2017ರಲ್ಲಿ ಭಾರತದಲ್ಲಿ ಸಂಚಲನ ಮೂಡಿಸಿದ ಆಪ್‌ಗಳು ಮತ್ತು ತಂತ್ರಜ್ಞಾನಗಳಿವು!!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 100ಕ್ಕೂ ಹೆಚ್ಚು ಸೇವೆಗಳನ್ನು ಹೊಂದಿರುವ ಸರ್ಕಾರಿ ಆಪ್ ಉಮಂಗ್
ಕಳೆದ ಒಂದು ವರ್ಷದಲ್ಲಿ ತಂತ್ರಜ್ಞಾನ ಜಗತ್ತು ಬಹಳಷ್ಟು ಬದಲಾಗಿದೆ. ಕಳೆದ ವರ್ಷ(2017) ಹುಟ್ಟಿದ ಕೆಲತಂತ್ರಜ್ಞಾನ ಸಂಶೋಧನೆಗಳು ಜಗತ್ತಿನಲ್ಲೆಲ್ಲ ಹೆಸರಾದರೆ, ಇನ್ನು ಕೆಲವು ತಂತ್ರಜ್ಞಾನ ಅವಿಷ್ಕಾರಗಳು ಹೇಳಹೆಸರಿಲ್ಲದೆ ಮೂಲೆಗುಂಪಾಗಿವೆ.! ಆದರೆ, ತಂತ್ರಜ್ಞಾನದ ಅವಿಷ್ಕಾರಗಳು ಮಾತ್ರ ನಿಂತಿಲ್ಲ.!!
ಹಾಗಾಗಿ, ಇಂದಿನ ಲೇಖನದಲ್ಲಿ 2017ರಲ್ಲಿ ಡಿಜಿಟಲ್ ಕ್ರಾಂತಿಗೆ ಯಾವೆಲ್ಲ ಆಪ್‌ಗಳು ಸಹಕಾರಿಯಾದವು? ನಿತ್ಯದ ಕೆಲಸಗಳನ್ನು ಸುಲಭಗೊಳಿಸುವ ತಂತ್ರಜ್ಞಾನ ಏನೇನು ಬಂತು? ಎಂಬುದನ್ನು ತಿಳಿದುಕೊಳ್ಳೋಣ..!! ಹಾಗಾದರೆ, ಆ ತಂತ್ರಜ್ಞಾನ ಪ್ರಪಂಚದ ಮೈಲಿಗಲ್ಲುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

‘ಉಮಂಗ್’ ಆಪ್!!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 100ಕ್ಕೂ ಹೆಚ್ಚು ಸೇವೆಗಳನ್ನು ಹೊಂದಿರುವ ಸರ್ಕಾರಿ ಆಪ್ ಉಮಂಗ್ (UMANG- Unified Mobi*e App*ication for New-age Governance) 2017 ರಲ್ಲಿ ಮೈಲಿಗಲ್ಲು ಸೃಷ್ಟಿಸಿದ ಆಪ್ ಎನ್ನಬಹುದು.! ಒಂದೇ ಆಪ್‌ನಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಪಡೆಯಬಹುದಾದ ಅತ್ಯುತ್ತಮ ಆಪ್.!!

ತೇಜ್ ಆಪ್.!!
ಸ್ಪೀಕರ್ ಮತ್ತು ಮೈಕ್ ಮೂಲಕ ಶಬ್ದ ರವಾನಿಸಿ ಹಣ ವರ್ಗಾವಣೆ ನಡೆಸುವ ತಂತ್ರಜ್ಞಾನದ ತೇಜ್ ಕೂಡ ಗಮನಸೆಳೆದಿದೆ. ಮೊಬೈಲ್ ಸಂಖ್ಯೆ ಮೂಲಕ ಅತ್ಯಂಕ ಸರಳವಾಗಿ ಹಣವನ್ನು ವಿನಿಮಯ ಮಾಡಬಹುದಾದ ಗೂಗಲ್‌ನ ಈ ಪೇಮೆಂಟ್ ಆಪ್ ಕೂಡ ಹೆಚ್ಚು ಹೆಸರು ಮಾಡಿದೆ.!!

ಇಂಟರ್‌ನೆಟ್!!
ಭಾರತದಲ್ಲಿ ಮೊಬೈಲ್ ಇಂಟರ್‌ನೆಟ್ ಸರಾಸರಿ ವೇಗ 8.80 ಎಂಬಿಪಿಎಸ್ ಇದೆ. ಜಾಗತಿಕ ಇಂಟರ್‌ನೆಟ್ ವೇಗ ಪರೀಕ್ಷೆ ಸೂಚ್ಯಂಕದ ಪ್ರಕಾರ, 122 ರಾಷ್ಟ್ರಗಳ ಪೈಕಿ 109ನೇ ಸ್ಥಾನವನ್ನು ಭಾರತ ಪಡೆದಿದೆ. ಆದರೆ, ಕೆಲವು ತಿಂಗಳುಗಳು ವಿಶ್ವದಲ್ಲಿಯೇ ಹೆಚ್ಚು ಡೇಟಾ ಬಳಸಿದ ರಾಷ್ಟ್ರ ಎಂಬ ಖ್ಯಾತಿಗೆ ಭಾರತ ಖ್ಯಾತವಾಗಿತ್ತು.!!


ಕಲಾಂ ಸ್ಯಾಟ್ ಉಪಗ್ರಹ!!
ವಿಶ್ವದಲ್ಲಿಯೇ ಅತ್ಯಂತ ಪುಟ್ಟ ಉಪಗ್ರಹ 64 ಗ್ರಾಂ ತೂಕದ ಕಲಾಂ ಸ್ಯಾಟ್ ಉಡಾವಣೆಗೊಂಡಿರುವ ಜಗತ್ತಿನ ಅತಿ ಹಗುರ ಉಪಗ್ರಹವೆನಿಸಿದೆ.ತಮಿಳುನಾಡಿನ 18 ವರ್ಷದ ವಿದ್ಯಾರ್ಥಿ ರಿಫತ್ ಷರೂಕ್ ಹಾಗೂ ಆತನ ತಂಡ ವಿನ್ಯಾಸಗೊಳಿಸಿ ಸಿದ್ಧಪಡಿಸಿದ್ದ ಈ ಉಪಗ್ರಹ 3.8 ಸೆಂ.ಮೀ. ಘನಾಕೃತಿ ಹೊಂದಿತ್ತು ಅಷ್ಟೆ.!!

ಏಕಕಾಲಕ್ಕೆ 104 ಉಪಗ್ರಹ ಉಡಾವಣೆ
ಏಕಕಾಲಕ್ಕೆ ಯಶಸ್ವಿಯಾಗಿ 104 ಉಪಗ್ರಹಗಳನ್ನು ಈ ವರ್ಷ ಸೂರ್ಯಸ್ಥಾಯಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಶ್ವ ದಾಖಲೆ ಮಾಡಿತು. ಹಲವು ವಿಶ್ವದಾಖಲೆಗಳ ಒಡೆಯ ಇಸ್ರೋಗೆ ಇದು ಭವಿಷ್ಯದ ಯೋಜನೆ ಎಂಬುದು ವಿಶೇಷ.!!


Click it and Unblock the Notifications








