ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್‌ವಾಚ್‌ ಬಿಡುಗಡೆ! ಲಾಂಗ್‌ ಬ್ಯಾಟರಿ ಬ್ಯಾಕ್‌ಅಪ್‌ ವಿಶೇಷ!

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಮಲ್ಟಿ ಟಾಸ್ಕ್‌ ಫಂಕ್ಷನ್‌ ಹೊಂದಿರುವ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂಡ್‌ ಮಾಡುತ್ತಿವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ವಿವಿಧ ಬೆಲೆಯಲ್ಲಿ ಅನೇಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ಇನ್ನು ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್‌ವಾಚ್‌ಗಳು ಲಭ್ಯವಿದೆಯಾದರೂ ಗ್ರಾಹಕರು ಮಾತ್ರ ಬ್ರ್ಯಾಂಡ್‌ ಕಂಪೆನಿಗಳ ವಾಚ್‌ಗಳನ್ನೇ ಖರೀದಿಸಲು ಬಯಸುತ್ತಾರೆ. ಇದರಲ್ಲಿ ಜಬ್ರೋನಿಕ್ಸ್‌ ಕಂಪೆನಿ ಕೂಡ ಒಂದಾಗಿದೆ.

ಜಬ್ರೋನಿಕ್ಸ್‌

ಹೌದು, ಜಬ್ರೋನಿಕ್ಸ್‌ ಕಂಪೆನಿ ಸ್ಮಾರ್ಟ್‌ವಾಚ್‌ ತಯಾರಕ ಕಂಪೆನಿಗಳಲ್ಲಿ ಜನಪ್ರಿಯ ಬ್ರ್ಯಾಂಡ್‌ ಎನಿಸಿಕೊಂಡಿದೆ. ಜಬ್ರೋನಿಕ್ಸ್‌ ಕಂಪೆನಿ ಈಗಾಗಲೇ ಅನೇಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಭಾರತದಲ್ಲಿ ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ ವಾಚ್ ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲಿಂಗ್‌ ಫಂಕ್ಷನ್‌ ಮತ್ತು ಮಲ್ಟಿ ಫಿಟ್‌ನೆಸ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌ ಮಾನಿಟರಿಂಗ್‌ ಸೆನ್ಸಾರ್‌ ಅನ್ನು ಕೂಡ ಹೊಂದಿದೆ.

ಬಾಡಿಯನ್ನು

ಇನ್ನು ಜಬ್ರೋನಿಕ್ಸ್‌ ಡ್ರಿಪ್‌ ಸ್ಮಾರ್ಟ್‌ವಾಚ್‌ ವಾಟರ್‌ ಪ್ರೂಪ್‌ ಮೆಟಲ್‌ ಬಾಡಿಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ SpO2 ಟ್ರ್ಯಾಕಿಂಗ್ ಮತ್ತು ರಕ್ತದೊತ್ತಡ ಮಾಪನದಂತಹ ಫೀಚರ್ಸ್‌ಗಳನ್ನು ಪಡೆದಿದೆ. ಇದು 10 ಇನ್‌ಬಿಲ್ಟ್‌ ವಾಲ್‌ಪೇಪರ್‌ಗಳು ಮತ್ತು ಹಲವಾರು ಗ್ರಾಹಕೀಕರಣ ಆಯ್ಕೆಗಳೊಂದಿಗೆ ಬರುತ್ತದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಪ್ರಸ್ತುತ ಅಮೆಜಾನ್‌ನಲ್ಲಿ ನೀಲಿ, ಬೀಜ್ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಬ್ರೋನಿಕ್ಸ್

ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್‌ವಾಚ್‌ 1.7 ಇಂಚಿನ ಸ್ಕ್ವೇರ್‌ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇದು "ಬಹಳ ಬ್ರೈಟ್‌ನೆಸ್‌ ಮತ್ತು ಎದ್ದುಕಾಣುವ" ಶೈಲಿಯನ್ನು ಹೊಂದಿದೆ. ಇದನ್ನು ನೇರ ಸೂರ್ಯನ ಬೆಳಕಿನಲ್ಲಿಯೂ ಕೂಡ ಸುಲಭವಾಗಿ ಬಳಸಬಹುದು. ಇನ್ನು ಈ ಸ್ಮಾರ್ಟ್ ವಾಚ್ IP67 ರೇಟ್ ಹೊಂದಿರುವ ಲೋಹದ ಚೌಕಟ್ಟಿನೊಂದಿಗೆ ಬರುತ್ತದೆ. ಇದು ಬ್ಲೂಟೂತ್ ಕಾಲ್‌ ಕಾರ್ಯಕ್ಕಾಗಿ ಇಂಟರ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್ ಅನ್ನು ಸಹ ಒಳಗೊಂಡಿದೆ.

