Home
Scitech

ಭೂಕಂಪದ ತೀವ್ರತೆಯನ್ನು ಶೀಘ್ರವಾಗಿ ಪತ್ತೆ ಹಚ್ಚಲು ನೂತನ ಸಂಶೋಧನೆ!!

ಪ್ರಕೃತಿ ವಿಕೋಪಗಳನ್ನು ಮೊದಲೇ ಗ್ರಹಿಸಬಹುದಾದ ತಂತ್ರಜ್ಞಾನ ಅಭಿವೃದ್ದಿ ಸಾಧ್ಯತೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ.!!

By Bhaskar N J

ಪ್ರಕೃತಿ ವಿಕೋಪಗಳನ್ನು ಮೊದಲೇ ಗ್ರಹಿಸಬಹುದಾದ ತಂತ್ರಜ್ಞಾನ ಅಭಿವೃದ್ದಿ ಸಾಧ್ಯತೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಇದಕ್ಕೆ ಉದಾಹಣೆಯಾಗಿ ವಿಶ್ವದಲ್ಲಿ ಎಲ್ಲಿಯೇ ದೊಡ್ಡ ಮಟ್ಟದಲ್ಲಿ ಸಂಭವಿಸುವ ಭೂಕಂಪದ ತೀವ್ರತೆಯನ್ನು ಶೀಘ್ರವಾಗಿ ಪತ್ತೆ ಹಚ್ಚಲು ವಿಜ್ಞಾನಿಗಳು ನೂತನ ವಿಧಾನ ಕಂಡುಹಿಡಿದಿದ್ದಾರೆ.!!

ಹೌದು, ಪ್ರಸ್ತುತ ವಿಜ್ಞಾನಿಗಳು ಭೂಕಂಪದಿಂದ ಉಂಟಾಗುವ ತರಂಗಾಂತರಗಳನ್ನು ಆಧರಿಸಿ ತೀವ್ರತೆ ಅಂದಾಜಿಸುವ ಹೊತರಂಗಾಂತರಗಳ ವಿಧಾನಕ್ಕಿಂತ ಹೆಚ್ಚು ವೇಗವಾಗಿ ಈ ವಿಧಾನದಿಂದ ಭೂಕಂಪನದ ತೀವ್ರತೆ ಪತ್ತೆ ಮಾಡಬಹುದು ಎಂದು ಹೇಳಿದ್ದಾರೆ.!! ಹಾಗಾದರೆ, ಏನಿದು ಸಂಶೋಧನೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ!!

ಏನಿದು ಸಂಶೋಧನೆ?

ಏನಿದು ಸಂಶೋಧನೆ?

ಫ್ರಾನ್ಸ್‌ನ ಪ್ಯಾರಿಸ್‌ ಡಿಡೆರೊಟ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಗುತ್ವಾಕರ್ಷಣೆಯಲ್ಲಿ ಉಂಟಾಗುವ ಬದಲಾವಣೆಯಿಂದ ತ್ವರಿತವಾಗಿ ಭೂಕಂಪದ ತೀವ್ರತೆ ಪತ್ತೆ ಮಾಡಬಹುದು ಎಂಬುದರ ಬಗ್ಗೆ ಸಂಶೋಧನೆ ಮಾಡಿ ಯಶಸ್ವಿಯಾಗಿದ್ದಾರೆ ಎಂದು 'ಸೈನ್ಸ್ ಜರ್ನಲ್‌'ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.!!

ಗುರುತ್ವಾಕರ್ಷಣೆ ಬದಲಾವಣೆ!!

ಗುರುತ್ವಾಕರ್ಷಣೆ ಬದಲಾವಣೆ!!

