ಯುವಜನರ ದಿಲ್ ಗೆಲ್ಲುವ ಮತ್ತೊಂದು ಸೌಂಡ್‌ಬಾರ್ ಮಾರುಕಟ್ಟೆಗೆ ಎಂಟ್ರಿ! ಬೆಲೆ ತುಂಬಾ ಕಡಿಮೆ!
ಇತ್ತೀಚಿನ ದಿನಗಳಲ್ಲಿ ಸೌಂಡ್‌ಬಾರ್ ಮಾರುಕಟ್ಟೆ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ. ಇದರಲ್ಲಿ ಝೆಬ್ರಾನಿಕ್ಸ್ ಕಂಪೆನಿಯ ಸೌಂಡ್‌ಬಾರ್‌ಗಳಿಗೆ ಉತ್ತಮ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಹಲವು ಆಕರ್ಷಕ ಸೌಂಡ್‌ಬಾರ್‌ಗಳನ್ನು ಪರಿಚಯಿಸಿದೆ. ಇದೀಗ ಮತ್ತೊಂದು ಹೊಸ ಝೆಬ್ರಾನಿಕ್ಸ್ ಝೆಬ್-ಜೂಕ್ ಬಾರ್ 9550 ಪ್ರೊ ಅನ್ನು ಬಿಡುಗಡೆ ಮಾಡಿದೆ.
ಹೌದು, ಝೆಬ್ರಾನಿಕ್ಸ್ ಕಂಪೆನಿ ಭಾರತದಲ್ಲಿ ಹೊಸ ಝೆಬ್-ಜೂಕ್ ಬಾರ್ 9550 ಪ್ರೊ ಅನ್ನು ಲಾಂಚ್ ಮಾಡಿದೆ. ಇದು ಡಾಲ್ಬಿ 5.2 ಸೌಂಡ್‌ಬಾರ್ ಆಗಿದ್ದು, ಉನ್ನತ ಮಟ್ಟದ ಸೌಂಡ್‌ಬಾರ್ ಎನಿಸಿಕೊಂಡಿದೆ. ಇನ್ನು ಸೌಂಡ್‌ಬಾರ್ ಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 5.2 ಸರೌಂಡ್ ಸೌಂಡ್ ಚಾನೆಲ್‌ಗಳನ್ನು ಬೆಂಬಲಿಸುತ್ತದೆ. ಇನ್ನುಳಿದಂತೆ ಸೌಂಡ್‌ಬಾರ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಝೆಬ್ರಾನಿಕ್ಸ್ ಝೆಬ್-ಜೂಕ್ ಬಾರ್ 9550 ಪ್ರೊ 625W ಸೌಂಡ್‌ಬಾರ್
ಝೆಬ್ರಾನಿಕ್ಸ್ ಝೆಬ್-ಜೂಕ್ ಬಾರ್ 9550 ಪ್ರೊ 625W ಸೌಂಡ್‌ಬಾರ್ ಬ್ರೈಟ್‌ನೆಸ್ ಮುಕ್ತಾಯದೊಂದಿಗೆ ನಯವಾದ ವಿನ್ಯಾಸವನ್ನು ಹೊಂದಿದೆ. ಇನ್ನು ಸೌಂಡ್‌ಬಾರ್ ದೇಹವು RGB ಲೈಟಿಂಗ್‌ನೊಂದಿಗೆ ಬರುತ್ತದೆ. ಇದಲ್ಲದೆ ಮೂರು 75W ಆಡಿಯೊ ಡ್ರೈವರ್‌ಗಳನ್ನು ಹೊಂದಿದೆ. ಜೊತೆಗೆ ಇದು ಹೆಚ್ಚು ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಡಾಲ್ಬಿ ಆಡಿಯೊವನ್ನು ಸಹ ಬೆಂಬಲಿಸಲಿದೆ.
ಇದಲ್ಲದೆ ಸೌಂಡ್‌ಬಾರ್ ವಾಯರ್‌ಲೆಸ್ ಸ್ಯಾಟಲೈಟ್ ಸ್ಪೀಕರ್‌ಗಳನ್ನು ಹೊಂದಿದೆ. ಎರಡು ವಾಯರ್‌ಲೆಸ್ ಸಬ್ ವೂಫರ್‌ಗಳೊಂದಿಗೆ ಬರಲಿದೆ. ಇನ್ನು ಸೌಂಡ್‌ಬಾರ್‌ನಿಂದ ಸ್ಪಷ್ಟವಾದ ಆಡಿಯೊ ಮತ್ತು ಡೀಪ್ ಬಾಸ್ ನೀಡುವ ಭರವಸೆಯನ್ನು ಝೆಬ್ರೊನಿಕ್ಸ್ ನೀಡಿದೆ. ಇದು ಬ್ಲೂಟೂತ್ 5.3, ಆಪ್ಟಿಕಲ್-ಇನ್, AUX, USB, ಮತ್ತು HDMI (ARC) ಪೋರ್ಟ್‌ಗಳಂತಹ ವಿವಿಧ ಕನೆಕ್ಟಿವಿಟಿ ಆಯ್ಕೆಗಳನ್ನು ಸಹ ನೀಡಲಿದೆ.

