Home
ಸುದ್ದಿಜಾಲ

ಜೊಮೊಟೊದಲ್ಲಿ ಫುಡ್‌ ಆರ್ಡರ್‌ ಮಾಡೋರು ಇಲ್ಲಿ ಗಮನಿಸಿ!

ಆನ್‌ಲೈನ್‌ ಫುಡ್‌ ಡೆಲಿವರಿ ಆಪ್‌ಗಳಲ್ಲಿ ಜೊಮೊಟೊ ಕೂಡ ಒಂದಾಗಿದೆ. ಗ್ರಾಹಕರ ಆಸೆಯಂತೆ ಅವರು ಬಯಸುವ ಹೋಟೆಲ್‌ಗಳಿಂದ ಫುಡ್‌ ಅನ್ನು ಡೆಲಿವರಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಸದ್ಯ ಇದೀಗ ಜೊಮಾಟೊ ಅಪ್ಲಿಕೇಶನ್‌ನಲ್ಲಿ ಜೊಮೊಟೊ ಪ್ರೊ ಪ್ಲಸ್ ಸದಸ್ಯತ್ವವನ್ನು ಪ್ರಾರಂಭಿಸಿದೆ. ಈ ಹೊಸ ಸದಸ್ಯತ್ವವು ಅನಿಯಮಿತ ಫ್ರೀ ಡೆಲಿವರಿ ಮತ್ತು ಇತರ ಪ್ರಯೋಜನಗಳನ್ನು ನೀಡುತ್ತದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಸೀಮಿತ ಸಂಖ್ಯೆಯ ಬಳಕೆದಾರರಿಗೆ ಗೋಚರಿಸುತ್ತದೆ.

ಜೊಮೊಟೊ

ಹೌದು, ಜೊಮೊಟೊ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ತನ್ನ ಅಪ್ಲಿಕೇಸನ್‌ನಲ್ಲಿ ಹೊಸದಾಗಿ ಜೊಮೊಟೊ ಪ್ರೊ ಪ್ಲಸ್‌ ಸದಸ್ಯತ್ವವನ್ನು ಪರಿಚಯಿಸಿದೆ. ಜೊಮಾಟೊ ಸಂಸ್ಥಾಪಕ ಮತ್ತು ಸಿಇಒ ದೀಪೀಂದರ್ ಗೋಯಲ್, ಟ್ವಿಟರ್‌ನಲ್ಲಿ ಪ್ರೊ ಪ್ಲಸ್ ಸದಸ್ಯತ್ವವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಇದು ಆರ್ಡರ್‌-ಓನ್ಲಿ ಸೇವೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಹಾಗಾದ್ರೆ ಜೊಮಾಟೊ ಪ್ರೊ ಪ್ಲಸ್ ಸದಸ್ಯತ್ವದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜೊಮೊಟೊ ಪ್ರೊ ಪ್ಲಸ್‌

ಜೊಮೊಟೊ ಪ್ರೊ ಪ್ಲಸ್‌ ಸೇವೆ ಪರಿಚಯಿಸುವ ಮೂಲಕ ಗ್ರಾಹಕರಿಗೆ ಫ್ರೀ ಡೆಲಿವರಿ ನೀಡುವುದಕ್ಕೆ ಮುಂದಾಗಿದೆ. ಇನ್ನು ಜೊಮೊಟೊ ಪ್ರೊ ಪ್ಲಸ್‌ ಸದಸ್ಯತ್ವಕ್ಕಾಗಿ ಕಂಪನಿಯು ಯಾವುದೇ ಮಾನದಂಡಗಳನ್ನು ಉಲ್ಲೇಖಿಸದಿದ್ದರೂ, ಆಹಾರವನ್ನು ಆರ್ಡರ್ ಮಾಡಲು ಆಪ್ ಅನ್ನು ಹೆಚ್ಚು ಬಳಸುವವರಿಗೆ ಅಥವಾ ಪ್ರೊ ಸದಸ್ಯತ್ವವನ್ನು ಹೊಂದಿರುವವರಿಗೆ ಮಾತ್ರ ಇದು ಲಭ್ಯವಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಇನ್ನು ಹೆಚ್ಚಿನ ರೀತಿಯ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿದೆ ಎನ್ನಲಾಗಿದೆ.

