IPL ವೀಕ್ಷಕರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಿಯೋದಿಂದ ವಿಶೇಷ ಸೌಲಭ್ಯ!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ವಿಶಿಷ್ಟ ಐಪಿಎಲ್ ಕ್ರೀಡಾ ಅನುಭವವನ್ನು ಒದಗಿಸುವ ಸಲುವಾಗಿ ರಿಲಯನ್ಸ್ ಜಿಯೋ ತನ್ನ ಜಿಯೋ ಟ್ರೂ 5ಜಿ ನೆಟ್‌ವರ್ಕ್ ಸೇವೆಯನ್ನು ಉನ್ನತೀಕರಿಸಿರುವುದಾಗಿ ತಿಳಿಸಿದೆ. ಈ ಐಪಿಎಲ್ ಕ್ರಿಕೆಟ್ ಋತುವಿನಲ್ಲಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2,000 ಕ್ಕೂ ಹೆಚ್ಚು ಮೀಸಲಾದ ಹೊಸ ಸೆಲ್‌ಗಳನ್ನು ನಿಯೋಜಿಸುವ ಮೂಲಕ, ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯುತ್ತಮ ಮೊಬೈಲ್ ಬ್ರಾಡ್‌ಬ್ಯಾಂಡ್ ಅನುಭವವನ್ನು ನೀಡಲು ಕಂಪನಿಯು ನಿರ್ಧರಿಸಿದೆ. ಐಪಿಎಲ್ ಕ್ರೀಡೆಯಂತಹ ಹೆಚ್ಚಿನ ಜನಸಂದಣಿಯ ನಡುವೆಯೂ, ಈ ಹೊಸ ಕ್ರಮದಿಂದಾಗಿ ಐಪಿಎಲ್ ಅಭಿಮಾನಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿಕೊಂಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಿಯೋ ಸಂಸ್ಥೆ, ಜಿಯೋದ ಸುಧಾರಿತ 5ಜಿ ಸ್ಟ್ಯಾಂಡಲೋನ್ (ಎಸ್‌ಎ) ಆರ್ಕಿಟೆಕ್ಚರ್, ನೆಟ್‌ವರ್ಕ್ ಸ್ಲೈಸಿಂಗ್ ಸಾಮರ್ಥ್ಯ ಮತ್ತು 5ಜಿ ಕ್ಯಾರಿಯರ್ ಒಗ್ಗೂಡುವುದರಿಂದ, ಈ ಕಾರ್ಯತಂತ್ರವು ಹೆಚ್ಚಿನ ಜನಸಂದಣಿಯಲ್ಲೂ ಸಹ ಕ್ರೀಡಾಪ್ರಿಯರು ತಡೆರಹಿತ ಮತ್ತು ಉತ್ತಮ 5ಜಿ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ. ಈ ಕಾರಣದಿಂದದಾಗಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2,000 ಕ್ಕೂ ಹೆಚ್ಚು ಮೀಸಲಾದ ಸೆಲ್‌ಗಳನ್ನು ನಿಯೋಜಿಸಲಾಗಿದೆ. ಈ ಮೂಲಸೌಕರ್ಯ ಹೂಡಿಕೆಯ ಮೂಲಕ ಹೆಚ್ಚಿನ ಸಾಂದ್ರತೆಯ ಜನಸಂದಣಿ ಮತ್ತು ಲೈವ್ ಕ್ರಿಕೆಟ್ ಪಂದ್ಯಗಳಲ್ಲಿ ಹೆಚ್ಚುತ್ತಿರುವ ಡೇಟಾ ಬೇಡಿಕೆಗಳ ಮಧ್ಯೆಯೂ ತಡೆರಹಿತ ಹಾಗೂ ಉತ್ತಮ 5ಜಿ ಕಾರ್ಯಕ್ಷಮತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದಾಗಿ ಜಿಯೋ ಹೇಳಿಕೊಂಡಿದೆ.
ಓಕ್ಲಾ ವರದಿಯ ಪ್ರಕಾರ, ಜಿಯೋ ಸರಾಸರಿ ಡೌನ್‌ಲೋಡ್ ವೇಗ 201.87 Mbps ನಷ್ಟು ಸಾಧಿಸಿದೆ, ಇದು ಇತರೆ ಟೆಲಿಕಾಂ ಕಂಪೆನಿಗಳ ವೇಗವನ್ನು ಮೀರಿಸುತ್ತದೆ. ಹೆಚ್ಚಿನ ಬಳಕೆದಾರರ ನಡುವೆಯೂ, ಜಿಯೋ ತನ್ನ ನೆಟ್‌ವರ್ಕ್ ನಾಯಕತ್ವವನ್ನು ತೋರಿಸಿದೆ. ಐಸಿಸಿ ಕ್ರಿಕೆಟ್ ಫೈನಲ್ ಸಮಯದಲ್ಲಿ, ಜಿಯೋ 50 ಕೋಟಿ ಜಿಬಿ ಡೇಟಾ ಟ್ರಾಫಿಕ್ ಅನ್ನು ಪ್ರೊಸೆಸ್ ಮಾಡಿತು, ಇದು ಈ ಹಿಂದೆ ಕಂಡಿರದ ಡೇಟಾ ನಿರ್ವಹಣೆಯ ಸಾಮರ್ಥ್ಯವನ್ನು ತೋರಿಸುತ್ತದೆ. ಇದಲ್ಲದೆ, ಪ್ರಯಾಗರಾಜ್‌ನಲ್ಲಿ ಇತ್ತೀಚೆಗೆ ನಡೆದ ಮಹಾಕುಂಭಮೇಳದಲ್ಲಿ ಜಾಗತಿಕವಾಗಿ ಈ ಹಿಂದೆಂದೂ ಕಂಡಿರದಷ್ಟು ದೊಡ್ಡ ಜನಸಂದಣಿ ಕಂಡುಬಂದಿತು. ಇಲ್ಲಿಯೂ ಕೂಡ ನಮ್ಮ 5ಜಿ ಕಾರ್ಯಕ್ಷಮತೆಯನ್ನು ನೀಡುವ ಬದ್ಧತೆಯು ಮತ್ತಷ್ಟು ದೃಢವಾಗಿತ್ತು ಎಂದು ಜಿಯೋ ಸಂಸ್ಥೆ ಹೇಳಿಕೊಂಡಿದೆ.

ಜಿಯೋದ ತಾಂತ್ರಿಕ ಸಾಮರ್ಥ್ಯವು ಅದರ ಬೌದ್ಧಿಕ ಆಸ್ತಿ ಪೋರ್ಟ್‌ಫೋಲಿಯೊದಿಂದ ಬೆಂಬಲಿತವಾಗಿದೆ, ಇದರಲ್ಲಿ ಸ್ಥಳೀಯ 5ಜಿ ಕೋರ್, ಎಐ/ಎಂಎಲ್ ಪ್ಲಾಟ್‌ಫಾರ್ಮ್‌ಗಳು, ಕ್ಲೌಡ್ ಆರ್ಕೆಸ್ಟ್ರೇಶನ್, ಕ್ಲೌಡ್ ಮೂಲಸೌಕರ್ಯ ನಿಯೋಜನೆ ಮತ್ತು ಕ್ಲೌಡ್-ಸ್ಥಳೀಯ ಪ್ರೋಬಿಂಗ್ ಸಲ್ಯೂಷನ್‌ಗಳು ಸೇರಿವೆ. ಈ ನೆಟ್‌ವರ್ಕ್ ಮೂಲಸೌಕರ್ಯದ ಮೇಲಿನ ಸಂಪೂರ್ಣ ನಿಯಂತ್ರಣವು ಉತ್ತಮ ಮತ್ತು ವಿಶ್ವಾಸಾರ್ಹ 5ಜಿ ಅನುಭವವನ್ನು ಒದಗಿಸುತ್ತದೆ. ಈ ವಿಧಾನವು ಡೇಟಾ ವೇಗವನ್ನು ಹೆಚ್ಚಿಸುತ್ತೆ ಮತ್ತು ಸಂಪರ್ಕವನ್ನು ಸುಗಮಗೊಳಿಸುತ್ತದೆ, ಇದರಿಂದ ಐಪಿಎಲ್ಆ ಅಭಿಮಾನಿಗಳು ತಮ್ಮ ಲೈವ್ ಅನುಭವಗಳನ್ನು ಅಡೆತಡೆಯಿಲ್ಲದೆ ಹಂಚಿಕೊಳ್ಳಬಹುದು ಎಂದು ರಿಲಯನ್ಸ್ ಜಿಯೋ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.


Click it and Unblock the Notifications