ಈ ಸೌಂಡ್‌ಬಾರ್ ಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 5.2 ಸರೌಂಡ್ ಸೌಂಡ್ ಚಾನೆಲ್‌ಗಳನ್ನು ಬೆಂಬಲಿಸಲಿದೆ. ಅಲ್ಲದೆ ರಿಮೋಟ್ ಕಂಟ್ರೋಲ್, ವಾಲ್ ಮೌಂಟ್ ಸಪೋರ್ಟ್, ವಾಲ್ಯೂಮ್ ಕಂಟ್ರೋಲ್‌ಗಳು ಮತ್ತು ಮೀಡಿಯಾ ಕಂಟ್ರೋಲ್‌ಗಳಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಝೆಬ್ರೋನಿಕ್ಸ್ ಝೆಬ್-ಜೂಕ್ ಬಾರ್ 9550 ಪ್ರೊ 625W ಸೌಂಡ್‌ಬಾರ್ ಬೆಲೆ ಮತ್ತು ಲಭ್ಯತೆ
ಝೆಬ್ರೋನಿಕ್ಸ್ ಝೆಬ್-ಜೂಕ್ ಬಾರ್ 9550 ಪ್ರೊ 625W ಸೌಂಡ್‌ಬಾರ್ ಭಾರತೀಯ ಮಾರುಕಟ್ಟೆಯಲ್ಲಿ 34,999ರೂ. ಬೆಲೆಯಲ್ಲಿ ಬರಲಿದೆ. ಆದರೆ ಲಾಂಚ್ ಆಫರ್‌ನಲ್ಲಿ ಈ ಸೌಂಡ್‌ಬಾರ್ ಅನ್ನು 19,999ರೂ ಬೆಲೆಗೆ ಖರೀದಿಸಬಹುದಾಗಿದೆ. ಇದು ಕಂಪನಿಯ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮೂಲಕ ಖರೀದಿಗೆ ಲಭ್ಯವಾಗಲಿದೆ.
ಇನ್ನು ಝೆಬ್ರೋನಿಕ್ಸ್ ಕಂಪೆನಿ ಇದೇ ವರ್ಷ ಭಾರತದಲ್ಲಿ ಈ ಹೊಸ ಝೆಬ್ರಾನಿಕ್ಸ್ ಐಕಾನಿಕ್ ಲೈಟ್ ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿತ್ತು. ಈ ಸ್ಮಾರ್ಟ್‌ವಾಚ್ 1.78 ಇಂಚಿನ ಅಮೋಲೆಡ್2.5D ಬಾಗಿದ ಡಿಸ್‌ಪ್ಲೇಯಿಂದ ಗಮನಸೆಳೆದಿದೆ. ಜೊತೆಗೆ ಈ ಡಿಸ್‌ಪ್ಲೇ ಆಲ್‌ವೇಸ್ ಆನ್ ಫೀಚರ್ಸ್ ಪಡೆದುಕೊಂಡಿದೆ. ಅಲ್ಲದೆ 10 ಇನ್‌ಬಿಲ್ಟ್ ಕಸ್ಟಮೈಸ್ ಮಾಡಬಹುದಾದ ಹಾಗೂ 100+ ವಾಚ್ ಫೇಸ್‌ಗಳನ್ನು ಹೊಂದಿದ್ದು, ಹೃದಯ ಬಡಿತ ಮಾನಿಟರ್, SpO2 ಮಾನಿಟರ್, ರಕ್ತದೊತ್ತಡ ಮಾನಿಟರ್ ಮತ್ತು ನಿದ್ರೆ ಮಾನಿಟರ್ ಮಾಡಲಿದೆ
ಇದರೊಂದಿಗೆ ನಿಮ್ಮ ಕ್ಯಾಲೊರಿ ವಿವರ ಮತ್ತು ನೀವು ಸಂಚರಿಸುವ ಅಂತರವನ್ನು ಟ್ರ್ಯಾಕ್ ಮಾಡಬಹುದು. ಜೊತೆಗೆ, ಧ್ಯಾನದ ಉಸಿರಾಟಕ್ಕೂ ಇದು ಅನುಕೂಲ ಮಾಡಿಕೊಡುವ ಸೌಲಭ್ಯ ಹೊಂದಿದೆ. ಜೊತೆಗೆ ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದ್ದು, ಝೆಬ್ ಫಿಟ್ 20 ಆಪ್ ಮೂಲಕ ಇವೆಲ್ಲವನ್ನೂ ಟ್ರ್ಯಾಕ್ ಮಾಡಬಹುದಾಗಿದೆ. ಇದರೊಂದಿಗೆ ಪ್ರಮುಖ ಫೀಚರ್ಸ್ ಆದ ಗೂಗಲ್ ಅಸಿಸ್ಟೆಂಟ್ ಹಾಗೂ ಸಿರಿಗೆ ಬೆಂಬಲ ಸಹ ನೀಡಲಿದ್ದು, IP67 ರೇಟಿಂಗ್ ಅನ್ನು ಹೊಂದಿರುವುದು ಮತ್ತಷ್ಟು ವಿಶೇಷ.


Click it and Unblock the Notifications








