ಬಳಕೆದಾರರಿಗೆ ಹೊಸ ಎಂಟ್ರಿ ಲೆವೆಲ್‌ ಪ್ಲ್ಯಾನ್‌ ಪರಿಚಯಿಸಿದ Zee5 ಕ್ಲಬ್‌!

|

ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಆಗಿರುವ Zee5 ತನ್ನ ಬಳಕೆದಾರರಿಗೆ ಹೊಸ ಚಂದದಾರಿಕೆಯ ಪ್ಲ್ಯಾನ್‌ ಅನ್ನು ಪರಿಚಯಿಸಿದೆ. ಈ ಪ್ಲ್ಯಾನ್‌ ಮೂಲಕ ಭಾರತದಲ್ಲಿ ಪ್ರದರ್ಶನಗಳು ಮತ್ತು ಚಲನಚಿತ್ರಗಳನ್ನು ಡಿಜಿಟಲ್ ರೂಪದಲ್ಲಿ ನೋಡಲು ಅವಕಾಶ ನೀಡುವ ಪ್ಲ್ಯಾನ್‌ ಇದಾಗಿದೆ. Zee5 ಕ್ಲಬ್ ಎಂದು ಕರೆಯಲ್ಪಡುವ ಈ ಹೊಸ ಯೋಜನೆಯು ಆಯ್ದ Zee5 ಮತ್ತು Altಬಾಲಾಜಿ ಪ್ರದರ್ಶನಗಳನ್ನು 1,000 ಕ್ಕೂ ಹೆಚ್ಚು ಚಲನಚಿತ್ರಗಳು, ಜಿಂದಗಿ ಶೋಗಳು ಮತ್ತು 90 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಲು ವರ್ಷಕ್ಕೆ ಕೇವಲ 365 ರೂ.ಗಳ ಪ್ಲ್ಯಾನ್‌ ಅನ್ನು ಪರಿಚಯಿಸಿದೆ.

Zee5

ಹೌದು Zee5 ತನ್ನ ಬಳಕೆದಾರರಿಗೆ ಹೊಸ ಮಾದರಿಯ ಪ್ಲ್ಯಾನ್‌ ಅನ್ನು ಪರಿಚಯಿಸಿದೆ. ಸದ್ಯ ಈಗಾಗಲೇ ಅಸ್ತಿತ್ವದಲ್ಲಿರುವ Zee5 ವಾರ್ಷಿಕ ಚಂದಾದಾರಿಕೆ ಇದು ವಾರ್ಷಿಕ ರೂ. 999ಗಿಂತ ಇದು ಅಗ್ಗವಾಗಿದೆ. ಇನ್ನು Zee5ರ ಹೊಸ ನಡೆಯು ಡಿಸ್ನಿ + ಹಾಟ್‌ಸ್ಟಾರ್ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯ ಮೂಲಕ ಸೀಮಿತ ಶ್ರೇಣಿಯ ವಿಷಯವನ್ನು ವರ್ಷಕ್ಕೆ 399 ರೂ.ಗಳ ಪ್ಲ್ಯಾನ್‌ನಲ್ಲಿ ನೀಡಲಿದೆ. ಸದ್ಯ Zee5 ಕ್ಲಬ್ ಯೋಜನೆ Zee5 ನ ವೈವಿಧ್ಯಮಯ ಬಳಕೆದಾರ ನಡವಳಿಕೆ, ಪ್ರಾದೇಶಿಕ ಆದ್ಯತೆಗಳು ಮತ್ತು ವೀಕ್ಷಕರ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಲಾಗಿದೆ ಎಂದು ಹೇಳಲಾಗಿದೆ.

Zee5 ಕ್ಲಬ್

Zee5 ಪರಿಚಯಿಸಿರುವ Zee5 ಕ್ಲಬ್‌ ಪ್ಲ್ಯಾನ್‌ ಸಂಪೂರ್ಣ ಒಟಿಟಿ ಟೆಲಿವಿಷನ್ ಎಂಟರ್‌ಟೈನ್‌ಮೆಂಟ್ ಪ್ಯಾಕ್‌ನಂತೆ ಪರಿಚಯಿಸಲ್ಪಟ್ಟಿದೆ. ಆದರೆ ಇದು ಈಗಾಗಲೇ ಅಸ್ತಿತ್ವದಲ್ಲಿರುವ Zee5 ಆಲ್ ಆಕ್ಸೆಸ್ ಪ್ಲಾಟ್‌ಫಾರ್ಮ್ ಪ್ಲ್ಯಾಟ್‌ಫಾರ್ಮ್‌ನ ಸಂಪೂರ್ಣ bouquet ಪ್ರವೇಶವನ್ನು ನೀಡುವ ಆಯ್ಕೆಯಾಗಿ ನೀಡಲಾಗಿದ್ದು ಅದು ಎಲ್ಲಾ Zee5 ಎಕ್ಸ್‌ಕ್ಲೂಸಿವ್‌ಗಳು ಮತ್ತು ಎಎಲ್‌ಟಿ ಬಾಲಾಜಿ ಶೋ ಮತ್ತು ಚಲನಚಿತ್ರಗಳ ವೀಕ್ಷನೆಯನ್ನು ಮಾಬಹುದಾಗಿದೆ.