ಜಬ್ರೋನಿಕ್ಸ್‌

ಜಬ್ರೋನಿಕ್ಸ್‌ ಡ್ರಿಪ್‌ ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲದೊಂದಿಗೆ ಬರಲಿದೆ. ಇದರಿಂದ ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಸಿರಿ ಅಥವಾ ಗೂಗಲ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸುವುದಕ್ಕೆ ಸಾಧ್ಯವಾಗಲಿದೆ. ಇನ್ನು ಈ ಸ್ಮಾರ್ಟ್ ವಾಚ್‌ನಲ್ಲಿ ಪ್ರೇಯರ್‌ ಮೋಡ್, ಹಾರ್ಟ್‌ಬೀಟ್‌ ಮಾನಿಟರಿಂಗ್, SpO2 ಟ್ರ್ಯಾಕಿಂಗ್ ಮತ್ತು ಇಂಟರ್‌ಬಿಲ್ಟ್‌ ಸೆನ್ಸಾರ್‌ ಜೊತೆಗೆ ರಕ್ತದೊತ್ತಡದ ಮಾನಿಟರಿಂಗ್ ಅನ್ನು ಕೂಡ ಮಾಡಲಿದೆ. ಇದಲ್ಲದೆ ಆರೋಗ್ಯ ಸಂಬಂಧಿತ ಡೇಟಾವನ್ನು ನೇರವಾಗಿ ಸ್ಮಾರ್ಟ್‌ವಾಚ್‌ನಲ್ಲಿ ವೀಕ್ಷಿಸಬಹುದಾಗಿದೆ.

ಜಬ್ರೋನಿಕ್ಸ್

ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್‌ವಾಚ್‌ ಸ್ಟೆಪ್ಸ್‌, ಕ್ಯಾಲೋರಿಸ್‌ ಮತ್ತು ಡಿಸ್ಟೆನ್ಸ್‌ ಅನ್ನು ಕೂಡ ಟ್ರ್ಯಾಕ್ ಮಾಡುತ್ತದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ನೀವು 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಆಯ್ಕೆ ಮಾಡುವುದಕ್ಕೆ ಅವಕಾಶವಿದೆ. ಇದಲ್ಲದೆ ನಾಲ್ಕು ಇಂಟರ್‌ ಬಿಲ್ಟ್‌ ಗೇಮ್ಸ್‌, ಎಂಟು ಮೆನು ಯೂಸರ್‌ ಇಂಟರ್ಫೇಸ್‌ಗಳನ್ನು ಒಳಗೊಂಡಿದೆ. ಅಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಅಪ್ಲಿಕೇಶನ್‌ಗಳಿಗೆ ನೋಟಿಫಿಕೇಶನ್‌ ಪಂಕ್ಷನ್‌ ಅನ್ನು ಝೆಬ್ರೋನಿಕ್ಸ್ ಡ್ರಿಪ್ ನಲ್ಲಿ ನೀಡಲಾಗಿದೆ.

ಅಪ್ಲಿಕೇಶನ್‌ಗಳಿಗೆ

ಇದರಿಂದ ಸ್ಮಾರ್ಟ್ ವಾಚ್ ಮೂಲಕ ನೀವು ಆಗಾಗ್ಗೆ ಬಳಸುವ ಅಪ್ಲಿಕೇಶನ್‌ಗಳಿಗೆ ತ್ವರಿತ ಪ್ರವೇಶ ಕಾರ್ಯವನ್ನು ಸಹ ಪಡೆಯುತ್ತದೆ. ಇದು ಎಲ್ಲಾ ಇಂಟರ್‌ಬಿಲ್ಟ್‌ ಅಪ್ಲಿಕೇಶನ್‌ಗಳಿಗೆ ಡ್ಯುಯಲ್ ಮೆನು ಆಯ್ಕೆಗಳನ್ನು ಸಹ ಪಡೆಯುತ್ತದೆ. ಇನ್ನು ಈ ವಾಚ್ ಸರಾಸರಿ 5 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಝೆಬ್ರಾನಿಕ್ಸ್ ಹೇಳಿಕೊಂಡಿದೆ. ಇದು ಪ್ರಸ್ತುತ ಅಮೆಜಾನ್‌ನಲ್ಲಿ ವಿವಿಧ ಬಣ್ಣಗಳಲ್ಲಿ ಮತ್ತು ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ.

ಬೆಲೆ ಮತ್ತು ಲಭ್ಯತೆ

ಜಬ್ರೋನಿಕ್ಸ್‌ ಡ್ರಿಪ್‌ ಸ್ಮಾರ್ಟ್‌ವಾಚ್‌ ಅಮೆಜಾನ್‌ನಲ್ಲಿ ವಿವಿಧ ಸ್ಟ್ರಾಪ್ ಆಯ್ಕೆಗಳೊಂದಿಗೆ ಖರೀದಿಸಲು ಲಭ್ಯವಿದೆ. ಸಿಲಿಕೋನ್ ಪಟ್ಟಿಯೊಂದಿಗೆ ಈ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಲಾಗಿದ್ದು, ಇದರ ಪರಿಚಯಾತ್ಮಕ ಬೆಲೆ 1,999ರೂ. ಆಗಿದೆ. ಆದರೆ ಇದರ MRP ಬೆಲೆ 6,499ರೂ. ಆಗಿದೆ. ಇನ್ನು ಈ ಸ್ಮಾರ್ಟ್ ವಾಚ್‌ನ ಮೆಟಲ್ ಸ್ಟ್ರಾಪ್ ಆವೃತ್ತಿಯ ಪರಿಚಯಾತ್ಮಕ ಬೆಲೆ 2,399ರೂ.ಆಗಿದೆ. ಇದರ MRP ಬೆಲೆ 6,999ರೂ.ಆಗಿದೆ. ಇದು ಪ್ರಸ್ತುತ ನೀಲಿ, ಬೀಜ್, ಬ್ಲಾಕ್‌ ಇನ್‌ ಸಿಲಿಕಾನ್ ಸ್ಟ್ರಾಪ್‌ ಮತ್ತು ಬ್ಲಾಕ್‌ ಇನ್‌ ಮೆಟಲ್‌ ಸ್ಟ್ರಾಪ್‌, ಸಿಲ್ವರ್‌ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಮಾರುಕಟ್ಟೆಯಲ್ಲಿ

ಇನ್ನು ಮಾರುಕಟ್ಟೆಯಲ್ಲಿ ನೀವು ಆಯ್ಕೆಮಾಡಬಹುದಾದ ಹಲವು ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳು ಲಭ್ಯವಿವೆ. ಈ ಸ್ಮಾರ್ಟ್‌ವಾಚ್‌ಗಳು ಸ್ಮಾರ್ಟ್‌ಫೋನ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಮಟ್ಟಿಗೆ ಮುಂದುವರೆದಿವೆ. ಬ್ಲೂಟೂತ್‌ ಕನೆಕ್ಟಿವಿಟಿ ಮೂಲಕ ಫೋನ್‌ ಕಾಲ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕೂಡ ಹೊಂದಿವೆ. ಜೊತೆಗೆ ಮ್ಯೂಸಿಕ್‌ ಪ್ಲೇ ಮಾಡುವ ಹಾಗೂ ಗೂಗಲ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸುವ ಸ್ಮಾರ್ಟ್‌ವಾಚ್‌ಗಳು ಕೂಡ ಲಭ್ಯವಿದೆ.

ನಾಯ್ಸ್ ಕಲರ್‌ಫಿಟ್ ಪ್ರೊ 3 ಆಲ್ಫಾ

ನಾಯ್ಸ್ ಕಲರ್‌ಫಿಟ್ ಪ್ರೊ 3 ಆಲ್ಫಾ

ನಾಯ್ಸ್ ಕಲರ್‌ಫಿಟ್ ಪ್ರೊ 3 ಆಲ್ಫಾ 1.69 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಕೂಡ ಹೊಂದಿದೆ. ಇದರಲ್ಲಿ ನೀವು 100ಕ್ಕೂ ಹೆಚ್ಚಿನ ಸ್ಪೋರ್ಟ್ಸ್‌ ಮೋಡ್‌ಗಳನ್ನು ಕಾಣಬಹುದಾಗಿದೆ. ಇದಲ್ಲದೆ ಸ್ಟೆಪ್ಸ್‌, ಕ್ಯಾಲೊರಿ ಬರ್ನ್ಸ್‌ ಸೇರಿದಂತೆ ಇತ್ಯಾದಿ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು. ಇದರ ಬೆಲೆ 5,499ರೂ. ಆಗಿದೆ.

ಫೈರ್ ಬೋಲ್ಟ್ ಇನ್ವಿನ್ಸಿಬಲ್

ಫೈರ್ ಬೋಲ್ಟ್ ಇನ್ವಿನ್ಸಿಬಲ್

ಫೈರ್-ಬೋಲ್ಟ್ ಇನ್ವಿನ್ಸಿಬಲ್ ಸ್ಮಾರ್ಟ್‌ವಾಚ್‌ 1.39 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ 100 ಬಿಲ್ಟ್-ಇನ್ ವಾಚ್ ಫೇಸ್‌ಗಳು ಮತ್ತು 100 ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಿದೆ. ಇದರಲ್ಲಿ ಫ್ಲ್ಯಾಷ್‌ಲೈಟ್, ಕ್ಯಾಲ್ಕುಲೇಟರ್ ಅಪ್ಲಿಕೇಶನ್ ಮತ್ತು ಮ್ಯೂಸಿಕ್‌ ಕಂಟ್ರೋಲ್‌ ಅನ್ನು ಸಹ ನೀಡಲಾಗಿದೆ. ಅಲ್ಲದೆ ಈ ವಾಚ್‌ ವಾಟರ್‌ಪ್ರೂಫ್‌ ಆಗಿದ್ದು, IP67 ಧೂಳು ಮತ್ತು ವಾಟರ್‌ ರೆಸಿಸ್ಟೆನ್ಸಿಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ನ ಬೆಲೆ 6,999ರೂ.ಆಗಿದೆ.

Best Mobiles in India

English summary
Zebronics Drip Smartwatch With SpO2 Tracking Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X