Home
Scitech

ಚಂದ್ರಯಾನ-2 ಚಂದ್ರನ ಕಕ್ಷೆಗೆ ತಲುಪುವುದು ಯಾವಾಗ ಗೊತ್ತಾ?

By Gizbot Bureau

ಭಾರತದ ಎರಡನೇ ಚಂದ್ರನೆಡೆಗಿನ ಪ್ರಯಾಣದ ಮಿಷನ್ ಚಂದ್ರಯಾನ-2 ಚಂದ್ರನ ಕಕ್ಷೆಗೆ ಆಗಸ್ಟ್ 20 ರಂದು ತಲುಪುವ ನಿರೀಕ್ಷೆ ಇದೆ ಮತ್ತು ಸೆಪ್ಟೆಂಬರ್ 7 ರಂದು ಲೂನಾರ್ ಮೇಲ್ಮೈಯನ್ನು ತಲುಪಲಿದೆ ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಮುಖ್ಯಸ್ಥ ಡಾ ಕೆ ಶಿವನ್ ತಿಳಿಸಿದ್ದಾರೆ.

ಚಂದ್ರಯಾನ-2 ಚಂದ್ರನ ಕಕ್ಷೆಗೆ ತಲುಪುವುದು ಯಾವಾಗ ಗೊತ್ತಾ?

ಎರಡು ದಿನದ ನಂತರ ಭೂಮಿಯ ಕಕ್ಷೆಯಿಂದ ಬಾಹ್ಯಾಕಾಶ ನೌಕೆ ಹೊರಡುವುದಕ್ಕೆ ಸಿದ್ಧವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಡಾ. ವಿಕ್ರಮ್ ಸಾರಾಭಾಯ್ ಅವರ ಜನ್ಮ ಶತಮಾನೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಶಿವನ್ ಆಗಮಿಸಿದ್ದರು.

ಮೂರು ಮಾಡ್ಯೂಲ್:

ಮೂರು ಮಾಡ್ಯೂಲ್:

ಜುಲೈ 22 ರಂದು ಉಡಾವಣೆಯಾದ ಆರ್ಬಿಟರ್,ಲ್ಯಾಂಡರ್ ಮತ್ತು ರೋವರ್ ನ್ನು ಒಳಗೊಂಡ ಮೂರು ಮಾಡ್ಯೂಲ್ ನ್ನು ಹೊಂದಿರುವ 3,850 ಕೆಜಿ ತೂಕದ ಚಂದ್ರಯಾನ-2 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಸೆಪ್ಟೆಂಬರ್ 7 ರಂದು ಇಳಿಯಲಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದಾರೆ.

ಪ್ರಮುಖ ಕುಶಲತೆ:

ಪ್ರಮುಖ ಕುಶಲತೆ:

"ಜುಲೈ 22 ರಂದು ಚಂದ್ರಯಾನ-2ವನ್ನು ಉಡಾವಣೆ ಮಾಡಿದ ನಂತರ ಐದು ಪ್ರಮುಖ ಕುಶಲತೆಯನ್ನು ನಾವು ಮಾಡಿದ್ದೇವೆ. ಇದೀಗ ಭೂಮಿಯ ಸುತ್ತ ಚಂದ್ರಾಯಣ-2 ರ ಸಂಯೋಜಿತ ದೇಹವು ಸುತ್ತುತ್ತಿದೆ" ಎಂದು ಅವರು ಹೇಳಿದ್ದಾರೆ.

ಇಂದು ನಿರ್ಣಾಯಕ ಕುಶಲತೆ:

ಇಂದು ನಿರ್ಣಾಯಕ ಕುಶಲತೆ:

