Zebronics: ಜೀಬ್ರೋನಿಕ್ಸ್ ನಿಂದ ZED-ಜೂಕ್ ಬಾರ್ 9000 ಪ್ರೊ ಬಿಡುಗಡೆ!
ಟೆಕ್ ಮಾರುಕಟ್ಟೆಯಲ್ಲಿ ಈಗಾಗ್ಲೆ ಸಾಕಷ್ಟು ಬಗೆಯ ಸೌಂಡ್‌ಬಾರ್ ಸಿಸ್ಟಂಗಳು ಲಭ್ಯವಿದೆ. ಇದೀಗ ಆಡಿಯೋ ಆಕ್ಸಿಸರಿಸ್ ಮೂಲಕ ಗುರ್ತಿಸಿಕೊಂಡಿರೋ ಜೀಬ್ರೋನಿಕ್ಸ್ ಕಂಪೆನಿ ಹೊಸ ಮಾದರಿಯ ಸೌಂಡ್‌ಬಾರ್ ಆವೃತ್ತಿಯನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಜೀಬ್ರೋನಿಕ್ಸ್ ಕಂಪೆನಿ ಬಿಡುಗಡೆ ಮಾಡಿರುವ ಹೊಸ ಪ್ರೀಮಿಯಂ ಸೌಂಡ್‌ಬಾರ್ ಹೊಸ ಸೌಂಡ್‌ಸಿಸ್ಟಂ ಅನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡೋ ಸೂಚನೆ ನೀಡಿದೆ.

ಹೌದು ಆಡಿಯೋ ಉತ್ಪನ್ನಗಳ ಮೂಲಕವೇ ಜೀಬ್ರೋನಿಕ್ಸ್ ಕಂಪೆನಿ ತನ್ನ ಹೊಸ ಆವೃತ್ತಿಯ ZED-ಜೂಕ್ ಬಾರ್ 9000 ಪ್ರೊ ಡಾಲ್ಬಿ' ಸೌಂಡ್‌ಬಾರ್ ಬಿಡುಗಡೆ ಮಾಡಿದ್ದು. ಈ ಸೌಂಡ್‌ಬಾರ್ ಥಿಯೇಟರ್ ತರಹದ ಧ್ವನಿ ಅನುಭವವನ್ನ ನೀಡಲಿದ್ದು. ಜೊತೆಗೆ ಈ ಸೌಂಡ್‌ಬಾರ್ ನಯವಾದ ವಿನ್ಯಾಸವನ್ನು ಹೊಂದಿದೆ. ಇದಲ್ಲದೆ ಈ ಸೌಂಡ್‌ಬಾರ್ ಉತ್ತಮ ಬಜೆಟ್ ಸ್ನೇಹಿಯ ಬ್ರ್ಯಾಂಡ್ ಆಗಿದ್ದು, ಉತ್ತಮ ಸೌಂಡ್‌ಬಾರ್ ಆಗಿದೆ.

ಇದಲ್ಲದೆ ಈ ಸೌಂಡ್‌ಬಾರ್ ಎಲ್ಇಡಿ ಸ್ಕ್ರೀನ್ ಹೊಂದಿದ್ದು. ಮಲ್ಟಿಪಲ್ ಕನೆಕ್ಟಿವಿಟಿ ಸಿಸ್ಟಂ ಅನ್ನ ಹೊಂದಿದೆ. ಇದು ಎಚ್‌ಡಿಎಂಐ ಮತ್ತು ಆಪ್ಟಿಕಲ್ ಇನ್‌ಪುಟ್‌ಗೆ ಬೆಂಬಲವನ್ನು ಸೂಚಿಸುತ್ತದೆ. ಅಲ್ಲದೆ ವೈರ್‌ಲೆಸ್ ಬ್ಲೂಟೂತ್, ಯುಎಸ್‌ಬಿ / ಎಯುಎಕ್ಸ್ / ಎಚ್‌ಡಿಎಂಐಗೆ ಸಹ ಬೆಂಬಲವನ್ನ ನೀಡಲಿದೆ. ಜೊತೆಗೆ ಸ್ಪೀಕರ್ ಜೊತೆಗೆ ಕಂಪ್ಯಾನಿಯನ್ ರಿಮೋಟ್ ಸಹ ಒದಗಿಸಲಾಗಿದ್ದು. ಸ್ಮಾರ್ಟ್‌ಟಿವಿ ಜೊತೆಗೆ ಸೌಂಡ್‌ಬಾರ್ ಅನ್ನು ಸಂಪರ್ಕಿಸಿಬಹುದು. ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದಾಗಿದ್ದು ಸಂಗೀತವನ್ನು ಪ್ಲೇ ಮಾಡಬಹುದು.

