ಕರ್ನಾಟಕದ ಯುವಕನಿಂದ ಚೀನಾದ ಶೇರ್‌ ಇಟ್‌ ಆಪ್‌ ಗೆ ಬದಲಿ ಆಪ್‌ ಬಿಡುಗಡೆ!

|

ಕಳೆದ ಕೆಲದಿನಗಳಿಂದ ಭಾರತದಲ್ಲಿ ಚೀನಾ ಪ್ರಾಡಕ್ಟ್‌ಗಳನ್ನ ಬಹಿಷ್ಕರಿಸಿ, ಚೀನಿ ಆಪ್‌ಗಳನ್ನ ಆನ್‌ಇನ್‌ಸ್ಟಾಲ್‌ ಮಾಡಿ ಅಭಿಯಾನ ಜೊರಾಗಿಯೇ ನಡೆಯುತ್ತಿದೆ. ಇದರ ಪರಿಣಾಮವಾಗಿ ಈಗಾಗಲೇ ಹಲವು ಆಪ್‌ಗಳು, ಹಲವು ಪ್ರಾಡಕ್ಟ್‌ಗಳನ್ನ ಬಾಯ್ಕಾಟ್‌ ಮಾಡಲಾಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳಲ್ಲಿರುವ ಚೀನಿ ಆಪ್‌ಗಳನ್ನ ಅನ್‌ಇನ್‌ಸ್ಟಾಲ್‌ ಮಾಡುತ್ತಿರುವುದರ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಟ್ರೆಂಡ್‌ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ ಚೀನಿ ಆಪ್‌ಗಳ ಬದಲಿಗೆ ಸ್ವದೇಶಿ ಆಪ್‌ಗಳ ಬಳಕೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದರ ನಡುವೆ ಇದೀಗ ಚೀನಿ ಆಪ್‌ ಶೇರ್‌ ಇಟ್‌ಗೆ ಬದಲಿಗೆ ಸ್ವದೇಶಿ ಆಪ್‌ ಒಂದನ್ನ ನಮ್ಮ ಕರುನಾಡಿನ ಯುವಕ ಪರಿಚಯಿಸಿದ್ದಾನೆ.

ಆಪ್‌

ಹೌದು, ಚೀನಾದ ವಿರುದ್ದ ಭಾರತದಲ್ಲಿ ಬಾಯ್ಕಾಟ್‌ ಅಭಿಯಾನ ನಡೆಯುತ್ತಿದೆ. ಚೀನಿ ಆಪ್‌ಗಳ ಬದಲಿಗೆ ಸ್ವದೇಶಿ ಆಪ್‌ ಬಳಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಸೆಟ್‌ ಮಾಡಿರೋದು ನಿಮಗೆಲ್ಲಾ ಗೊತ್ತೇ ಇದೆ. ಅದರಂತೆ ಈಗಾಗಲೇ ಚಿನಿ ಆಪ್‌ ರಿಮೋವ್‌, ಮಿತ್ರಾನ್‌ ಆಪ್ಗಳು ಪ್ಲೇ ಸ್ಟೋರ್‌ನಲ್ಲಿ ಬಾರಿ ಪ್ರಮಾಣದಲ್ಲಿ ಡೌನ್‌ಲೊಡ್‌ ಆಗುತ್ತಿದೆ. ಇದರ ನಡುವೆ ಇದೀಗ ಚಿನಾದ ಶೇರ್‌ಇಟ್‌ ಆಪ್‌ ಬದಲಾಗಿ ಸ್ವದೇಶಿ ಆಪ್‌ ಒಮದನ್ನ ನಮ್ಮ ಕರ್ನಾಟಕದ ಯುವಕನೊಬ್ಬ ವಿನೂತನ ಆಪ್‌ ಒಂದನ್ನ ಪರಿಚಯಿಸಿದ್ದಾನೆ. ಇನ್ನು ಈ ಆಪ್‌ ಗೆ Z ಶೇರ್‌ ಆಪ್‌ ಎಂದು ಹೆಸರಿಸಲಾಗಿದೆ. ಅಷ್ಟಕ್ಕೂ Z ಶೇರ್‌ ಆಪ್‌ ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಆಪ್‌ಗಳು

