ವಾಟ್ಸಾಪ್‌ಗೆ ಬದಲಿಯಾಗಿ ಭಾರತದಲ್ಲಿ ಸಿದ್ಧವಾಯ್ತು ಸ್ವದೇಶಿ ಮೆಸೇಜಿಂಗ್‌ ಆಪ್‌!

|

ಪ್ರಸ್ತುತ ವಾಟ್ಸಾಪ್‌ನ ಹೊಸ ಸೇವಾ ನಿಯಮದ ಬಗ್ಗೆಯೆ ಹೆಚ್ಚು ಚರ್ಚೆ ಆಗ್ತಿದೆ. ಇದರ ನಡುವೆ ವಾಟ್ಸಾಪ್‌ಗೆ ಸರಿ ಸಮನಾದ ಇತರೆ ಮೆಸೇಜಿಂಗ್‌ ಅಪ್ಲಿಕೇಶನ್‌ಗಳ ಕಡೆಗೆ ಬಳಕೆದಾರರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈಗಾಗಲೇ ವಾಟ್ಸಾಪ್‌ನ ಬಳಕೆದಾರರು ಸಿಗ್ನಲ್‌, ಟೆಲಿಗ್ರಾಮ್‌ ನಂತಹ ಮೆಸೇಜಿಂಗ್‌ ಅಪ್ಲಿಕೇಶನ್‌ಗೆ ಬದಲಾಗುತ್ತಿದ್ದಾರೆ. ಇದರ ನಡುವೆಯೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಅದೆನಂದರೆ ಭಾರತದಲ್ಲಿ ತಯಾರಾದ ಅಪ್ಪಟ್ಟ ಸ್ವದೇಶಿ ಮೆಸೇಜಿಂಗ್‌ ಅಪ್ಲಿಕೇಶನ್‌ ಅನ್ನು ಭಾರತೀಯ ಸಾಫ್ಟ್‌ವೇರ್‌ ಕಂಪೆನಿಯೊಂದು ಸಿದ್ದತೆ ನಡೆಸಿದೆ.

ಅಪ್ಲಿಕೇಶನ್‌

ಹೌದು, ಭಾರತದಲ್ಲಿ ಸ್ವದೇಶಿ ಮೆಸೇಜಿಂಗ್‌ ಅಪ್ಲಿಕೇಶನ್‌ ಅನ್ನು ಪರಿಚಯಿಸಲು ಭಾರತೀಯ ಸಾಫ್ಟ್‌ವೇರ್ ಕಂಪನಿಯಾದ ಜೊಹೊ ಸಿದ್ದತೆ ನಡೆಸಿದೆ. ಈ ಕಂಪೆನಿ ಭಾರತದಲ್ಲಿ ಅರಟ್ಟೈ ಎಂಬ ಹೆಸರಿನ ಮೆಸೇಜಿಂಗ್ ಆಪ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು ಅರಟ್ಟೈ ಎಂದರೆ ತಮಿಳಿನಲ್ಲಿ ಚಿಟ್-ಚಾಟ್ ಎಂದು ಹೆಸರಿಸಲಾಗಿದೆ. ಜೊಹೊ ಕಾರ್ಪೊರೇಷನ್ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದ್ದು, ಇದರ ಪ್ರಧಾನ ಕಚೇರಿ ಚೆನ್ನೈನಲ್ಲಿದೆ. ಇನ್ನುಳಿದಂತೆ ಈ ಹೊಸ ಅಪ್ಲಿಕೇಶನ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಕಂಪ್ಲೀಟ್‌ ಸ್ವದೇಶಿ ಮೆಸೇಜಿಂಗ್‌ ಅಪ್ಲಿಕೇಶನ್‌ ಪರಿಚಯಿಸುವುದಕ್ಕೆ ಜೊಹೊ ಕಾರ್ಪೊರೇಶನ್ ಮುಂದಾಗಿದೆ. ಇದರ ಬಗ್ಗೆ ಈ ಜೊಹೊ ‌ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಅವರು ಟ್ವೀಟ್ ಮಾಡಿದ್ದಾರೆ. "ನಮ್ಮ ಅರಟ್ಟೈ ತಂಡವು ನಮ್ಮ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ನ ಬಗ್ಗೆ ಇನ್ನೂ ಮಾತನಾಡದಂತೆ ಕೇಳಿದೆ. ಆದರೆ ಇದರ ಬಗ್ಗೆ ಈಗಾಗಲೇ ಎಲ್ಲಾ ಕಡೆ ಚರ್ಚೆ ನಡೆಯುತ್ತಿರುವುದರಿಂದ ನಾನು ಕೂಡ ಇದರ ಬಗ್ಗೆ ವಿಷಯ ತಿಳಿಸಲು ಮುಂದಾಗಿದ್ದಾನೆ ಎಂದು ಟ್ವೀಟ್‌ ಮಾಡಿದ್ದಾರೆ. ಇದಲ್ಲದೆ ಅರಟ್ಟೈ ಅಪ್ಲಿಕೇಶನ್‌ ಅನ್ನು ಪ್ಲೇ ಸ್ಟೋರ್‌ನಲ್ಲಿ ಪರಿಚಯಿಸಲಿದ್ದೇವೆ. ಅರಟ್ಟೈ ಅಪ್ಲಿಕೇಶನ್ ಶೀಘ್ರದಲ್ಲೇ ಕೆಲವು ವಾರಗಳಲ್ಲಿ ಅಧಿಕೃತವಾಗಲಿದೆ ಎಂದು ತಿಳಿಸಿದ್ದಾರೆ.

