ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಸ ಸೌಂಡ್‌ಬಾರ್.. ಕಿಕ್ ಏರಿಸುವ ಸೌಂಡ್ ಸಿಸ್ಟಂ!
ಜೆಬ್ರೋನಿಕ್ಸ್ ಕಂಪೆನಿಯ ಸೌಂಡ್‌ಬಾರ್‌ಗಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಯುವಜನರ ಆಶಯಕ್ಕೆ ಅನುಗುಣವಾಗಿ ಸೌಂಡ್ ಸಿಸ್ಟಂ, ಹಗುರ ವಿನ್ಯಾಸವನ್ನು ಹೊಂದಿವೆ. ಇದೇ ಕಾರಣಕ್ಕೆ ಜೆಬ್ರೋನಿಕ್ಸ್ ಕಂಪೆನಿಯ ಸೌಂಡ್‌ಬಾರ್‌ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತವೆ. ಅದರ ಮುಂದುವರೆದಂತೆ ಜೆಬ್ರೋನಿಕ್ಸ್ ಇದೀಗ ಹೊಸ ಸೌಂಡ್‌ಬಾರ್ ಪರಿಚಯಿಸಿದೆ.
ಹೌದು, ಜೆಬ್ರೋನಿಕ್ಸ್ ಕಂಪೆನಿ ಭಾರತದಲ್ಲಿ ಹೊಸ ಜೆಬ್ರೋನಿಕ್ಸ್ ಝೆಬ್-ಜೂಕ್ ಬಾರ್ 1000 ಸೌಂಡ್‌ಬಾರ್ ಅನ್ನು ಲಾಂಚ್ ಮಾಡಿದೆ. ಇದು 150W ಸೌಂಡ್‌ಬಾರ್ ಆಗಿದ್ದು ಕೈಗೆಟುಕುವ ಬೆಲೆಯಲ್ಲಿ ಎಂಟ್ರಿ ನೀಡಿದೆ. ಇನ್ನು ಈ ಸೌಂಡ್‌ಬಾರ್ ಸ್ಪೀಕರ್ ಬ್ಲೂಟೂತ್ 5.3 ಮೂಲಕ ವಾಯರ್‌ಲೆಸ್ ಆಗಿ ಕನೆಕ್ಟ್ ಮಾಡಬಹುದಾಗಿದೆ. ಇನ್ನುಳಿದಂತೆ ಸೌಂಡ್‌ಬಾರ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜೆಬ್ರೋನಿಕ್ಸ್ ಝೆಬ್-ಜೂಕ್ ಬಾರ್ 1000 ಫೀಚರ್ಸ್ ಹೇಗಿದೆ?
ಜೆಬ್ರೋನಿಕ್ಸ್ ಝೆಬ್-ಜೂಕ್ ಬಾರ್ 1000 ಸೌಂಡ್‌ಬಾರ್ ನವೀನ ಮಾದರಿಯ ವಿನ್ಯಾಸದೊಂದಿಗೆ ಎಂಟ್ರಿ ನೀಡಿದೆ. ಇದರ ಸ್ಪೀಕರ್‌ಗಳು ಒಟ್ಟು 150W ಔಟ್‌ಪುಟ್ ಅನ್ನು ಹೊಂದಿವೆ. 5-ಇಂಚಿನ ಗಾತ್ರವನ್ನು ಹೊಂದಿರುವ ಅದರ 90W ಸಬ್ ವೂಫರ್ ಅನ್ನು ನೀಡಲಾಗಿದೆ. ಇದರ ಎರಡು ಡ್ರೈವರ್‌ಗಳಿಂದ 60W ಔಟ್‌ಪುಟ್ ಮಾಡುವ ಸೌಂಡ್‌ಬಾರ್‌ನಿಂದ ಇದನ್ನು ಸಕ್ರಿಯಗೊಳಿಸಲಾಗಿದೆ ಎಂದು ಕಂಪೆನಿ ಹೇಳಿದೆ.
ಜೆಬ್ರೋನಿಕ್ಸ್ ಸಂಸ್ಥೆಯ ಈ ಹೊಸ ಸೌಂಡ್‌ಬಾರ್ ಸ್ಪೀಕರ್ ಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದನ್ನು ಗೋಡೆಯ ಮೇಲೆ ಸಹ ಅಳವಡಿಸಬಹುದಾಗಿದೆ. ಇದಲ್ಲದೆ ಈ ಸೌಂಡ್‌ಬಾರ್‌ನೊಂದಿಗೆ ರಿಮೋಟ್ ಕಂಟ್ರೋಲ್ ಅನ್ನು ಸಹ ಪಡೆದುಕೊಳ್ಳಬಹುದಾಗಿದ್ದು, ಒಂದು ವರ್ಷದ ವಾರಂಟಿ ಅವಧಿ ಹೊಂದಿದೆ. ಇನ್ನು ಈ ಸೌಂಡ್‌ಬಾರ್ ಸ್ಪೀಕರ್‌ಗಳು ಕೇವಲ ಕಪ್ಪು ಬಣ್ಣದ ಮಾದರಿಯಲ್ಲಿ ಮಾತ್ರ ಬರುತ್ತವೆ ಎಂಬುದು ಗಮನಿಸಬೇಕಾದ ವಿಚಾರವಾಗಿದೆ.
