Home
Scitech

ಮಂಗಳೂರು ಮುಳುಗಡೆಯಾಗಲಿದೆ ಎನ್ನುತ್ತಿದೆ ನಾಸಾ!!..ಏನಿದು ಶಾಕಿಂಗ್ ವರದಿ!?

ನ್ಯೂಯಾರ್ಕ್​ ಮತ್ತು ಮುಂಬೈ ನಗರಗಳಿಗೂ ಮುಂಚಿತವಾಗಿ ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಮುಳುಗಡೆಯಾಗಲಿದೆ ಅಂತ ಅಮೆರಿಕದ ನಾಸಾ ಸಂಸ್ಥೆಯ ಇತ್ತೀಚಿನ ವರದಿ ಹೇಳಿದೆ.!!

By Bhaskar N J

ಜಾಗತಿಕ ತಾಪಮಾನದಿಂದ ಧ್ರುವ ಪ್ರದೇಶಗಳಲ್ಲಿನ ನೀರ್ಗಲ್ಲುಗಳು ಕರಗಿ ಸಮುದ್ರದ ನೀರಿನ ಮಟ್ಟ ದಿನೇ ದಿನೇ ಏರಿಕೆಯಾಗ್ತಿದೆ. ಹೀಗಾಗಿ ನ್ಯೂಯಾರ್ಕ್​ ಮತ್ತು ಮುಂಬೈ ನಗರಗಳಿಗೂ ಮುಂಚಿತವಾಗಿ ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಮುಳುಗಡೆಯಾಗಲಿದೆ ಅಂತ ಅಮೆರಿಕದ ನಾಸಾ ಸಂಸ್ಥೆಯ ಇತ್ತೀಚಿನ ವರದಿ ಹೇಳಿದೆ.!!

ಹೌದು, ಜಾಗತಿಕ ತಾಪಮಾನ ಏರಿಕೆಯಿಂದ ಯಾವ ಹಿಮನದಿ, ಹಿಮಗಲ್ಲುಗಳು ಕರಗಿದರೆ ಯಾವ ನಗರಗಳ ಭಾಗಗಳು ಮುಳುಗುತ್ತವೆ ಎಂಬುದನ್ನು ಲೆಕ್ಕ ಹಾಕುವ ಆನ್‌ಲೈನ್ ಸಿಮ್ಯುಲೇಟರ್ ಅನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಮಂಗಳೂರು ಹೆಚ್ಚು ಅಪಾಯದಲ್ಲಿರುವ ನಗರ ಎಂದು ತಿಳಿದುಬಂದಿದೆ.!!

ಈ ಸಿಮ್ಯುಲೇಟರ್ ಅನ್ನು ಬಳಸಿಕೊಂಡು ವಿಶ್ವದ ಯಾವ ನಗರಗಳು ಎಷ್ಟು ಅಪಾಯ ಎದುರಿಸುತ್ತವೆ ಎಂಬುದನ್ನು ಕಂಡುಕೊಳ್ಳಬಹುದಾಗಿದ್ದು, ಹಾಗಾದರೆ, ನಾಸಾ ಬಿಡುಗಡೆ ಮಾಡಿರುವ ಈ ವರದಿಯಲ್ಲಿ ಏನೆಲ್ಲಾ ಶಾಕಿಂಗ್ ಅಂಶಗಳನ್ನು ನೀಡಲಾಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲಿ ತಿಳಿಯಿರಿ.!!

ಮಂಗಳೂರು ಮೋಸ್ಟ್ ಡೇಂಜರಸ್!!

ಮಂಗಳೂರು ಮೋಸ್ಟ್ ಡೇಂಜರಸ್!!

ಜಗತ್ತಿನ ಶೇ.75ರಷ್ಟು ನೀರ್ಗಲ್ಲುಗಳು ಅಂಟಾರ್ಕ್ಟಿಕಾ ಮತ್ತು ಗ್ರೀನ್​ಲ್ಯಾಂಡ್​ನಲ್ಲಿ ಶೇಖರಗೊಂಡಿದ್ದು, ಜಾಗತಿಕ ತಾಪಮಾನ ಏರಿಕೆಯಿಂದ ಇವುಗಳು ಕರಗುತ್ತಿವೆ. ಹಾಗಾಗಿ, ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿಯ ಸಂಶೋಧಕರು ಜಗತ್ತಿನ 293 ಕರಾವಳಿ ಪ್ರದೇಶಗಳ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ಭಾರತದಲ್ಲಿ ಮಂಗಳೂರು ಮೋಸ್ಟ್ ಡೇಂಜರಸ್ ಅಂತ ಹೇಳಿದೆ.

