ಜೀಬ್ರೋನಿಕ್ಸ್‌ನಿಂದ ಸ್ಮಾರ್ಟ್‌ PTZ ಸೆಕ್ಯುರಿಟಿ ಕ್ಯಾಮೆರಾ ಬಿಡುಗಡೆ!

|

ಇದು ಡಿಜಿಟಲ್‌ ಜಮಾನ, ಇಲ್ಲಿ ಎಲ್ಲವೂ ಟೆಕ್ನಾಲಜಿ ಆಧಾರಿತವಾಗಿವೆ. ಸದ್ಯ ಟೆಕ್‌ ವಲಯದಲ್ಲಿ ಸ್ಮಾರ್ಟ್‌ ಡಿವೈಸ್‌ಗಳ ಭರಾಟೆ ಜೋರಾಗಿಯೇ ಇದ್ದು, ಎಲ್ಲಾ ಮಾದರಿಯ ಸ್ಮಾರ್ಟ್‌ ಡಿವೈಸ್‌ಗಳು ಇಂದು ಲಭ್ಯವಿವೆ. ಅವುಗಳಲ್ಲಿ ಸ್ಮಾರ್ಟ್‌ ಸೆಕ್ಯುರಿಟಿ ಕ್ಯಾಮೆರಾಗಳು ಕೂಡ ಸೇರಿವೆ. ಈಗಾಗ್ಲೆ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸೆಕ್ಯೂರಿಟಿ ಕ್ಯಾಮೆರಾಗಳಿದ್ದು, ಇದೀಗ ಜೀಬ್ರೋನಿಕ್ಸ್‌ ಕಂಪೆನಿ ಹೊಸ PTZ ಸ್ಮಾರ್ಟ್‌ ಸೆಕ್ಯೂರಿಟಿ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಸ್ಮಾರ್ಟ್‌ ಡಿವೈಸ್‌ ಪ್ರಾಡಕ್ಟ್‌ಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಜೀಬ್ರೋನಿಕ್ಸ್‌ ಕಂಪೆನಿ ತನ್ನ ಹೊಸ ಹೋಮ್ ಆಟೊಮೇಷನ್ ಸ್ಮಾರ್ಟ್ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಕ್ಯಾಮೆರಾ ವೈ-ಫೈ, ಪ್ಯಾನ್, ಟಿಲ್ಟ್, ಡಿಜಿಟಲ್ ಜೂಮ್ ಮತ್ತು AI ಫೀಚರ್ಸ್‌ಗಳನ್ನ ಒಳಗೊಂಡಿದೆ. ಅಲ್ಲದೆ ಈ ಸ್ಮಾರ್ಟ್‌ಕ್ಯಾಮೆರಾ LAN / Wi-Fi / Hotspot ಕನೆಕ್ಟಿವಿಟಿಯನ್ನು ಸಹ ಬೆಂಬಲಿಸಲಿದ್ದು, ನಿಮ್ಮ ಡೇಟಾವನ್ನು ರೆಕಾರ್ಡ್ ಮಾಡಲು 512 GB ಸ್ಟೋರೇಜ್‌ ಹೊಂದಿರುವ ಮೆಮೊರಿ ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಈ ಕ್ಯಾಮೆರಾವನ್ನು ಟೇಬಲ್‌ ಅಥವಾ ಗೋಡೆ ಮೇಲೆ ಕನೆಕ್ಟ್‌ ಮಾಡಬಹುದಾಗಿದ್ದು, ಉತ್ತಮ ವಿನ್ಯಾಸವನ್ನು ಹೊಂದಿದೆ. ಈ ಸ್ಮಾರ್ಟ್‌ ಸೆಕ್ಯುರಿಟಿ ಕ್ಯಾಮೆರಾ ಸ್ಮಾರ್ಟ್ ಹೋಮ್‌ಗೆ ತಕ್ಕಂತ ಫೀಚರ್ಸ್‌ಗಳನ್ನ ಹೊಂದಿದ್ದು, ಮನೆಯ ಎಲ್ಲಾ ದಿಕ್ಕುಗಳನ್ನ ತನ್ನ ಕಣ್ಣಿನಲ್ಲಿ ಸೆರೆಹಿಡಿಯುತ್ತದೆ. ಅಷ್ಟೇ ಅಲ್ಲ ಈ ಕ್ಯಾಮೆರಾದಲ್ಲಿ ಸ್ಟೋರೇಜ್‌ ಆಗಿರುವ ಮಾಹಿತಿಯನ್ನ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ನೋಡಬಹುದಾದ ಅವಕಾಶವನ್ನ ಕಲ್ಪಿಸಲಾಗಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಜೀಬ್ರೋನಿಕ್ಸ್‌ ಕ್ಯಾಮೆರಾದ ಪ್ರಮುಖ ವಿಶೇಷತೆ ಅಂದರೆ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ ಮೂಲಕ ಕ್ಯಾಮೆರಾವನ್ನ ನಿಯಂತ್ರಿಸಲು ಅವಕಾಶವಿದೆ. ಕಂಪನಿಯ ಪ್ರಕಾರ, ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ MICC ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರ ಮೂಲಕ ಹೋಮ್ ಆಟೊಮೇಷನ್ ಕ್ಯಾಮೆರಾವನ್ನು ಸುಲಭವಾಗಿ ನಿಮಗೆ ಬೇಕಾದಂತೆ ಹೊಂದಿಸಲು ಸಹಾಯವಾಗುತ್ತದೆ. ಅಲ್ಲದೆ ಕ್ಯಾಮೆರಾ ಕೋನವನ್ನು ಬದಲಾಯಿಸುವುದು, ಅಲಾರಂ ನಿಲ್ಲಿಸುವುದು, ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನ ಬದಲಾಯಿಸಲು ಅವಕಾಶ ನೀಡಲಾಗಿದೆ.

ಕ್ಯಾಮೆರಾ ಫೀಚರ್ಸ್‌

ಕ್ಯಾಮೆರಾ ಫೀಚರ್ಸ್‌

ಈ ಕ್ಯಾಮೆರಾವನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ದಿಕ್ಕಿಗೆ ಬೇಕಾದಂತೆ ಸರಿ ಹೊಂದಿಸಬಹುದು. ಅಲ್ಲದೆ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ ಮೂಲಕವೇ ಅದನ್ನು ಸಂಪೂರ್ಣ ನಿಯಂತ್ರಿಸಬಹುದು. ಇನ್ನು ಯಾವುದೇ ತುರ್ತು ಮಾಹಿತಿ ಸಂದರ್ಭದಲ್ಲಿ ಅಲಾರಂ ಧ್ವನಿಯನ್ನ ಹೆಚ್ಚು ಮಾಡುವುದು. ಹಾಗೂ ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ನೊಟೀಫೀಕೇಶನ್‌ ಅನ್ನು ಕಳುಹಿಸುವುದು ಮಾಡುತ್ತದೆ. ಇದರಿಂದಾಗಿ ಮನೆಯವರಿಗೆ ಸಂದೇಶವನ್ನ ನೀಡಬಹುದಾಗಿದ್ದು, ಮನೆಯನ್ನ ರಕ್ಷಣೆ ಮಾಡಲು ಅವಕಾಶ ಕಲ್ಪಿಸುತ್ತದೆ.

ಇತರೆ

ಇತರೆ

ಈ ಹೋಮ್ ಆಟೊಮೇಷನ್ ಕ್ಯಾಮೆರಾ ಬೇಬಿ ಮಾನಿಟರ್ ಕ್ಯಾಮೆರಾದಂತೆ ದ್ವಿಗುಣ ಮಾದರಿಯಲ್ಲಿದೆ. ಏಕೆಂದರೆ ಇದು 350 ಡಿಗ್ರಿ ತಿರುಗುವ ವೈಶಿಷ್ಟ್ಯವನ್ನು ಹೊಂದಿದ್ದು, ಸ್ಮಾರ್ಟ್‌ಫೋನ್‌ ಆಪ್‌ ಮೂಲಕ ಈ ಕ್ಯಾಮೆರಾವನ್ನು ಪ್ಯಾನ್, 100 ಡಿಗ್ರಿ ಟಿಲ್ಟ್ ಮತ್ತು ಡಿಜಿಟಲ್ ಜೂಮ್ ಮಾಡಬಹುದು. ಇನ್ನು ಈ ಕ್ಯಾಮೆರಾ ಸ್ಮಾರ್ಟ್ H.264 ವಿಡಿಯೋ ಕಂಪ್ರೆಷನ್‌ ಹೊಂದಿದ್ದು, ಇದು ರೆಕಾರ್ಡಿಂಗ್ ಮಾಡುವಾಗ ಸ್ಪೆಸ್‌ ಅನ್ನು ಉಳಿಸುತ್ತದೆ. ಇನ್ನು ಇದರ ಬೆಲೆ 3,599.ರೂ, ಆಗಿದೆ.

Best Mobiles in India

English summary
Zebronics Smart Wi-Fi PTZ camera is priced at Rs. 3,599.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X