Acer: ಎರಡು ಹೊಸ ಟ್ಯಾಬ್ ಬಿಡುಗಡೆ; ದೊಡ್ಡ ಡಿಸ್ಪ್ಲೇ.. ಬಿಗ್ ಬ್ಯಾಟರಿ.. ಕಡಿಮೆ ಬೆಲೆ!
ಏಸರ್ (Acer) ಕಂಪನಿಯು ಸದ್ದಿಲ್ಲದೆ ಎರಡು ಹೊಸ ಟ್ಯಾಬ್ಲೆಟ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇವು, ಏಸರ್ ಐಕೋನಿಯಾ iM9-12M (Iconia Tab iM9-12M) ಮತ್ತು ಏಸರ್ ಐಕೋನಿಯಾ iM10-22M (Iconia Tab iM10-22M) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಎರಡೂ ಟ್ಯಾಬ್ಲೆಟ್‌ಗಳು ಡ್ಯುಯಲ್ ಸಿಮ್ 4G LTE ಅನ್ನು ಹೊಂದಿವೆ. ನೀವು, ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದ್ರೆ 10 ಗಂಟೆ ಬ್ಯಾಟರಿ ಬ್ಯಾಕಪ್ ಪಡೆಯಬಹುದು. ಈ ಹೊಸ ಟ್ಯಾಬ್ಲೆಟ್‌ಗಳು ಗೇಮಿಂಗ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿವೆ.
ಏಸರ್ ಐಕೋನಿಯಾ iM9-12M ಟ್ಯಾಬ್ 8.7 ಇಂಚಿನ ಡಿಸ್ಪ್ಲೇ ಹೊಂದಿದೆ. ಐಕೋನಿಯಾ iM10-22M ಟ್ಯಾಬ್‌ನಲ್ಲಿ 10.36 ಇಂಚಿನ ಡಿಸ್ಪ್ಲೇ ಲಭ್ಯವಿದೆ. iM9-12M ಟ್ಯಾಬ್ ಮೀಡಿಯಾಟೆಕ್ ಹೆಲಿಯೋ P22T ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. iM10-22M ಟ್ಯಾಬ್ ಮೀಡಿಯಾ ಟೆಕ್ ಹೆಲಿಯೊ G99 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. iM9-12M ಟ್ಯಾಬ್ 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ್ದರೆ, iM10-22M ಟ್ಯಾಬ್‌ನಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಬನ್ನಿ, ಈ ಹೊಸ ಟ್ಯಾಬ್ಲೆಟ್‌ಗಳ ಬೆಲೆ ತಿಳಿಯೋಣ.

ಹೊಸ ಟ್ಯಾಬ್ಲೆಟ್‌ಗಳ ಬೆಲೆ ಮತ್ತು ಲಭ್ಯತೆ
ಐಕೋನಿಯಾ iM9-12M ಟ್ಯಾಬ್‌ನ 4GB ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 11,990 ರೂ. ಆಗಿದೆ. ಐಕೋನಿಯಾ iM9-22M ಟ್ಯಾಬ್‌ನ 6GB ಮತ್ತು 128GB ಸ್ಟೋರೇಜ್ ಅನ್ನು 14,990 ರೂ.ಗೆ ಬಿಡುಗಡೆ ಮಾಡಲಾಗಿದೆ. ಇನ್ನೂ, ಐಕೋನಿಯಾ iM9-22M ಟ್ಯಾಬ್‌ನ 8GB ಮತ್ತು 256GB ಸ್ಟೋರೇಜ್ ವೇರಿಯಂಟ್ ಬೆಲೆ 16,990 ರೂ. ಇದೆ. ನೀವು, ಈ ಹೊಸ ಟ್ಯಾಬ್ಲೆಟ್‌ಗಳನ್ನು ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್, ಏಸರ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು ಮತ್ತು ಏಸರ್ ಆನ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು.
ಏಸರ್ ಐಕೋನಿಯಾ iM9-12M ಟ್ಯಾಬ್‌ನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಏಸರ್ ಐಕೋನಿಯಾ iM9-12M ಟ್ಯಾಬ್ 8.7 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 1340x800 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಏಸರ್ ಐಕೋನಿಯಾ iM9-12M ಟ್ಯಾಬ್ ಅನ್ನು ಮೀಡಿಯಾಟೆಕ್ ಹೆಲಿಯೋ P22T ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಇದು 2 ವರ್ಷಗಳ ಓಎಸ್ ನವೀಕರಣಗಳು ಮತ್ತು 3 ವರ್ಷಗಳ ಭದ್ರತಾ ನವೀಕರಣಗಳನ್ನು ಒಳಗೊಂಡಿದೆ. ಈ ಟ್ಯಾಬ್ 4GB RAM ಜೊತೆಗೆ 64GB ಸ್ಟೋರೇಜ್ ಹೊಂದಿದೆ. ನೀವು, ಮೈಕ್ರೋ ಎಸ್‌ಡಿ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.
ಕ್ಯಾಮೆರಾ ಸೆಟಪ್
ನೂತನ ಟ್ಯಾಬ್ 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಫ್ಲಾಶ್‌ನೊಂದಿಗೆ ಬರುತ್ತದೆ. ಟ್ಯಾಬ್‌ನಲ್ಲಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಏಸರ್ ಐಕೋನಿಯಾ iM9-12M ಟ್ಯಾಬ್ 5100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 10W ವೇಗದ ಟೈಪ್ ಸಿ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು 8 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ.
ಇತರೆ ವೈಶಿಷ್ಟ್ಯಗಳು
ಏಸರ್ ಐಕೋನಿಯಾ iM9-12M ಟ್ಯಾಬ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ, ಡ್ಯುಯಲ್ ಸಿಮ್, ಬ್ಲೂಟೂತ್ v5.2, VoLTE ಸಿಮ್ ಬೆಂಬಲದೊಂದಿಗೆ 4G LTE, ಡ್ಯುಯಲ್ ಬ್ಯಾಂಡ್ ವೈ ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ಈ ಸುದ್ದಿ ಓದಿದ್ದೀರಾ?: ಕೇವಲ 9999 ಸಾಕು! Motorola G45 5G ಬೆಲೆ ಇಳಿಕೆ; 50MP ಕ್ಯಾಮೆರಾ.. ಬಿಗ್ ಬ್ಯಾಟರಿ.. ಖರೀದಿ ಎಲ್ಲಿ?

ಏಸರ್ ಐಕೋನಿಯಾ iM10-22M ಟ್ಯಾಬ್‌ನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಏಸರ್ ಐಕೋನಿಯಾ iM10-22M ಟ್ಯಾಬ್ಲೆಟ್ 10.36 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 1200x2000 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 480 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಏಸರ್ ಐಕೋನಿಯಾ iM10-22M ಟ್ಯಾಬ್ ಮೀಡಿಯಾ ಟೆಕ್ ಹೆಲಿಯೊ G99 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಇದು 3 ವರ್ಷಗಳ ಓಎಸ್ ನವೀಕರಣಗಳು ಮತ್ತು 2 ವರ್ಷಗಳ ಭದ್ರತಾ ನವೀಕರಣಗಳನ್ನು ಒಳಗೊಂಡಿದೆ. ಈ ಟ್ಯಾಬ್ 6GB, 8GB RAM ಜೊತೆಗೆ 128GB, 256GB ಸ್ಟೋರೇಜ್ ಹೊಂದಿದೆ. ನೀವು, ಮೈಕ್ರೋ ಎಸ್‌ಡಿ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.
ಕ್ಯಾಮೆರಾ ಸೆಟಪ್
ಹೊಸ ಟ್ಯಾಬ್ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಟ್ಯಾಬ್‌ನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಏಸರ್ ಐಕೋನಿಯಾ iM10-22M ಟ್ಯಾಬ್ 7100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 18W ವೇಗದ ಟೈಪ್ ಸಿ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು 10 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ.
ಇತರೆ ವೈಶಿಷ್ಟ್ಯಗಳು
ಏಸರ್ ಐಕೋನಿಯಾ iM10-22M ಟ್ಯಾಬ್ ಪ್ಯೂರ್‌ವಾಯ್ಸ್ ಕ್ವಾಡ್ ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ, ಡ್ಯುಯಲ್ ಸಿಮ್, ಬ್ಲೂಟೂತ್ v5.2, VoLTE ಸಿಮ್ ಬೆಂಬಲದೊಂದಿಗೆ 4G LTE, ಡ್ಯುಯಲ್ ಬ್ಯಾಂಡ್ ವೈ ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








