆಶಾದಾಯಕವಾಗಿದೆ.

Best Mobiles in India

English summary
youtube will no longer show number of dislikes on video.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+