ದೃಷ್ಟಿಹೀನರಿಗೆ ಮರುದೃಷ್ಟಿಯ ವರದಾನ ಬಯೋನಿಕ್ ಐ
ಇಂದಿನ ಲೇಖನದಲ್ಲಿ ನಾವು ಬಯೋನಿಕ್ ಐ ಕುರಿತು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದು ಅಂಧರಿಗೆ, ದೃಷ್ಟಿ ಹೀನರಿಗೆ ಇದೊಂದು ವರದಾನವಾಗಿ ಪರಿಣಮಿಸಲಿದೆ.
ಇಂದು ತಂತ್ರಜ್ಞಾನವೆಂಬುದು ನಮ್ಮ ಆಲೋಚನೆಗಳಿಗಿಂತಲೂ ವೇಗವಾಗಿ ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಯಾವುದೇ ಕ್ಷೇತ್ರದಲ್ಲಿ ಕೂಡ ಇಂದು ಸಾಧನೆಯನ್ನು ಮಾಡುತ್ತಿರಲು ಈ ತಂತ್ರಜ್ಞಾನವೇ ಕಾರಣವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಸುಧಾರಣೆಗಳು ಉಂಟಾಗುತ್ತಿವೆ. ಅದರಲ್ಲೂ ವೈದ್ಯಕೀಯ ಕ್ಷೇತ್ರವಂತೂ ಅಸದಳವಾಗಿ ಇಂದು ನವೀಕರಣವನ್ನು ಕಂಡುಕೊಳ್ಳುತ್ತಿದೆ.

ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಅಂಗವಿಕಲತೆನ್ನು ಹೊಡೆದೋಡಿಸುವ ಮಹಾನ್ ತಂತ್ರಗಳನ್ನು ಕಂಡುಕೊಳ್ಳಲಾಗಿದೆ. ಕ್ಯಾನ್ಸರ್‌ನಂತಹ ಭಯಂಕರ ರೋಗಗಳಿಗೂ ಔಷಧವನ್ನು ಕಂಡುಹಿಡಿಯಲಾಗಿದೆ. ಹೀಗೆ ನಮ್ಮ ವೈದ್ಯಕೀಯ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರಗತಿಯನ್ನು ಹೊಂದುತ್ತಲೇ ಇದೆ. ಇಂದಿನ ನಮ್ಮ ಲೇಖನದಲ್ಲಿ ನಾವು ಚರ್ಚಿಸಲು ಹೊರಟಿರುವ ವಿಷಯವಾಗಿದೆ ಬಯೋನಿಕ್ ಕಣ್ಣು. ಅಂಧರಿಗೆ ಈ ಕಣ್ಣು ಮರುದೃಷ್ಟಿಯನ್ನು ನೀಡಲಿದ್ದು ಇದರ ಬಗ್ಗೆ ಕೊಂಚ ತಿಳಿದುಕೊಳ್ಳೋಣ.

ಎಮ್‌ಐಟಿಯು ಈ ಪ್ರಾಜೆಕ್ಟ್ ಕುರಿತಂತೆ ಪ್ರಕಟಣೆಯನ್ನು ಹೊರಡಿಸಿದ್ದು ಅಂಧರಿಗೆ ಹೊಸ ದೃಷ್ಟಿ ಒದಗಿಸುವ ಬಯೋನಿಕ್ ಐ ಪ್ರಾಜೆಕ್ಟ್ ಮೇಲೆ ಕಂಪನಿ ಕೆಲಸ ಮಾಡಲಿದೆ. ಈ ಪ್ರಾಜೆಕ್ಟ್‌ಗೆ ಕಂಪನಿ ಓರಿಯನ್ ಎಂಬ ಹೆಸರನ್ನು ಕೂಡ ಇಟ್ಟಿದೆ. ನಿರ್ದಿಷ್ಟ ಡಿವೈಸ್ ಇದಾಗಿರುವುದರಿಂದ ವಿಶ್ವದಾದ್ಯಂತ ಹೆಚ್ಚಿನ ಭರವಸೆಯನ್ನು ಇದು ಹೊಂದಿದೆ. ಕ್ಯಾಮರಾದೊಂದಿಗೆ ಗಾಜನ್ನು ಇದು ಹೊಂದಿದ್ದು ಬಾಹ್ಯ ಪ್ರೊಸೆಸರ್ ಅನ್ನು ಇದು ಪಡೆದುಕೊಂಡು ಸರಿಯಾಗಿ ಕಾರ್ಯನಿರ್ವಹಿಸಲಿದೆ.

ಇದರಿಂದ ಅಂಧರು ಬೆಳಕು, ಕತ್ತಲು, ಅಕ್ಷರಗಳನ್ನು ನೋಡಬಹುದಾಗಿದೆ. ಇದರ ಬೆಲೆ ಕೊಂಚ ದುಬಾರಿಯಾಗಿದ್ದು ಎಲ್ಲರ ಕೈಗೆಟಕುವುದು ಅಸಾಧ್ಯ ಎಂಬುದಾಗಿಯೂ ಹೇಳಬಹುದು. ಬೆಲೆ $125,000. ಮೆದುಳಿಗೆ ಇದು ಸಂಪರ್ಕವನ್ನು ಪಡೆದುಕೊಂಡಿದ್ದು ಇದರಿಂದ ಹೊರಗಿನ ಸಿಗ್ನಲ್‌ಗಳನ್ನು ಪಡೆದುಕೊಳ್ಳಲು ಇದಕ್ಕೆ ಸಾಧ್ಯವಾಗುತ್ತದೆ ಮತ್ತು ತಮ್ಮ ಸುತ್ತಲಿನದನ್ನು ಜನರು ನೋಡಬಹುದಾಗಿದೆ.
ಈ ಡಿವೈಸ್ ಸಾಕಷ್ಟು ಮಹತ್ವಗಳನ್ನು ಒಳಗೊಂಡಿದ್ದು ಕಣ್ಣಿಲ್ಲದವರು, ಗ್ಲೌಕೊಮಾ ಹೊಂದಿರುವವರು, ಮಧುಮೇಹಿಗಳು ಹೀಗೆ ದೃಷ್ಟಿ ಸಮಸ್ಯೆಗಳನ್ನು ಹೊಂದಿರುವವರಿಗೆ ವರದಾನವಾಗಿ ಪರಿಣಮಿಸಲಿದೆ. ಅದರೆ ಈ ಡಿವೈಸ್ ಅನ್ನು ನೀವು ಧರಿಸಬೇಕು ಎಂದಾದಲ್ಲಿ ಮೆದುಳಿ ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಿದೆ. ಓರಿಯನ್‌ಗೆ ಬೇಕಾಗಿರುವುದು ಕ್ಯಾಮರಾ ಇರುವ ಕನ್ನಡಕವಾಗಿದೆ ಹಾಗೂ ಬಾಹ್ಯ ಪ್ರೊಸೆಸರ್. ಇದಕ್ಕೂ ಮುನ್ನು ಈ ಡಿವೈಸ್ ಅನ್ನು ರೋಗಿಗಳ ಮೇಲೆ ಪರಿಶೀಲಿಸುವ ಕೆಲಸ ಅಕ್ಟೋಬರ್‌ನಲ್ಲಿ ನಡೆಯಲಿದೆ.


Click it and Unblock the Notifications