ಈ ಮೊದಲು ತರಂಗಾಂತರಗಳ ವಿಧಾನದಲ್ಲಿ ಭೂಕಂಪದ ತೀವ್ರತೆಯನ್ನು ಅಳೆಯಲಾಗುತ್ತಿತ್ತು. ಆದರೆ ಭೂಕಂಪ ಸಂಭವಿಸಿದ ತಕ್ಷಣ ಗುರುತ್ವಾಕರ್ಷಣ ವಲಯದಲ್ಲಿ ವ್ಯತ್ಯಾಸ ಉಂಟಾಗುವುದರಿಂದ ತರಂಗಾಂತರಗಳ ವಿಧಾನಕ್ಕಿಂತ ಹೆಚ್ಚು ವೇಗವಾವಾಗಿ ಭೂಕಂಪನದ ತೀವ್ರತೆ ಪತ್ತೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.!!

ಬೆಳಕಿನ ವೇಗದಲ್ಲಿ ತರಂಗಗಳು!!

ಬೆಳಕಿನ ವೇಗದಲ್ಲಿ ತರಂಗಗಳು!!

ಭೂಕಂಪದಿಂದ ಭೂಮಿಯ ಗುರುತ್ವಾಕರ್ಷಣ ವಲಯಕ್ಕೆ ಅಡ್ಡಿ ಉಂಟಾಗುವುದಂದ ಈ ಸಮಯದಲ್ಲಿ ಭಿನ್ನವಾದ ತರಂಗಾಂತರಗಳು ಉಂಟಾಗುತ್ತವೆ. ಈ ತರಂಗಾಂತರಗಳು ಬೆಳಕಿನಷ್ಟು ವೇಗವಾಗಿ ಇರುವುದರಿಂದ ಭೂಕಂಪದ ತೀವ್ರತೆಯನ್ನು ತ್ವರಿತವಾಗಿ ಪತ್ತೆ ಮಾಡಲು ಸಾಧ್ಯ ಎಂದು ಸಂಶೋಧಕರು ವಿವರಿಸಿದ್ದಾರೆ.!!

ಬಹುಬೇಗ ಪತ್ತೆ ಮಾಡಬಹದು!!

ಬಹುಬೇಗ ಪತ್ತೆ ಮಾಡಬಹದು!!

ವಿಜ್ಞಾನಿಗಳು 10 ಸೆಸ್ಮೊಮೀಟರ್‌ಗಳನ್ನು ಬಳಸಿ ಗುರುತ್ವಾಕರ್ಷಣೆಯಲ್ಲಿ ಉಂಟಾದ ಬದಲಾವಣೆಗಳ ಸಂಕೇತಗಳನ್ನು ದಾಖಲಿಸಿದ್ದು, ಭೂಕಂಪದ ತೀವ್ರತೆಗೆ ಗುರುತ್ವಾಕರ್ಷಣೆಯ ವಲಯ ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಹಾಗಾಗಿ, ಭೂಕಂಪದ ತೀವ್ರತೆಯನ್ನು ತ್ವರಿತವಾಗಿ ಪತ್ತೆ ಮಾಡಲು ಇದು ಉತ್ತಮ ವಿಧಾನ ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.!!

 ಸ್ವಲ್ಪ ಕೊರತೆ ಇದೆ!!

ಸ್ವಲ್ಪ ಕೊರತೆ ಇದೆ!!

ಭೂಕಂಪದ ತೀವ್ರತೆಯನ್ನು ತ್ವರಿತವಾಗಿ ಪತ್ತೆ ಮಾಡಬಹುದಾದ ವಿಧಾನ ಇದಾದರೂ ಸಹ 8-8.5ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪದ ಸಂದರ್ಭಗಳಲ್ಲಿ ಈ ನೂತನ ವಿಧಾನ ಬಳಸಲು ಕಷ್ಟವಾಗಿದೆ. 8ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪದ ವೇಳೆ ಗುರುತ್ವಾಕರ್ಷಣ ವಿಧಾನದಲ್ಲಿ ಉಂಟಾಗುವ ತರಂಗಾಂತರಗಳು ದುರ್ಬಲವಾಗಿರಲಿವೆ.!!

Best Mobiles in India

English summary
The few extra minutes of warning could save lives.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+