ಪ್ರಸ್ತುತ ಚೀನಾದ ಆಪ್‌ಗಳು, ಚೀನಾ ಮೂಲದ ಕಂಪನಿ ಒಡೆತನ ಹೊಂದಿರುವ ಮತ್ತು ಚೀನಾ ಮೂಲದ ಡೆವಲಪರ್‌ಗಳು ಅಭಿವೃಧಿಪಡಿಸಿರುವ ಆಪ್‌ ವಿರುದ್ಧ ಭಾರತದಲ್ಲಿ ಜಾಗೃತಿ ಅಭಿಯಾನ ನಡೆಯುತ್ತಿದೆ. ಚೀನಾ ಆಪ್ ವಿರುದ್ಧದ ಅಭಿಯಾನ ಸೊಶೀಯಲ್‌ ಮಿಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಸಾಫ್ಟ್‌ವೇರ್ ಇನ್‌ ಎ ವೀಕ್, ಹಾರ್ಡ್‌ವೇರ್ ಇನ್ ಎ ಇಯರ್ ಎನ್ನುವ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಇದರ ಹಂತವಾಗಿ ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ಹೆಚ್ಚಾಗುತ್ತಿದೆ. ಜೊತೆಗೆ ಚೀನಾ ವಸ್ತುಗಳಿಗೆ ಪರ್ಯಾವಾಗಿ ದೇಸಿ ವಸ್ತುಗಳು ಬಿಡುಗಡೆಯಾಗುತ್ತಿದೆ. ಅದರಂತೆ ಇದೀಗ ಶೇರ್ ಇಟ್ ಬದಲಿಯಾಗಿ Z ಶೇರ್ ಆಪ್ ಅನ್ನು ಪರಿಚಯಿಸಲಾಗಿದೆ.

ಆಪ್‌

ಇನ್ನು ಈ ಆಪ್‌ ಅನ್ನು ಕರ್ನಾಟಕದ ಉತ್ತರ ಕನ್ನಡದ ಶ್ರವಣ್ ಹೆಗಡೆ ಎಂಬುವವರು ಡೆವಲಪ್‌ ಮಾಡಿದ್ದು, ಚೀನಿ ಆಪ್‌ಗೆ ಸೆಡ್ಡು ಹೊಡೆದಿದೆ. ಇನ್ನು ಈ ಆಪ್‌ ಸದ್ಯ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉತ್ತ,ಮ ರೇಟಿಂಗ್‌ ಪಡೆದುಕೊಂಡಿದ್ದು, ಬಳಕೆದಾರರು ಫೈಲ್‌ ಶೇರ್‌ ಮಾಡುವುದಕ್ಕೆ ಉಪಯುಕ್ತವಾಗಲಿದೆ. ಇದಲ್ಲದೆ ಈ ಆಪ್‌ ಶೇರ್‌ ಇಟ್‌ಗಿಂತ ತುಂಬಾ ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನುವ ಮಾಹಿತಿ ಸಹ ಲಭ್ಯವಾಗಲಿದೆ. ಸದ್ಯ ಶೇರ್‌ ಇಟ್‌ನಲ್ಲಿ ಫೈಲ್‌ ಶೇರ್‌ ಆಗಬೇಕಾದರೆ 3-4mbps, ಆದರೆ Z ಶೇರ್‌ ಆಪ್‌ನಲ್ಲಿ6-7MBPSನಲ್ಲಿ ಶೇರ್‌ ಆಗಲಿದೆ.

ಆಪ್‌

ಸದ್ಯ ಈ ಆಪ್‌ ಗೂಗಲ್‌ಪ್ಲೇ ಸ್ಟೋರ್‌ ನಲ್ಲಿ ಲಭ್ಯವಿದ್ದು, 4.9 ರೇಟಿಂಗ್‌ ಅನ್ನು ಪಡೆದುಕೊoಡಿದೆ. ಅಲ್ಲದೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 7k ಗೂ ಅಧಿಕ ಡೌನ್‌ಲೊಡ್‌ಗಳನ್ನ ಪಡೆದುಕೊಂಡಿದೆ ಎನ್ನಲಾಗ್ತಿದೆ. ಸದ್ಯ ಇದು ಸ್ವದೇಶಿ ಆಪ್‌ ಆಗಿ ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ರುಪುಗೊಳಲಿದೆಯಾ ಅನ್ನೊದನ್ನ ನೋಡಬೇಕಿದೆ.

Best Mobiles in India

English summary
Z share is a file sharing application developed in India.You can share apps,videos,songs,photos etc.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X