ಅಪ್ಲಿಕೇಶನ್

ಸದ್ಯ ಜೊಹೊ ಸಂಸ್ಥೆಯ ಅರಟ್ಟೈ ಅಪ್ಲಿಕೇಶನ್ ಅನ್ನು ಕೆಲವು ವಾರಗಳ ಹಿಂದೆ ಬೀಟಾ ಅಡಿಯಲ್ಲಿ ತನ್ನ ಸ್ವಂತ ಉದ್ಯೋಗಿಗಳಿಗೆ ಲಭ್ಯವಾಗುವಂತೆ ಮಾಡಿದೆ. ನಂತರ ಇದನ್ನು ಸಾರ್ವಜನಿಕ ಡೌನ್‌ಲೋಡ್‌ಗಳಿಗಾಗಿ ಕಳೆದ ವಾರ ಗೂಗಲ್ ಮತ್ತು ಆಪಲ್ ಪ್ಲೇ ಸ್ಟೋರ್‌ಗಳಲ್ಲಿ ಬಿಡುಗಡೆ ಮಾಡಿದೆ. ಇದೀಗ ಕಂಪನಿಯು ಶೀಘ್ರದಲ್ಲೇ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಫೇಸ್‌ಬುಕ್ ಒಡೆತನದ ವಾಟ್ಸಾಪ್ ಸೇವಾ ನಿಯಮ ಭಾರಿ ಅಸಮಾಧಾನ ಉಂಟು ಮಾಡಿರುವುದರಿಂದ ಭಾರತೀಯರಿಗೆ ಹೊಸ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಅರಟ್ಟೈ ಒಂದು ಆಯ್ಕೆಯಾಗಲಿದೆ.

ಅಪ್ಲಿಕೇಶನ್‌

ಇನ್ನು ಈ ಅಪ್ಲಿಕೇಶನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿರಲಿದೆ ಹಾಗೂ ಹೇಗಿರಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ವಾಟ್ಸಾಪ್‌ಗೆ ಸೆಡ್ಡು ಹೊಡೆಯಲಿದೆ ಎಂದು ಹೇಳಲಾಗಿದೆ. ಇನ್ನು ವಾಟ್ಸಾಪ್‌ ಭಾರತದಲ್ಲಿ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಈ ಸ್ವದೇಶಿ ಅಪ್ಲಿಕೇಶನ್‌ ಭಾರತದಲ್ಲಿ ಯುಶಸ್ವಿಯಾದರೆ ವಾಟ್ಸಾಪ್‌ಗೆ ಸಂಕಷ್ಟು ಎದುರಾಗುವುದು ಖಚಿತ ಎನ್ನಲಾಗಿದೆ. ಏಕೆಂದರೆ ಜೊಹೊ ಅವರ ಹೊಸ ಅಪ್ಲಿಕೇಶನ್ ವಾಟ್ಸಾಪ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಭಾರತದ ಪರ್ಯಾಯಗಳಲ್ಲಿ ಒಂದಾಗಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
zoho arattai all set to launch: Likely to compete against whatsapp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X