Zomato ಮೂಲಕ ಫುಡ್ ಆರ್ಡರ್ ಮಾಡೋರಿಗೆ ಇಲ್ಲಿದೆ ಗುಡ್ ನ್ಯೂಸ್!
ಜನಪ್ರಿಯ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೋ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಆನ್‌ಲೈನ್ ಫುಡ್ ಡೆಲಿವರಿ ಸಾಕಷ್ಟು ಯಶಸ್ಸು ಸಾಧಿಸಿರುವ ಜೊಮ್ಯಾಟೋ ಬಳಕೆದಾರರಿಗ ಫುಡ್ ಆರ್ಡರ್ ಮಾಡುವಾಗ ಹಣ ಪಾವತಿಗೆ ತೊಂದರೆಯಾಗದಂತೆ ಮಾಡಲು ಮುಂದಾಗಿದೆ. ಇದಕ್ಕಾಗಿ ತನ್ನದೇ ಆದ UPI ಸೇವೆ ಪ್ರಾರಂಭಿಸಿದೆ.
ಹೌದು, ಜೊಮ್ಯಾಟೋ ತನ್ನದೇ ಆದ ಜೊಮ್ಯಾಟೋ UPI ಸೇವೆಯನ್ನು ಪರಿಚಯಿಸಿದೆ. ಇದು ಗ್ರಾಹಕರಿಗೆ ತಡೆರಹಿತ ಪಾವತಿ ವ್ಯವಸ್ಥೆಯನ್ನು ನೀಡಲಿದೆ. ಅಲ್ಲದೆ ಜೊಮ್ಯಾಟೋ UPI ಸೇವೆಗಾಗಿ ನೀವು ಕೆವೈಸಿ ಮಾಡಬೇಕಾದ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಇದಕ್ಕಾಗಿ ICICI ಬ್ಯಾಂಕ್ ಸಹಭಾಗಿತ್ವವನ್ನು ಕೂಡ ಪಡೆದುಕೊಂಡಿದೆ. ಇದರಿಂದ ನೀವು ಜೊಮ್ಯಾಟೋ UPI ಮೂಲಕ ಹಣ ಕಳುಹಿಸಬಹುದಾಗಿದೆ. ಹಾಗಾದ್ರೆ ಜೊಮ್ಯಾಟೋ UPI ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜೊಮ್ಯಾಟೋ UPI ಸೇವೆಯ ವಿಶೇಷತೆ ಏನು?
ಗ್ರಾಹಕರಿಗೆ ತಡೆ ರಹಿತ ಪಾವತಿ ವ್ಯವಸ್ಥೆ ನೀಡುವ ನಿಟ್ಟಿನಲ್ಲಿ ಜೊಮ್ಯಾಟೋ UPI ಪರಿಚಯಿಸಲಾಗಿದೆ. ಇದರಲ್ಲಿ ನೀವು ಕೆವೈಸಿ ಮಾಡುವ ಅಗತ್ಯವಿಲ್ಲ, ಆದರೆ ಒಬ್ಬರು ತಮ್ಮ UPI ಐಡಿಯನ್ನು ವೈಯಕ್ತೀಕರಿಸಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ವಹಿವಾಟುಗಳು ಸಂಪೂರ್ಣ ಸುರಕ್ಷಿತವಾಗಿರಲಿದೆ ಎಂದು ಜೊಮ್ಯಾಟೋ ಹೇಳಿದೆ. ಇನ್ನು ಜೊಮ್ಯಾಟೋ UPI ಅನ್ನು ನೀವು ಜೊಮ್ಯಾಟೋ ಅಪ್ಲಿಕೇಶನ್‌ನಲ್ಲಿಯೇ ಕ್ರಿಯೆಟ್ ಮಾಡಬಹುದಾಗಿದೆ. ಇದರಲ್ಲಿ ನೀವು ಯಾವುದೇ ಬ್ಯಾಂಕ್ ಖಾತೆಯನ್ನು ಸೇವ್ ಮಾಡಬಹುದಾಗಿದೆ.
ಜೊಮ್ಯಾಟೋ ಮೂಲಕ ಆನ್‌ಲೈನ್ ಫುಡ್ ಆರ್ಡರ್ ಮಾಡುವ ಗ್ರಾಹಕರಿಗೆ ಈ UPI ಸೇವೆ ಸಾಕಷ್ಟು ಅನುಕೂಲಕರವಾಗಿರಲಿದೆ. ಇದರಿಂದ ನೀವು ಫುಡ್ ಆರ್ಡರ್ ಮಾಡುವಾಗ ಬೇರೆ ಯುಪಿಐ ಅಪ್ಲಿಕೇಶನ್ ಅನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿಲ್ಲ. ಬದಲಿಗೆ ನೀವು ಜೊಮ್ಯಾಟೋ UPI ಮೂಲಕವೇ ಹಣ ಪಾವತಿಯನ್ನು ಮಾಡಬಹುದಾಗಿದೆ.

