ಜೊಮಾಟೋದಲ್ಲಿ ಡೆಲಿವರಿ ಬಾಯ್ ಹಿಂದುವೇ ಆಗಿರಬೇಕು ಎಂದ ಗ್ರಾಹಕ

By Gizbot Bureau
|

ಜೊಮಾಟೋದಲ್ಲಿ ಆಹಾರವನ್ನು ಆರ್ಡರ್ ಮಾಡಿದ ನಂತರ ಗ್ರಾಹಕನೊಬ್ಬ ಹಿಂದೂ ಹುಡುಗನೇ ನನಗೆ ಆಹಾರವನ್ನು ಡೆಲಿವರಿ ಕೊಡಬೇಕು ಎಂದು ಆಗ್ರಹಿಸಿದ್ದಾನೆ. ಆದರೆ ಯಾವಾಗ ಜೊಮಾಟೋ ಆತನ ಬೇಡಿಕೆಯನ್ನು ಅಂದರೆ ಧರ್ಮದ ಆಧಾರದಲ್ಲಿ ಡೆಲಿವರಿ ಎಕ್ಸಿಕ್ಯೂಟೀವ್ ನ್ನು ಕಳುಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆಯೋ ಆಗ ಗ್ರಾಹಕ ತನ್ನ ಜೊಮಾಟೋ ಆರ್ಡರ್ ನ್ನು ಕಾನ್ಸಲ್ ಮಾಡಿದ್ದಾನೆ ಮತ್ತು ರೀಫಂಡ್ ನೀಡುವಂತೆ ಕೇಳಿದ್ದಾನೆ. ಈ ವಿಚಾರವನ್ನು ಗ್ರಾಹಕ ತನ್ನ ಟ್ವೀಟರ್ ಖಾತೆಯಲ್ಲಿ ಜೊಮಾಟೋ ತನಗೆ ಆಹಾರದ ಆರ್ಡರ್ ಕ್ಯಾನ್ಸಲ್ ಮಾಡಿದ ನಂತರವೂ ರೀಫಂಡ್ ಮಾಡಿಲ್ಲ ಎಂಬುದಾಗಿ ಹಂಚಿಕೊಂಡಿದ್ದಾನೆ.ಮಧ್ಯಪ್ರದೇಶದ ಜಬಲ್ ಪುರದಲ್ಲಿ ಈ ಘಟನೆ ನಡೆದಿದೆ.

ಜೊಮಾಟೋ ಟ್ವೀಟ್:

ಜೊಮಾಟೋ ಟ್ವೀಟ್:

ಈ ಘಟನೆ ನಡೆದ ನಂತರ ಈ ಗ್ರಾಹಕನ ಟ್ವೀಟ್ ನ್ನು ಕೋಟ್ ಮಾಡಿರುವ ಜೊಮಾಟೋ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ " ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಧರ್ಮ ಧರ್ಮವಷ್ಟೇ" ಎಂದು ಬರೆದಿದೆ.

ದೀಪೆಂದರ್ ಘೋಯಲ್ ಹೇಳಿದ್ದೇನು?

ದೀಪೆಂದರ್ ಘೋಯಲ್ ಹೇಳಿದ್ದೇನು?

ಕುತೂಹಲಕಾರಿ ವಿಚಾರವೆಂದರೆ ಜೊಮಾಟೋ ಸಂಸ್ಥಾಪಕ ದೀಪೆಂದರ್ ಘೋಯಲ್ ಕೂಡ ಈ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.ಧಾರ್ಮಿಕ ತಾರತಮ್ಯಕ್ಕೆ ಜೊಮಾಟೋದಲ್ಲಿ ಅವಕಾಶವಿಲ್ಲ. ಧರ್ಮದ ಆಧಾರದಲ್ಲಿ ಯಾವುದೇ ಗ್ರಾಹಕ ಡೆಲಿವರಿಯಲ್ಲಿ ಬಯಸುವುದೇ ಆದಲ್ಲಿ ಅಂತವರಿಗೆ ಜೊಮಾಟೋ ಬಾಗಿಲು ಯಾವಾಗಲೂ ಮುಚ್ಚಿರುತ್ತದೆ ಎಂಬುದಾಗಿ ಹೇಳಿದ್ದಾರೆ.

ಘೋಯಲ್ ಅವರ ಟ್ವೀಟ್ ಈ ರೀತಿಯಾಗಿ ಇದೆ. "ಭಾರತದ ಕಲ್ಪನೆ ಮತ್ತು ಗೌರವಾನ್ವಿತ ಪಾಲುದಾರರು ಮತ್ತು ಗ್ರಾಹಕರ ವೈವಿದ್ಯತೆಯ ಬಗ್ಗೆ ನಮಗೆ ಹೆಮ್ಮೆ ಇದೆ. ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿ ಬರುವ ಯಾವುದೇ ವ್ಯವಹಾರವನ್ನು ಕಳೆದುಕೊಳ್ಳುವುದಕ್ಕೆ ನಮಗೆ ಬೇಸರವಿಲ್ಲ. ಅಂತಹ ವ್ಯವಹಾರದ ವಿರುದ್ಧ ನಮಗೆ ಕ್ಷಮೆಇರಲಿ" ಎಂದಿದ್ದಾರೆ.

ಓಲಾದಲ್ಲೂ ನಡೆದಿತ್ತು:

ಓಲಾದಲ್ಲೂ ನಡೆದಿತ್ತು:

ಕಳೆದ ವರ್ಷ ಇಂತಹದ್ದೇ ಘಟನೆ ಟ್ಯಾಕ್ಸಿ ಆಪ್ ಓಲಾದಲ್ಲಿ ನಡೆದಿತ್ತು. ವಿಶ್ವ ಹಿಂದೂ ಪರಿಷತ್ ನ ಯುಪಿ ಮೂಲದ ಸಾಮಾಜಿಕ ಜಾಲತಾಣದ ಸಲಹೆಗಾರರೊಬ್ಬರು ಓಲಾದಲ್ಲಿ ಮುಸ್ಲೀಂ ಚಾಲಕನಾಗಿದ್ದಲ್ಲಿ ನಾನು ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅವರ ಓಲಾ ಮತ್ತು ಟ್ವೀಟರ್ ಖಾತೆಯನ್ನು ಅಮಾನತುಗೊಳಿಸಬೇಕೆಂದು ನಾಗರೀಕರು ಒತ್ತಾಯಿಸಿದಾಗ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.

ಜೊಮಾಟೋ ಮಾಡಿದಂತೆಯೇ ಓಲಾ ಕೂಡ ಗ್ರಾಹಕರ ಬೇಡಿಕೆಯನ್ನು ನಿರಾಕರಿಸಿತ್ತು. ಧರ್ಮದ ಆಧಾರದಲ್ಲಿ ಡ್ರೈವರ್ ನ್ನು ಆಯ್ಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿತ್ತು. ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಓಲಾ ಕೂಡ ಟ್ವೀಟ್ ಮಾಡಿತ್ತು. "ನಮ್ಮ ದೇಶದಂತೆಯೇ ಓಲಾ ಕೂಡ ಒಂದು ಜಾತ್ಯಾತೀತ ವೇದಿಕೆಯಾಗಿದೆ. ನಾವು ಚಾಲಕರು ಅಥವಾ ಗ್ರಾಹಕರನ್ನು ಜಾತಿ,ಧರ್ಮ, ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ. ನಮ್ಮ ಎಲ್ಲಾ ಚಾಲಕರು ಮತ್ತು ಗ್ರಾಹಕರು ಯಾವಾಗಲೂ ಗೌರವದಿಂದ ವರ್ತಿಸುವಂತೆ ಕೋರುತ್ತೇವೆ" ಎಂದು ಟ್ವೀಟ್ ಮಾಡಲಾಗಿತ್ತು.

ಒಟ್ಟಿನಲ್ಲಿ ಧರ್ಮದ ಮನಸ್ಥಿತಿಯ ಚೌಕಟ್ಟು ಆಹಾರದ ಡೆಲಿವರಿಯಲ್ಲೂ ಕಾಣಿಸಿದ್ದು ಎಷ್ಟು ಸರಿ ಎಂಬುದು ಇದೀಗ ಎದ್ದಿರುವ ಪ್ರಶ್ನೆ!ಇದಕ್ಕೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ.

Best Mobiles in India

Read more about:
English summary
Zomato Teaches A Lesson For A Customer Who Needs A Hindu Delivery Boy

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X