ಮುಂದಿನ ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಕುಶಲತೆಯು ಇಂದು ನಡೆಯಲಿದೆ. ಆಗಸ್ಟ್ 14 ರ 3.30 ರ ಬೆಳಿಗ್ಗೆ ಟ್ರಾನ್ಸ್-ಲೂನಾರ್ ಇಂಜೆಕ್ಷನ್ ಎಂಬ ಕುಶಲತೆಯನ್ನು ಮಾಡಿದ್ದಾರೆ. ಇದರಿಂದಾಗಿ ಚಂದ್ರಯಾನ-2 ಭೂಮಿಯನ್ನು ಬಿಟ್ಟು ಚಂದ್ರನೆಡೆಗೆ ಚಲಿಸಲು ಪ್ರಾರಂಭಿಸುತ್ತದೆ. ಆಗಸ್ಟ್ 20 ರಂದು ಚಂದ್ರನನ್ನು ತಲುಪಲಾಗುತ್ತದೆ

ಚಂದ್ರನ ಸುತ್ತ ಸುತ್ತುವುದು ಯಾವಾಗ?

ಚಂದ್ರನ ಸುತ್ತ ಸುತ್ತುವುದು ಯಾವಾಗ?

ನಂತರ ಚಂದ್ರನ ಕಕ್ಷೆಯ ಅಳವಡಿಕೆಯನ್ನು ಕೈಗೊಳ್ಳಲು ಪ್ರಾರಂಭಿಸಲಾಗುತ್ತದೆ. ಈ ಪ್ರಕ್ರಿಯೆ ಮೂಲಕ ಚಂದ್ರಯಾನ-2 ಆಗಸ್ಟ್ 20 ರಂದು ಚಂದ್ರನ ಸುತ್ತ ಇರುತ್ತದೆ. ನಂತರ ನಾವು ಸರಣಿ ಕುಶಲತೆಯನ್ನು ಚಂದ್ರನ ಸುತ್ತ ನಡೆಸಲು ಪ್ರಾರಂಭಿಸುತ್ತೇವೆ. ಅಂತಿಮವಾಗಿ ಸೆಪ್ಟೆಂಬರ್ 7 ರಂದು ಚಂದ್ರನ ದಕ್ಷಿಣ ದ್ರುವದ ಬಳಿ ಇಳಿಯಲಾಗುತ್ತದೆ ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದಾರೆ.

ಇಸ್ರೋ ವಿಜ್ಞಾನಿಗಳು ಫುಲ್ ಬ್ಯುಸಿ:

ಇಸ್ರೋ ವಿಜ್ಞಾನಿಗಳು ಫುಲ್ ಬ್ಯುಸಿ:

ಬಾಹ್ಯಾಕಾಶವು ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ಎಲ್ಲಾ ರೀತಿಯಲ್ಲೂ ಅದರ ವ್ಯವಸ್ಥೆಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಮುಂದಿನ ಕೆಲವು ತಿಂಗಳು ಇಸ್ರೋ ವಿಜ್ಞಾನಿಗಳು ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ವಿಶೇಷವಾಗಿ ಡಿಸೆಂಬರ್ ನಲ್ಲಿ ಬಾಹ್ಯಾಕಾಶ ಸಂಸ್ಥೆ ಸಣ್ಣ ಉಪಗ್ರಹಗಳನ್ನು ಉಡಾಯಿಸುವ ಉದ್ದೇಶವನ್ನು ಹೊಂದಿದೆ. ಡಿಸೆಂಬರ್ ನಲ್ಲಿ ನಾವು ಪ್ರಮುಖ ಮಿಷನ್ ನ್ನು ಕೈಗೊಳ್ಳುತ್ತಿದ್ದೇವೆ.ಇದು ಸಣ್ಣ ಉಪಗ್ರಹ ಲಾಂಚರ್. ಈ ಮಿಷನ್ ನ್ನು ನಾವು ಮೊದಲ ಬಾರಿಗೆ ಕೈಗೊಳ್ಳಲು ಹೊರಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಎನಿ ವೇ ಇಸ್ರೋ ವಿಜ್ಞಾನಿಗಳಿಗೆ ಈ ನಿಟ್ಟಿನಲ್ಲಿ ನಾವು ಕೂಡ ಆಲ್ ದಿ ಬೆಸ್ಟ್ ಹೇಳೋಣ.

Best Mobiles in India

English summary
Chandrayaan-2 To Touch Moon's Orbit On August 20: ISRO Chief
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+