ಪ್ರತಿ ವರ್ಷ ಏರಿಕೆಯಾಗುತ್ತಿದೆ ನೀರಿನ ಪಟ್ಟ!!

ಪ್ರತಿ ವರ್ಷ ಏರಿಕೆಯಾಗುತ್ತಿದೆ ನೀರಿನ ಪಟ್ಟ!!

ಅಂಟಾರ್ಟಿಕಾದ ಪಶ್ಚಿಮ ಭಾಗದ ಹಿಮ ಮತ್ತು ಗ್ರೀನ್‌ಲ್ಯಾಂಡ್‌ನ ದಕ್ಷಿಣ ಭಾಗದಲ್ಲಿನ ಹಿಮ ಕರಗಿದರೆ ಮಂಗಳೂರು ಇನ್ನಷ್ಟು ಅಪಾಯ ಎದುರಿಸಲಿದೆ ಎಂದು ವರದಿಯಲ್ಲಿ ಹೇಳಿದ್ದು, ಈಗ ಹೇಳಿರುವಂತೆ ಮಂಗಳೂರಿನ ಬಳಿ ಪ್ರತಿ ವರ್ಷ ಏರಿಕೆಯಾಗಲಿರುವ ಸಮುದ್ರದ ಮಟ್ಟ 1.598 ಮಿಲಿ ಮೀಟರ್!!

ಭವಿಷ್ಯದಲ್ಲಿ ಮುಳುಗುವುದು ಗ್ಯಾರಂಟಿ!!

ಭವಿಷ್ಯದಲ್ಲಿ ಮುಳುಗುವುದು ಗ್ಯಾರಂಟಿ!!

2100ರ ವೇಳೆಗೆ ಮಂಗಳೂರಿನ ಸಮುದ್ರ ಮಟ್ಟ 10.98 ಸೆಂಟಿಮೀಟರ್‌ಗೆ ಏರಲಿದೆ. ಮುಂಬೈನಲ್ಲಿ 15.26 ಸೆ.ಮೀ ಹಾಗೂ ನ್ಯೂಯಾರ್ಕ್ ನಲ್ಲಿ 10.65 ಸೆ.ಮೀ ಸಮುದ್ರ ಮಟ್ಟ ಇರಲಿದೆ ಎಂದು ನಾಸಾ ವರದಿಯಲ್ಲಿ ತಿಳಿಸಿದೆ. ಈ ಹಿಂದಿನ ವರದಿಯಲ್ಲಿ ಮುಂಬೈ ಮತ್ತು ನ್ಯೂಯಾರ್ಕ್ ನಗರಗಳು ಮಾತ್ರ ಅಪಾಯದ ಮಟ್ಟದಲ್ಲಿದ್ದವು. ಈಗಿನ ವರದಿ ಪ್ರಕಾರ ಮಂಗಳೂರು ನಗರ ಭವಿಷ್ಯದಲ್ಲಿ ಮುಳುಗುವುದು ಗ್ಯಾರಂಟಿ .!!

ಟೊಕಿಯೋ ಅಪಾಯಕಾರಿ!!

ಟೊಕಿಯೋ ಅಪಾಯಕಾರಿ!!

ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರಮಟ್ಟ ಹೆಚ್ಚಾದಲ್ಲಿ ಭಾರತದಲ್ಲಿ ಕರಾವಳಿ ನಗರ ಮಂಗಳೂರು ಮುಳುಗಡೆಯ ಹೆಚ್ಚು ಅಪಾಯ ಎದುರಿಸುತ್ತಿದ್ದರೆ, ಪ್ರಪಂಚದಲ್ಲಿ ಟೊಕಯೋ ನಗರ ಹೆಚ್ಚು ಅಪಾಯಕಾರಿ ನಗರವಾಗಿದೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹೇಳಿದೆ.!!

Best Mobiles in India

English summary
The tool looks at the Earth's spin and gravitational effects to predict how water will be "redistributed" globally.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+