Zee5 ನಿಂದ ಟಿಕ್‌ಟಾಕ್‌ ಮಾದರಿಯ HiPi ಆಪ್‌ ಬಿಡುಗಡೆ ಮಾಡಲು ಸಿದ್ದತೆ!

|

ಭಾರತದಲ್ಲಿ ಚೀನಿ ಆಪ್‌ಗಳನ್ನ ಬ್ಯಾನ್‌ ಮಾಡಿದ್ದೆ ತಡ ಆದರ ಪರ್ಯಾಯ ಆಪ್‌ಗಳಿಗೆ ಭಾರಿ ಡಿಮ್ಯಾಂಡ್‌ ಶುರುವಾಗಿದೆ. ಅದರಲ್ಲೂ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿದ್ದ ಟಿಕ್‌ಟಾಕ್‌ ಕೂಡ ಬ್ಯಾನ್‌ ಆಗಿದೆ. ಇದನ್ನೆ ಗಮನದಲ್ಲಿಟ್ಟುಕೊಂಡಿರುವ ಹಲವಾರು ಕಂಪೆನಿಗಳು ಟಿಕ್‌ಟಾಕ್‌ಗೆ ಪರ್ಯಾಯವಾಗಿ ಹೊಸಹೊಸ ಆಪ್‌ಗಳನ್ನ ಪರಿಚಯಿಸೋಕೆ ಪ್ಲ್ಯಾನ್‌ ಮಾಡುತ್ತಿವೆ. ಸದ್ಯ ಈಗಾಗಲೇ ಟಿಕ್‌ಟಾಕ್‌ಗೆ ಪರ್ಯಾಯ ಆಪ್‌ಗಲು ಲಬ್ಯವಿದೆಯಾದರೂ ಇನ್ನು ಹೊಸ ಹೊಸ ಆಪ್‌ಗಳು ಪ್ಲೇ ಸ್ಟೋರ್‌ಗೆ ಲಗ್ಗೆ ಹಾಕುತ್ತಿವೆ.

Zee5

ಹೌದು, ಜನಪ್ರಿಯ ಟಿಕ್‌ಟಾಕ್‌ ಆಪ್‌ ಬ್ಯಾನ್‌ ಆಗಿದ್ದೆ ತಡ ಹೊಸ ಮಾದರಿಯ ಆಪ್‌ಗಳು ಟಿಕ್‌ಟಾಕ್‌ ಸ್ಥಾನವನ್ನ ತುಂಬಲು ಪ್ರಯತ್ನಿಸುತ್ತಿವೆ. ಅದರಲ್ಲಿ Zee5 ಕಂಪೆನಿ ಕೂಡ ಒಂದಾಗಿದ್ದು, ತನ್ನ ಹೊಸ ಆಪ್‌ ಒಂದನ್ನ ಪರಿಚಯಿಸೋಕೆ ಮುಂದಾಗಿದೆ. ಸದ್ಯ Zee5 ತನ್ನ HiPi ಆಪ್ ಅನ್ನು ಪರಿಚಯಿಸಿದೆ. ಇದೊಂದು ಸ್ವದೇಶಿ ಆಪ್‌ ಆಗಿದ್ದು ಶಾರ್ಟ್‌ ವಿಡಿಯೋ ಪ್ಲಾಟ್‌ಫಾರ್ಮ್‌ ಆಗಿದೆ. ಇನ್ನು ಈ ಆಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Zee5

ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್‌ ಆಗಿದೆ. ಇದೇ ಸನ್ನಿವೇಶವನ್ನ ಪ್ಲಸ್‌ ಮಾಡಿಕೊಳ್ಳಲು Zee5 ಮುಂದಾಗಿದ್ದು, ತನ್ನ ಹೈಪಿ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಇನ್ನು ಈ ಅಪ್ಲಿಕೇಶನ್‌ ಹೇಗೆ ಕಾಯ್ನಿರ್ವಹಿಸಲಿದೆ ಅನ್ನೊದನ್ನ ಇನ್ನು ಬಹಿರಂಗಪಡಿಸಿಲ್ಲವಾದರೂ ಈ ಆಪ್‌ನ ಸ್ಕ್ರಿನ್‌ಶಾರ್ಟ್‌ ಇಮೇಜ್‌ಗಳು ಲಭ್ಯವಾಗಿದೆ. ಇನ್ನು Zee ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಮಾಲೀಕತ್ವದಲ್ಲಿ, Zee5 ಈಗಾಗಲೇ 1.25 ಲಕ್ಷ ಗಂಟೆಗಳ ಬೇಡಿಕೆಯನ್ನು ಹೊಂದಿದೆ - ಜೊತೆಗೆ 100 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಹೊಂದಿದೆ.

Zee5

ಇದಲ್ಲದೆ Zee5 ಆಪ್‌ ತನ್ನ ಹೊಸ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುವ ಮೂಲಕ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಮತ್ತು ಸೋನಿಲೈವ್‌ನಂತಹ ಓವರ್-ದಿ-ಟಾಪ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಪ್ರಬಲ ಸ್ಪರ್ಧೆಯನ್ನು ನೀಡುತ್ತಿದೆ. ಸದ್ಯ ಇದೀಗ ವೀಡಿಯೊ ಹಂಚಿಕೆಯನ್ನು ಸಕ್ರಿಯಗೊಳಿಸುವ ಮತ್ತು ವಿಷಯವನ್ನು ರಚಿಸಲು ಪ್ರಾರಂಭಿಸಲು ಮುಂದಾಗಿದೆ. ಇನ್ನು ಇತ್ತೀಚೆಗೆ ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು, ಕನ್ನಡ, ತೆಲುಗು, ಬಂಗಾಳಿ, ಮಲಯಾಳಂ, ಮತ್ತು ಭೋಜ್‌ಪುರಿ ಎಂಬ ಒಂಬತ್ತು ಭಾಷೆಗಳಲ್ಲಿ Zee5 ಕಿಡ್ಸ್ ಮೂಲಕ 4,000 ಉಚಿತ ಮಕ್ಕಳ ಕೇಂದ್ರಿತ ವಿಷಯವನ್ನು ಸಹ ನಿಡುತ್ತಿದೆ. ಇದೆಲ್ಲದರ ನಡುವೆ ಇದೀಗ ಟಿಕ್‌ಟಾಕ್‌ಗೆ ಪರ್ಯಾಯ ಆಪ್‌ ಅನ್ನು ಪರಿಚಯಿಸಲು ಮುಂದಾಗಿದೆ.

Zee5 ಹೈಪೈ

ಸದ್ಯ Zee5 ಹೈಪೈ ಆಪ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಹಾಗಂತ ಈ ಆಪ್‌ ಒಂದೇ ಟಿಕ್‌ಟಾಕ್‌ಗೆ ಪರ್ಯಾಯವಲ್ಲ. ಆದರೆ ಈ ಆಪ್‌ನ ವಿನ್ಯಾಸ ಹಾಗೂ ವಿಶೇಷತೆ ಟಿಕ್‌ಟಾಕ್‌ನ ಮಾದರಿಯನ್ನ ಹೊಲುತ್ತದೆ ಎನ್ನಲಾಗ್ತಿದೆ. ಇದಲ್ಲದೆ ಈ ಆಪ್‌ನಲ್ಲಿ ಶಾರ್ಟ್‌ ವಿಡಿಯೋ ಕ್ರಿಯೆಟ್‌ ಜೊತೆಗೆ ಇನ್ಉ ಹೆಚ್ಚಿನ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಲಸಾಗುತ್ತದೆ ಎಂದು ಸಹ ಹೇಳಲಾಗ್ತಿದೆ. ಇನ್ನು ವಿಶೇಷತೆ ಎಂದರೆ ಟಿಕ್‌ಟಾಕ್‌ ಬ್ಯಾನ್‌ ಆಗಿರುವ ಇದೇ ಸಂದರ್ಭದಲ್ಲಿ ಹೈಪೈ ಆಪ್‌ ಬಿಡುಗಡೆ ಆಗಲಿದೆ ಎಂದು ಕೇಳಿ ಬರುತ್ತಿರೋದು ವಿಶೇಷವಾಗಿದೆ. ಅದರಲ್ಲೂ ಇದು ಆತ್ಮನಿರ್ಭರ ಭಾರತದ ಅಭಿಯಾನದಡಿ ಬರಲಿದೆ ಅಂತಾ ಸಹ ಹೇಳಲಾಗ್ತಿದೆ.

Best Mobiles in India

Read more about:
English summary
Zee5 app will offer access to the HiPi platform upon its launch that is set to take place before July 15.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X