ಭಾರತದ ಸ್ವದೇಶಿ ಜಿಪಿಎಸ್ ವ್ಯವಸ್ಥೆ ಬಗ್ಗೆ ನಿಮಗೆಷ್ಟು ಗೊತ್ತು? ಅಮೆರಿಕಾ ಏಟಿಗೆ ಎದುರೇಟು!!
ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಜಿಪಿಎಸ್ ಸೇವೆ ನೀಡಲು ನಿರಾಕರಿಸಿದ ಅಮೆರಿಕಕ್ಕೆ ಸೆಡ್ಡು ಹೊಡೆದಿರುವ ಭಾರತ ಸ್ವದೇಶಿ ಜಿಪಿಎಸ್ ಅಭಿವೃದ್ದಿಪಡಿಸಿದೆ.!!
ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಜಿಪಿಎಸ್ ಸೇವೆ ನೀಡಲು ನಿರಾಕರಿಸಿದ ಅಮೆರಿಕಕ್ಕೆ ಸೆಡ್ಡು ಹೊಡೆದಿರುವ ಭಾರತ ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗಕ್ಕೆ ಅಣಿಯಾಗಿದೆ.!! 2018 ವರ್ಷಾರಂಭಕ್ಕೆ ನಾವಿಕ್ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.
ಭಾರತೀಯ ವಿಜ್ಞಾನಿಗಳೇ ಅಭಿವೃದ್ಧಿಪಡಿಸಿರುವ ಇಂಡಿಯನ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (ಐಆರ್ ಎನ್ಎಸ್ಎಸ್) ನಾವಿಕ್ ನ ಅಂತಿಮ ಹಂತದ ಪರೀಕ್ಷೆ ನಡೆಯುತ್ತಿದ್ದು, ನಾವಿಕ್ ಕಾರ್ಯರಂಭಿಸಿದರೆ ಇಂತಹ ಸೌಲಭ್ಯ ಹೊಂದಿದ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಲಿದೆ.!
ಹಾಗಾದರೆ, ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಾವಿಕ್ ಬಗ್ಗೆ ಹೊರಬಿದ್ದಿರುವ ಮಾಹಿತಿಗಳೇನು? ಭಾರತಕ್ಕೆ ನಾವಿಕ್ ನೀಡುವ ಕೊಡುಗೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ನಾವಿಕ್ ಎಂದು ನಾಮಕರಣ ಮಾಡಿದ್ದು ಮೋದಿ!!
ಸ್ವದೇಶಿ ಜಿಪಿಎಸ್ ವ್ಯವಸ್ಥೆ ಕಾರ್ಯಾಚರಣೆಗೆ ಅಗತ್ಯವಿದ್ದ 7 ಉಪಗ್ರಹಗಳನ್ನು (ಐಆರ್ ಎನ್ಎಸ್ಎಸ್-1G) ಭಾರತ 2016 ರ ಏಪ್ರಿಲ್ 28 ರಂದು ಉಡಾವಣೆ ಮಾಡಿತ್ತು. ಮೊದಲು ಐಆರ್ಎನ್ಎಸ್ಎಸ್ ಎಂಬ ಹೆಸರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾವಿಕ್ ಎಂದು ನಾಮಕರಣ ಮಾಡಿದರು.

ಅಮೆರಿಕಾದ ಜಿಪಿಎಸ್‌ಗಿಂತ ನಿಖರ
ಪ್ರಪಂಚದ ಬಹುದೊಡ್ಡ ಜಿಪಿಎಸ್ ವ್ಯವಸ್ಥೆ ಹೊಂದಿರುವ ಅಮೆರಿಕಾಕ್ಕೆ ಭಾರತದ ನಾವಿಕ್ ಹೆಚ್ಚು ನಿಖರವಾಗಿರಲಿದೆ. ಆದರೆ, ಭಾರತದ ನಾವಿಕ್ ವ್ಯವಸ್ಥೆ ಭಾರತ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ಬಗ್ಗೆ ಮಾತ್ರ ಮಾಹಿತಿ ನೀಡಲಿದೆ.!!

2018ಕ್ಕೆ ಸಾರ್ವಜನಿಕ ಬಳಕೆಗೆ!!
ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಾವಿಕ್ 2018 ರ ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಅಹಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಷನ್ ಕೇಂದ್ರ (ಎಸ್ಎಸಿ) ಕೇಂದ್ರದ ನಿರ್ದೇಶಕ ತಪನ್ ಮಿಶ್ರ ಹೇಳಿದ್ದಾರೆ.!!

1420 ಕೋಟಿ ರೂಪಾಯಿ ವೆಚ್ಚವಾಗಿದೆ.
ಭಾರತೀಯ ವಿಜ್ಞಾನಿಗಳೇ ರೂಪಿಸಿರುವ ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಾವಿಕ್ ಯೋಜನೆಗೆ ಇಲ್ಲಿಯವರೆಗೂ 1420 ಕೋಟಿ ರೂಪಾಯಿ ವೆಚ್ಚವಾಗಿದೆ. ಸದ್ಯ ಅಮೆರಿಕ (ಜಿಪಿಎಸ್), ರಷ್ಯಾ (ಗ್ಲೋನಾಸ್), ಐರೋಪ್ಯ ಒಕ್ಕೂಟ (ಗೆಲಿಲಿಯೋ) ಮಾತ್ರ ಸ್ವದೇಶಿ ಜಿಪಿಎಸ್ ವ್ಯವಸ್ಥೆ ಹೊಂದಿವೆ.!!


Click it and Unblock the Notifications








