ಹ್ಯಾಕರ್‌ಗಳಿಗೆ ಬರೋಬ್ಬರಿ 70 ಲಕ್ಷ ರೂ. ಪಾವತಿಸಿದ ಜೊಮ್ಯಾಟೋ..!
ಆಹಾರ ವಿತರಣಾ ವೇದಿಕೆಯಾಗಿರುವ ಜೊಮ್ಯಾಟೋ ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ದೋಷಗಳನ್ನು ಕಂಡುಹಿಡಿಯಲು ಮತ್ತು ಸರಿಪಡಿಸಲು ಬರೋಬ್ಬರಿ 1 ಲಕ್ಷ ಡಾಲರ್‌ನ್ನು (ಅಂದರೆ 70 ಲಕ್ಷ ರೂಪಾಯಿಗಿಂತ ಹೆಚ್ಚು) ಖರ್ಚು ಮಾಡಿದೆ. ಇದಕ್ಕಾಗಿ ಇಲ್ಲಿಯವರೆಗೂ ಜೊಮ್ಯಾಟೋ 435 ಹ್ಯಾಕರ್‌ಗಳಿಗೆ ಹಣ ಪಾವತಿಸಿದೆ. ಕಳೆದ 90 ದಿನಗಳಲ್ಲಿಯೇ 12,350 ಡಾಲರ್ (8.7 ಲಕ್ಷ ರೂ.ಗಿಂತ ಹೆಚ್ಚು) ಹಣವನ್ನು ಹ್ಯಾಕರ್‌ಗಳಿಗೆ ಪಾವತಿಸಲಾಗಿದೆ ಎಂದು ಹ್ಯಾಕರ್-ಚಾಲಿತ ಬಗ್ ಬೌಂಟಿ ಪ್ಲಾಟ್‌ಫಾರ್ಮ್ ಆಗಿರುವ ಹ್ಯಾಕರ್‌ಒನ್ ಹೇಳಿದೆ.

775 ನ್ಯೂನತೆ ಪರಿಹಾರ
ಜುಲೈ 2017 ರಿಂದ ಹ್ಯಾಕರ್‌ಒನ್‌ನ ಬಗ್ ಬೌಂಟಿ ಕಾರ್ಯಕ್ರಮದ ಸಹಾಯದಿಂದ ಜೊಮ್ಯಾಟೋ 775 ದೋಷಗಳನ್ನು ಯಶಸ್ವಿಯಾಗಿ ಪರಿಹರಿಸಿದೆ ಎಂದು ಹ್ಯಾಕರ್‌ಒನ್ ತಿಳಿಸಿದೆ. 55 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸುವ ಕಾರ್ಯವನ್ನು ಜೊಮ್ಯಾಟೋ ಭದ್ರತಾ ತಂಡಕ್ಕೆ ನಿರ್ವಹಿಸುತ್ತಿದೆ.

ದೋಷಕ್ಕೆ ತಕ್ಕಂತೆ ಹಣ
ಪ್ಲಾಟ್‌ಫಾರ್ಮ್‌ನಲ್ಲಿನ ನಿರ್ಣಾಯಕ ದೋಷಗಳ ಆವಿಷ್ಕಾರಕ್ಕಾಗಿ, ಜೊಮ್ಯಾಟೋ ಭದ್ರತಾ ಸಂಶೋಧಕರಿಗೆ 2,000 ಡಾಲರ್ ನೀಡಿದರೆ, ಹೆಚ್ಚಿನ ತೀವ್ರತೆಯ ಪ್ರಭಾವವನ್ನು ಹೊಂದಿರುವ ದೋಷಗಳಿಗೆ 700 ಡಾಲರ್, ಮಧ್ಯಮ ದೋಷಕ್ಕೆ 300 ಡಾಲರ್ ಮತ್ತು ಕಡಿಮೆ-ಪ್ರಭಾವದ ದೋಷಗಳಿಗೆ 150 ಡಾಲರ್‌ಗಳನ್ನು ಪಾವತಿಸುತ್ತಿದೆ.

