ಬಾಹ್ಯಾಕಾಶ ಟೂರಿಸಂಗೆ ಮನಸ್ಸು ಮಾಡದ ಇಸ್ರೊ!!

ವಿಶ್ವದ ಹಲವು ರಾಷ್ಟ್ರಗಳು ಬಾಹ್ಯಾಕಾಶ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಬಾಹ್ಯಾಕಾಶ ಟೂರಿಸಂ ಬಗ್ಗೆ ಇಸ್ರೊ ನಿರಾಕರಿಸಿದೆ.!!

|

ವಿಶ್ವದೆಲ್ಲೆಡೆ ಟ್ರೆಂಡ್ ಆಗುತ್ತಿರುವ ಬಾಹ್ಯಾಕಾಶ ಟೂರಿಸಂ ಅನ್ನು ಪ್ರವಾಸೋದ್ಯಮ ದೃಷ್ಟಿಯಿಂದ ತಾನು ಬಳಸುವುದಿಲ್ಲ ಎಂದು ಇಸ್ರೊ ಸ್ಪಷ್ಟಪಡಿಸಿದೆ.! ವಿಶ್ವದ ಹಲವು ರಾಷ್ಟ್ರಗಳು ಬಾಹ್ಯಾಕಾಶ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಬಾಹ್ಯಾಕಾಶ ಟೂರಿಸಂ ಬಗ್ಗೆ ಇಸ್ರೊ ನಿರಾಕರಿಸಿದೆ.!!

ಬಾಹ್ಯಾಕಾಶ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇಸ್ರೊ ಪ್ರವೇಶಿಸುತ್ತಿಲ್ಲ. ಅಂತಹ ಯೋಜನೆಗಳನ್ನು ನಾವು ಮಾಡಿಕೊಳ್ಳುತ್ತಿಲ್ಲ. ಆದರೆ, ಖಾಸಗಿ ಬಾಹ್ಯಾಕಾಶ ಕಂಪ ನಿಗಳು ಸಾಹಸೋದ್ಯಮವಾಗಿ ಬಾಹ್ಯಾಕಾಶ ಟೂರಿಸಂ ಕ್ಷೇತ್ರವನ್ನು ಪ್ರವೇಶಿಸಬಹುದು ಎಂದು ಕನ್ನಡಿಗರಾದ ಇಸ್ರೊ ಮುಖ್ಯಸ್ಥ ಎ.ಎಸ್‌ ಕಿರಣ್ ಕುಮಾರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.!

ಬಾಹ್ಯಾಕಾಶ ಟೂರಿಸಂಗೆ ಮನಸ್ಸು ಮಾಡದ ಇಸ್ರೊ!!

ದೇಶದಲ್ಲಿನ ಖಾಸಗಿ ಕಂಪನಿಗಳು ಸಾಹಸೋದ್ಯಮದ ಭಾಗವಾಗಿ ಸ್ಪೇಸ್ ಟೂರಿಸಂನಲ್ಲಿ ಭಾಗವಹಿಸಬಹುದು. ಜಗತ್ತಿನಲ್ಲಿ ಇಂದು ವೇಗವಾಗಿ ಬೆಳೆಯುತ್ತಿರುವ ವಲಯದಲ್ಲಿ ಇದೂ ಕೂಡ ಒಂದಾಗಿದೆ. ಆದರೆ, ಇಸ್ರೊ ಇನ್ನಿತರ ಅಭಿವೃದ್ದಿ ಗುರಿಗಳನ್ನು ಹೊಂದಿರುವುದರಿಂದ ಬಾಹ್ಯಾಕಾಶ ಟೂರಿಸಂ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ.!!

ಬಾಹ್ಯಾಕಾಶ ಟೂರಿಸಂಗೆ ಮನಸ್ಸು ಮಾಡದ ಇಸ್ರೊ!!

ಭಾರತ ಈಗ ಬಾಹ್ಯಾಕಾಶದಲ್ಲಿ ಕೇವಲ 42 ಉಪಗ್ರಹಗಳನ್ನು ಹೊಂದಿದ್ದು, ಇಸ್ರೊ ಪ್ರತಿ ವರ್ಷ ಉಪಗ್ರಹಗಳ ಸಂಖ್ಯೆಯನ್ನು ಹೆಚ್ಚಿಸಲು ಯತ್ನಿಸುತ್ತಿದೆ. ಉಪಗ್ರಹಗಳ ಸಂಖ್ಯೆ ಹೆಚ್ಚಿಸುವುದರಿಂದ ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಬಹುದು ಎಂದು ಕಿರಣ್ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.!!

Best Mobiles in India

English summary
The Indian Space Research Organisation(ISRO) is not into space for tourism. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X