Home
ಸುದ್ದಿಜಾಲ

ಈ ಫೋನ್‌ನಲ್ಲಿದೆ ಐಫೋನ್‌ ಮಾದರಿಯ ಕ್ಯಾಮೆರಾ! ಆದರೆ ಐಫೋನ್‌ ಅಲ್ಲ!

ಟೆಕ್‌ ಮಾರುಕಟ್ಟೆಯಲ್ಲಿ ZTE ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಸ್ಥಾನವಿದೆ. ವಿಶಿಷ್ಟ ಲುಕ್‌ ಹಾಗೂ ನವೀನ ಮಾದರಿಯ ವಿನ್ಯಾಸದಿಂದಾಗಿ ZTE ಮೊಬೈಲ್‌ಗಳು ಸೈ ಎನಿಸಿಕೊಂಡಿವೆ. ಇದೀಗ ZTE ಕಂಪೆನಿ ಹೊಸ ZTE ಆಕ್ಸನ್ 50 ಲೈಟ್ ಮೊಬೈಲ್‌ ಬಿಡುಗಡೆ ಮಾಡಿದೆ. ಇದು ಆಪಲ್‌ ಐಫೋನ್‌ ಮಾದರಿಯ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದೆ.

ಹೌದು, ZTE ಆಕ್ಸನ್ 50 ಲೈಟ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ತನ್ನ ಆಪಲ್‌ ಮಾದರಿಯ ಕ್ಯಾಮೆರಾ ಸೆಟ್‌ಅಪ್‌ನಿಂದಾಗಿ ಗಮನಸೆಳೆದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಈ ಫೋನ್‌ನಲ್ಲಿದೆ ಐಫೋನ್‌ ಮಾದರಿಯ ಕ್ಯಾಮೆರಾ! ಆದರೆ ಐಫೋನ್‌ ಅಲ್ಲ!

ZTE ಆಕ್ಸನ್ 50 ಲೈಟ್ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ZTE ಆಕ್ಸನ್ 50 ಲೈಟ್ ಸ್ಮಾರ್ಟ್‌ಫೋನ್‌ 6.6 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಪ್ಯಾನೆಲ್ ಟಿಯರ್‌ಡ್ರಾಪ್ ನಾಚ್‌ ವಿನ್ಯಾಸವನ್ನು ಹೊಂದಿದ್ದು, ಡಿಸ್‌ಪ್ಲೇ 2408 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ZTE ಆಕ್ಸನ್ 50 ಲೈಟ್ ಪ್ರೊಸೆಸರ್‌ ಯಾವುದು?
ZTE ಆಕ್ಸನ್ 50 ಲೈಟ್ ಸ್ಮಾರ್ಟ್‌ಫೋನ್‌ ಇನ್ನು ಹೆಸರಿಸದ ಆಕ್ಟಾ ಕೋರ್‌ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ನಲ್ಲಿ ಕಾರ್ಯನಿರ್ವಹಿಸಲಿದ್ದು, ZTE ಯ ಸ್ವಂತ MyOS UI ನೊಂದಿಗೆ ರನ್‌ ಆಗಲಿದೆ. ಹಾಗೆಯೇ 4GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ 10GB ವರ್ಚುವಲ್ RAM ಅನ್ನು ಒಳಗೊಂಡಿದೆ.

ZTE ಆಕ್ಸನ್ 50 ಲೈಟ್ ಕ್ಯಾಮೆರಾ ಸೆಟ್‌ಅಪ್‌
ZTE ಆಕ್ಸನ್ 50 ಲೈಟ್ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಕ್ಯಾಮೆರಾ ಮಾಡ್ಯೂಲ್‌ ನೋಡುವುದಕ್ಕೆ ಥೇಟ್‌ ಆಪಲ್‌ ಐಫೋನ್‌ ಮಾದರಿಯಂತಿದೆ.

ZTE ಆಕ್ಸನ್ 50 ಲೈಟ್ ಬ್ಯಾಟರಿ ಮತ್ತು ಇತರೆ
ZTE ಆಕ್ಸನ್ 50 ಲೈಟ್ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಯುಎಸ್‌ಬಿ ಸಿ ಪೋರ್ಟ್‌, ಡ್ಯುಯಲ್ ಸಿಮ್, 5 ಜಿ, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.2, ಜಿಪಿಎಸ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಒಳಗೊಂಡಿದೆ.

ZTE ಆಕ್ಸನ್‌ 50 ಲೈಟ್‌ ಬೆಲೆ ಮತ್ತು ಲಭ್ಯತೆ
ZTE ಆಕ್ಸನ್‌ 50 ಲೈಟ್‌ ಸ್ಮಾರ್ಟ್‌ಫೋನ್‌ ಪ್ರಸ್ತುತ ಮೆಕ್ಸಿಕೋದಲ್ಲಿ ಬಿಡುಗಡೆ ಆಗಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ ಮೆಕ್ಸಿಕೋದಲ್ಲಿ MXN 4299 (ಅಂದಾಜು 20,687ರೂ)ಬೆಲೆಯನ್ನು ಹೊಂದಿದೆ. ಇದು ಹಸಿರು, ಕಪ್ಪು ಮತ್ತು ನೇರಳೆ ಮುಂತಾದ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದು ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
ZTE Axon 50 Lite with triple camera module launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+