17 ಬಿಲಿಯನ್ ಅಕೌಂಟ್ ಹ್ಯಾಕ್
ಮೇ 2017 ರಲ್ಲಿ, ಹ್ಯಾಕರ್‌ಗಳು ಆನ್‌ಲೈನ್ ಆಹಾರ ವಿತರಣಾ ಸೇವೆಯನ್ನು ಹ್ಯಾಕ್ ಮಾಡಿ, ಸುಮಾರು 17 ಬಿಲಿಯನ್ ನೋಂದಾಯಿತ ಬಳಕೆದಾರರ ಇಮೇಲ್ ವಿಳಾಸ ಹಾಗೂ ಪಾಸ್‌ವರ್ಡ್‌ಗಳನ್ನು ಕದ್ದಿದ್ದಾರೆ. ಆದರೆ, ಈ ದಾಳಿಯಲ್ಲಿ ಯಾವುದೇ ಪಾವತಿ ಮಾಹಿತಿ ಅಥವಾ ಕ್ರೆಡಿಟ್ ಕಾರ್ಡ್ ಡೇಟಾ ಸೋರಿಕೆಯಾಗಿಲ್ಲ ಎಂದು ಜೊಮ್ಯಾಟೋ ಹೇಳಿದೆ. ಇದರಿಂದ ಎಲ್ಲಾ ಹ್ಯಾಕ್ ಆದ ಅಕೌಂಟ್‌ಗಳ ಬಳಕೆದಾರರಿಗಾಗಿ ಪಾಸ್‌ವರ್ಡ್‌ಗಳನ್ನು ಮರುಹೊಂದಿಸಿ ಮತ್ತು ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಿಂದ ಲಾಗ್ ಔಟ್ ಮಾಡಿದೆ.

ಸಮುದಾಯ ರಕ್ಷಣೆಗೆ ಬದ್ಧ
ನಮ್ಮ ಸಮುದಾಯವನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ನೀವು ಭದ್ರತಾ ಸಂಶೋಧಕರು ಅಥವಾ ಆ ಕ್ಷೇತ್ರದಲ್ಲಿ ಪರಿಣತರಾಗಿದ್ದರೆ ಮತ್ತು ಜೊಮ್ಯಾಟೋ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನೊಂದಿಗಿನ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಗುರುತಿಸಿದ್ದರೆ ಆ ನ್ಯೂನತೆಗಳನ್ನು ನೀವು ಜವಾಬ್ದಾರಿಯುತವಾಗಿ ಬಹಿರಂಗಪಡಿಸುವುದನ್ನು ಕಂಪನಿ ಪ್ರಶಂಸಿಸುತ್ತದೆ ಎಂದು ಕಂಪನಿ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

ಸೈಟ್, ಆಪ್‌ಗೆ ಸೀಮಿತ
ಸಮಸ್ಯೆಗಳ ವ್ಯಾಪ್ತಿ ಜೊಮ್ಯಾಟೋ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿನ ತಾಂತ್ರಿಕ ದೋಷಗಳಿಗೆ ಸೀಮಿತವಾಗಿದೆ. ದಯವಿಟ್ಟು ನಮ್ಮ ಬಳಕೆದಾರರ ಸುರಕ್ಷತೆ ಅಥವಾ ಗೌಪ್ಯತೆಗೆ ಧಕ್ಕೆಯುಂಟು ಮಾಡಲು ಪ್ರಯತ್ನಿಸಬೇಡಿ (ಪರೀಕ್ಷಾರ್ಥ ಅಕೌಂಟ್‌ಗಳನ್ನು ಬಳಸಿ) ಅಥವಾ ಡಾಸ್ ದಾಳಿ ಅಥವಾ ಸ್ಪ್ಯಾಮ್ ಮೂಲಕ ಜೊಮ್ಯಾಟೋ ಖಾತೆಯ ಲಭ್ಯತೆಯ ಬಗ್ಗೆ ಭದ್ರತಾ ಸಂಶೋಧಕರಿಗೆ ಜೊಮ್ಯಾಟೋ ಹೇಳಿದೆ.

ಆದಾಯ ಮೂರು ಪಟ್ಟು
ಜೊಮ್ಯಾಟೋ ಪ್ರಸ್ತುತ ಯುಎಸ್, ಆಸ್ಟ್ರೇಲಿಯಾ, ಯುಕೆ, ಕೆನಡಾ, ಟರ್ಕಿ, ಯುಎಇ, ಕತಾರ್, ಪೋರ್ಚುಗಲ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಇನ್ನಿತರ 24 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಜೊಮ್ಯಾಟೋ ಆದಾಯ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 63 ದಶಲಕ್ಷ ಡಾಲರ್ ಇದ್ದ ಆದಾಯ ಈ ಬಾರಿ 205 ದಶಲಕ್ಷ ಡಾಲರ್‌ಗೆ ಏರಿಕೆ ಕಂಡಿದ್ದು, ದೇಶದ 500ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದೆ.


Click it and Unblock the Notifications








