ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ ಪರಿಚಯಿಸಿದ ಜೂಮ್‌ ಅಪ್ಲಿಕೇಶನ್‌!‌

|

ಕೊರೊನಾ ಮಹಾಮಾರಿ ವೈರಸ್‌ ಕಾಲಿಟ್ಟ ನಂತರ ಜಗತ್ತಿನೆಲ್ಲೆಡೆ ವೀಡಿಯೋ ಕಾನ್ಪರೆನ್ಸಿಂಗ್‌ ಅಪ್ಲಿಕೇಶನ್‌ಗಳು ಸಾಕಷ್ಟು ಮುನ್ನಲೆಗೆ ಬಂದಿವೆ. ಈ ಪೈಕಿ ಜೂಮ್ ಅಪ್ಲಿಕೇಶನ್‌ ಸಾಕಷ್ಟು ಟ್ರೆಂಡಿಂಗ್‌ನಲ್ಲಿದೆ. ತನ್ನ ವಿಶೇಷ ಫೀಚರ್ಸ್‌ಗಳಿಂದ ಆನ್‌ಲೈನ್‌ ತರಗತಿಗಳು, ಆನ್‌ಲೈನ್‌ ಮೀಟಿಂಗ್‌ ನಡೆಸುವವರಿಗೆ ನೆಚ್ಚಿನ ಆಯ್ಕೆಯಾಗಿದೆ. ಈಗಾಗಲೇ ಹಲವು ಮಾದರಿಯ ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿರುವ ಜೂಮ್‌ ಅಪ್ಲಿಕೇಶನ್‌ ಇದೀಗ ಹೊಸ ಅಪ್ಡೇಟ್‌ ಮೂಲಕ ಅನೇಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ.

ಜೂಮ್

ಹೌದು, ಜೂಮ್ ಅಪ್ಲಿಕೇಶನ್‌ ಇದೀಗ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಹೊಸ ಅಪ್ಡೇಟ್‌ ಮೂಲಕ ಅನೇಕ ಫೀಚರ್ಸ್‌ಗಳನ್ನು ಹೊರತಂದಿದೆ. ಇದರಲ್ಲಿ ಬಳಕೆದಾರರು ಈಗ ಇನ್-ಆಫೀಸ್ ಕಾರ್ಯಸ್ಥಳವನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ. ಕ್ಲೌಡ್ ರೆಕಾರ್ಡಿಂಗ್‌ಗಳು ಮತ್ತು ವೀಡಿಯೊ ಮೇಲ್‌ಗಳನ್ನು ಹಂಚಿಕೊಳ್ಳಬಹುದಾಗಿದೆ. ಇದಲ್ಲದೆ ಮೀಟಿಂಗ್‌ ಮೇಲೆ ಹೋಸ್ಟ್‌ಗಳು ಸಂಪೂರ್ಣ ನಿಯಂತ್ರಣ ನೀಡುವ ಅವಕಾಶವನ್ನು ಸಹ ನೀಡಿದೆ. ಹಾಗಾದ್ರೆ ಜೂಮ್‌ ತನ್ನ ಹೊಸ ಅಪ್ಡೇಟ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ಪರಿಚಯಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜೂಮ್ ಮೀಟಿಂಗ್ಸ್‌

ಜೂಮ್ ಮೀಟಿಂಗ್ಸ್‌

ಜೂಮ್‌ ಅಪ್ಲಿಕೇಶನ್‌ ಸೇರಿರುವ ಹೊಸ ಫೀಚರ್ಸ್‌ಗಳಲ್ಲಿ ಹೋಸ್ಟ್‌ಗಳು ಈಗ ಸಭೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದುವುದು ಕೂಡ ಸೇರಿದೆ. ಅದರಂತೆ ಮೀಟಿಂಗ್‌ ಹೋಸ್ಟ್‌ ಪ್ರಾರಂಭದಿಂದಲೂ ಆಟೋಮ್ಯಾಟಿಕ್‌ ಫೋಕಸ್ ಮೋಡ್ ಅನ್ನು ಸಕ್ರಿಯಗೊಳಿಸಿ ಜೂಮ್ ಸಭೆಗಳನ್ನು ನಿಗದಿಪಡಿಸಬಹುದು. ಇದರಿಂದ ಸಭೆಯಲ್ಲಿ ಭಾಗವಹಿಸುವವರಲ್ಲಿ ಗೊಂದಲವನ್ನು ಕಡಿಮೆ ಮಾಡಲಿದೆ. ಅಲ್ಲದೆ ಆದ್ಯತೆಯ 'ಗ್ಯಾಲರಿ ವೀಕ್ಷಣೆ' ಅನ್ನು ಪ್ರತಿ ಯೂನಿಕ್‌ ಮೀಟಿಂಗ್ ಐಡಿಗೆ ಸಹ ಸೇವ್‌ ಮಾಡಬಹುದಾಗಿದೆ. ಇದರಲ್ಲಿ ಹೋಸ್ಟ್ ಪ್ರತಿ ಮೀಟಿಂಗ್‌ನಲ್ಲಿ ಕ್ಯಾಮೆರಾ ಪ್ಲೇಸ್‌ಮೆಂಟ್ ಅನ್ನು ಬದಲಾಯಿಸುವ ಬದಲು ಪೂರ್ವನಿಗದಿಗಳಿಂದ ಲೋಡ್ ಮಾಡಲು ಸಾಧ್ಯವಾಗಲಿದೆ.

