ಜೆಬ್ರೋನಿಕ್ಸ್‌ನಿಂದ ಹೊಸ ಸೌಂಡ್‌ಬಾರ್ ಲಾಂಚ್! ವಾವ್ಹ್ ಎನಿಸುವ ಫೀಚರ್ಸ್!
ಜೆಬ್ರೋನಿಕ್ಸ್ ಕಂಪೆನಿಯ ಆಡಿಯೋ ಆಕ್ಸಿಸರೀಸ್‌ಗಳಿಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಜೆಬ್ರೋನಿಕ್ಸ್ ಕಂಪೆನಿ ಕೂಡ ಹಲವು ಆಕರ್ಷಕ ಡಿವೈಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಹೊಸ Zeb-Juke ಬಾರ್ 9750 ಪ್ರೊ ಸೌಂಡ್‌ಬಾರ್ ಅನ್ನು ಲಾಂಚ್ ಮಾಡಿದೆ. ಈ ಸೌಂಡ್ ಬಾರ್ ಡ್ಯುಯಲ್ ವಾಯರ್‌ಲೆಸ್ ರಿಯರ್ ಸ್ಯಾಟಲೈಟ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಈ ಸೌಂಡ್‌ಬಾರ್‌ನಲ್ಲಿ ಐದು ಆಡಿಯೋ ಡ್ರೈವರ್‌ಗಳನ್ನು ನೀಡಲಾಗಿದೆ.

ಹೌದು, ಜೆಬ್ರೋನಿಕ್ಸ್ ಕಂಪೆನಿ ಭಾರತದಲ್ಲಿ ಹೊಸ Zeb-Juke ಬಾರ್ 9750 ಪ್ರೊ ಸೌಂಡ್‌ಬಾರ್ ಪರಿಚಯಿಸಿದೆ. ಇದು ಪವರ್‌ಫುಲ್ 16.5 ಸೆಂ ಸಬ್ ವೂಫರ್ ಜೊತೆಗೆ, ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಸಹ ನೀಡುತ್ತದೆ. ಈ ರೀತಿಯ ಕಾನ್ಫಿಗರೇಶನ್‌ನಲ್ಲಿ ಡಾಲ್ಬಿ ಅಟ್ಮಾಸ್ ಅನ್ನು ಒಳಗೊಂಡಿರುವ ಮೊದಲ ಸೌಂಡ್‌ಬಾರ್ ಎಂದು ಹೇಳಲಾಗಿದೆ. ಇದಲ್ಲದೆ ಈ ಸೌಂಡ್‌ಬಾರ್ ಸಂಪೂರ್ಣ ಕ್ರಿಯಾತ್ಮಕ ರಿಮೋಟ್ ಬಾಸ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಸೌಂಡ್‌ಬಾರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೀಚರ್ಸ್ ಹೇಗಿದೆ?
Zeb-Juke ಬಾರ್ 9750 ಪ್ರೊ ಸೌಂಡ್‌ಬಾರ್ ಡ್ಯುಯಲ್ ವಾಯರ್‌ಲೆಸ್ ರಿಯರ್ ಸ್ಯಾಟಲೈಟ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು ಒಟ್ಟು ಐದು ಸ್ಪೀಕರ್‌ಗಳನ್ನು ಒಳಗೊಂಡಿದ್ದು,ಮುಂಭಾಗದಲ್ಲಿ ಮೂರು ಮತ್ತು ಹಿಂಬದಿಯಲ್ಲಿ ಎರಡು ಸ್ಪೀಕರ್‌ಗಳನ್ನು ಹೊಂದಿದೆ. ಇದು ಶಕ್ತಿಯುತ 16.5 ಸೆಂ ಸಬ್ ವೂಫರ್ ಅನ್ನು ಒಳಗೊಂಡಿದೆ. ಇದು ಸಿಂಗಲ್ ಕಲರ್ ಟೋನ್‌ನೊಂದಿಗೆ ಕನಿಷ್ಠ ಮತ್ತು ನಯವಾದ ವಿನ್ಯಾಸವನ್ನು ಹೊಂದಿವೆ. ಇದರಿಂದ ಮನೆಯಲ್ಲಿಯೇ ಕುಳಿತು ಹೋಮ್ ಥಿಯೇಟರ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದು ಹೊಸ ರೀತಿಯ ಅನುಭವ ನೀಡುವ ಸೌಂಡ್‌ಬಾರ್ ಎಂದು ಕಂಪೆನಿ ಹೇಳಿಕೊಂಡಿದೆ.

