ಚಂದ್ರನ ಮೇಲೆ ಗ್ರಾಮ ನಿರ್ಮಾಣ!!..ಏನಿದು ಬಾಹ್ಯಾಕಾಶ ಮೈಲಿಗಲ್ಲು ಗೊತ್ತಾ?

Written By:

ಮಾನವ ಚಂದ್ರನ ಮೇಲೆ ಕಾಲಿಟ್ಟು ಇನ್ನು 50 ವರ್ಷಗಳು ಸಹ ಕಳೆದಿಲ್ಲ, ಅಷ್ಟರಲ್ಲಾಗಲೇ ಮಾನವ ಇನ್ನೊಂದು ಬಹುದೊಡ್ಡ ಹೆಜ್ಜೆಯನ್ನಿಡಲು ಮುಂದಾಗಿದ್ದಾನೆ..!!ಹೌದು, ಚಂದ್ರನ ಮೇಲೆ ಕಾಲಿಟ್ಟ 50 ವರ್ಷಗಳಲ್ಲಿಯೇ ಯೂರೋಪ್ ಮತ್ತು ಚೀನಾ ಸೇರಿ ಚಂದ್ರನ ಮೇಲೆ ಗ್ರಾಮವೊಂದನ್ನು ನಿರ್ಮಿಸುವ ಮಹತ್ವದ ಯೋಜನೆಯೊಂದನ್ನು ರೂಪಿಸುತ್ತಿವೆ.!!

ಅಂತರಿಕ್ಷ ಪ್ರವಾಸ ಕೈಗೊಳ್ಳಲು ಹಾಗೂ ಚಂದಿರನ ಅಂಗಳದಲ್ಲಿ ಗಣಿಗಾರಿಕೆ ಉದ್ದೇಶಕ್ಕೆ ಈ ಗ್ರಾಮವನ್ನು ಬಳಸಲು ಚಿಂತಿಸಲಾಗಿದೆ.!!ಇಷ್ಟೇ ಅಲ್ಲದೆ ಮಂಗಳಗ್ರಹ ಸೇರಿದಂತೆ ಬಾಹ್ಯಾಕಾಶಕ್ಕೆ ಗಗನನೌಕೆಗಳನ್ನು ರವಾನಿಸಲು ಸಹ ಇದೇ ವ್ಯೂಮ ಗ್ರಾಮವನ್ನು ಉಪಯೋಗಿಸುವ ಚಿಂತನೆಯನ್ನು ಯೂರೋಪ್ ಮತ್ತು ಚೀನಾ ವಿಜ್ಞಾನಿಗಳು ಮಾಡಿದ್ದಾರೆ.

ಚಂದ್ರನ ಮೇಲೆ ಗ್ರಾಮ ನಿರ್ಮಾಣ!!..ಏನಿದು ಬಾಹ್ಯಾಕಾಶ ಮೈಲಿಗಲ್ಲು ಗೊತ್ತಾ?

ಇನ್ನು ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರನ ಮೇಲೆ ಗ್ರಾಮ ಸ್ಥಾಪನೆ ಯೋಜನೆ ಬಗ್ಗೆ ಯುರೋಪ್ ಮತ್ತು ಚೀನಾದಲ್ಲಿ ಈಗಾಗಲೇ ಮೊದಲ ಹಂತದ ಸಿದ್ಧತೆಗಳು ನಡೆದಿದ್ದು, ಈ ಯೋಜನೆಗಳ ಬಗ್ಗೆ ಯುರೋಪ್ ಮತ್ತು ಚೀನಾ ದೇಶದ ವಿಜ್ಞಾನಿಗಳು ಜಂಟಿಯಾಗಿ ಪರಸ್ಪರ ಸಹಕಾರದ ಬಗ್ಗೆ ಚರ್ಚಿಸಿದ್ದಾರೆ.

ಚಂದ್ರನ ಮೇಲೆ ಗ್ರಾಮ ನಿರ್ಮಾಣ!!..ಏನಿದು ಬಾಹ್ಯಾಕಾಶ ಮೈಲಿಗಲ್ಲು ಗೊತ್ತಾ?

ತಂತ್ರಜ್ಞಾನ ಸಹಾಯದಿಂದ ಭೂಮಿ ಬಿಟ್ಟು ಬಾಹ್ಯಾಕಾಶಕ್ಕೆ ತೆರಳುತ್ತಿರುವ ಮಾನವ ಈಗ ಚಂದ್ರನಲ್ಲಿ ನೆಲೆಯನ್ನು ಸ್ಥಾಪಿಸುವ ಬಗ್ಗೆ ಕುತೋಹಲ ಗರಿಗೆದರಿದೆ!! ಹಾಗಾಗಿ, ಪ್ರಪಂಚವೇ ಈ ನೂತನ ಯೋಜನೆಯತ್ತ ಮುಖಮಾಡಿವೆ.!!

English summary
China and Europe are planning to build the first-ever Moon Village . to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot