ವೈ-ಫೈ ಇರುವ ಫೀಚರ್ ಫೋನ್ ಇದು: ಬೆಲೆ, ವಿಶೇಷತೆಗಳೇನು..?

Written By: Lekhaka

ಜಿಯಕ್ಸ್ ಮೊಬೈಲ್ಸ್ ಹೊಸ ಮಾದರಿಯ ಫೀಚರ್ ಫೋನ್ ಅನ್ನು ಬಿಡುಗಡೆ ಮಾಡಿದ್ದು, 'S333 wi-fi’ ಎಂಬ ನೂತನ ಫೀಚರ್ ಫೋನ್ ರೀಲಿಸ್ ಮಾಡಿದ್ದು, ಇದು ವೈ-ಫೈ ಇರುವ ಫೀಚರ್ ಫೋನ್ ಆಗಿದೆ. ಇದು ಬಳಕೆದಾರರಿಗೆ ಮುಂದಿನ ತಲೆ ಮಾರಿನ ಫೋನ್ ಬಳಕೆಯ ಅನುಭವನ್ನು ನೀಡಲಿದೆ.

ವೈ-ಫೈ ಇರುವ ಫೀಚರ್ ಫೋನ್ ಇದು: ಬೆಲೆ, ವಿಶೇಷತೆಗಳೇನು..?

ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳುವ ಅವಕಾಶ ಹೊಂದಿರುವ ಈ ಫೋನಿನಲ್ಲಿ 2.4 ಇಂಚಿನ ಡಿಸ್ ಪ್ಲೇ ಹೊಂದಿದ್ದು, 3D ಇಂಟರ್ ಫೇಸ್ ಹೊಂದಿದೆ. ಇದು ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

ಇದರಲ್ಲಿ ಪ್ರಿಮಿಯಮ್ ಫೀಚರ್ ಗಳನ್ನು ಹೊಂದಿದ್ದು, ಡಿಜಿಟಲ್ ಕ್ಯಾಮೆರಾವನ್ನು ನೀಡಲಾಗಿದೆ. 1750 mAh ಬ್ಯಾಟರಿಯನ್ನು ಕಾಣಬಹುದಾಗಿದೆ. LED ಟಾರ್ಚ್ ಲೈಟ್ ಇದೆ. ಇಲ್ಲದೇ ಸೋಶಿಯಲ್ ಮೀಡಿಯಾ ಸಫೋರ್ಟ್ ಮಾಡಲಿದ್ದು, ವೈ-ಫೈ ಕೀ ಸಹ ಇದರಲ್ಲಿದೆ.

ಜಿಯಕ್ಸ್ 'S333 wi-fi’ ಫೀಚರ್ ಫೋನ್ ಎಡ್ಜ್/ಜಿಪಿಆರ್ ಎಸ್ ಬ್ರೌಸಿಂಗ್ ಆಯ್ಕೆಯನ್ನು ಹೊಂದಿದೆ. ಇದಲ್ಲದೇ ಈ ಫೋನಿನಲ್ಲಿ 32 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಇದರಲ್ಲಿ FM ರೇಡಿಯೋ, ಕಾಲ್ ರೇಕಾರ್ಡಿಂಗ್ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ.

ಇದು ಬಜೆಟ್ ಫ್ರೆಂಡ್ಲಿ ಫೀಚರ್ ಫೋನ್ ಆಗಿದ್ದು, ಬೆಲೆ ರೂ.1993, ಈಗಾಗಲೇ ಈ ಫೋನ್ ಗಳು ಭಾರತದಾದ್ಯಂತ ಇರುವ ಸ್ಟೋರ್ ಗಳಲ್ಲಿ ಇದು ದೊರೆಯುತ್ತಿದೆ ಎನ್ನಲಾಗಿದೆ.English summary
Ziox Mobiles today launched its latest Wi-Fi-enabled feature phone 'S333 Wi-Fi' with a dedicated key function to deliver an accessible, next-generation mobile experience to users.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot