Home
Scitech

2025ರಲ್ಲಿ ಮಾನವನ ಮೆದುಳಿಗೆ ಕೃತಕ ದೃಷ್ಟಿ ಸಾಧನ 'ಬ್ಲೈಂಡ್‌ಸೈಟ್' ಚಿಪ್ ಅಳವಡಿಕೆ!

ಎಲೋನ್ ಮಸ್ಕ್ ಅವರ ನ್ಯೂರಾಲಿಂಕ್ ಕಂಪನಿಯು 2025ರ ಅಂತ್ಯದ ವೇಳೆಗೆ ಮಾನವನ ಮೆದುಳಿಗೆ ಕೃತಕ ದೃಷ್ಟಿ ಸಾಧನವಾದ 'ಬ್ಲೈಂಡ್‌ಸೈಟ್' ಅನ್ನು ಅಳವಡಿಸಲಿದೆ ಮತ್ತು ಇದು ಕಣ್ಣು ಮತ್ತು ದೃಷ್ಟಿಗಳೆರಡನ್ನೂ ಕಳೆದುಕೊಂಡವರಿಗೂ ದೃಷ್ಟಿ ನೀಡುವಂತೆ ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ.! ಹೌದು, ಈ ವರ್ಷದ ಕೊನೆಯಲ್ಲಿ, ಸಂಪೂರ್ಣವಾಗಿ ಕುರುಡರಾಗಿರುವವರಿಗೆ ನೋಡಲು ಅನುವು ಮಾಡಿಕೊಡುವ ಮೊದಲ ಸಾಧನವನ್ನು ಮನುಷ್ಯರಿಗೆ ಅಳವಡಿಸಲು ನಾವು ಆಶಿಸುತ್ತಿದ್ದೇವೆ ಎಂದು ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಅವರು ತಿಳಿಸಿದ್ದಾರೆ.

ಈ ವರ್ಷದ ಕೊನೆಯಲ್ಲಿ, ಸಂಪೂರ್ಣವಾಗಿ ಕುರುಡರಾಗಿರುವವರಿಗೆ ನೋಡಲು ಅನುವು ಮಾಡಿಕೊಡುವ ಮೊದಲ ಸಾಧನವನ್ನು ಮನುಷ್ಯರಿಗೆ ಅಳವಡಿಸಲು ನಾವು ಆಶಿಸುತ್ತಿದ್ದೇವೆ ಎಂದು ಎಲೋನ್ ಮಸ್ಕ್ ಅವರು ಭಾನುವಾರ ರಾತ್ರಿ ಅಮೆರಿಕದ ವಿಸ್ಕಾನ್ಸಿನ್‌ನಲ್ಲಿರುವ ತಮ್ಮ ಟೌನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಈ ಕುರಿತಾಗಿ ಉತ್ತರಿಸಿದ್ದಾರೆ. ಈ ಬ್ಲೈಂಡ್‌ಸೈಟ್ ಸಾಧನದ ಬಗ್ಗೆ ವಿವರಿಸುತ್ತಾ, ಆರಂಭದಲ್ಲಿ ಕೇವಲ ಕಡಿಮೆ ರೆಸಲ್ಯೂಶನ್‌ನ ದೃಶ್ಯಗಳನ್ನು ಮಾತ್ರ ನೀಡಲು ಸಾಧ್ಯವಾಗುತ್ತದೆ ಎಂದು ಮಸ್ಕ್ ಅವರು ಹೇಳಿದ್ದಾರೆ.

'ಬ್ಲೈಂಡ್‌ಸೈಟ್' ಸಹಾಯದಿಂದ, ಕಣ್ಣು ಮತ್ತು ದೃಷ್ಟಿಗಳೆರಡನ್ನೂ ಕಳೆದುಕೊಂಡವರಿಗೆ ದೃಷ್ಟಿ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಆರಂಭದಲ್ಲಿ ಕೇವಲ ಕಡಿಮೆ ರೆಸಲ್ಯೂಶನ್‌ನ ದೃಶ್ಯಗಳನ್ನು ಮಾತ್ರ ನೀಡಲು ಸಾಧ್ಯವಾಗುತ್ತದೆ . ಆಂದರೆ, ಅಟಾರಿ ಗ್ರಾಫಿಕ್ಸ್‌ನಂತೆ ಸರಳ ದೃಶ್ಯಗಳನ್ನು ನೋಡಲು ಇದು ಸಹಾಯ ಮಾಡುತ್ತದೆ. ಆದರೆ ಕಾಲಾನಂತರದಲ್ಲಿ, ಈ ಸಾಧನವು ಅತಿಮಾನುಷ ದೃಷ್ಟಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಲಿದೆ ಎಂದು ಮಸ್ಕ್ ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ, ಈ ಸಾಧನವು ಕುರುಡುತನಕ್ಕೆ ಪರಿಹಾರವಲ್ಲ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.

2025ರಲ್ಲಿ ಮಾನವನ ಮೆದುಳಿಗೆ ಕೃತಕ ದೃಷ್ಟಿ ಸಾಧನ 'ಬ್ಲೈಂಡ್‌ಸೈಟ್' ಚಿಪ್ ಅಳವಡಿಕೆ!

ಏನಿದು 'ಬ್ಲೈಂಡ್‌ಸೈಟ್' ಸಾಧನ?
ಬ್ಲೈಂಡ್‌ಸೈಟ್ ಸಾಧನವನ್ನು "ಎರಡೂ ಕಣ್ಣುಗಳು ಮತ್ತು ಆಪ್ಟಿಕ್ ನರವನ್ನು ಕಳೆದುಕೊಂಡವರು ಸಹ ನೋಡಲು ಸಕ್ರಿಯಗೊಳಿಸಲು" ವಿನ್ಯಾಸಗೊಳಿಸಲಾಗಿದೆ. ಈ ಬ್ಲೈಂಡ್‌ಸೈಟ್ ಸಾಧನವು ದೃಶ್ಯ ಮಾಹಿತಿಯನ್ನು ಸಂಸ್ಕರಿಸುವ ಮೆದುಳಿನ ಭಾಗವಾದ ದೃಶ್ಯ ಕಾರ್ಟೆಕ್ಸ್‌ನಲ್ಲಿ ಅಳವಡಿಸಲಾದ ಮೈಕ್ರೋಎಲೆಕ್ಟ್ರೋಡ್ ಶ್ರೇಣಿಯನ್ನು ಒಳಗೊಂಡಿದೆ. ಕ್ಯಾಮೆರಾದಿಂದ ಬರುವ ಮಾಹಿತಿಯನ್ನು ಆಧರಿಸಿ ದೃಶ್ಯ ಕಾರ್ಟೆಕ್ಸ್‌ನ ನರಕೋಶಗಳನ್ನು ಉತ್ತೇಜಿಸುವ ಮೂಲಕ ಈ ಸಾಧನವು ಕಾರ್ಯನಿರ್ವಹಿಸುತ್ತದೆ. ಆರಂಭದಲ್ಲಿ ಇದು ಕೇವಲ ಕಡಿಮೆ ರೆಸಲ್ಯೂಶನ್‌ನ ದೃಶ್ಯಗಳನ್ನು ಮಾತ್ರ ನೀಡಲು ಶಕ್ತವಾಗಿದೆ ಎನ್ನಲಾಗಿದೆ.

ಈ ಸಾಧನದ ಪ್ರಾಯೋಗಿಕ ಪರೀಕ್ಷೆಗಳಿಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (FDA) ಅನುಮೋದನೆ ನೀಡಿದೆ. ಆದರೆ ಈ ಸಾಧನವು ಕುರುಡುತನಕ್ಕೆ ಪರಿಹಾರವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಪ್ರಸ್ತುತ ಅಭಿವೃದ್ಧಿಯಲ್ಲಿರುವ ಸಾಧನಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಗೆ ಇದು ಅನುಕೂಲವಾಗುವಂತೆ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ. ಈ ಸಾಧನದ ಬಗ್ಗೆ ಮಸ್ಕ್ ನೀಡಿದ ಹೇಳಿಕೆಗಳು ಕೆಲ ತಜ್ಞರಿಂದ ಟೀಕೆಗೆ ಒಳಗಾಗಿವೆ. ಕೋಲು ಮತ್ತು ನಾಯಿಯಂತಹ ಸಾಧನಗಳಿಗೆ ಇದು ಪರ್ಯಾಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ಜನವರಿಯಲ್ಲಿ ಪರಿಣಿತ ವೈದ್ಯರ ತಂಡವು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವ್ಯಕ್ತಿಯ ಮಿದುಳಿಗೆ ಯಶಸ್ವಿಯಾಗಿ ಚಿಪ್‌ ಅಳವಡಿಸಿತ್ತು. ಮಾನವನ ಮಿದುಳಿನಿಂದ ನೇರವಾಗಿ ಕಂಪ್ಯೂಟರ್‌ ಹಾಗೂ ಮೊಬೈಲ್‌ಗೆ ಸಂವಹನ ಮಾಡಲು ಅಭಿವೃದ್ಧಿಪಡಿಸಲಾಗಿರುವ ಮೈಕ್ರೋಚಿಪ್ ಅನ್ನು ಸಂವಹನದ ಮಾಧ್ಯಮವಾಗಿ ಬಳಸುವ ಎಲಾನ್‌ ಮಸ್ಕ್‌ ಅವರ ಈ ಯೋಜನೆ ವಿಶ್ವಾದ್ಯಂತ ಚರ್ಚೆಯಲ್ಲಿತ್ತು. ಇದೀಗ ಈ ಬ್ಲೈಂಡ್‌ಸೈಟ್ ಸಾಧನವು ದೃಷ್ಟಿಹೀನರಿಗೆ ಸಹಾಯ ಮಾಡುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಎಲೋನ್ ಮಸ್ಕ್ ನಂಬಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Last year, the US FDA classified Neuralink's Blindsight as a 'breakthrough device.'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+