Zee5 ಆಲ್ ಆಕ್ಸೆಸ್ ಯೋಜನೆ

Zee5 ಆಲ್ ಆಕ್ಸೆಸ್ ಯೋಜನೆಯನ್ನು ರೂ. 999 ಅಥವಾ ವರ್ಷಕ್ಕೆ 99 ರೂ. ತ್ರೈಮಾಸಿಕ 299 ರೂ, ಮತ್ತು ಅರ್ಧ ವಾರ್ಷಿಕ 599ರೂ ಗಳಾಗಿ ವಿಂಗಡಿಸಲಾಗಿದೆ. Zee5 ಕ್ಲಬ್ ಮತ್ತು Zee5 ಆಲ್ ಆಕ್ಸೆಸ್ ಯೋಜನೆಗಳು ಏಕಕಾಲದಲ್ಲಿ ಐದು ಡಿವೈಸ್‌ಗಳಲ್ಲಿ ಸಬ್ಜೆಕ್ಟ್‌ ಅನ್ನು ನೋಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೈಲೈಟ್ ಮಾಡಲಾಗಿದೆ. ಇನ್ನು Zee5 ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ವ್ಯತ್ಯಾಸ ಮೊತ್ತವನ್ನು ಪಾವತಿಸುವ ಮೂಲಕ Zee5 ಕ್ಲಬ್ ಚಂದಾದಾರರಿಗೆ ವರ್ಷದಲ್ಲಿ ಯಾವುದೇ ಸಮಯದಲ್ಲಿ ಎಲ್ಲಾ ಪ್ರವೇಶ ಪ್ಲ್ಯಾನ್‌ಗಳಿಗೆ ಬದಲಾಯಿಸುವ ಆಯ್ಕೆಯನ್ನು ಸಹ ನೀಡಲಾಗಿದೆ.

Zee5

ಸದ್ಯ ಗ್ರಾಹಕ ಮೌಲ್ಯದ ಪ್ರತಿಪಾದನೆಯ ದೃಷ್ಟಿಯಿಂದ, ಪ್ರತಿಯೊಬ್ಬ ಭಾರತೀಯರನ್ನು ತಲುಪುವ ಮತ್ತು ಅವರಿಗೆ ಹೈಪರ್-ವೈಯಕ್ತೀಕರಿಸಿದ ಮತ್ತು ತಡೆರಹಿತ ವಿಷಯ ವೀಕ್ಷಣೆಯ ಅನುಭವವನ್ನು ನಿಡುವುದಕ್ಕಾಗಿ ರೂ. 365 / ವರ್ಷದ ಪ್ಲ್ಯಾನ್‌ ಅನ್ನು ನೀಡಲಾಗಿದೆ ಎಂದು Zee5 ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ಎಸ್‌ವಿಒಡಿ ಮುಖ್ಯಸ್ಥ ರಾಹುಲ್ ಮರೋಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಲ್ಲದೆ Zee5 ಕ್ಲಬ್‌ನಂತೆಯೇ, ಡಿಸ್ನಿ + ಹಾಟ್‌ಸ್ಟಾರ್ ತನ್ನ ವಿಐಪಿ ಚಂದಾದಾರಿಕೆಯನ್ನು ಸೀಮಿತ ವಿಷಯ ಪ್ರವೇಶದೊಂದಿಗೆ ಹೊಂದಿದೆ, ಇದು ಜನರಿಂದ ಡಿಜಿಟಲ್ subject ಬಳಕೆಯನ್ನು ಉತ್ತೇಜಿಸುತ್ತದೆ. ಈ ಮೂಲಕ ಡಿಜಿಟಲ್‌ ವೇದಿಕೆಗೆ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನ Zee5 ಮಾಡುತ್ತಿದೆ.

Best Mobiles in India

English summary
Zee5 today launched its new subscription plan to persuade television viewers to start watching shows and movies digitally in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X