ಜೆಬ್ರೋನಿಕ್ಸ್ ಝೆಬ್-ಜೂಕ್ ಬಾರ್ 1000 ಸೌಂಡ್‌ಬಾರ್ ಸಬ್ ವೂಫರ್ ಯೂನಿಟ್ ಮೈಕ್ರೋಸಾಫ್ಟ್ ಗೇಮಿಂಗ್ ಕನ್ಸೋಲ್‌ನ ಬ್ಲ್ಯಾಕ್ ಎಡಿಷನ್ ಆದ ಎಕ್ಸ್‌ಬಾಕ್ಸ್ ಸರಣಿ ಎಸ್ ಅನ್ನು ಅಸ್ಪಷ್ಟವಾಗಿ ಹೋಲುತ್ತದೆ. ಇದಲ್ಲದೆ ಈ ಸೌಂಡ್‌ಬಾರ್ ಸೆಟಪ್ 2.1 ಚಾನೆಲ್ ವ್ಯವಸ್ಥೆಯನ್ನು ನೀಡಲಿದ್ದು, ಹೆಚ್ಚು ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI (eARC), ಆಪ್ಟಿಕಲ್ IN, USB, ಮತ್ತು AUX ಅನ್ನು ಬೆಂಬಲಿಸಲಿದೆ. ಇದು ಬ್ಲೂಟೂತ್ 5.3 ಮೂಲಕ ವಾಯರ್‌ಲೆಸ್ ಕನೆಕ್ಟಿವಿಟಿಯನ್ನು ಸಹ ಬೆಂಬಲಿಸಲಿದೆ.
ಜೆಬ್ರೋನಿಕ್ಸ್ ಝೆಬ್-ಜೂಕ್ ಬಾರ್ 1000 ಬೆಲೆ ಮತ್ತು ಲಭ್ಯತೆ
ಜೆಬ್ರೋನಿಕ್ಸ್ ಝೆಬ್-ಜೂಕ್ ಬಾರ್ 1000 ಸೌಂಡ್‌ಬಾರ್ ಭಾರತದಲ್ಲಿ ಪರಿಚಯಾತ್ಮಕ ಬೆಲೆಯಲ್ಲಿ 9,999ರೂ.ಗ ಲಭ್ಯವಾಗಲಿದೆ. ಇದು ಸೆಪ್ಟೆಂಬರ್ 5 ರಿಂದ ಸೇಲ್ ಆಗಲಿದೆ. ಇದನ್ನು ನೀವು ಜೆಬ್ರೋನಿಕ್ಸ್ ಕಂಪೆನಿಯ ಅಧಿಕೃತ ವೆಬ್‌ಸೈಟ್ ಹಾಗೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಬಹುದಾಗಿದೆ.
ಇದಲ್ಲದೆ ಜೆಬ್ರೋನಿಕ್ಸ್ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ Zebronics ZEB-EA122 ಸ್ಮಾರ್ಟ್ ಮಾನಿಟರ್ ಪರಿಚಯಿಸಿದೆ. ಇದು 22 ಇಂಚಿನ LED ಡಿಸ್‌ಪ್ಲೇಯನ್ನು ಹೊಂದಿದ್ದು, 1680×1050 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಜೊತೆಗೆ ಉತ್ತಮ ದೃಶ್ಯ ಆಳಕ್ಕಾಗಿ ಮಾನಿಟರ್ 2000000:1 ರ ಡೈನಾಮಿಕ್ ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ.ಇದಲ್ಲದೆ Zebronics ZEB-EA122 ಸ್ಮಾರ್ಟ್ ಮಾನಿಟರ್ HDMI ಮತ್ತು VGA ಇನ್‌ಪುಟ್‌ಗಳೊಂದಿಗೆ ಡಿವೈಸ್‌ಗಳನ್ನು ಕನೆಕ್ಟ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ನೀವು HDMI ಕೇಬಲ್ ಮತ್ತು ಮಾನಿಟರ್‌ನ ಬೇಸ್‌ನೊಂದಿಗೆ ಪ್ಯಾಕೇಜ್‌ನಲ್ಲಿ ಪವರ್ ಕಾರ್ಡ್ ಅನ್ನು ಕೂಡ ನೀಡಲಾಗುತ್ತದೆ.


Click it and Unblock the Notifications