ಜೊಮ್ಯಾಟೋ UPI ಎಲ್ಲರಿಗೂ ಲಭ್ಯವಿದೆಯೇ?
ಜೊಮ್ಯಾಟೋ UPI ಆಯ್ಕೆಯು ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಈ ಸೇವೆಯು ನಿಮಗೂ ಕೂಡ ಲಭ್ಯವಿದ್ದರೆ ಜೊಮ್ಯಾಟೋ ಅಪ್ಲಿಕೇಶನ್ ಪ್ರೊಫೈಲ್ ವಿಭಾಗದಲ್ಲಿ ಪರಿಶೀಲಿಸಬಹುದಾಗಿದೆ. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಪ್ರೇಕ್ಷಕರಿಗೆ ಹೊರತರಲಿದೆ ಎಂದು ಹೇಳಲಾಗಿದೆ. ಈ ಫೀಚರ್ಸ್ ಅಳವಡಿಕೆ ದರ ಎಷ್ಟು ಚೆನ್ನಾಗಿದೆ ಎಂಬುದರ ಆಧಾರದ ಮೇಲೆ ಹೆಚ್ಚಿನ ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಜೊಮ್ಯಾಟೋ UPI ಅನ್ನು ಆಕ್ಟಿವ್ ಮಾಡುವುದು ಹೇಗೆ?
ಜೊಮ್ಯಾಟೋ UPI ಅನ್ನು ಜೊಮ್ಯಾಟೋ ಅಪ್ಲಿಕೇಶನ್ ಮೂಲಕ ಬಳಸಬಹುದಾಗಿದೆ. ಇದಕ್ಕಾಗಿ ನೀವು ಜೊಮ್ಯಾಟೋ ಅಪ್ಲಿಕೇಶನ್ ಪ್ರೊಫೈಲ್ ವಿಭಾಗದಲ್ಲಿ ಕಾಣಬಹುದು. ಇದರಲ್ಲಿ ಜೊಮ್ಯಾಟೋ UPI ಗಾಗಿ ಕೆಳಗೆ ಸ್ಕ್ರಾಲ್ ಮಾಡಬಹುದು. ಇಲ್ಲಿ ನೀವು ಆಕ್ಟಿವೇಟ್ ಜೊಮಾಟೊ UPI ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದರಲ್ಲಿ ಗ್ರಾಹಕರು ತಮ್ಮ ಆದ್ಯತೆಯ UPI ಐಡಿಯನ್ನು ನೀಡಬೇಕಾಗುತ್ತದೆ. ನಂತರ ನಿಮ್ಮ ಜೊಮ್ಯಾಟೋ UPI ಐಡಿಯನ್ನು ಸಕ್ರಿಯಗೊಳಿಸುವ ಪೇಜ್‌ನಲ್ಲಿ ಕೆಲವು ಸಲಹೆಗಳು ಕಾಣಲಿವೆ, ಇವುಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕಾಗುತ್ತದೆ.
ನಂತರ ನಿಮ್ಮ ಜೊಮ್ಯಾಟೋ UPI ಅಪ್ಲಿಕೇಶನ್‌ನಲ್ಲಿ ನೀವು ಸೇವ್ ಮಾಡಲು ಬಯಸುವ ಬ್ಯಾಂಕ್‌ನೊಂದಿಗೆ SIM ಸಂಖ್ಯೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಇದಾದ ಮೇಲೆ ನೀವು ತ್ವರಿತವಾಗಿ ಪಾವತಿಗಳನ್ನು ಮಾಡಲು ಯಾವುದೇ ಬ್ಯಾಂಕ್ ಖಾತೆಯನ್ನು ಸೇರಿಸಲು ಅವಕಾಶ ಲಭ್ಯವಾಗಲಿದೆ.

ಯುಪಿಐ ಪಾವತಿ ಅಪ್ಲಿಕೇಶನ್‌ಗಳ ಜನಪ್ರಿಯತೆ ಹೆಚ್ಚುತ್ತಿರುವ ಈ ಕಾಲದಲ್ಲಿ ಜೊಮ್ಯಾಟೋ UPI ಕೂಡ ಬಳಕೆದಾರರ ಮತ್ತೊಂದು ಆಯ್ಕೆಯಾಗಲಿದೆ. ಇದರಿಂದ ಜೊಮ್ಯಾಟೋ ಆನ್‌ಲೈನ್ ಫುಡ್ ಡೆಲಿವರಿ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ ಅನ್ನೊದು ಜೊಮ್ಯಾಟೋ ಸಂಸ್ಥೆಯ ಉದ್ದೇಶವಾಗಿದೆ. ಆದರೆ ಜೊಮ್ಯಾಟೋ UPI ಎಷ್ಟರ ಮಟ್ಟಿಗೆ ಗ್ರಾಹಕರ ಗಮನಸೆಳೆಯಲಿದೆ ಅನ್ನೊದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications








