ಸೆಖೆಯಾಗದಂತೆ ತಡೆಯುವ ಹವಾಮಾನ ನಿಯಂತ್ರಿತ ಸ್ಮಾರ್ಟ್ ಬಟ್ಟೆಗಳು!
ಮಳೆಗಾಲಕ್ಕೆ ಬೆಚ್ಚಗಿರಬೇಕು ಎಂದರೆ ಸ್ವೆಟ್ಟರ್ ಬೇಕು, ಬೇಸಿಗೆಗೆ ತೆಳುವಾಗಿರುವ ಕಾಟನ್ ಬಟ್ಟೆಯೇ ಹಿತವೆನಿಸುತ್ತದೆ. ಹೀಗೆ ಬಟ್ಟೆಗಳ ಬಗೆಗಿನ ಕ್ರೇಝ್ ಇದ್ದದ್ದೇ . ಆದರೆ ಇನ್ನು ನೀವಂದುಕೊಳ್ಳುವಂತ ಬಟ್ಟೆಗಳಲ್ಲ ಬದಲಾಗಿ ಎಲ್ಲವೂ ಸ್ಮಾರ್ಟ್ ಆಗುತ್ತಿರುವ ಈ ಯುಗದಲ್ಲಿ ನಿಮ್ಮ ಬೆವರು ಮತ್ತು ನಿಮ್ಮ ದೇಹದ ಶಾಖಕ್ಕೆ ಅನುಗುಣವಾಗಿ ಹೊಂದಿಸಿಕೊಳ್ಳಬಹುದಾದ ಬಟ್ಟೆಗಳು ಲಭ್ಯವಾಗುವ ಕಾಲ ಸನ್ನಿಹಿತವಾಗುತ್ತಿದೆ.

ಶಾಖ ನಿಯಂತ್ರಣದ ಬಟ್ಟೆ:
ಹೌದು, ಇಂತಹದ್ದೊಂದು ಸಂಶೋಧನೆಗೆ ವಿಜ್ಞಾನಿಗಳು ಮುಂದಾಗಿದ್ದಾರೆ. ಇದೀಗ ವಿಜ್ಞಾನಿಗಳು ಸ್ವಯಂಚಾಲಿತವಾಗಿ ಬಟ್ಟೆಯೊಳಗೆ ಹಾದುಹೋಗುವ ಶಾಖವನ್ನು ನಿಯಂತ್ರಿಸುವ ಮತ್ತು ಆ ಮೂಲಕ ಧರಿಸಿರುವ ವ್ಯಕ್ತಿಯು ವಾತಾವರಣಕ್ಕೆ ಅನುಗುಣವಾಗಿ ತಾಪಮಾನವನ್ನು ಹೊಂದಿಸುವ ಅಂದರೆ ತಣ್ಣಗೆ ಅಥವಾ ಬೆಚ್ಚಗೆ ಆಗುವಂತೆ ಅಡ್ಜೆಸ್ಟ್ ಮಾಡಿಕೊಳ್ಳುವಂತ ಸ್ಮಾರ್ಟ್ ಬಟ್ಟೆಯನ್ನು ಅನ್ವೇಷಣೆ ಮಾಡಿದ್ದಾರೆ.

ಬೇಸಿಗೆಯಲ್ಲಿ ಸೆಖೆಯಾಗಲ್ಲ, ಚಳಿಗಾಲದಲ್ಲಿ ಚಳಿಯಾಗಲ್ಲ!
ಅಧ್ಯಯನಕಾರರು ತಿಳಿಸುವಂತೆ ಬೇಸಿಗೆಯಲ್ಲಿ ಈ ಬಟ್ಟೆ ನಿಮ್ಮ ದೇಹದಲ್ಲಿ ಬಿಸಿಯು ತಟ್ಟದಂತೆ ನೋಡಿಕೊಳ್ಳುತ್ತದೆ ಮತ್ತು ನಿಮಗೆ ಸೆಖೆಯಾಗದಂತೆ ಕಾಪಾಡುತ್ತದೆ. ಇನ್ನು ಚಳಿಗಾಲ ಬಂತೆಂದರೆ ಈ ಫ್ಯಾಬ್ರಿಕ್ ನಲ್ಲಿ ಬಿಸಿಯು ಚಲಿಸುವಂತೆ ನೋಡಿಕೊಂಡು ಬೆಚ್ಚಗಿರಲು ಅನುವು ಮಾಡಿಕೊಡುತ್ತದೆಯಂತೆ.

ಮೇರಿಲ್ಯಾಂಡ್ ಯುನಿವರ್ಸಿಟಿಯಲ್ಲಿ ಸಂಶೋಧನೆ:
ಯುಸ್ ನ ಮೇರಿಲ್ಯಾಂಡ್ ಯುನಿವರ್ಸಿಟಿಯ ಅಧ್ಯಯನಕಾರರು ಈ ಬಟ್ಟೆಯನ್ನು ಸೃಷ್ಟಿಮಾಡಿದ್ದು ಕಂಡಕ್ಟೀವ್ ಮೆಟಲ್ ನ ಕೋಟಿಂಗ್ ನ್ನು ಇದಕ್ಕೆ ಮಾಡಲಾಗಿದೆ.

ಪ್ರಪಂಚದ ಮೊದಲ ವಿಭಿನ್ನ ಸ್ಮಾರ್ಟ್ ಬಟ್ಟೆ:
ವಾತಾವರಣದ ಬಿಸಿಯನ್ನು ಎಕ್ಸ್ ಚೇಂಜ್ ಮಾಡುವಂತೆ ಸೃಷ್ಟಿಮಾಡಲಾಗಿರುವ ಮೊದಲ ಬಟ್ಟೆ ಇದಾಗಿದೆ ಎಂಬುದಾಗಿ ಜರ್ನಲ್ ಸೈನ್ಸ್ ನಲ್ಲಿ ಪ್ರಕಟಿಸಲಾಗಿದೆ. ಬಿಸಿಯಾದ ವಾತಾವರಣವಿರುವ ಸಂದರ್ಬದಲ್ಲಿ ಕಾಂಪ್ಯಾಕ್ಟ್ ಎಳೆಗಳನ್ನು ಮತ್ತು ಕೋಟಿಂಗ್ ನ್ನು ಆಕ್ಟಿವೇಟ್ ಮಾಡುತ್ತದೆ. ಇದು ನೇರಳಾತೀತ ಕಿರಣಗಳ ಜೊತೆಗೆ ಫ್ಯಾಬ್ರಿಕ್ ವರ್ತಿಸುವ ರೀತಿಯನ್ನು ಬದಲಾಯಿಸುತ್ತದೆ. ಹಾಗಾಗಿ ನಿಮ್ಮ ದೇಹಕ್ಕೆ ಹಿತವಾದ ಅನುಭವವನ್ನು ಕಾಲಕ್ಕೆ ತಕ್ಕಂತೆ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವ ಸಾಮರ್ಥ್ಯವನ್ನು ಈ ಫ್ಯಾಬ್ರಿಕ್ ಹೊಂದಿದೆ.

ಡೈನಾಮಿಕ್ ಗೇಟ್:
ಇದು ಇನ್ಫ್ರಾರೆಡ್ ರೇಡಿಯೇಷನ್ ಗೆ ಒಂದು ಡೈನಾಮಿಕಲಿ ಗೇಟ್ ನಿರ್ಮಾಣ ಮಾಡಲಾಗಿರುವ ಮೊದಲ ತಂತ್ರಜ್ಞಾನವಾಗಿದೆ ಎಂದು ಮೇರಿಲ್ಯಾಂಡ್ ಯುನಿವರ್ಸಿಟಿಯ ಪ್ರೊಸೆಸರ್ ಆಗಿರುವ ಯುಹುಯಾಂಗ್ ವಾಂಗ್ ತಿಳಿಸಿದ್ದಾರೆ.

ಎರಡು ಸಿಂಥಟಿಕ್ ಮೆಟಿರಿಯಲ್:
ಇದರ ನೂಲುಗಳು ಎರಡು ವಿಭಿನ್ನ ಸಿಂಥಟಿಕ್ ಮೆಟಿರಿಯಲ್ ನಿಂದ ತಯಾರಿಸಲಾಗಿದ್ದು ಒಂದು ಫ್ಯಾಬ್ರಿಕ್ ನೂಲು ನೀರನ್ನು ಆವಿಗೊಳಿಸುವ ಮತ್ತೊಂದು ನೂಲು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಾರ್ಬನ್ ನ್ಯಾನೋ ಟ್ಯೂಬ್ ಗಳ ಬಳಕೆ:
ಎಳೆಗಳನ್ನು ಕಾರ್ಬನ್ ನ್ಯಾನೋ ಟ್ಯೂಬ್ ಗಳ ಲೇಪನ ಮಾಡಲಾಗುರುತ್ತದೆ. ಹಗುರವಾದ, ಕಾರ್ಬನ್ ಆಧಾರಿತ, ವಾಹಕ ಮೆಟಲ್ ನ್ನು ಇದು ಹೊಂದಿರುತ್ತದೆ. ಇದರಲ್ಲಿರುವ ಫೈಬರ್ ನಂತಹ ವಸ್ತುವಿನಿಂದಾಗಿ ನೀರನ್ನು ಪ್ರತಿರೋಧಿಸುವ ಮತ್ತು ಹೀರಿಕೊಳ್ಳುವ ಎರಡೂ ಸಾಮರ್ಥ್ಯವೂ ಕೂಡ ಇರುತ್ತದೆ. ಬೆವರುವಿಕೆ ಮತ್ತು ದೇಹದ ಸುತ್ತ ನೀರಿನಂತ ಅಂಶವು ಕಂಡಾಗ ಈ ಫೈಬರ್ ಬಾಗುತ್ತದೆ.

ವಿದ್ಯುತ್ ಕಾಂತೀಯ ಜೋಡಣೆ:
ಚಳಿಯ ವಾತಾವರಣದಲ್ಲಿ ಬಟ್ಟೆಯ ನೂಲುಗಳಲ್ಲಿರುವ ಸಣ್ಣ ಸಣ್ಣ ರಂಧ್ರದಂತಹ ಭಾಗವು ಹತ್ತಿರಬರುತ್ತದೆ. ಇದು ಸಣ್ಣ ರೀತಿಯ ಕೂಲಿಂಗ್ ಎಫೆಕ್ಟ್ ನ್ನು ನೀಡುತ್ತದೆ. ಯಾಕೆಂದರೆ ಇದು ಶಾಖವನ್ನು ಹಾರಿಹೋಗುವುದಕ್ಕೆ ಅವಕಾಶ ಮಾಡುತ್ತದೆ. ಸಂಶೋಧಕರು ಹೇಳುವ ಪ್ರಕಾರ ಇದರಲ್ಲಿರುವ ಕಾರ್ಬನ್ ನ್ಯೂನೋಟ್ಯೂಬ್ ಗಳ ನಡುವಿನ ವಿದ್ಯುತ್ ಕಾಂತೀಯ ಜೋಡಣೆಯೂ ಕೂಡ ಈ ಪ್ರಕ್ರಿಯೆಗೆ ನೆರವು ನೀಡುತ್ತದೆ.

ಪ್ರಶ್ನೆಗಳು:
ಒಟ್ಟಾರೆ ಮನುಷ್ಯನ ದೇಹದ ಶಾಖಕ್ಕೆ ಅನುಗುಣವಾಗಿ ಅವರ ದೇಹಕ್ಕೆ ಹಿತವೆನಿಸುವಂತೆ ಟೆಂಪರೇಚರ್ ಹೊಂದಿಸಿಕೊಳ್ಳುವಂತಹ ಸ್ಮಾರ್ಟ್ ಬಟ್ಟೆ ಇದಾಗಿದೆ. ಆದರೆ ಇದನ್ನು ಒಗೆಯಬಹುದೇ? ಇದರ ರೇಟ್ ಎಷ್ಟು? ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವೇ? ಯಾವಾಗ ಮಾರಾಟ ಮಾಡಲು ಪ್ರಾರಂಭಿಸಲಾಗುತ್ತದೆ? ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆಯೇ ಅಥವಾ ಇಲ್ಲವೇ? ಇತ್ಯಾದಿ ಪ್ರಶ್ನೆಗಳು ಸದ್ಯಕ್ಕೆ ಪ್ರಶ್ನಾರ್ತಕವಾಗಿಯೇ ಉಳಿದಿದೆ.


Click it and Unblock the Notifications








