Home
Tablets

ಭರ್ಜರಿ ಬೆಲೆ ಇಳಿಕೆ! 3,500 ಡಿಸ್ಕೌಂಟ್.. 8360mAh ಬ್ಯಾಟರಿ.. 11.5 ಇಂಚಿನ ಡಿಸ್ಪ್ಲೇ.. ಯಾವ ಟ್ಯಾಬ್‌?

ಕಡಿಮೆ ಬಜೆಟ್‌ನಲ್ಲಿ ಹೊಸ ಟ್ಯಾಬ್‌ ಬಯಸುವವರಿಗೆ ಒಳ್ಳೆಯ ಸುದ್ದಿ ನೀಡಿದೆ. ರಿಯಲ್‌ಮಿ ಕಂಪನಿಯು ಅತ್ಯಾಕರ್ಷಕ ವೈಶೀಷ್ಟ್ಯಗಳನ್ನು ಹೊಂದಿರುವ ಟ್ಯಾಬ್ಲೆಟ್‌ ಬೆಲೆಯನ್ನು ದಿಢೀರ್ ಇಳಿಕೆ ಮಾಡಿದೆ. ಹೌದು, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ಲೆಟ್ (Realme Pad 2) ಅನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು ಬೂದು ಮತ್ತು ಹಸಿರು ಬಣ್ಣಗಳಲ್ಲಿ ಈ ಟ್ಯಾಬ್‌ ಖರೀದಿಸಬಹುದು. ಬನ್ನಿ, ಈ ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್‌ನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ಲೆಟ್‌ ಅನ್ನು ಭಾರತದಲ್ಲಿ 19,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಇದು 6GB RAM + 128GB ಸ್ಟೋರೇಜ್‌ ರೂಪಾಂತರದ ಬೆಲೆ ಆಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 2,000 ರೂ.ಗಳ ರಿಯಾಯಿತಿ ನಿಡಲಾಗುತ್ತಿದೆ. ಇದರೊಂದಿಗೆ 17,999 ರೂ.ಗೆ ಮಾರಾಟವಾಗುತ್ತಿದೆ. ಜೊತೆಗೆ ನೀವು 1500 ರೂ. ಬ್ಯಾಂಕ್ ರಿಯಾಯಿತಿ ಸಹ ಪಡೆಯಬಹುದು. ಬಳಿಕ, ನೀವು ಕೇವಲ 16,499 ರೂ. ಬಜೆಟ್‌ನಲ್ಲಿ ಈ ಟ್ಯಾಬ್‌ ಅನ್ನು ಖರೀದಿಸಬಹುದು. ಇದು ಬಜೆಟ್ ಸ್ನೇಹಿ ಟ್ಯಾಬ್ಲೆಟ್ ಆಗಿದೆ.

Realme Pad 2 ಬೆಲೆ ಇಳಿಕೆ; ಬಿಗ್ ಬ್ಯಾಟರಿ, ದೊಡ್ಡ ಡಿಸ್ಪ್ಲೇ.. 3500 ಡಿಸ್ಕೌಂಟ್

ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ಲೆಟ್ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ಲೆಟ್ 11.5 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 2000x 1200 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ ಅಡಾಪ್ಟಿವ್ ರಿಫ್ರೆಶ್ ರೇಟ್ ಫೀಚರ್ ಅನ್ನು ಇದರಲ್ಲಿ ನೀಡಲಾಗಿದೆ. ಇದಲ್ಲದೆ, ಇದು ನೀಲಿ ಬೆಳಕಿನ ರಕ್ಷಣೆ ಫೀಚರ್‌ ಸಹ ಹೊಂದಿದೆ. ಈ ಟ್ಯಾಬ್ಲೆಟ್ 10.4 ಇಂಚಿನ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾದ ರಿಯಲ್‌ಮಿನ ಮೊದಲ ಟ್ಯಾಬ್ಲೆಟ್ ಆಗಿದೆ. ಈ ಟ್ಯಾಬ್ಲೆಟ್ ಡಾಲ್ಬಿ ಅಟ್ಮಾಸ್ ಮತ್ತು ಕ್ವಾಡ್ ಸ್ಪೀಕರ್‌ಗಳನ್ನು ಸಹ ಸಪೋರ್ಟ್‌ ಮಾಡಲಿದೆ.

ಪ್ರೊಸೆಸರ್ ಯಾವುದು?

ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ಲೆಟ್ ಮೀಡಿಯಾ ಟೆಕ್ ಹೆಲಿಯೋ G99 ಪ್ರೊಸೆಸರ್‌ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಟ್ಯಾಬ್‌ ಆಂಡ್ರಾಯ್ಡ್‌ 13 ಆಧಾರಿತ ರಿಯಲ್‌ಮಿ ಯುಐ 4.0 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಇದು 6GB, 8GB RAM ಮತ್ತು 128GB, 256GB ಸ್ಟೋರೇಜ್‌ ಆಯ್ಕೆ ಹೊಂದಿದೆ. ಈ ಟ್ಯಾಬ್ಲೆಟ್‌ನ ಆಂತರಿಕ ಸ್ಟೋರೇಜ್‌ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.

Realme Pad 2 ಬೆಲೆ ಇಳಿಕೆ; ಬಿಗ್ ಬ್ಯಾಟರಿ, ದೊಡ್ಡ ಡಿಸ್ಪ್ಲೇ.. 3500 ಡಿಸ್ಕೌಂಟ್

ಕ್ಯಾಮೆರಾ ಸೆಟಪ್

ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ 8 ಮೆಗಾಪಿಕ್ಸೆಲ್ ಎಐ (AI) ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಟ್ಯಾಬ್‌ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. OnePlus Pad 2 ಟ್ಯಾಬ್‌ನ ಕ್ಯಾಮೆರಾ ಸೆಟಪ್‌ಗೆ ಹೋಲಿಸಿದರೆ ರಿಯಲ್‌ಮಿ ಪ್ಯಾಡ್‌ 2 ಉತ್ತಮ ಆಯ್ಕೆಯಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ಲೆಟ್ 8,360mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ಸೂಪರ್‌ವೈಕ್ ವೇಗದ ಚಾರ್ಜಿಂಗ್ ಮತ್ತು ವೈರ್ಡ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಡ್ಯುಯಲ್ ಬ್ಯಾಂಡ್ ವೈ-ಫೈ 802, ಬ್ಲೂಟೂತ್ 5.3 ಹೊಂದಿದೆ. ಇದರಲ್ಲಿ ಅಲ್ಟ್ರಾ ವಿಷನ್ ಎಂಜಿನ್ ಬೆಂಬಲ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಗ್ರಾಫಿಕ್ಸ್‌ಗಾಗಿ ಇದು, ಆರ್ಮ್ ಮಾಲಿ G57 ಜಿಪಿಯು ಸಹ ಒಳಗೊಂಡಿದೆ.

Best Mobiles in India

English summary
3,500 discount on Realme Pad 2 with 6GB RAM in flipkart sale: check new price, offers, availability, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+