Home
Tablets

ಸದ್ದಿಲ್ಲದೆ HONOR Pad V9 ಲಾಂಚ್; 10100mAh ದೊಡ್ಡ ಬ್ಯಾಟರಿ.. 512GB ಸ್ಟೋರೇಜ್.. ಬಜೆಟ್‌ ಬೆಲೆ!

ಹಾನರ್‌ ತನ್ನ ಅಭಿಮಾನಿಗಳಿಗೆ ಡಬಲ್ ಗುಡ್‌ ನ್ಯೂಸ್‌ ನೀಡಿದೆ. ಹೊಸ ಹಾನರ್ GT (HONOR GT) ಫೋನನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಹಾನರ್ ಪ್ಯಾಡ್ V9 (HONOR Pad V9) ಟ್ಯಾಬ್ಲೆಟ್ ಸಹ ಲೋಕಾರ್ಪಣೆಗೊಳಿಸಿದೆ. ಇದು 475 ಗ್ರಾಂ ತೂಕ ಹೊಂದಿದೆ. ಈ ಟ್ಯಾಬ್‌ ಸ್ಮಾರ್ಟ್ ಬ್ಲೂಟೂತ್ ಕೀಬೋರ್ಡ್ ಮತ್ತು ಮ್ಯಾಜಿಕ್ ಪೆನ್ಸಿಲ್ 3 ನೊಂದಿಗೆ ಬರುತ್ತದೆ. ಬನ್ನಿ, ಹಾನರ್ ಪ್ಯಾಡ್ V9 ಟ್ಯಾಬ್‌ನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಹಾನರ್ ಪ್ಯಾಡ್ V9 ನಾಲ್ಕು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಪ್ರಮುಖ ವಿಶೇಷತೆಯೆಂದರೆ, ಇದು ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಕಂಪನಿಯು ಇದನ್ನು10,100mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು ಡೈಮೆನ್ಸಿಟಿ 8350 ಎಕ್ಸ್ಟ್ರೀಮ್ ಎಡಿಷನ್ ಪ್ರೊಸೆಸರ್‌ ಹೊಂದಿದೆ. ಈ ಟ್ಯಾಬ್ 11.5 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 512GB ಸ್ಟೋರೇಜ್, 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 66W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

HONOR Pad V9 ಲಾಂಚ್; ದೊಡ್ಡ ಬ್ಯಾಟರಿ.. ಬಿಗ್ ಸ್ಟೋರೇಜ್.. ಕಡಿಮೆ ಬೆಲೆ!

ಹಾನರ್ ಪ್ಯಾಡ್ V9 ಬೆಲೆ ಮತ್ತು ಲಭ್ಯತೆ

8GB + 128GB ಸ್ಟೋರೇಜ್ ಬೆಲೆ = 23,305 ರೂ.
8GB + 256GB ಸ್ಟೋರೇಜ್ ಬೆಲೆ = 25,640 ರೂ.
12GB + 256GB ಸ್ಟೋರೇಜ್ ಬೆಲೆ = 29,135 ರೂ.
12GB + 512GB ಸ್ಟೋರೇಜ್ ಬೆಲೆ = 32,635 ರೂ.

