ಅಂತಿಮ ಮೆಸೇಜ್ ಕಳಿಸಿ ಭೂಮಿಯ ಸಂಪರ್ಕ ಕಡಿದುಕೊಂಡ ಕೆಪ್ಲರ್

|

ಗುರುವಾರ ಸಂಜೆ ನಾಸಾ ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ತನ್ನ ಅಂತಿಮ ಕಮಾಂಡ್ ಗಳನ್ನು ಸ್ವೀಕರಿಸಿದ್ದು ಭೂಮಿಯ ಜೊತೆಗಿನ ಸಂಪರ್ಕವನ್ನು ಕಡಿತುಕೊಂಡಿದೆ.ಗುಡ್ ನೈಟ್ ಕಮಾಂಡ್ ಸ್ಪೇಸ್ ಕ್ರಾಫ್ಟ್ ನ ನಿವೃತ್ತಿಯನ್ನು ಸೂಚಿಸಿದ್ದು ಅಕ್ಟೋಬರ್ 30 ರಂದೇ ನಾಸಾ ಕೆಪ್ಲರ್ ನಲ್ಲಿ ಇಂಧನ ಖಾಲಿಯಾಗಿದ್ದು ಇನ್ನು ಮುಂದೆ ಯಾವುದೇ ವೈಜ್ಞಾನಿಕ ಸಂಶೋಧನೆಯನ್ನು ಅದರಲ್ಲಿ ಮಾಡಲು ಅಸಾಧ್ಯ ಎಂದು ತಿಳಿಸಿತ್ತು.

ಅಂತಿಮ ಮೆಸೇಜ್ ಕಳಿಸಿ ಭೂಮಿಯ ಸಂಪರ್ಕ ಕಡಿದುಕೊಂಡ ಕೆಪ್ಲರ್

ಕಾಕತಾಳೀಯವೆಂಬಂತೆ ಕೆಪ್ಲರ್ ನ ಈ ಗುಡ್ ನೈಟ್ ಕಮಾಂಡ್ ಜರ್ಮನಿಯ ಖಗೋಳಶಾಸ್ತ್ರಜ್ಞ ಜೋಹಾನ್ಸ್ ಕೆಪ್ಲರ್ ಅವರ ಸಾವಿನ ವಾರ್ಷಿಕೋತ್ಸವದಂದೇ ನೆರವೇರಿದೆ. ಇವರು ಗ್ರಹಗಳ ಚಲನೆಯ ನಿಯಮವನ್ನು ಕಂಡುಹಿಡಿದರು ಮತ್ತು ನವೆಂಬರ್ 15,1630 ರಲ್ಲಿ ಅಂದರೆ 388ರ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.

ಅಂತಿಮ ಕಮಾಂಡ್ ಗಳನ್ನು ನಾಸಾದ ಡೀಪ್ ಸ್ಪೇಸ್ ನೆಟ್ ವರ್ಕ್ ನಲ್ಲಿ ಕೆಪ್ಲರ್ ನ ಕಾರ್ಯಾಚರಣೆ ಕೇಂದ್ರದಿಂದ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯಕ್ಕಾಗಿ ಅಥವಾ ಲಾಸ್ಪ್(LASP) ,ಬೌಲ್ಡರ್ನ ಕೊಲೋರಾಡೋ ವಿಶ್ವವಿದ್ಯಾನಿಲಯದಲ್ಲಿ ಕಳುಹಿಸಲಾಗಿದೆ.

ಕೆಪ್ಲರ್ ಟೀಮ್ ಇದೀಗ ಸೆಫ್ಟೀ ಮೋಡ್ ಗಳನ್ನು ಡಿಸೇಬಲ್ ಮಾಡಿದೆ. ಅದು ಸಂಪೂರ್ಣ ವ್ಯವಸ್ಥೆಯನ್ನು ಹಿಂದಕ್ಕೆ ತಿರುಗಿಸುತ್ತದೆ.ಟ್ರಾನ್ಸ್ ಮೀಟರ್ ಗಳನ್ನು ಮುಚ್ಚುವ ಮೂಲಕ ಸಂವಹನಗಳನ್ನು ನಿಲ್ಲಿಸಲಾಯಿತು.ಯಾಕೆಂದರೆ ಸ್ಪೇಸ್ ಕ್ರಾಫ್ಟ್ ನಿಧಾನವಾಗಿ ಸ್ಪಿನ್ ಆಗುವ ಸಾಧ್ಯತೆ ಇದೆ. ಕೆಪ್ಲರ್ ತಾಳ್ಮೆಯಿಂದ ಕಮಾಂಡ್ ಗಳನ್ನು ತೆಗೆದುಕೊಳ್ಳಬೇಕಾಗಿತ್ತು ಯಾಕೆಂದರೆ ಅದು ಸಂವಹನದ ಅವಧಿಯಲ್ಲಿ ಬಾಹ್ಯಾಕಾಶ ನೌಕೆಯನ್ನು ತಲುಪಬೇಕು. ಒಂದು ತಂಡವು ಕಮಾಂಡ್ ಗಳು ಯಶಸ್ವಿಯಾಗಲು ಸ್ಪೇಸ್ ಕ್ರಾಫ್ಟ್ ನ್ನು ಮಾನಿಟರ್ ಮಾಡಿ ಎಚ್ಚರಿಕೆಯಿಂದ ನೋಡಿಕೊಂಡಿದೆ. ಇದೀಗ ಬಾಹ್ಯಾಕಾಶ ನೌಕೆ ಭೂಮಿಯಿಂದ ಸೂರ್ಯನ 94 ದಶಲಕ್ಷ ಮೈಲುಗಳಷ್ಟು ದೂರವಿರುವ ಸುರಕ್ಷಿತ ಕಕ್ಷೆಯಲ್ಲಿದೆ.

ಕಳೆದ ಒಂಬತ್ತು ವರ್ಷಗಳಲ್ಲಿ ಕೆಪ್ಲರ್ ನಿಂದ ಸಂಗ್ರಹಿಸಲಾಗಿರುವ ಮಾಹಿತಿಗಳನ್ನು ಮುಂಬರುವ ಹಲವು ವರ್ಷಗಳ ಸಂಶೋಧನೆಗಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯ ಅಮೆಸ್ ರಿಸರ್ಚ್ ಸೆಂಟರ್ ನಾಸಾದ ಸೈನ್ಸ್ ಮಿಷನ್ ಡೈರೆಕ್ಟರೇಟ್ಗಾಗಿ ಕೆಪ್ಲರ್ ಮತ್ತು ಕೆ2 ಕಾರ್ಯಗಳನ್ನು ನಿರ್ವಹಿಸುತ್ತದೆ. ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿನ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿ ಕೆಪ್ಲರ್ ಮಿಷನ್ ಅಭಿವೃದ್ಧಿಯನ್ನು ನಿರ್ವಹಿಸಿತು. ಬಾಲ್ ಏರೋಸ್ಪೇಸ್ & ಟೆಕ್ನಾಲಜೀಸ್ ಕಾರ್ಪೊರೇಷನ್ LASP ನಿಂದ ಬೆಂಬಲದೊಂದಿಗೆ ವಿಮಾನ ವ್ಯವಸ್ಥೆಯನ್ನು ನಿರ್ವಹಿಸುತ್ತದೆ.

Best Mobiles in India

Read more about:
English summary
Kepler Space Telescope Bid ‘Goodnight’ With Final Set of Commands

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X