ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ..!

Written By: Lekhaka

ದಿನ ಕಳೆದಂತೆ ಕೃತಕ ಬುದ್ಧಿಮತ್ತೆ ಹೆಚ್ಚಿನ ಖ್ಯಾತಿಯನ್ನ ಪಡೆದುಕೊಳ್ಳುತ್ತಿದ್ದು, ಹಲವು ಕಾರ್ಯಗಳಿಗೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ UK ಸಂಶೋಧಕರ ತಂಡವೊಂದು ಕೃತಕ ಬುದ್ದಿ ಮತ್ತೆಯನ್ನು ಹೃದಯ ಸಂಬಂಧಿ ಕಾಯಿಲೆಗಳನ್ನು ಮತ್ತು ಲನ್ಸ್ ಕ್ಯಾನ್ಸರ್ ಪತ್ತೆ ಹಚ್ಚಿವ ಸಲುವಾಗಿ ಬಳಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ..!

UK ಸಂಶೋಧಕರ ತಂಡವೂ ಅಭಿವೃದ್ಧಿ ಪಡಿಸಿರುವ ಕೃತಕ ಬುದ್ದಿಯೂ ಅತೀ ಸುಲಭವಾಗಿ ಮತ್ತು ಖಚಿತವಾಗಿ ಹೃದಯ ಸಂಬಂಧಿ ಕಾಯಿಲೆಗಳನ್ನು ಮತ್ತು ಲನ್ಸ್ ಕ್ಯಾನ್ಸರ್ ಪತ್ತೆ ಮಾಡಲಿದೆ ಎನ್ನಲಾಗಿದೆ. ಪರಿಣಿತ ವೈದ್ಯರಿಗೂ ಸವಾಲು ಎಸೆಯುವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಟೆಕ್ನಾಲಜಿ ಎನ್ನುವುದು ಎಲ್ಲಾ ವಿಭಾಗದಲ್ಲಿ ಬಳಕೆಯಾಗುತ್ತಿದ್ದು, UK ಸಂಶೋಧಕರ ತಂಡವೂ ಅಭಿವೃದ್ಧಿ ಪಡಿಸಿರುವ ಕೃತಕ ಬುದ್ದಿಯೂ ಇದೇ ಮಾದರಿಯಲ್ಲಿ ವೈದ್ಯ ಲೋಕದ ಆಚ್ಚರಿಗಳಿಗೆ ಸಾಕ್ಷಿಯಾಗುವುದಲ್ಲದೇ ಹಲವು ಜೀವಗಳ ಉಳಿಸುವ ಕಾರ್ಯಕ್ಕೆ ವೈದ್ಯರಿಗೆ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

UK ಸಂಶೋಧಕರ ತಂಡವೂ ಅಭಿವೃದ್ಧಿ ಪಡಿಸಿರುವ ಕೃತಕ ಬುದ್ದಿಯೂ ಇವರೆಗೂ ಸುಮಾರು 1000 ರೋಗಿಗಳನ್ನು ಪರೀಕ್ಷಿಸಿರುವುದಲ್ಲದೇ ಎಲ್ಲಾ ಮಾಹಿತಿಗಳನ್ನು ಸ್ಟೋರ್ ಮಾಡಿಕೊಂಡಿದ್ದು, ಸರಿ ತಪ್ಪುಗಳನ್ನು ತುಲನೆ ಮಾಡಲಿದೆ ಎನ್ನಲಾಗಿದೆ. ಇದು ವೈದ್ಯರಿಗೆ ಮತ್ತು ರೋಗಿಗಳಿಗೆ ಸಹಾಯಕಾರಿಯಾಗಲಿದೆ.

ಏನೀದು ಗೂಗಲ್ ಗೋ ಫೋನ್! ಬೆಲೆ ಏಕೆ ಕೇವಲ ರೂ.2000? ಇಲ್ಲಿದೇ ಉತ್ತರ!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಮನು ಕುಲದ ಉಳಿವಿಗೆ ವಿವಿಧ ಯಂತ್ರಗಳು ಮತ್ತು ತಂತ್ರಗಳನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಪರೀಕ್ಷಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಮಾನವನ ಎಲ್ಲಾ ಕಾಯಿಲೆಗೂ ಯಂತ್ರಗಳೇ ಮದ್ದು ನೀಡಲಿವೆ ಎನ್ನಲಾಗಿದೆ.
Read more about:
English summary
Artifical Intelligence System Can Diagnose Heart Disease And Cancer Easily
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot