Home
ಸುದ್ದಿಜಾಲ

ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮಾಡ್ಯೂಲ್‌ ನೋಡಿದ್ರೆ ಫಿದಾ ಆಗ್ತೀರಾ; ಇದರ ಡಿಸೈನ್‌ ಫುಲ್‌ ಡಿಫರೆಂಟ್‌!

ಮೊಬೈಲ್‌ ಮಾರುಕಟ್ಟೆಯಲ್ಲಿರುವ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ZTE ಕಂಪೆನಿ ಕೂಡ ಒಂದಾಗಿದೆ. ZTE ಕಂಪೆನಿ ತನ್ನ ಬ್ಲೇಡ್‌ ಸರಣಿ ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಇದೀಗ ಹೊಸ ZTE ಬ್ಲೇಡ್‌ A73 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್‌ ರೇಟ್‌ ಬೆಂಬಲಿಸುವ ಡಿಸ್‌ಪ್ಲೇ ಒಳಗೊಂಡಿದೆ.

ಹೌದು, ZTE ಬ್ಲೇಡ್‌ A73 5G ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ಬ್ಲೇಡ್‌ A72 5G ಸ್ಮಾರ್ಟ್‌ಫೋನ್‌ನ ಉತ್ತರಾಧಿಕಾರಿಯಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ಯುನಿಸಾಕ್ T760SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮಾಡ್ಯೂಲ್‌ ನೋಡಿದ್ರೆ ಫಿದಾ ಆಗ್ತೀರಾ

ZTE ಬ್ಲೇಡ್‌ A73 5G ಡಿಸ್‌ಪ್ಲೇ ರಚನೆ
ZTE ಬ್ಲೇಡ್‌ A73 5G ಸ್ಮಾರ್ಟ್‌ಫೋನ್‌ 6.52 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ನೀಡಲಿದೆ. ಜೊತೆಗೆ ಭದ್ರತೆಗಾಗಿ,ಸ್ಮಾರ್ಟ್‌ಫೋನ್‌ನಲ್ಲಿ s ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ನೀಡಲಾಗಿದೆ.

ZTE ಬ್ಲೇಡ್‌ A73 5G ಪ್ರೊಸೆಸರ್‌ ಯಾವುದು?
ZTE ಬ್ಲೇಡ್‌ A73 5G ಸ್ಮಾರ್ಟ್‌ಫೋನ್‌ ಯುನಿಸಾಕ್ T760SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್‌ 4 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ 4 GB ವರ್ಚುವಲ್ RAM ಅನ್ನು ಸಹ ಬೆಂಬಲಿಸಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ.

ZTE ಬ್ಲೇಡ್‌ A73 5G ಕ್ಯಾಮೆರಾ ಸೆಟ್‌ಅಪ್‌
ZTE ಬ್ಲೇಡ್‌ A73 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ ಹಾಗೂ LED ಫ್ಲ್ಯಾಷ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮಾರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ ಕ್ಯಾಮೆರಾ ಫೀಚರ್ಸ್‌ಗಳಲ್ಲಿ HDR, ಪನೋರಮಾ ಆಯ್ಕೆಗಳನ್ನು ಕಾಣಬಹುದಾಗಿದೆ.

ZTE ಬ್ಲೇಡ್‌ A73 5G ಬ್ಯಾಟರಿ ಮತ್ತು ಇತರೆ ಸೌಲಭ್ಯ
ZTE ಬ್ಲೇಡ್‌ A73 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಾಗಿದೆ. ಇದು ವೇಗದ ಚಾರ್ಜಿಂಗ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, WI-FI 802.11ac, ಬ್ಲೂಟೂತ್ 5.2, GPS, NFC, USB-C ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ ಅನ್ನು ಒಳಗೊಂಡಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌, ಕಂಪಾಸ್‌ ಅನ್ನು ಬೆಂಬಲಿಸಲಿದೆ.

ZTE ಬ್ಲೇಡ್‌ A73 5G ಬೆಲೆ ಮತ್ತು ಲಭ್ಯತೆ
ಪ್ರಸ್ತುತ ಈ ಸ್ಮಾರ್ಟ್‌ಫೋನ್‌ ಮಲೇಷ್ಯಾದಲ್ಲಿ ಮಾತ್ರ ಅನಾವರಣಗೊಂಡಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ ಮೆಲೇಷ್ಯಾ ಮಾರುಕಟ್ಟೆಯಲ್ಲಿ MYR 749 (ಅಂದಾಜು 13,576ರೂ)ಬೆಲೆಯನ್ನು ಹೊಂದಿದೆ. ಇದು ಬೂದು ಬಣ್ಣದ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೂ ಕೂಡ ಎಂಟ್ರಿ ನೀಡುವ ನಿರೀಕ್ಷೆಯಿದೆ. ಆದರೆ ಇದು ಯಾವಾಗ ಭಾರತಕ್ಕೆ ಬರಲಿದೆ ಅನ್ನೊದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
ZTE Blade A73 5G with Unisoc T760 chip battery launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+