ಖುಷಿ ಸುದ್ದಿ: OnePlus ಟ್ಯಾಬ್ ಬೆಲೆ ಇಳಿಕೆ! 9510mAh ಬ್ಯಾಟರಿ.. 256GB ಸ್ಟೋರೇಜ್.. ಎಷ್ಟು ಕಡಿಮೆಗೆ ಸಿಗುತ್ತೆ?
ಹೊಸ ಟ್ಯಾಬ್ ಖರೀದಿಸುವವರಿಗೆ ಇಲ್ಲಿದೆ ಒಳ್ಳೆಯ ಅವಕಾಶ. ಅದರಲ್ಲೂ ಒನ್‌ಪ್ಲಸ್ ಟ್ಯಾಬ್ಲೆಟ್ ಬಯಸುವವರಿಗೆ ಇದು ಬಂಪರ್ ಆಫರ್. ಹೌದು, ಒನ್‌ಪ್ಲಸ್ ಪ್ಯಾಡ್ 2 (OnePlus Pad 2) ಟ್ಯಾಬ್ ಬೆಲೆ ದಿಢೀರ್ ಇಳಿಕೆಯಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಶೇ.10 ರಷ್ಟು ರಿಯಾಯಿತಿ ಲಭ್ಯವಿದೆ. ಜೊತೆಗೆ, ಬ್ಯಾಂಕ್ ಆಫರ್, ಕ್ಯಾಶ್‌ಬ್ಯಾಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳ ಲಾಭ ಪಡೆಯಬಹುದು. ಬನ್ನಿ, ಈ ಟ್ಯಾಬ್‌ನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ಲೆಟ್ 12.1 ಇಂಚಿನ ದೊಡ್ಡ ಡಿಸ್ಲ್ಪೇ ಹೊಂದಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಟ್ಯಾಬ್‌ನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 256GB ಸ್ಟೋರೇಜ್, 9510mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಈ ಟ್ಯಾಬ್‌ನ ಎರಡು ರೂಪಾಂತರಗಳು ಬಿಡುಗಡೆ ಬೆಲೆಗಿಂತ ಕಡಿಮೆಗೆ ಮಾರಾಟವಾಗುತ್ತಿವೆ.

ಒನ್‌ಪ್ಲಸ್ ಪ್ಯಾಡ್ 2 ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ಲೆಟ್ 12.1 ಇಂಚಿನ 3K ಐಪಿಎಸ್ ಎಲ್‌ಸಿಡಿ ಡಿಸ್ಲ್ಪೇ ಹೊಂದಿದೆ. ಇದು 2,120 x 3,000 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಟ್ಯಾಬ್ಲೆಟ್ 144Hz ರಿಫ್ರೆಶ್ ದರ ಮತ್ತು 540Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ಟ್ಯಾಬ್ಲೆಟ್ ಡಾಲ್ಬಿ ವಿಷನ್ ಸಪೋರ್ಟ್ ಪಡೆದಿದೆ.
ಪ್ರೊಸೆಸರ್ ಯಾವುದು?
ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಸಹ ಹೊಂದಿದೆ. ಈ ಟ್ಯಾಬ್ ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ ಓಎಸ್ 14ನಲ್ಲಿ ಕೆಲಸ ಮಾಡುತ್ತದೆ.
ಸ್ಟೋರೇಜ್ ಆಯ್ಕೆ
ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ಲೆಟ್ 8GB + 128GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ಆಯ್ಕೆ ಹೊಂದಿದೆ. ನೀವು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದು.
ಕ್ಯಾಮೆರಾ ಸೆಟಪ್
ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ಲೆಟ್ 9510mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 67W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ಫೀಚರ್ಸ್‌ಗಳು
ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ ಬ್ಲೂಟೂತ್ 5.4, ವೈ-ಫೈ 7, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಇನ್ನಿತರ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿದೆ. ಇದು 6 ಸ್ಪೀಕರ್ ಸೆಟಪ್ ಸಹ ಹೊಂದಿದೆ.
ಒನ್‌ಪ್ಲಸ್ ಪ್ಯಾಡ್ 2 ಬೆಲೆ ಮತ್ತು ಆಫರ್
ಭಾರತದಲ್ಲಿ ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ಲೆಟ್ ಅನ್ನು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ಯಾಬ್‌ನ ಆರಂಭಿಕ ಬೆಲೆ 39,999 ರೂ. ಆಗಿದೆ. ಇದು 8GB + 128GB ಸ್ಟೋರೇಜ್ ಆಯ್ಕೆಯ ಬೆಲೆಯಾಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ 2000 ರೂ. ರಿಯಾಯಿತಿ ಲಭ್ಯವಿದೆ. ನೀವು 37,999 ರೂ. ಬಜೆಟ್‌ನಲ್ಲಿ ಖರೀದಿಸಬಹುದು.
ಈ ಟ್ಯಾಬ್ಲೆಟ್‌ನ 12GB + 256GB ಸ್ಟೋರೇಜ್ ವೇರಿಯಂಟ್ ಬೆಲೆ 42,999 ರೂ. ಇದೆ. ಪ್ರಸ್ತುತ, ಶೇ.10 ರಷ್ಟು ರಿಯಾಯಿತಿ ಸಿಗುತ್ತದೆ. ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಜೊತೆಗೆ ಎಕ್ಸ್‌ಚೇಂಜ್ ಆಫರ್ ಸಹ ಪಡೆಯಬಹುದು. ನೀವು ನಿಂಬಸ್ ಗ್ರೇ ಬಣ್ಣದಲ್ಲಿ ಒನ್‌ಪ್ಲಸ್ ಪ್ಯಾಡ್ 2 ಅನ್ನು ಖರೀದಿಸಬಹುದು.


Click it and Unblock the Notifications