ಜೊಮೊಟೊ

ಇದಲ್ಲದೆ ಜೊಮೊಟೊ ಅಪ್ಲಿಕೇಶನ್ನ FAQ ವಿಭಾಗದಲ್ಲಿ ಜೊಮಾಟೊ ಪ್ರೊ ಪ್ಲಸ್ ಜೊಮೊಟೊ ಪ್ರೊ ನ ಇನ್ವೈಟ್‌-ಓನ್ಲಿ ಅಪ್ಗ್ರೇಡ್ ಆಗಿದೆ ಎಂದು ಉಲ್ಲೇಖಿಸಲಾಗಿದೆ. ನೀವು Zomato ನಲ್ಲಿ ಆಹಾರವನ್ನು ಆರ್ಡರ್ ಮಾಡಿದಾಗ ಯಾವುದೇ ಡೆಲಿವರಿ ಶುಲ್ಕವಿಲ್ಲದೆ ಎಲ್ಲವನ್ನು ಒಳಗೊಂಡ ಸದಸ್ಯತ್ವ ಕಾರ್ಯಕ್ರಮವನ್ನು ನೀಡಲಿದೆ. ನಾವು ಇದನ್ನು ಪ್ರತಿದಿನ ಹೆಚ್ಚಿನ ಬಳಕೆದಾರರಿಗೆ ನೀಡುತ್ತಿದ್ದೇವೆ. ನೀವು ಈಗಿರುವ ಪ್ರೊ ಸದಸ್ಯರಾಗಿದ್ದರೆ, ಜೊಮಾಟೊದಲ್ಲಿ ಆರ್ಡರ್ ಮಾಡುವುದನ್ನು ಮುಂದುವರಿಸಿ ಮತ್ತು ಅರ್ಹತೆ ಪಡೆದರೆ ನಿಮಗೆ ಸೂಚಿಸಲಾಗುವುದು ಎಂದು ಕಂಪನಿ ಹೇಳಿದೆ.

ಜೊಮಾಟೊ

ಅಲ್ಲದೆ ಜೊಮಾಟೊನ FAQ ವಿಭಾಗವು ಬಳಕೆದಾರರು ಪ್ರೊ ಸದಸ್ಯರಾದರೆ, ಪ್ಲಸ್ ಸದಸ್ಯತ್ವಕ್ಕಾಗಿ ಇನ್ವೈಟ್‌ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಹೇಳುತ್ತದೆ. ಜೊಮಾಟೊ ಪ್ರೊ ಪ್ಲಸ್ ಸದಸ್ಯತ್ವಕ್ಕಾಗಿ ಆಹ್ವಾನವು ನಮಗೆ ಗೋಚರಿಸುತ್ತದೆ ಮತ್ತು ಇದು ಎರಡು ರೀತಿಯ ಯೋಜನೆಗಳನ್ನು ಹೊಂದಿದೆ. 12-ತಿಂಗಳ ಜೊಮಾಟೊ ಪ್ರೊ ಪ್ಲಸ್ ಪ್ಲಾನ್ ನಿಮಗೆ ರೂ. 900 ಆಗುತ್ತದೆ, ಆದರೆ 3-ತಿಂಗಳ ಪ್ಲಾನ್ ರೂ. 300 ಆಗಿದೆ. ವಾರ್ಷಿಕ ಪ್ಲಾನ್ ಉತ್ತಮ ಆಯ್ಕೆಯಾಗಿ ಕಾಣುವುದರಿಂದ ಇದು ಹೆಚ್ಚಿನ ಹಣವನ್ನು ಉಳಿಸುತ್ತದೆ.

ಡೆಲಿವರಿ

ಉಚಿತ ಅನಿಯಮಿತ ಡೆಲಿವರಿ ಹೊರತಾಗಿ, ಬಳಕೆದಾರರು Zomato Pro ಸದಸ್ಯತ್ವದ ಎಲ್ಲಾ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಜೊಮಾಟೊ ಪ್ರೊ ಪ್ಲಸ್ ಸದಸ್ಯತ್ವವು ಮೂಲತಃ ಜೊಮಾಟೊ ಪ್ರೊ ಪ್ರಯೋಜನಗಳಿಗೆ ಸೇರ್ಪಡೆಯಾಗಿದೆ ಮತ್ತು ಆಪ್ ನಿಯಮಿತ ಪ್ರೊ ಸದಸ್ಯತ್ವವನ್ನು ನೀಡುತ್ತಿದೆ ಎಂದು ಊಟದ ಮೇಲೆ ಇನ್ನೂ ಶೇಕಡಾ 40 ರಷ್ಟು ರಿಯಾಯಿತಿ ಸಿಗುತ್ತದೆ ಎಂದು ಕಂಪನಿ ಹೇಳುತ್ತದೆ. ಪ್ರಸ್ತುತ, ಜೊಮಾಟೊ ಪ್ರೊ ಸದಸ್ಯತ್ವವು 90 ದಿನಗಳವರೆಗೆ 200 ರೂ. ಮತ್ತು ಆಹಾರ ವಿತರಣೆಗಳ ಮೇಲೆ 30 ಪ್ರತಿಶತದಷ್ಟು ಹೆಚ್ಚುವರಿ ರಿಯಾಯಿತಿ, ಊಟದ ಮೇಲೆ 40 ಪ್ರತಿಶತದಷ್ಟು ರಿಯಾಯಿತಿ ಮತ್ತು ವೇಗದ ವಿತರಣೆಯಂತಹ ಪ್ರಯೋಜನಗಳನ್ನು ಒಳಗೊಂಡಿದೆ.

Best Mobiles in India

English summary
The 12-month Zomato Pro Plus plan will cost you Rs 900, whereas the 3-month plan is priced at Rs 300.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+