ಇನ್ನು Zeb-Juke ಬಾರ್ 9750 ಪ್ರೊ ಸೌಂಡ್‌ಬಾರ್ HDMI eARC, ಆಪ್ಟಿಕಲ್, ಬ್ಲೂಟೂತ್ 5.0ದಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡುತ್ತದೆ. ಇದಲ್ಲದೆ ಈ ಸೌಂಡ್‌ಬಾರ್ ಸಾಮಾನ್ಯ ಸೌಂಡ್‌ಬಾರ್‌ಗಿಂತ ಭಿನ್ನವಾಗಿ ಬಳಸಬಹುದು. ಅಂದರೆ ಈ ಸೌಂಡ್‌ಬಾರ್ ಮತ್ತು ಸ್ಪೀಕರ್‌ಗಳನ್ನು ಗೋಡೆಯ ಮೇಲೆ ಕೂಡ ಸೆಟ್ ಮಾಡಬಹುದಾಗಿದೆ. ಇದು ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಒಳಗೊಂಡಿದೆ. ಇದು ನಿಮಗೆ ಅತ್ಯುತ್ತಮವಾದ ಸೌಂಡ್ ಸಿಸ್ಟಂ ಅನ್ನು ನೀಡಲಿದೆ. ಭಾರತದಲ್ಲಿ ಈ ಕಾನ್ಫಿಗರೇಶನ್‌ನಲ್ಲಿ ಡಾಲ್ಬಿ ಅಟ್ಮಾಸ್ ಅನ್ನು ಒಳಗೊಂಡಿರುವ ಮೊದಲ ಸೌಂಡ್‌ಬಾರ್ ಎಂದು ಹೇಳಲಾಗಿದೆ.

ಝೆಬ್-ಜೂಕ್ ಬಾರ್ 9750 ಪ್ರೊ ಕನೆಕ್ಟಿವಿಟಿಗಾಗಿ ಯುಎಸ್‌ಬಿ ಮತ್ತು ಎಯುಎಕ್ಸ್ ಪೋರ್ಟ್ ಅನ್ನು ಸಹ ಒಳಗೊಂಡಿದೆ. ಇದು ಸಂಪೂರ್ಣ ಕ್ರಿಯಾತ್ಮಕ ರಿಮೋಟ್ ಬಾಸ್, ಟ್ರೆಬಲ್, ಸ್ಯಾಟಲೈಟ್ ವಾಲ್ಯೂಮ್ ಸೆಟ್ಟಿಂಗ್, ಮೊದಲೇ ಸೆಟ್ ಮಾಡಲಾದ EQ (ಸಮೀಕರಣ) ಕಂಟ್ರೋಲ್ ಮತ್ತು ಇತರರಿಗೆ ಫ್ರೀ ಕಂಟ್ರೋಲ್‌ಗಳನ್ನು ನೀಡಲಿದೆ. ಜೊತೆಗೆ ಇದು ತಲ್ಲೀನಗೊಳಿಸುವ ಧ್ವನಿಗಾಗಿ 5.1.2 ಚಾನಲ್‌ನಲ್ಲಿ 525W ಔಟ್‌ಪುಟ್ ಅನ್ನು ಸಹ ಬೆಂಬಲಿಸುತ್ತದೆ. ಇದರಿಂದ ಗ್ರಾಹಕರಿಗೆ ಹೋಮ್ ಥಿಯೇಟರ್ ತರಹದ ಅನುಭವ ದೊರೆಯಲಿದೆ.

ಬೆಲೆ ಮತ್ತು ಲಭ್ಯತೆ
ಜೆಬ್ರೋನಿಕ್ಸ್ ಕಂಪೆನಿಯ ಹೊಸ Zeb-Juke ಬಾರ್ 9750 Pro ಸೌಂಡ್‌ಬಾರ್ ಅಮೆಜಾನ್ ಇಂಡಿಯಾದಲ್ಲಿ ಇದೀಗ ಲೈವ್ ಆಗಿದೆ. ಇದು ಕೇವಲ 22,999ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದನ್ನು ನೀವು ನೋ ಕಾಸ್ಟ್ EMI ಆಯ್ಕೆಯಲ್ಲಿ ಕೂಡ ಖರೀದಿಸಬಹುದು. ಇದು 1,099ರೂ.ಗಳಿಂದ ಶುರುವಾಗಲಿದೆ. ಇನ್ನು ಗ್ರಾಹಕರು ತಮ್ಮ ಮನೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಟಿವಿಗಳು, ಪ್ರೊಜೆಕ್ಟರ್‌ಗಳು ಮತ್ತು ಹೆಚ್ಚಿನವುಗಳೊಂದಿಗೆ Zeb-Juke ಬಾರ್ 9750 ಪ್ರೊ ಸಿಸ್ಟಮ್ ಅನ್ನು ಬಳಸಬಹುದಾಗಿದೆ.


Click it and Unblock the Notifications