ಹಾನರ್ ಪ್ಯಾಡ್ V9 ಲುಯಾನ್ ಪರ್ಪಲ್, ಯುಲಾಂಗ್ ಸ್ನೋ ಮತ್ತು ಕ್ಯಾಂಗ್ಶನ್ ಗ್ರೇ ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಸಾಫ್ಟ್ ಲೈಟ್ ಆವೃತ್ತಿಯ 8GB + 256GB ಸ್ಟೋರೇಜ್ ಬೆಲೆ 27,970 ರೂ. ಮತ್ತು 12GB + 256GB ಸ್ಟೋರೇಜ್ ಬೆಲೆ 31,470 ರೂ. ಆಗಿದೆ. ಇನ್ನೂ ಮ್ಯಾಜಿಕ್ ಪೆನ್ಸಿಲ್ 3 ಬೆಲೆ 5,820 ರೂ. ಮತ್ತು ಸ್ಮಾರ್ಟ್ ಬ್ಲೂಟೂತ್ ಕೀಬೋರ್ಡ್ 5,235 ರೂ.ಗೆ ಲಭ್ಯವಿದೆ. ಪ್ರಸ್ತುತ, ಈ ಟ್ಯಾಬ್ಲೆಟ್ ಮುಂಗಡ ಬುಕಿಂಗ್‌ಗೆ ಲಭ್ಯವಿದೆ. ಡಿಸೆಂಬರ್ 24 ರಿಂದ ಚೀನಾದಲ್ಲಿ ಮಾರಾಟವಾಗಲಿದೆ.

ಹಾನರ್ ಪ್ಯಾಡ್ V9 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹಾನರ್ ಪ್ಯಾಡ್ V9 ಟ್ಯಾಬ್ಲೆಟ್ 11.5 ಇಂಚಿನ 2.8K ಡಿಸ್ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ದರ, 2800 x 1840 ಪಿಕ್ಸೆಲ್ ರೆಸಲ್ಯೂಶನ್ ಮತ್ತು 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಹಾನರ್ ಪ್ಯಾಡ್ V9 ಟ್ಯಾಬ್ ಡೈಮೆನ್ಸಿಟಿ 8350 ಎಕ್ಸ್ಟ್ರೀಮ್ ಎಡಿಷನ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ಮ್ಯಾಜಿಕ್ ಓಎಸ್‌ 9.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ನೂತನ ಹಾನರ್ ಪ್ಯಾಡ್ V9 ಟ್ಯಾಬ್ಲೆಟ್ 8GB ಮತ್ತು 12GB RAM ಹೊಂದಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

HONOR Pad V9 ಲಾಂಚ್; ದೊಡ್ಡ ಬ್ಯಾಟರಿ.. ಬಿಗ್ ಸ್ಟೋರೇಜ್.. ಕಡಿಮೆ ಬೆಲೆ!

ಕ್ಯಾಮೆರಾ ಸೆಟಪ್‌

ಹಾನರ್ ಪ್ಯಾಡ್ V9 ಟ್ಯಾಬ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, ಇದರಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಹಾನರ್ ಪ್ಯಾಡ್ V9 ಪ್ರಮುಖ ವಿಶೇಷತೆಯೆಂದರೆ, ಬ್ಯಾಟರಿ ಬ್ಯಾಕಪ್ ಆಗಿದೆ. ಕಂಪನಿಯು ಇದನ್ನು 10,100mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 66W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು 475 ಗ್ರಾಂ ತೂಕ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಹಾನರ್ ಪ್ಯಾಡ್ V9 ಟ್ಯಾಬ್ಲೆಟ್ 8 ಆಡಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ ಪ್ರಾದೇಶಿಕ ಆಡಿಯೋ, ಹೈ ರೆಸ್ ಆಡಿಯೋ ಸಹ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ 6, ಬ್ಲೂಟೂತ್ v5.2 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾನರ್ ಪ್ಯಾಡ್ V9 ಸ್ಮಾರ್ಟ್ ಬ್ಲೂಟೂತ್ ಕೀಬೋರ್ಡ್ ಮತ್ತು ಮ್ಯಾಜಿಕ್ ಪೆನ್ಸಿಲ್ 3 ನೊಂದಿಗೆ ಬರುತ್ತದೆ. ಇದು ಯೋಯೋ ಎಐ (AI) ಸಹಾಯಕ ಫೀಚರ್ಸ್ ಹೊಂದಿದೆ.

Best Mobiles in India

English summary
HONOR Pad V9 with Dimensity 8350 Ultra and 10100mAh Battery Launched: price, specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+