ಜೀಬ್ರೋನಿಕ್ಸ್ ಕಂಪೆನಿ ಉತ್ತಮ ತಂತ್ರಜ್ಞಾನವುಳ್ಳ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದ್ದು, ಸದ್ಯ ಡಾಲ್ಬಿ ಡಿಜಿಟಲ್ ಪ್ಲಸ್‌ನೊಂದಿಗೆ ಬಂದಿರುವ ಈ ಸೌಂಡ್‌ಬಾರ್ ಒಳ್ಳೆಯ ಆಯ್ಕಜೆಯಾಗಿದದೆ ಅಂತಾ ಕಂಪೆನಿ ಹೇಳಿದೆ. ಆಡಿಯೊ ಸ್ಪಷ್ಟತೆ ಮತ್ತು ಥಿಯೇಟರ್ ತರಹದ ಧ್ವನಿ ಗುಣಮಟ್ಟವನ್ನು ಇದು ಹೊಂದಿದ್ದು ಗ್ರಾಹಕರಿಗೆ ಉತ್ತಮ ಅನುಭವ ನೀಡಲಿದೆ ಎಂದು ಜೀಬ್ರೋನಿಕ್ಸ್ ಕಂಪೆನಿಯ ಭಾರತದ ಡೈರೆಕ್ಟರ್ ಪ್ರದೀಪ್ ದೋಶಿ ಹೇಳಿದರು.

ಇನ್ನು ಈ ಸೌಂಡ್‌ಬಾರ್ ಡಾಲ್ಬಿ ಡಿಜಿಟಲ್ ಪ್ಲಸ್ ಪ್ರಮಾಣೀಕರಣ ಹೊಂದಿರುವುದರಿಂದ ಬಳಕೆದಾರರಿಗೆ ಸರೌಂಡ್ ಸೌಂಡ್ ಅನುಭವವನ್ನು ನೀಡುತ್ತದೆ. ಅಲ್ಲದೆ ಬಳಕೆದಾರರು ಬಯಸುವ ಸಂಗೀತ ಮತ್ತು ಚಲನಚಿತ್ರಗಳನ್ನು ವೀಕ್ಷಿಸುವಾಗ ಉತ್ತಮಸೌಂಡಿಂಗ್ ನೀಡಲಿದೆ. ಇನ್ನು ZED-ಜೂಕ್ ಬಾರ್ 9000 ಪ್ರೊ ಆವೃತ್ತಿಯ ಸೌಂಡ್‌ಬಾರ್‌ಗಳನ್ನ ಗೋಡೆಯ ಮೇಲೆ ಇಲ್ಲವೇ ಟಿವಿಯ ಕೆಳಗೆ ಅಳವಡಿಸಬಹುದಾಗಿದ್ದು ನಿಮಗೆ ಅನುಕೂಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದಾಗಿದೆ. ಸದ್ಯ ZED-ಜೂಕ್ ಬಾರ್ 9000 ಪ್ರೊ 29,999 ಬೆಲೆಯನ್ನು ಹೊಂದಿದ್ದು, ಭಾರತದ ಪ್ರಮುಖ ರಟೇಲ್ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications