2020ಕ್ಕೆ ಶುರುವಾಗಲಿದೆ ಉಬರ್ ಏರ್: ಟ್ರಾಫಿಕ್ ಇದ್ರೆ ಚಿಂತೆ ಇಲ್ಲ, ಆಗಸದಲ್ಲಿ ಹಾರಾಡಿ..!
ದೇಶಿಯ ಮಾರುಕಟ್ಟೆಯಲ್ಲಿ ಅಮೆರಿಕಾ ಮೂಲದ ಆಪ್ ಆಧಾರಿತ ಟಾಕ್ಸಿ ಸೇವೆಯನ್ನು ನೀಡುತ್ತಿರುವ ಉಬರ್, ಟ್ಯಾಕ್ಸಿ ಸೇವೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಮುಂದಾಗಿದೆ. ಸಾಮಾನ್ಯ ಜನರು ಟ್ಯಾಕ್ಸಿ ದುಬಾರಿ ಎನ್ನುವ ಸಂದರ್ಭದಲ್ಲಿ ಕೈಗೆಟುಕುವ ಬೆಲೆಯಲ್ಲಿ ಕಾರಿನಲ್ಲಿಯೇ ಓಡಾಡುವ ಹಾಗೆ ಮಾಡಿದ ಉಬರ್, ಈಗ ಏರ್‌ಟಾಕ್ಸಿ ವಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಮುಂದಾಗಿದೆ.

ಮಹಾನಗರಗಳಲ್ಲಿ ಏರ್‌ಟ್ಯಾಕ್ಸಿ ಸೇವೆಯನ್ನು ಆರಂಭಿಸುವ ಯೋಜನೆಯನ್ನ ಈಗಾಗಲೇ ಹೊಂದಿರುವ ಉಬರ್, ಭಾರತ ಸೇರಿದಂತೆ ವಿಶ್ವದ ಐದು ದೇಶಗಳಲ್ಲಿ ಮೊದಲಿಗೆ ಈ ಸೇವೆಯನ್ನು ನೀಡಲಿದೆ. ಇಲ್ಲಿ ಹಿಟ್ ಆದರೆ ನಂತರದಲ್ಲಿ ಬೇರೆ ದೇಶಗಳಲ್ಲಿಯೂ ಏರ್‌ಟ್ಯಾಕ್ಸಿ ಸೇವೆಯನ್ನು ಶುರು ಮಾಡಲಿದೆ ಎನ್ನಲಾಗಿದೆ. ಹಾರುವುದು ಎಂದರೆ ದುಬಾರಿ ಎನ್ನುವ ಸಂದರ್ಭದಲ್ಲಿ ಅದನ್ನು ಬದಲಾಯಿಸಲು ಬರುತ್ತಿದೆ ಉಬರ್.

ಮಹಾನಗರಗಳಲ್ಲಿ:
ದೇಶದ ಪ್ರಮುಖ ಮಹಾನಗರಗಳಲ್ಲಿ ಉಬರ್ ಏರ್ ಸೇವೆಯನ್ನು ಆರಂಭಿಸಿಸಲು ರೂಪ ರೇಷೆ ತಯಾರಾಗುತ್ತಿದೆ. ಕಾರಣ ದೇಶದ ಮಹಾನಗರಗಳ ರಸ್ತೆಗಳು ಕಿಕ್ಕಿರಿದು ತುಂಬಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ವಾಯು ಮಾರ್ಗವೇ ಇದಕ್ಕೆ ಪರಿಹಾರ ಎನ್ನುವ ಕಾರಣಕ್ಕೆ ಉಬರ್ ಏರ್ ಸೇವೆಯನ್ನು ಆರಂಭಿಸಲು ಮುಂದಾಗಿದೆ.

ಐದು ದೇಶಗಳಲ್ಲಿ;
ಮೊದಲಿಗೆ ಉಬರ್ ಆರಂಭಿಸಲಿ ಏರ್ ಟ್ಯಾಕ್ಸಿ ಸೇವೆಯೂ ಭಾರತ, ಜಪಾನ್, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಬ್ರೆಜಿಲ್ ದೇಶದಲ್ಲಿ ಆರಂಭವಾಗಲಿದೆ. ಇದಾದ ನಂತರದಲ್ಲಿ ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ಸೇವೆಯನ್ನು ಶುರು ಮಾಡಲಿದೆ ಎನ್ನಲಾಗಿದೆ.

2020ಗೆ ಆರಂಭ:
ಈಗಾಗಲೇ ಏರ್‌ಟ್ಯಾಕ್ಸಿ ಸೇವೆಯನ್ನು ಆರಂಭಿಸಲು ಗ್ರೌಂಡ್ ವರ್ಕ್ ಆರಂಭಿಸಿರುವ ಉಬರ್, 2020ಕ್ಕೆ ಈ ಸೇವೆಯನ್ನು ಲಾಂಚ್ ಮಾಡಲಿದೆ. ಆದರೆ ಸಾಮಾನ್ಯ ಪ್ರಯಾಣಿಕರು 2023ಯಿಂದ ಈ ಸೇವೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಮೊದಲಿಗೆ ಮುಂಬೈನಲ್ಲಿ:
ಏರ್ ಟ್ಯಾಕ್ಸಿ ಸೇವೆಯೂ ಮೊದಲಿಗೆ ಮುಂಬೈನಲ್ಲಿ ಆರಂಭವಾಗಲಿದೆ ಎನ್ನಲಾಗಿದೆ. ಮುಂಬೈ ಏರ್‌ಪೋರ್ಟ್‌ನಿಂದ ಮುಂಬೈ ರೈಲ್ವೆ ನಿಲ್ದಾಣಕ್ಕೆ ಮೊದಲ ಉಬರ್ ಏರ್‌ಟ್ಯಾಕ್ಸಿ ಹಾರಾಟವನ್ನು ನಡೆಸಲಿದೆ.

ಬದಲಾಗಲಿದೆ ಜಗತ್ತು:
ಇದು ತಂತ್ರಜ್ಞಾನದಿಂದ ಬದಲಾಗುತ್ತಿರುವ ಜಗತ್ತಿಗೆ ಹಿಡಿದ ಕೈಗನ್ನಡಿಯಾಗುತ್ತಿದೆ. ಮಹನಗರಗಳ ಸಂಚಾರ ಪ್ರಕ್ರಿಯೆಗೆ ಇದು ಹೊಸ ಪರಿಹಾರ ಎನ್ನಲಾಗುತ್ತಿದೆ. ಉಬರ್ ಏರ್ ಟ್ಯಾಕ್ಸಿ ಸೇವೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲವು ದೊರೆಯಲಿದೆ.
ವಿಡಿಯೋ ನೋಡಿ
ಉಬರ್ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ.


Click it and Unblock the Notifications








