Home
ಸುದ್ದಿಜಾಲ

ಜೂಮ್‌ ಆಪ್‌ನಿಂದ ಐದು ಹೊಸ ಮಾದರಿಯ ಫೀಚರ್ಸ್‌ ಬಿಡುಗಡೆ!

ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್‌ ಆಪ್‌ಗಳಲ್ಲಿ ಜೂಮ್‌ ಆಪ್‌ ಕೂಡ ಒಂದಾಗಿದೆ. ಸದ್ಯ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಕಲ್ಪಿಸಿವೆ. ವರ್ಕ್ ಫ್ರಂ ಹೋಂ ಮಾಡುವಾಗ ಆನ್‌ಲೈನ್‌ ಮೀಟಿಂಗ್‌ ನಡೆಸಲು ವಿಡಿಯೊ ಕಾನ್ಫರೆನ್ಸ್‌ ಆಪ್‌ಗಳು ನೆರವಾಗಿವೆ. ಈ ಸನ್ನಿವೇಶದಲ್ಲಿ ಜೂಮ್ ಆಪ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನು ಈಗಾಗಲೇ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವ ಜೂಮ್‌ ಆಪ್‌ ಇದೀಗ ಇನ್ನಷ್ಟು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ವಿಡಿಯೋ ಕಾನ್ಫರೆನ್ಸಿಂಗ್‌ ಆಪ್‌

ಹೌದು, ವಿಡಿಯೋ ಕಾನ್ಫರೆನ್ಸಿಂಗ್‌ ಆಪ್‌ ಜೂಮ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅದರಲ್ಲಿ ಹೆಚ್ಚಿನ ಜನರಿಗೆ ವೀಡಿಯೊ ಕಮ್ಯೂನಿಕೇಷನ್‌ಕನೆಕ್ಟ್‌ ಆಗುವುದಕ್ಕೆ ಹೊಸ ಫೀಚರ್ಸ್‌ ಪರಿಚಯಿಸಿದೆ. ಅಲ್ಲದೆ A11Y ಪ್ರಾಜೆಕ್ಟ್ ಡಿಜಿಟಲ್ ಪ್ರವೇಶವನ್ನು ಸುಲಭಗೊಳಿಸಲು ಸಮುದಾಯ-ಚಾಲಿತ ಪ್ರಯತ್ನವನ್ನು ಪರಿಚಯಿಸಿದೆ. ಇದಕ್ಕಾಗಿ ಜೂಮ್‌ ಆಪ್‌ ಹೊಸದಾಗಿ ಐದು ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಹಾಗಾದ್ರೆ ಐದು ಹೊಸ ಫೀಚರ್ಸ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜೂಮ್‌

ಜೂಮ್‌ ಆಪ್‌ ಹೊಸದಾಗಿ ಐದು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅದರಲ್ಲಿ ಸ್ಪಾಟ್‌ಲೈಟ್ ವೀಡಿಯೊಗಳು, ಕೀಬೋರ್ಡ್ ಅಕ್ಸೆಸ್ಸಿಬಿಲಿಟಿ, ಕ್ಲೋಸ್ಡ್‌ ಕ್ಯಾಪ್ಸನಿಂಗ್‌, ಸೇರಿದಂತೆ ಇತ್ಯಾದಿ ಫೀಚರ್ಸ್‌ಗಳನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಜೂಮ್‌ ಪರಿಚಯಿಸಿರುವ ಐದು ಹೊಸ ಫೀಚರ್ಸ್‌ಗಳ ವಿಶೇಷತೆ ಇಲ್ಲಿದೆ ಓದಿರಿ.

ಮೀಟಿಂಗ್‌ನ ಮಲ್ಟಿ ವೀಡಿಯೊಗಳನ್ನು ಪಿನ್ ಮಾಡುವುದು

ಮೀಟಿಂಗ್‌ನ ಮಲ್ಟಿ ವೀಡಿಯೊಗಳನ್ನು ಪಿನ್ ಮಾಡುವುದು

ಜೂಮ್‌ ಆಪ್‌ನಲ್ಲಿ ಮೀಟಿಂಗ್‌ ಮಾಡುವಾಗ ಮಿಟಿಂಗ್‌ನಲ್ಲಿ ತೆಗೆದುಕೊಂಡ ನಿರ್ಧಾರ, ಸಲ್ಯೂಶನ್‌ ವೀಡಿಯೋಗಳು ಹೈಲೈಟ್‌ ಆಗಿರುತ್ತದೆ. ಆದರೆ ಇದು ಸಭೆಯ ಮೂಲಕ ಹಲವು ಬಾರಿ ಬದಲಾಗಬಹುದು. ಈ ಹೈಲೈಟ್ ಮಾಡಿದ ವೀಡಿಯೊ ಅಥವಾ ಆದೇಶ ಬದಲಾದರೆ ಇಂಟರ್‌ಪ್ರಿಂಟರ್‌ನೊಂದಿಗಿನ ಸಭೆಗಳನ್ನು ಅನುಸರಿಸಲು ಇದು ತುಂಬಾ ಕಷ್ಟಕರವಾಗಿರುತ್ತದೆ. ಆದರೆ ಮಲ್ಟಿ-ಪಿನ್ನಿಂಗ್ ಅನೇಕ ವೀಡಿಯೊಗಳನ್ನು ಒಂದೇ ಸ್ಥಳದಲ್ಲಿ ಇರಿಸಲು ನಿಮಗೆ ಅನುಮತಿಸುತ್ತದೆ. ಹೋಸ್ಟ್ ಮತ್ತು ಸಹ-ಹೋಸ್ಟ್ ಸಭೆಯಲ್ಲಿ ಒಂಬತ್ತು ಜನರಿಗೆ ಬಹು ವೀಡಿಯೊಗಳನ್ನು ಪಿನ್ ಮಾಡಲು ಅನುಮತಿ ನೀಡಬಹುದಾಗಿದೆ.

ವೀಡಿಯೊಗಳನ್ನು ರಿಸೆಟ್‌ಮಾಡುವುದು

ವೀಡಿಯೊಗಳನ್ನು ರಿಸೆಟ್‌ಮಾಡುವುದು

ಇನ್ನು ಜೂಮ್‌ ಆಫ್‌ ಪರಿಚಯಿಸಿರುವ ಹೊಸ ಫೀಚರ್ಸ್‌ನಲ್ಲಿ ವೀಡಿಯೋಗಳನ್ನ ರಿಸೆಟ್‌ ಮಾಡುವುದು ಕೂಡ ಒಂದಾಗಿದೆ. ಇದರಲ್ಲಿ ಜೂಮ್‌ ವೀಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಇರುವ ಗ್ಯಾಲರಿ ವೀಕ್ಷಣೆಯಲ್ಲಿ, ಯಾರು ಮಾತನಾಡುತ್ತಿದ್ದಾರೆ ಅಥವಾ ಕೈ ಎತ್ತುತ್ತಾರೆ ಎಂಬುದರ ಪ್ರಕಾರ ವೀಡಿಯೊಗಳು ಸ್ವಯಂಚಾಲಿತವಾಗಿ ರಿಸೆಟ್‌ ಆಗಲಿವೆ. ಇದರಿಂದ ನಿಮ್ಮ ಸ್ವಂತ ಕಸ್ಟಮ್ ಆದೇಶದ ಪ್ರಕಾರ ನೀವು ವೀಡಿಯೊಗಳನ್ನು ಎಳೆಯಬಹುದು ಮತ್ತು ಬಿಡಬಹುದು.

ಕೀಬೋರ್ಡ್‌ ಅಕ್ಸೆಸ್ಸಿಬಿಲಿಟಿ

ಕೀಬೋರ್ಡ್‌ ಅಕ್ಸೆಸ್ಸಿಬಿಲಿಟಿ

ಕೀಬೋರ್ಡ್ ಅಕ್ಸೆಸ್ಸಿಬಿಲಿಟಿ ಫೀಚರ್ಸ್‌ ಅನ್ನು ಸಹ ಜೂಮ್ ಪರಿಚಯಿಸಿದೆ. ಇದರಿಂದ ನಿವು ಜೂಮ್‌ ಕಾನ್ಫರೆನ್ಸಿಂಗ್‌ನಲ್ಲಿ ಭಾಗವಹಿಸಿದಾಗ ನೀವು ಶಾರ್ಟ್‌ ಕಟ್‌ ಕೀಗಳನ್ನು ಬಳಸಲು ಸಹ ಅವಕಾಶವನ್ನ ನಿಡಲಾಗಿದೆ.

ಕ್ಲೋಸ್ಡ್ ಕ್ಯಾಪ್ಟಿವ್ನಿಂಗ್

ಕ್ಲೋಸ್ಡ್ ಕ್ಯಾಪ್ಟಿವ್ನಿಂಗ್

ಇನ್ನು ಜೂಮ್‌ನಲ್ಲಿ ಕ್ಲೋಸ್ಡ್ ಕ್ಯಾಪ್ಟಿವ್ನಿಂಗ್ ಅಥವಾ ಬಳಕೆದಾರರು ನಿಮ್ಮ ಸಭೆಯಲ್ಲಿ ಕ್ಲೋಸ್ಡ್ ಕ್ಯಾಪ್ಟಿವ್ನಿಂಗ್ಗಳನ್ನು ಟೈಪ್ ಮಾಡಲು ಯಾರನ್ನಾದರೂ ನಿಯೋಜಿಸಬಹುದು. ಎಂಟ್ರಿ ಸೆಟ್ಟಿಂಗ್‌ಗಳ ಮೂಲಕ ಶೀರ್ಷಿಕೆ ಗಾತ್ರವನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ.

ಸ್ಕ್ರೀನ್ ರೀಡರ್ ಬೆಂಬಲ

ಸ್ಕ್ರೀನ್ ರೀಡರ್ ಬೆಂಬಲ

ಇದಲ್ಲದೆ ಜೂಮ್ ಎಲ್ಲಾ ಪ್ರಮುಖ ಸ್ಕ್ರೀನ್ ರೀಡರ್ ಸಾಫ್ಟ್‌ವೇರ್ ಅನ್ನು ಬೆಂಬಲಿಸುವ ಫೀಚರ್ಸ್‌ ಅನ್ನು ಸಹ ಪರಿಚಯಿಸಿದೆ. ನೀವು ಕೇಳಲು ಬಯಸುವ ಎಚ್ಚರಿಕೆಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡಲು, ಪ್ರವೇಶ ಸೆಟ್ಟಿಂಗ್‌ಗಳ ಮೂಲಕ ಸ್ಕ್ರೀನ್ ರೀಡರ್ ಎಚ್ಚರಿಕೆಗಳನ್ನು ಸರಿಹೊಂದಿಸಬಹುದಾಗಿದೆ.

ಅಕ್ಸೆಸ್ಸಿಬಿಲಿಟಿ ಸೆಟ್ಟಿಂಗ್ಸ್

ಅಕ್ಸೆಸ್ಸಿಬಿಲಿಟಿ ಸೆಟ್ಟಿಂಗ್ಸ್

ಇನ್ನು ಜೂಮ್ ಡೆಸ್ಕ್‌ಟಾಪ್ ಕ್ಲೈಂಟ್‌ನಲ್ಲಿ, ಎಲ್ಲಾ ಜೂಮ್ ಪ್ರವೇಶಿಸುವಿಕೆ ನಿಯಂತ್ರಣಗಳು ಇರುವ ಪ್ರವೇಶಿಸುವಿಕೆ ಸೆಟ್ಟಿಂಗ್‌ಗಳ ವಿಭಾಗವಿದೆ. ಇಲ್ಲಿಂದ ನೀವು ಮುಚ್ಚಿದ ಶೀರ್ಷಿಕೆಯ ಗಾತ್ರವನ್ನು ಸರಿಹೊಂದಿಸಬಹುದಾಗಿದೆ. ಇದರಿಂದ ಸಭೆ ನಿಯಂತ್ರಣಗಳನ್ನು ತೋರಿಸಬಹುದು ಮತ್ತು ನಿಮ್ಮ ಸ್ಕ್ರೀನ್ ರೀಡರ್ ಎಚ್ಚರಿಕೆಗಳನ್ನು ನಿರ್ದಿಷ್ಟಪಡಿಸಬಹುದಾಗಿದೆ.

Best Mobiles in India

English summary
Zoom has new features that are going to help contribute towards making video conferencing more accessible to everyone including spotlight videos, keyboard accessibility, closed captioning.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+