Home
ಸುದ್ದಿಜಾಲ

22 ಇಂಚಿನ ಈ ಮಾನಿಟರ್‌ ಬೆಲೆ ಕೇವಲ 4,699ರೂ. ಮಾತ್ರ; ವಾವ್ಹ್‌ ಎನಿಸುವ ಫೀಚರ್ಸ್‌

ಮ್ಯೂಸಿಕ್‌ ಆಕ್ಸಿಸರೀಸ್‌ಗಳಿಗೆ ಪ್ರಸಿದ್ಧಿ ಪಡೆದಿರುವ ಜೆಬ್ರೋನಿಕ್ಸ್‌ ಇದೀಗ ಹೊಸ ಮಾನಿಟರ್‌ ಬಿಡುಗಡೆ ಮಾಡಿದೆ. ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿರುವ ಈ ಮಾನಿಟರ್‌ ಅನ್ನು Zebronics ZEB-EA122 ಎಂದು ಹೆಸರಿಸಲಾಗಿದೆ. ಇದು ಕೈಗೆಟುಕುವ ಬೆಲೆಯ HD+ ಮಾನಿಟರ್ ಆಗಿದ್ದು, 22-ಇಂಚಿನ LED ಮಾನಿಟರ್ ಇದಾಗಿದೆ.

ಹೌದು, Zebronics ZEB-EA122 ಮಾನಿಟರ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಇದರ ಪ್ರಮುಖ ಆಕರ್ಷಣೆ ಎಂದರೆ ಬಕ್‌ಗಾಗಿ ನೀಡಲಾಗುವ ಬ್ಯಾಂಗ್‌ ಆಗಿದೆ. ಇನ್ನು ಸ್ಮಾರ್ಟ್‌ ಮಾನಿಟರ್‌ 22W ಚಾರ್ಜಿಂಗ್‌ ಬೆಂಬಲಿಸಲಿದೆ. ಜೊತೆಗೆ HDMI ಮತ್ತು VGA ಇನ್‌ಪುಟ್‌ಗಳೊಂದಿಗೆ ಡಿವೈಸ್‌ಗಳನ್ನು ಕನೆಕ್ಟ್‌ ಮಾಡುವುದು ಸರಳವಾಗಿದೆ. ಇನ್ನುಳಿದಂತೆ ಈ ಹೊಸ ಮಾನಿಟರ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

22 ಇಂಚಿನ ಈ ಮಾನಿಟರ್‌ ಬೆಲೆ ಕೇವಲ 4,699ರೂ. ಮಾತ್ರ; ವಾವ್ಹ್‌ ಎನಿಸುವ ಫೀಚರ್ಸ್‌

Zebronics ZEB-EA122 ಫೀಚರ್ಸ್‌ ಹೇಗಿದೆ?
Zebronics ZEB-EA122 ಸ್ಮಾರ್ಟ್‌ ಮಾನಿಟರ್‌ 22 ಇಂಚಿನ LED ಡಿಸ್‌ಪ್ಲೇಯನ್ನು ಹೊಂದಿದೆ. ಇದು 1680×1050 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಹೊಂದಿದ್ದು, ಕಛೇರಿ ಕೆಲಸಕ್ಕೆ ಆದ್ಯತೆ ನೀಡುತ್ತದೆ. ಇದಲ್ಲದೆ ಮಾನಿಟರ್‌ ಡಿಸ್‌ಪ್ಲೇ 250 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಜೊತೆಗೆ ಉತ್ತಮ ದೃಶ್ಯ ಆಳಕ್ಕಾಗಿ ಮಾನಿಟರ್ 2000000:1 ರ ಡೈನಾಮಿಕ್ ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ.

ಇನ್ನು Zebronics ZEB-EA122 ಮಾನಿಟರ್‌ 140 ° ನ ಸಮತಲ ವೀಕ್ಷಣಾ ಕೋನ ಮತ್ತು 110 ° ನ ಲಂಬ ವೀಕ್ಷಣಾ ಕೋನವನ್ನು ಹೊಂದಿದೆ. ಇದರೊಂದಿಗೆ ಮಾನಿಟರ್ 16.7 ಮಿಲಿಯನ್ ಬಣ್ಣಗಳನ್ನು ತೋರಿಸುವ ಸಾಮರ್ಥ್ಯವನ್ನು ಪಡೆದಿದೆ. ಆದ್ದರಿಂದ ಇದರಲ್ಲಿ ಬಣ್ಣಗಳು ರೋಮಾಂಚಕ ಮತ್ತು ನಿಖರವಾಗಿರುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು 5 ms ರೆಸ್ಪಾನ್ಸ್‌ ಟೈಂನೊಂದಿಗೆ, ಇದನ್ನು ಕ್ಯಾಶುಯಲ್ ಗೇಮಿಂಗ್‌ಗಾಗಿ ಬಳಸಬಹುದು ಎಂದು ಜೆಬ್ರೋನಿಕ್ಸ್‌ ಕಂಪೆನಿ ಹೇಳಿದೆ.

ಇದಲ್ಲದೆ Zebronics ZEB-EA122 ಸ್ಮಾರ್ಟ್‌ ಮಾನಿಟರ್‌ HDMI ಮತ್ತು VGA ಇನ್‌ಪುಟ್‌ಗಳೊಂದಿಗೆ ಡಿವೈಸ್‌ಗಳನ್ನು ಕನೆಕ್ಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದು ಗರಿಷ್ಠ 22 ವ್ಯಾಟ್‌ಗಳ ಪವರ್‌ ಅನ್ನು ಬಳಸಲಿದೆ ಎಂದು ವರದಿಯಾಗಿದೆ. ಇನ್ನು ಈ ಮಾನಿಟರ್‌ 45 ಕೆಜಿ (ಸ್ಟ್ಯಾಂಡ್‌ನೊಂದಿಗೆ) ತೂಕವನ್ನು ಹೊಂದಿದೆ. ಇದರಲ್ಲಿ ನೀವು HDMI ಕೇಬಲ್ ಮತ್ತು ಮಾನಿಟರ್‌ನ ಬೇಸ್‌ನೊಂದಿಗೆ ಪ್ಯಾಕೇಜ್‌ನಲ್ಲಿ ಪವರ್ ಕಾರ್ಡ್ ಅನ್ನು ಕೂಡ ನೀಡಲಾಗುತ್ತದೆ.

ಭಾರತದಲ್ಲಿ Zebronics ZEB-EA122 ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Zebronics ZEB-EA122 ಮಾನಿಟರ್‌ 12,799ರೂ. ಬೆಲೆಯನ್ನು ಹೊಂದಿದೆ. ಆದರೆ ಲಾಂಚ್‌ ಆಫರ್‌ ಪ್ರಯುಕ್ತ ಇದನ್ನು ಕೇವಲ 4,699ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ ಮಾನಿಟರ್‌ ಇದೇ ಆಗಸ್ಟ್ 14 ರಿಂದ ಸೇಲ್‌ ಆಗಲಿದೆ ಎಂದು ಜೆಬ್ರೋನಿಕ್ಸ್‌ ಕಂಪೆನಿ ಹೇಳಿದೆ.

ಇನ್ನು ಜೆಬ್ರೋನಿಕ್ಸ್‌ ಕಂಪೆನಿ ತನ್ನ ಸೌಂಡ್‌ಬಾರ್‌ಗಳ ಮೂಲಕ ಗುರುತಿಸಿಕೊಂಡಿದೆ. ಅದರಂತೆ ಕಳೆದ ವರ್ಷ ಭಾರತದಲ್ಲಿ Zeb-Juke ಬಾರ್ 9750 ಪ್ರೊ ಸೌಂಡ್‌ಬಾರ್ ಪರಿಚಯಿಸಿತ್ತು. ಈ ಸೌಂಡ್‌ಬಾರ್‌ ಡ್ಯುಯಲ್‌ ವಾಯರ್‌ಲೆಸ್‌ ರಿಯರ್‌ ಸ್ಯಾಟಲೈಟ್‌ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು ಒಟ್ಟು ಐದು ಸ್ಪೀಕರ್‌ಗಳನ್ನು ಒಳಗೊಂಡಿದ್ದು, ಮುಂಭಾಗದಲ್ಲಿ ಮೂರು ಮತ್ತು ಹಿಂಬದಿಯಲ್ಲಿ ಎರಡು ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ ಪವರ್‌ಫುಲ್‌ 16.5 ಸೆಂ ಸಬ್ ವೂಫರ್‌ ಅನ್ನು ಒಳಗೊಂಡಿದೆ. ಇದು ಸಿಂಗಲ್‌ ಕಲರ್‌ ಟೋನ್‌ನೊಂದಿಗೆ ಕನಿಷ್ಠ ಮತ್ತು ನಯವಾದ ವಿನ್ಯಾಸವನ್ನು ಹೊಂದಿವೆ. ಇದರಿಂದ ಮನೆಯಲ್ಲಿಯೇ ಕುಳಿತು ಹೋಮ್‌ ಥಿಯೇಟರ್‌ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Zebronics ZEB-EA122 22-inch LED monitor launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+