ಜೂಕ್ ಕಂಪೆನಿಯಿಂದ ಹೊಸ ರಾಕರ್ ಥಂಡರ್‌ಬಡ್ಸ್ ಇಯರ್‌ಬಡ್ಸ್ ಲಾಂಚ್!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ತೆಗೆದುಕೊಂಡರೆ ಅದರ ಜೊತೆಗೆ ಇಯರ್‌ಫೋನ್ ಬರೋದಿಲ್ಲ. ಸ್ಮಾರ್ಟ್‌ಫೋನ್ ಜೊತೆಗೆ ಇಯರ್‌ಫೋನ್ ಕೊಡುತ್ತಿದ್ದ ದಿನಗಳ ಕಳೆದು ಹೋಗಿವೆ. ಈಗ ಏನಿದ್ದರೂ ನಿಮಗೆ ಇಷ್ಟವಾದ ಸ್ಮಾರ್ಟ್ ಇಯರ್ ಬಡ್ಸ್,ಸ್ಮಾರ್ಟ್ ಹೆಡ್‌ಫೊನ್,ವೈರ್‌ಲೆಸ್ ಇಯರ್‌ಫೋನ್‌ಗಳನ್ನ ತೆಗೆದುಕೊಳ್ಳುವ ಜಮಾನ ಬಂದಿದೆ. ಇದೇ ಕಾರಣಕ್ಕೆ ಈಗಾಗ್ಲೆ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪೆನಿಗಳ ಇಯರ್‌ಬಡ್ಸ್,ಇಯರ್‌ಫೋನ್‌ಗಳು ಲಭ್ಯವಿವೆ. ಆದರೂ ಗ್ರಾಹಕರು ತಮಗಿಷ್ಟವಾದ ಬ್ರ್ಯಾಂಡ್‌ಗಳ ಇಯರ್ ಬಡ್ಸ್,ಇಯರ್‌ಫೋನ್‌ಗಳನ್ನೇ ಖರೀದಿ ಮಾಡುತ್ತಾರೆ.

ಹೌದು ಟೆಕ್ ಮಾರುಕಟ್ಟೆಯಲ್ಲಿ ಇದೀಗ ಇಯರ್‌ಬಡ್ಸ್‌ಗಳ ಜಮಾನ. ಅದರಲ್ಲೂ ಟ್ರೂಲಿ ವೈರ್‌ಲೆಸ್ ಇಯರ್‌ಬಡ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಸ್ಮಾರ್ಟ್‌ಫೋನ್‌ಗಳಿಗೆ ತಕ್ಕಂತೆ ವಿನ್ಯಾಸಗೊಂಡಿರುವ ಇಯರ್‌ಬಡ್ಸ್‌ಗಳು ಬಳಕೆಗೂ ಸೂಕ್ತವಾಗಿವೆ. ಇನ್ನು ಈಗಾಗ್ಲೆ ಹಲವು ಮಾದರಿಯ ಇಯರ್‌ಬಡ್ಸ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿರುವ ಜೂಕ್ ಕಂಪೆನಿ ಹೊಸ ರಾಕರ್ ಥಂಡರ್ ಬಡ್ಸ್ ಅನ್ನ ಬಿಡುಗಡೆ ಮಾಡಿದೆ.

ಇಯರ್‌ಬಡ್ಸ್‌ನ ವಿಶೇಷತೆ
ಫ್ರೆಂಚ್ ಆಡಿಯೊ ಬ್ರಾಂಡ್ ಜೂಕ್ ಕಂಪೆನಿಯ ಹೊಸ ರಾಕರ್ ಥಂಡರ್‌ಬಡ್ಸ್ ಟ್ರೂಲಿ ವೈರ್‌ಲೆಸ್ ಇಯರ್‌ಬಡ್ಸ್ 3200mAh ಬ್ಯಾಟರಿಯನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್‌ನೊಂದಿಗೆ ಬರುತ್ತದೆ. ಅಲ್ಲದೆ ಇದರಿಂದ ಇಯರ್‌ಬಡ್ಸ್‌ಗಳನ್ನ 25 ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಇದು 100 ಗಂಟೆಗಳ ವಿಸ್ತೃತ ಬ್ಯಾಟರಿ ಅವಧಿಯನ್ನು ಹೊಂದಿರುವ ಇಯರ್‌ಬಡ್ಸ್ ಆಗಿದ್ದು, ಒಮ್ಮೆ ಚಾರ್ಜ್ ಮಾಡಿ ಪ್ರತಿದಿನ 2 ಗಂಟೆಗಳ ಕಾಲ ಮಾತ್ರ ಬಳಸಿದರೆ 2 ತಿಂಗಳವರೆಗೆ ಬ್ಯಾಟರಿ ಚಾರ್ಜ್ ಇರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇಯರ್ ಬಡ್ಸ್‌ನ ವಿನ್ಯಾಸ
ಜೂಕ್ ರಾಕರ್ ಥಂಡರ್‌ಬಡ್ಸ್ ದೈನಂದಿನ ಬಳಕೆಗೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಇಯರ್ ಬಡ್ಸ್‌ಗಳಲ್ಲಿ ಡ್ಯುಯಲ್-ಮೈಕ್ರೊಫೋನ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿ ಇಯರ್‌ಬಡ್ ನಲ್ಲಿಯೂ ಕರೆಗಳನ್ನ ಸ್ವೀಕರಿಸಬಹುದಾಗಿದೆ. ಅಷ್ಟೇ ಅಲ್ಲ ಪ್ಲೇಬ್ಯಾಕ್ ಮ್ಯೂಸಿಕ್ ಕೇಳುವುದಕ್ಕೂ ಈ ಇಯರ್ ಬಡ್‌ಗಳನ್ನ ಪ್ರತ್ಯೇಕವಾಗಿ ಬಳಸಬಹುದು.

