ಮಂಗಳನ ಕಕ್ಷೆಯಲ್ಲಿ 1000 ದಿನ!..ಇಲ್ಲಿದೆ ನಮ್ಮ ಮಂಗಳಯಾನದ ಸಾಧನೆ!!
ತನ್ನ ಕೆಲಸವನ್ನು ಚಾಚುತಪ್ಪದೆ ನಿರ್ವಹಿಸುತ್ತಿರುವ ಮಂಗಳಯಾನ ನೌಕೆ ಹಲವು ಕಾರ್ಯಗಳನ್ನು ನಿರ್ವಹಿಸಿದ್ದು, ಅವು ಯಾವುವು? ಮತ್ತು ಮಂಗಳಯಾನದ ವಿಶೇಷತೆಗಳನ್ನು ತಿಳಿಯಿರಿ.!!
ಇಡೀ ವಿಶ್ವವೇ ಒಮ್ಮೆ ಭಾರತದತ್ತ ತಿರುಗಿನೋಡುವ ಹಾಗೆ ಮಾಡಿದ್ದ, ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯ ಕನಸಿನ ಕೂಸಾಗಿದ್ದ ಭಾರತದ ಹೆಮ್ಮೆಯ ಮಂಗಳಯಾನ ನೌಕೆಯು ಮಂಗಳ ಗ್ರಹ ಕಕ್ಷೆಯಲ್ಲಿ 1000 ದಿನ ಪೂರೈಸಿ ಯಶಸ್ವಿ ಸಾಧನೆಯತ್ತ ಮುಖಮಾಡಿದೆ.!!
ಭೂಮಿಯಿಂದ 21 ಕೋಟಿ ಕಿ.ಮೀ ದೂರದಲ್ಲಿರುವ ಮಂಗಳಗ್ರಹದ ಕಕ್ಷೆಗೆ ನೌಕೆಯನ್ನು ಉಡಾವಣೆ ಮಾಡಿದ್ದ ಇಸ್ರೋ ತನ್ನ ಯಶಸ್ವಿ ಕಾರ್ಯಚರಣೆಯನ್ನು ನಡೆಸುತ್ತಿದೆ. 2013ರ ನವೆಂಬರ್ ತಿಂಗಳಿನಲ್ಲಿ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿದ್ದ ನೌಕೆ 2014ರ ಸೆಪ್ಟೆಂಬರ್ 24ರಂದು ಮಂಗಳ ಗ್ರಹದ ಕಕ್ಷೆಯನ್ನು ಸೇರಿತ್ತು.!!
ಅಂದಿನಿಂದ ತನ್ನ ಕೆಲಸವನ್ನು ಚಾಚುತಪ್ಪದೆ ನಿರ್ವಹಿಸುತ್ತಿರುವ ಮಂಗಳಯಾನ ನೌಕೆ ಹಲವು ಕಾರ್ಯಗಳನ್ನು ನಿರ್ವಹಿಸಿದ್ದು, ಅವು ಯಾವುವು? ಮತ್ತು ಮಂಗಳಯಾನದ ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜೀವಿಗಳ ವಾಸದ ಕುರಿತು ಮಾಹಿತಿ!!
ಮಂಗಳಯಾನ ನೌಕೆಯು ಮಂಗಳ ಗ್ರಹದ ಮೇಲ್ಮೈ ವಾತಾವರಣ, ಮಿಥೇನ್ ಅನಿಲದ ಕುರುಹು, ಜೀವಿಗಳ ವಾಸದ ಕುರಿತು ಮಾಹಿತಿಯನ್ನು ಸಂಗ್ರಹಿಸಿದೆ ಎಂದು ಇಸ್ರೋ ಹೇಳಿದೆ. ಆದರೆ ಈ ಬಗ್ಗೆ ಯಾವುದೇ ವರದಿ ಹೊರಬಿದ್ದಿಲ್ಲ.

715 ಮಂಗಳ ಗ್ರಹದ ಚಿತ್ರ
ಮಂಗಳಯಾನ ನೌಕೆ ಕಕ್ಷೆ ಸೇರಿದ ದಿನದಿಂದ ಇಲ್ಲಿಯವರೆಗೂ ಸರಿಸುಮಾರು 715 ಮಂಗಳ ಗ್ರಹದ ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ. 5 ತಂತ್ರಜ್ಞಾನ ಹೊಂದಿರುವ ಒಂದೇ ಒಂದು ಕ್ಯಾಮೆರಾವನ್ನು ನೌಕೆ ಹೊಂದಿದೆ.!!

388 ಕಕ್ಷೆ ಪೂರ್ಣ ಮತ್ತು ಆರೋಗ್ಯ!!
ಮಂಗಳಯಾನದಲ್ಲಿರುವ ನೌಕೆಯೂ ಇಲ್ಲಿಯವರೆಗೂ ಮಂಗಳ ಗ್ರಹದ 388 ಕಕ್ಷೆಗಳನ್ನು ಪೂರ್ಣಗೊಳಿಸಿದೆ. ಅಂದರೆ 388 ಬಾರಿ ಮಂಗಳನನ್ನು ಸುತ್ತಿದೆ.! ಜೊತೆಗೆ ಇಲ್ಲಿಯವರಗೂ ಮಂಗಳಯಾನ ನೌಕೆಯೂ ಯಾವುದೇ ತೊಂದರೆಯನ್ನು ಹೊಂದಿಲ್ಲ.!!

ಶುಕ್ರಕ್ಕೆ ಸ್ಕೆಚ್
ಮಂಗಳಯಾನ ಮುಗಿದ ನಂತರ ಈಗಾಗಲೇ ಶುಕ್ರಗ್ರಹಕ್ಕೆ ನೌಕ್ ಉಡಾವಣೆ ಮಾಡಲು ಇಸ್ರೋ ಚಿಂತಿಸಿದೆ. ಆದರೆ, 2020 ರ ನಂತರ ಇಸ್ರೋವಿನಿಂದ ಈ ಯೋಜನೆ ಫಲಕಾರಿಯಾಗಬಲ್ಲದು.!!


Click it and Unblock the Notifications