ಜೂಮ್ ಚಾಟ್

ಜೂಮ್ ಚಾಟ್

ಇನ್ನು ಜೂಮ್‌ ಅಪ್ಲಿಕೇಶನ್‌ನಲ್ಲಿ ಮಿಸ್ಡ್‌ ವಿಡಿಯೋ ಕಾಲ್‌ಗಳು ಈಗ ನಿಮ್ಮ ಚಾಟ್‌ನಲ್ಲಿ ಕೇಂದ್ರೀಕೃತವಾಗಿರುತ್ತವೆ. ಮಿಸ್ಡ್‌ ಕಾಲ್‌ ನೋಟಿಫಿಕೇಶನ್‌ ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮನ್ನು ಚಾನಲ್ ಅಥವಾ ಸಭೆಗೆ ನಿರ್ದೇಶಿಸುತ್ತದೆ. ಹೆಚ್ಚುವರಿಯಾಗಿ, ಜೂಮ್ ಚಾಟ್ ಮೂಲಕ ಹೊಂದಿಸಲಾದ ವೀಡಿಯೊಗಳನ್ನು ಈಗ ನಿಮ್ಮ ಮೊಬೈಲ್ ಡಿವೈಸ್‌ಗಳ ಮೂಲಕ ಸುಲಭವಾಗಿ ಪ್ರವೇಶಿಸಲು ಅವಕಾಶ ಸಿಗಲಿದೆ.

ಜೂಮ್ ರೂಮ್ಸ್‌

ಜೂಮ್ ರೂಮ್ಸ್‌

ಸೆನ್ಸಾರ್‌ ಮ್ಯಾಪ್‌ ಅನ್ನು ಬಳಸಿಕೊಂಡು ವರ್ಕ್‌ಸ್ಪೇಸ್‌ಗಳನ್ನು ಬುಕ್ ಮಾಡಲು ಅನುಮತಿಸುವ ವರ್ಕ್‌ಸ್ಪೇಸ್‌ ರಿಸರ್ವೇಶನ್‌ ಮೋಡ್‌ ಅನ್ನು ಸಹ ಪರಿಚಯಿಸಲಾಗಿದೆ. ಇದನ್ನು ಆನ್-ಸೈಟ್ ಅಥವಾ ರಿಮೋಟ್‌ನಲ್ಲಿ ಪ್ರವೇಶಿಸಬಹುದು. ಈ ತಿಂಗಳ ನಂತರ ಪಬ್ಲಿಕ್‌ ಬೀಟಾ ಪ್ರವೇಶದಲ್ಲಿ ಈ ಹೊಸ ಅಪ್ಡೇಟ್‌ ಅನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ. ಪ್ಲಾಟ್‌ಫಾರ್ಮ್ ಮ್ಯಾಕ್ ಮತ್ತು ವಿಂಡೋಸ್ ಬಳಕೆದಾರರಿಗೆ "ಲೋಕಲ್‌-ಓನ್ಲಿ ಸ್ಕ್ರೀನ್ ಶೇರ್" ಬೆಂಬಲವನ್ನು ಸಹ ಸೇರಿಸಿದೆ. ಈ ಫಿಚರ್ಸ್‌ ಈ ಹಿಂದೆ ಜೂಮ್ ರೂಮ್‌ಗಳ ಟೂಲ್ಸ್‌ಗಳಲ್ಲಿ ಮಾತ್ರ ಲಭ್ಯವಿತ್ತು. ಹೊಸ ಪ್ಲಾಟ್‌ಫಾರ್ಮ್‌ಗಳಲ್ಲಿ, ಇದನ್ನು HDMI ಸಂಪರ್ಕದ ಮೂಲಕ ಸಾಧಿಸಲಾಗುತ್ತದೆ.

ಜೂಮ್‌ ಫಾರ್‌ ಹೋಮ್‌

ಜೂಮ್‌ ಫಾರ್‌ ಹೋಮ್‌

ಜೂಮ್‌ ಅಪ್ಲಿಕೇಶನ್‌ ಇದೀಗ ಜೂಮ್ ಫಾರ್ ಹೋಮ್ ಎನ್ನುವ ಹೊಸ ಫೀಚರ್ಸ್‌ ಅನ್ನು ಐಪ್ಯಾಡ್‌ನಲ್ಲಿ ಪರಿಚಯಿಸಿದೆ. ಇದರಿಂದ ಬಳಕೆದಾರರಿಗೆ ಅವರ ರಿಮೋಟ್ ಅಥವಾ ಆನ್-ಸೈಟ್ ಕಾರ್ಯಸ್ಥಳಗಳಿಗೆ ಹೊಂದಿಕೊಳ್ಳುವ, ಜಾಗವನ್ನು ಉಳಿಸುವ ಸಾಧನವನ್ನು ಒದಗಿಸುತ್ತದೆ. ನಿಮ್ಮ ಕೋಣೆಯಲ್ಲಿ ಕಡಿಮೆ ಜಾಗವನ್ನು ತೆಗೆದುಕೊಳ್ಳುವ ಮತ್ತು ಉತ್ತಮ ಧ್ವನಿಯನ್ನು ನೀಡುವ ಗುರಿಯನ್ನು ಹೊಂದಿರುವ ಹೊಸ ಭಾವಚಿತ್ರ-ಆಧಾರಿತ ಫ್ರೇಮ್ ಕ್ರಿಯೆಟ್‌ ಮಾಡಲು ಇದು ಸಹಾಕಾರಿಯಾಗಿದೆ.

ಗೌಪ್ಯತೆ

ಇದಲ್ಲದೆ ಮೊಬೈಲ್‌ನಲ್ಲಿ, ಬಳಕೆದಾರರು ಈಗ ವೀಡಿಯೊ ಮೇಲ್‌ಗಳನ್ನು ಕಳುಹಿಸಬಹುದು. ಅದನ್ನು ಸ್ವೀಕರಿಸುವವರ ಧ್ವನಿಮೇಲ್ ಇನ್‌ಬಾಕ್ಸ್‌ಗೆ ನಿರ್ದೇಶಿಸಲಾಗುತ್ತದೆ. ಇತರೆ ಅಪ್‌ಡೇಟ್‌ಗಳಲ್ಲಿ Outlook ಮತ್ತು Google Calendar ಇಂಟಿಗ್ರೇಷನ್‌ಗಳಿಗಾಗಿ ಗೌಪ್ಯತೆ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ ಸಭೆ ಮತ್ತು ವೇಳಾಪಟ್ಟಿ ವಿವರಗಳನ್ನು ಹೋಸ್ಟ್‌ನಿಂದ ಖಾಸಗಿ ಎಂದು ಗುರುತಿಸಬಹುದಾಗಿದೆ. ಜೊತೆಗೆ ಕ್ಲೌಡ್ ರೆಕಾರ್ಡಿಂಗ್ ಅನ್ನು ಹಂಚಿಕೊಳ್ಳಲು ಮತ್ತು ನಿಮ್ಮ Amazon TV ಮೂಲಕ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಅನುಮತಿಸುತ್ತದೆ.

ಜೂಮ್

ಇನ್ನು ಇತ್ತೀಚಿಗೆ ಜೂಮ್ ಅಪ್ಲಿಕೇಶನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆಡಿಯೊ ನೋಟಿಫಿಕೇಶನ್‌ ಆನ್ / ಆಫ್ ಮಾಡುವ ಫಿಚರ್ಸ್‌ ಪರಿಚಯಿಸಿತ್ತು. ಇದರಿಂದ ಜೂಮ್ ಕರೆಯಲ್ಲಿರುವ ಬಳಕೆದಾರರು ತಾವು ಇಷ್ಟಪಡುವದನ್ನು ಆಧರಿಸಿ ಆಡಿಯೊ ನೋಟಿಫಿಕೇಶನ್‌ಗಳನ್ನು ಸುಲಭವಾಗಿ ಟಾಗಲ್ ಮಾಡಬಹುದು. ಕರೆ ಪ್ರಾರಂಭವಾಗುವ ಮೊದಲು ಅಥವಾ ಸಭೆಯ ಸಮಯದಲ್ಲಿಯೂ ಇದನ್ನು ಮಾಡಬಹುದು. ನೀವು ಆಡಿಯೊ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿದರೆ, ಪ್ರತಿ ಬಾರಿ ಬಳಕೆದಾರರು ಹೊರಡುವಾಗ ಅಥವಾ ಜೂಮ್ ಸಭೆಗೆ ಪ್ರವೇಶಿಸಿದಾಗ ನಿಮಗೆ ಆಡಿಯೊ ಪ್ರಾಂಪ್ಟ್ ಸಿಗುವುದಿಲ್ಲ. ಯಾರನ್ನಾದರೂ ಕಾಯುತ್ತಿರುವ ಮತ್ತು ಈ ಮಧ್ಯೆ ಇತರ ಕೆಲಸಗಳನ್ನು ಮಾಡುವ ಬಳಕೆದಾರರಿಗೆ ಈ ವೈಶಿಷ್ಟ್ಯವು ಮುಖ್ಯವಾಗಿದೆ. ಯಾರಾದರೂ ಜೂಮ್ ಕರೆಯನ್ನು ಪ್ರವೇಶಿಸಿದ್ದಾರೆ ಎಂಬ ಎಚ್ಚರಿಕೆಯಂತೆ ಆಡಿಯೊ ಟ್ಯೂನ್ ಕಾರ್ಯನಿರ್ವಹಿಸುತ್ತದೆ, ನೀವು ಪರದೆಯನ್ನು ನೋಡದಿದ್ದಾಗ ವಿಶೇಷವಾಗಿ ಉಪಯುಕ್ತವಾಗಿದೆ.

