ಜೂಮ್‌ ಅಪ್ಲಿಕೇಶನ್‌ನಿಂದ ಹೊಸ ಅಪ್ಡೇಟ್‌ ಬಿಡುಗಡೆ! ವಿಶೇಷತೆ ಏನು?

|

ಜೂಮ್‌ ಜನಪ್ರಿಯ ವೀಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಅಪ್ಡೇಟ್‌ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್‌ ಪರಿಚಯಿಸಿದೆ. ಇನ್ನು ಈ ಅಪ್ಡೇಟ್‌ನಲ್ಲಿ ಮೆಮೊಜಿ-ಲೈಕ್‌ ಅವತಾರ್‌, ಲೈವ್ ಸ್ಟ್ರೀಮಿಂಗ್ ಟು ಟ್ವಿಚ್‌ ಅನುಮತಿಸುವುದು, ಎಲ್ಲಾ ಬ್ರೇಕ್‌ಔಟ್ ರೂಮ್‌ಗಳಿಗೆ ಆಡಿಯೊವನ್ನು ಶೇರ್‌ ಮಾಡುವುದು, ವೀಡಿಯೊ ಸಂದೇಶ ಕಳುಹಿಸುವಿಕೆ ಮತ್ತು ಜೂಮ್ ರೂಮ್‌ಗಳಿಗೆ ಅಪ್ಡೇಟ್‌ ಅನ್ನು ಪರಿಚಯಿಸಿದೆ.

ಅಪ್ಲಿಕೇಶನ್‌

ಹೌದು, ಜೂಮ್‌ ಅಪ್ಲಿಕೇಶನ್‌ ಹೊಸ ಅಪ್ಡೇಟ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಹಲವು ಫೀಚರ್ಸ್‌ಗಳನ್ನು ಬಳಕೆದಾರರ ಗಮನ ಸೆಳೆದಿವೆ. ಇದರಿಂದ ಜೂಮ್‌ ಅಪ್ಲಿಕೇಶನ್‌ ಬಳಸುವವರು ಹೊಸ ಅನುಭವವನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೆ ಮೀಟಿಂಗ್‌ ಸಮಯದಲ್ಲಿ ನಿಮ್ಮದೇ ಆದ ಅವತಾರ್‌ ಅನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ. ಇನ್ನುಳಿದಂತೆ ಈ ಹೊಸ ಅಪ್ಡೇಟ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳು ಲಭ್ಯವಾಗಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಪ್ಲಿಕೇಶನ್‌

ಜೂಮ್‌ ಅಪ್ಲಿಕೇಶನ್‌ನ ಹೊಸ ಅವತಾರ್ ಫೀಚರ್ಸ್‌ ಆಪಲ್‌ನ ಮೆಮೊಜಿ ಫೀಚರ್ಸ್‌ ಮಾದರಿಯಲ್ಲಿರಲಿದೆ. ಇದು ಅನಿಮೇಟೆಡ್ ಅವತಾರ್ ಅನ್ನು ಬಳಸಿಕೊಂಡು ವೀಡಿಯೊ ಕಾಲ್ಸ್‌ ಮತ್ತು ವೆಬ್‌ನಾರ್‌ಗಳನ್ನು ನಡೆಸಲು ನಿಮಗೆ ಅನುಮತಿಸುತ್ತದೆ. ಅಲ್ಲದೆ ನಿಮ್ಮ ಮುಖವು ಪರದೆಯ ಮೇಲೆ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಜೂಮ್‌ನ ಸಾಫ್ಟ್‌ವೇರ್ ಡಿವೈಸ್‌ನ ಕ್ಯಾಮರಾವನ್ನು ಬಳಸುತ್ತದೆ. ಜೊತೆಗೆ ಇದು ನಿಮ್ಮ ಅಭಿವ್ಯಕ್ತಿಗಳು ಮತ್ತು ತಲೆಯ ಚಲನೆಯನ್ನು ಅನುಕರಿಸುವ ವರ್ಚುವಲ್ ಅನಿಮೇಟೆಡ್ ಅವತಾರ್ ಅನ್ನು ಅನ್ವಯಿಸುತ್ತದೆ.

ಜೂಮ್‌

ಇದಲ್ಲದೆ, ಜೂಮ್‌ ಅಕೌಂಟ್‌ನ ಮಾಲೀಕರು ಮತ್ತು ಅಡ್ಮೀನ್‌ ಇದೀಗ ಹೋಸ್ಟ್‌ಗಳಿಗೆ ತಮ್ಮ ಸಭೆಗಳನ್ನು ಅಥವಾ ವೆಬ್‌ನಾರ್‌ಗಳನ್ನು ನೇರವಾಗಿ ಟ್ವಿಚ್‌ಗೆ ಲೈವ್ ಸ್ಟ್ರೀಮ್ ಮಾಡಲು ಅನುಮತಿಸಬಹುದು. ಬದಲಿಗೆ ವೆಬ್‌ನಾರ್‌ಗಳನ್ನು ಕಸ್ಟಮ್ ಲೈವ್-ಸ್ಟ್ರೀಮಿಂಗ್ ಸೇವೆ ನೀಡಲಿದೆ. ಇನ್ನು ಭಾಗವಹಿಸುವವರಿಗೆ ಹೆಚ್ಚು ಒಗ್ಗೂಡಿಸುವ ಅನುಭವವನ್ನು ಕ್ರಿಯೆಟ್‌ ಮಾಡಲು ಹೋಸ್ಟ್‌ಗಳು ಈಗ ಎಲ್ಲಾ ಬ್ರೇಕ್‌ಔಟ್ ರೀಮ್‌ಗಳಿಗೆ ಕಂಪ್ಯೂಟರ್ ಆಡಿಯೊವನ್ನು ಶೇರ್‌ ಮಾಡಲು ಅವಕಾಶ ನೀಡಲಿದೆ. ಜೊತೆಗೆ ಹೋಸ್ಟ್ ವಿಷಯವನ್ನು ಶೇರ್‌ ಮಾಡಲು ಪ್ರಾರಂಭಿಸಿದಾಗಲೂ ನೀವು ಸಕ್ರಿಯಗೊಳಿಸಬಹುದು.

ಜೂಮ್ ಚಾಟ್‌ ಅಪ್ಡೇಟ್‌

ಜೂಮ್ ಚಾಟ್‌ ಅಪ್ಡೇಟ್‌

ಇನ್ನು ಜೂಮ್‌ ಹೊಸ ಸೈಡ್‌ಬಾರ್ ಕಸ್ಟಮೈಸೇಶನ್ ಮತ್ತು ಫೋಲ್ಡರ್‌ ಅಪ್ಡೇಟ್‌ ಮಾಡಿದೆ. ಬಳಕೆದಾರರು ತಮ್ಮ ಚಾಟ್‌ಗಳು ಮತ್ತು ಚಾನಲ್‌ಗಳನ್ನು ಫೋಲ್ಡರ್‌ಗಳಾಗಿ ವರ್ಗೀಕರಿಸುವ ಮೂಲಕ ಸಂಘಟಿತವಾಗಿರಿಸಲು ಸಹಾಯ ಮಾಡುತ್ತದೆ. ಈ ಫೀಚರ್ಸ್‌ ಮಾರ್ಚ್ 28, 2022 ರಂದು ಲಭ್ಯವಾಗುವಂತೆ ನಿಗದಿಪಡಿಸಲಾಗಿದೆ. ಇದಲ್ಲದೆ ಜೂಮ್ ಚಾಟ್ ಈಗ ವೀಡಿಯೊ ಮೆಸೇಜ್‌ ಸೆಂಡ್‌ ಮಾಡುವ ಫೀಚರ್ಸ್‌ ಅನ್ನು ಸೇರಿಸಿದ್ದು, ಇದು ಬಳಕೆದಾರರಿಗೆ ಪ್ಲಾಟ್‌ಫಾರ್ಮ್‌ನೊಂದಿಗೆ ವೀಡಿಯೊ ಸಂದೇಶಗಳನ್ನು ರೆಕಾರ್ಡ್ ಮಾಡಲು ಮತ್ತು ಕಳುಹಿಸಲು ಅನುಮತಿಸುತ್ತದೆ.

ಜೂಮ್ ರೂಮ್ಸ್‌ ಅಪ್ಡೇಟ್‌

ಜೂಮ್ ರೂಮ್ಸ್‌ ಅಪ್ಡೇಟ್‌

ಜೂಮ್‌ ತನ್ನ ರೂಮ್ಸ್‌ನಲ್ಲಿಯೂ ಹೊಸ ಅಪ್ಡೇಟ್‌ ಮಾಡಿದೆ. ಇದರಲ್ಲಿ ಹೊಸ ವರ್ಕ್‌ಸ್ಪೇಸ್ ರಿಸರ್ವೇಶನ್‌ ಡ್ಯಾಶ್‌ಬೋರ್ಡ್, ವರ್ಕ್‌ಸ್ಪೇಸ್ ರಿಸರ್ವೇಶನ್ ಡೆಸ್ಕ್ ಸಜೇಶನ್‌ ಫೀಚರ್ಸ್‌ ಮತ್ತು ಮ್ಯಾಕ್ ಡಿವೈಸ್‌ಗಳಲ್ಲಿ ಬಳಕೆದಾರರ ಫೀಡ್‌ಬ್ಯಾಕ್‌ ಅಪ್ಡೇಟ್‌ ಅನ್ನು ನೀಡಿದೆ. ಜೊತೆಗೆ ಹೊಸ ವರ್ಕಸ್ಪೇಸ್‌ ರಿಸರ್ವೇಶನ್‌ ಡ್ಯಾಶ್‌ಬೋರ್ಡ್, ಅಡ್ಮೀನ್‌ ವರ್ಕ್‌ಸ್ಪೇಸ್‌ ಯೂಸ್‌, ಚೆಕ್-ಇನ್ ರೇಟ್‌, ಉನ್ನತ ಕಾರ್ಯಸ್ಥಳಗಳನ್ನು ಒಳಗೊಂಡಿದೆ. ಜೊತೆಗೆ ವರ್ಕ್‌ಸ್ಪೇಸ್ ರಿಸರ್ವೇಶನ್‌ ಅನ್ನು ಕಂಪನಿಯ ಉದ್ಯೋಗಿಗಳು ಹೇಗೆ ಬಳಸುತ್ತಿದ್ದಾರೆ ಎಂಬುದರ ಕುರಿತು ಮೆಟ್ರಿಕ್‌ಗಳು ಮತ್ತು ಮಾಹಿತಿಯನ್ನು ವೀಕ್ಷಿಸಲು ಮತ್ತು ಸಂವಹಿಸಲು ಕೂಡ ಅನುಮತಿಸುತ್ತದೆ.

Best Mobiles in India

English summary
Zoom announced a host of new features including Memoji-like avatars

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X