ಹೊಸ ಫೀಚರ್ಸ್‌ಗಳೇನು
ಈ ಇಯರ್‌ಬಡ್ಸ್‌ಗಳು ಎಚ್‌ಡಿ ಸೌಂಡ್ಸ್ ಮತ್ತು ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತವೆ. ಈ ಇಯರ್‌ಬಡ್‌ಗಳು ಕಿವಿಗಳಲ್ಲಿ ಆರಾಮವಾಗಿ ಹೊಂದಿಕೊಳ್ಳುವ ದಕ್ಷತಾಶಾಸ್ತ್ರದಂತೆ ಹೊಸದಾಗಿ ವಿನ್ಯಾಸ ಮಾಡಲಾಗಿದೆ. ಇವು ತುಂಬಾ ಹಗುರವಾಗಿದ್ದು, ದೈನಂದಿನ ಬಳಕೆಗೆ ಸುಕ್ತವಾಗಿದೆ. ಅಲ್ಲದೆ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ ಇನ್ನು ಈ ಇಯರ್‌ಬಡ್ ಐಪಿಎಕ್ಸ್ 5 ವಾಟರ್ ಪ್ರೂಪ್ ವ್ಯವಸ್ಥೆ ಹೊಂದಿದ್ದು, ಬೆವರು ನಿರೋದಕ ವ್ಯವಸ್ಥೆಯನ್ನ ಹೊಂದಿದೆ.

ಇತರೆ
ಮ್ಯೂಸಿಕ್ ಕಂಟ್ರೋಲ್, ಕಾಲ್ ರಿಡಯಲಿಂಗ್ ನಂತಹ ಅನೇಕ ಕಾರ್ಯಗಳನ್ನು ನಿರ್ವಹಿಸಲು ಈ ಇಯರ್‌ಬಡ್‌ಗಳಲ್ಲಿ ಇವುಗಳಲ್ಲಿ ಟಚ್ ಕಂಟ್ರೋಲ್ ಗೆಸ್ಚರ್‌ಗಳನ್ನು ಸಹ ನೀಡಲಾಗಿದೆ. ಸದ್ಯ ಈ ಇಯರ್‌ಬಡ್‌ಗಳು ಆಂಡ್ರಾಯ್ಡ್ ಫೋನ್‌ಗಳಲ್ಲಿನ ಗೂಗಲ್ ಅಸಿಸ್ಟೆಂಟ್ ಮತ್ತು ಐಒಎಸ್ ಸಾಧನಗಳಲ್ಲಿ ಸಿರಿ ಎರಡನ್ನೂ ಬೆಂಬಲಿಸಲಿದ್ದು, ವಾಯ್ಸ್ ಅಸಿಸ್ಟೆಂಟ್ ಮೂಲಕ ನಿಯಂತ್ರಿಸಬಹುದಾಗಿದೆ.

ಬೆಲೆ ಮತ್ತು ಲಭ್ಯತೆ
ಜೂಕ್ ರಾಕರ್ ಥಂಡರ್ ಟ್ರೂಲಿ ವೈರ್‌ಲೆಸ್ ಇಯರ್‌ಬಡ್‌ನ ಬೆಲೆ 2,999.ರೂ. ಆಗಿದ್ದು. ಪ್ರಮುಖ ಆನ್‌ಲೈನ್ ಇ-ಕಾಮರ್ಸ್ ತಾಣಗಳು ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಖರೀದಿಸಲು ಲಭ್ಯವಿದೆ.


Click it and Unblock the Notifications