ಜೂಮ್ ಆಡಿಯೊ ನೋಟಿಫಿಕೇಶನ್‌ ಆನ್ / ಆಫ್ ಮಾಡಲು ಈ ಕ್ರಮ ಅನುಸರಿಸಿ

ಜೂಮ್ ಆಡಿಯೊ ನೋಟಿಫಿಕೇಶನ್‌ ಆನ್ / ಆಫ್ ಮಾಡಲು ಈ ಕ್ರಮ ಅನುಸರಿಸಿ

* ವೆಬ್ ಬ್ರೌಸರ್‌ನಿಂದ ನಿಮ್ಮ ಜೂಮ್ ಖಾತೆಗೆ ನೀವು ಲಾಗ್ ಇನ್ ಆಗಿದ್ದರೆ, ಎಡಗೈ ಕಾಲಮ್‌ನಲ್ಲಿ ಇರಿಸಲಾಗಿರುವ ಸೆಟ್ಟಿಂಗ್‌ಗಳ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಜೂಮ್ ಅಪ್ಲಿಕೇಶನ್‌ನಲ್ಲಿದ್ದರೆ, ನಿಮ್ಮ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ> ಸೆಟ್ಟಿಂಗ್‌ಗಳನ್ನು ಆರಿಸಿ> ಹೆಚ್ಚಿನ ಸೆಟ್ಟಿಂಗ್‌ಗಳನ್ನು ವೀಕ್ಷಿಸಿ.
* ಸೆಟ್ಟಿಂಗ್‌ಗಳಲ್ಲಿ, ಎಡ ಕಾಲಮ್‌ನಲ್ಲಿ ಇನ್ ಮೀಟಿಂಗ್ (ಬೇಸಿಕ್) ಕ್ಲಿಕ್ ಮಾಡಿ ಮತ್ತು ಕೆಳಗೆ ಸ್ಕ್ರಾಲ್ ಮಾಡಿ. ‘Sound Notification When Someone Joins or Leaves' ಎಂಬ ಆಯ್ಕೆಯನ್ನು ಹುಡುಕಿ. ನಿಮ್ಮ ಆದ್ಯತೆಗೆ ಅನುಗುಣವಾಗಿ ಈ ವೈಶಿಷ್ಟ್ಯವನ್ನು ಆನ್ ಅಥವಾ ಆಫ್ ಟಾಗಲ್ ಮಾಡಿ.
* ನೀವು ಅದನ್ನು ಟಾಗಲ್ ಮಾಡಿದರೆ, ನೀವು ಮೂರು ಆಯ್ಕೆಗಳಿಂದ ಆಯ್ಕೆ ಮಾಡಬಹುದು. ಮೊದಲನೆಯದು ಎಲ್ಲರಿಗೂ ಧ್ವನಿಯನ್ನು ಪ್ಲೇ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಎರಡನೆಯದು ಆತಿಥೇಯರು ಮತ್ತು ಸಹ-ಹೋಸ್ಟ್‌ಗಳಿಗೆ ಮಾತ್ರ, ಮತ್ತು ಕೊನೆಯದು ಬಳಕೆದಾರರ ಧ್ವನಿಯನ್ನು ಅಧಿಸೂಚನೆಯಂತೆ ರೆಕಾರ್ಡ್ ಮಾಡಲು ನಿಮಗೆ ಅನುಮತಿಸುತ್ತದೆ. ಇದು ಫೋನ್ ಮೂಲಕ ಸೇರುವ ಬಳಕೆದಾರರಿಗೆ ಮಾತ್ರ.

Most Read Articles
Best Mobiles in India

English summary
Zoom is rolling out some new features with its latest update.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X