ಆಕಾಶದಲ್ಲಿ ಹಾರಿಕೊಂಡು ಬರುತ್ತೆ ನೀವು ಆರ್ಡರ್ ಮಾಡಿದ ಆಹಾರ!

By Gizbot Bureau
|

ಭಾರತದಲ್ಲಿ ಆಹಾರವನ್ನು ಮನೆಗೆ ಡೆಲಿವರಿ ಕೊಡುವ ಫೇಮಸ್ ಸರ್ವೀಸ್ ಪ್ರೊವೈಡರ್ ಅಂದರೆ ಅದು ಜೊಮಾಟೊ. ಇದೀಗ ಡ್ರೋಣ್ ಮೂಲಕ ಆಹಾರವನ್ನು ಮನೆಗೆ ತಲುಪಿಸುವ ತಂತ್ರಗಾರಿಕೆಯನ್ನು ಜೊಮಾಟೊ ಭಾರತದಲ್ಲಿ ಯಶಸ್ವಿಯಾಗಿ ಪರಿಕ್ಷಾರ್ಥ ಪ್ರಯೋಗ ನಡೆಸಿರುವ ಬಗ್ಗೆ ಪ್ರಕಟಿಸಿದೆ.

ಡ್ರೋಣ್ ಟೆಸ್ಟಿಂಗ್:

ಡ್ರೋಣ್ ಟೆಸ್ಟಿಂಗ್:

ಹೈಬ್ರಿಡ್ ಡ್ರೋಣ್ ಬಳಸಿ ಈ ಟೆಸ್ಟಿಂಗ್ ನ್ನು ನಡೆಸಲಾಗಿದೆ ಮತ್ತು ಗ್ರಾಹಕರಿಗೆ ಫುಡ್ ಡೆಲಿವರಿ ಮಾಡಲು ತೆಗೆದುಕೊಳ್ಳುತ್ತಿರುವ ಸಮಯವನ್ನು ಇನ್ನಷ್ಟು ಕಡಿಮೆ ಮಾಡುವ ಉದ್ದೇಶವನ್ನು ಕಂಪೆನಿ ಹೊಂದಿದ್ದು ಆ ನಿಟ್ಟಿನಲ್ಲಿ ಈ ಪ್ರಯೋಗವನ್ನು ಕೈಗೊಳ್ಳಲಾಗಿದೆ.

ಉದ್ದೇಶ:

ಉದ್ದೇಶ:

ಡ್ರೋಣ್ ಸ್ಟಾರ್ಟ್ ಅಪ್ ಟೆಕ್ ಈಗಲ್ ನ್ನು ಸ್ವಾಧೀನ ಪಡಿಸಿಕೊಂಡ ಕೆಲವೇ ತಿಂಗಳ ನಂತರ ಈ ಅಭಿವೃದ್ಧಿ ಸಾಧ್ಯವಾಗಿದ್ದು ಆ ಮೂಲಕ ಆಹಾರ ವಿತರಣೆಯಲ್ಲಿ ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸುವುದು ಮತ್ತು ಮಾಲಿನ್ಯ ತಡೆಯುವುದು ಮತ್ತು ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವುದು ಇತ್ಯಾದಿ ಆಲೋಚನೆಯಲ್ಲಿ ಈ ಅಭಿವೃದ್ಧಿಯನ್ನು ಸಾಧಿಸಲಾಗಿದೆ.

ಎಲ್ಲಿ ಡೆಲಿವರಿ ಮಾಡಿದ್ದು?

ಎಲ್ಲಿ ಡೆಲಿವರಿ ಮಾಡಿದ್ದು?

ಪ್ರಾಯೋಗಿಕ ಬಿಯಾಂಡ್ ವಿಷುಯಲ್ ಲೈನ್ ಆಫ್ ಸೈಟ್ (ಬಿವಿಎಲ್ಒಎಸ್) ಡ್ರೋನ್ ಕಾರ್ಯಾಚರಣೆಯನ್ನು ನಡೆಸಲು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಮಾರ್ಗಸೂಚಿಗಳ ಪ್ರಕಾರ ಇದು ಒಕ್ಕೂಟವನ್ನು ರಚಿಸುತ್ತಿದೆ ಎಂದು ಜೊಮಾಟೊ ಬಹಿರಂಗಪಡಿಸಿದೆ.ಡ್ರೋಣ್ ಟೆಸ್ಟ್ ನ್ನು ಕಳೆದ ವಾರ ರಿಮೋಟ್ ಪ್ರದೇಶಗಳಲ್ಲಿ ನಡೆಸಲಾಗಿದೆ. ಇದಕ್ಕಾಗಿ ಡಿಜಿಸಿಎಯಿಂದ ಅನುಮತಿಯನ್ನು ಕೂಡ ಪಡೆಯಲಾಗಿತ್ತು ಎಂದು ಜೊಮಾಟೊ ತಿಳಿಸಿದೆ. ಆದರೆ ನಿಖರವಾಗಿ ಇಂತಹದ್ದೇ ಪ್ರದೇಶದಲ್ಲಿ ಡೆಲಿವರಿ ಮಾಡಲಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಜೊಮಾಟೋ ಸಂಸ್ಥೆಯ ಸಿಇಓ ದೀಪೇಂದರ್ ಘೋಯಲ್ ಅವರ ಹೇಳಿಕೆ: "ನಾವು ಅನುಕೂಲಕರವಾಗಿರುವ ಮತ್ತು ಸುರಕ್ಷಿತವಾಗಿರುವ ಡೆಲಿವರಿ ತಂತ್ರಗಾರಿಕೆಯ ಬಗ್ಗೆ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಮೊದಲ ಪ್ರಾಯೋಗಿಕ ಪ್ರಯತ್ನ ಯಶಸ್ವಿಯಾಗಿದ್ದು ಡ್ರೋಣ್ ಮೂಲಕ ಆಹಾರ ವಿತರಣೆ ಒಂದು ಸದ್ಯದ ಕನಸಾಗಿದೆ ಸರ್ಕಾರದ ಅನುಮತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕಿದೆ. ತಂತ್ರಗಾರಿಕೆ ಹಾರುವುದಕ್ಕೆ ತಯಾರಾಗಿದೆ ಮತ್ತು ಡ್ರೋಣ್ ಡೆಲಿವರಿ ಸದ್ಯದಲ್ಲೇ ಬರಲಿದೆ ಎಂಬ ವಿಶ್ವಾಸವಿದೆ"

ಡ್ರೋಣ್ ಹೇಗಿದೆ?

ಡ್ರೋಣ್ ಹೇಗಿದೆ?

ಈ ಟೆಸ್ಟಿಂಗ್ ನಲ್ಲಿ ಬಳಸಲಾಗಿರುವ ಡ್ರೋಣ್ ಹೈಬ್ರಿಡ್ ಡ್ರೋಣ್ ಆಗಿದ್ದು ಇದರಲ್ಲಿ ಫ್ಯೂಷನ್ ರೊಟೆಟರಿ ವಿಂಗ್ ಇದೆ ಮತ್ತು ಫಿಕ್ಸ್ಡ್ ವಿಂಗ್ ಆಗಿದೆ. 5 ಕೆಜಿ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ. 5 ಕಿಲೋಮೀಟರ್ ದೂರವನ್ನು ಕೇವಲ 10 ನಿಮಿಷದಲ್ಲಿ ಕ್ರಮಿಸುವ ಸಾಮರ್ಥ್ಯವಿದೆ. ಅಂದ್ರೆ 80kmph ವೇಗದಲ್ಲಿ ಇದು ಕ್ರಮಿಸುತ್ತದೆ.

ಸಂಪೂರ್ಣ ಅಟೋಮೆಟೆಡ್ ಆಗಿರುವ ಇದು ರಿಮೋಟ್ ಪೈಲೆಟ್ ಮೂಲಕ ಪ್ರತಿ ಡ್ರೋಣ್ ನ್ನು ಆಪರೇಟ್ ಮಾಡಲಾಗುತ್ತದೆ. ಆ ಮೂಲಕ ಸುರಕ್ಷತೆಯನ್ನು ಕಾಪಾಡಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

ಅನುಮತಿ ಬೇಕಿದೆ:

ಅನುಮತಿ ಬೇಕಿದೆ:

ಕಳೆದ ತಿಂಗಳು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ನ ಅವರು ಹೊರಡಿಸಿದ ನೋಟಿಫಿಕೇಷನ್ ಪ್ರಕಾರ ಆಸಕ್ತ ಕಂಪೆನಿಗಳು ಆಸಕ್ತಿಯ ಅಭಿವ್ಯಕ್ತಿ(EOI) ನ್ನು ಡಿಜಿಸಿಎ ಗೆ ಸಲ್ಲಿಸಬೇಕಾಗುತ್ತದೆ. ನಂತರ ಅವರಿಗೆ ವಿಷುಯಲ್ ಲೈನ್ ಆಫ್ ಸೈಟ್ ಕಾರ್ಯಾಚರಣೆಗಳ ಪ್ರಾಯೋಗಿಕ ಪ್ರಯತ್ನವನ್ನು ನಡೆಸಲು ಅನುಮತಿ ನೀಡಲಾಗುತ್ತದೆ.

Best Mobiles in India

Read more about:
English summary
Zomato Tests Drone Delivery In India – Will It Become Future Of Food Delivery?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X