Lenovo: ಗೇಮಿಂಗ್‌ಗೂ ಸೈ.. ಫೋಟೋಗ್ರಫಿಗೂ ಜೈ..! ಲೆನೋವೊ ಪರಿಚಯಿಸಿದೆ ಲೇಟೆಸ್ಟ್ ಆ್ಯಂಡ್ರಾಯ್ಡ್ ಟ್ಯಾಬ್
ಲೆನೋವೊ (Lenovo) ಕಂಪನಿ ಹೊಚ್ಚ ಹೊಸ ಟ್ಯಾಬ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಟ್ಯಾಬ್ ಸಖತ್ ಸ್ಟೈಲಿಶ್ ಆಗಿದೆ. ಇದರ ಡಿಸೈನ್ ಹಾಗೂ ಫೀಚರ್ಸ್ ಟ್ಯಾಬ್ ಪ್ರಿಯರನ್ನು ಸೆಳೆಯುತ್ತಿದೆ. ಹೌದು, ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಹಲವು ಬಜೆಟ್ ಸಾಧನಗಳನ್ನು ಪರಿಚಯಿಸುತ್ತಿರುವ ಜನಪ್ರಿಯ ಟೆಕ್ ಬ್ರ್ಯಾಂಡ್ ಲೆನೋವೊ ಇದೀಗ ಮತ್ತೊಂದು ಹೊಸ Lenovo Tab Plus ಟ್ಯಾಬ್ ಅನ್ನು ಪರಿಚಯಿಸಿದೆ. ಇದು 11.5-ಇಂಚಿನ ಡಿಸ್ಪ್ಲೇ, ಎಂಟು ಸ್ಪೀಕರ್‌ಗಳು ಮತ್ತು 45W ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಅತ್ಯುತ್ತಮ ಟ್ಯಾಬ್ ಹುಡುಕುತ್ತಿರುವ ಗ್ರಾಹಕರಿಗಾಗಿ ಲೆನೋವೊ ಟ್ಯಾಬ್ ಪ್ಲಸ್ ಪರ್ಫೆಕ್ಟ್ ಆಯ್ಕೆಯಾಗಿದೆ.
ಆ್ಯಂಡ್ರಾಯ್ಡ್ ಟ್ಯಾಬ್ ಬಯಸುವವರಿಗೆ ಪ್ರಸ್ತುತ ಹಲವು ಆಯ್ಕೆಗಳು ಲಭ್ಯವಿದೆ. ಸ್ಯಾಮ್ಸಂಗ್ ಬಳಿಕ, ಚೀನಾದ ಹಲವು ಕಂಪನಿಗಳು ಆ್ಯಂಡ್ರಾಯ್ಡ್ ಟ್ಯಾಬ್ ಪರಿಚಯಿಸುತ್ತಿವೆ. ಆ್ಯಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಲೆನೋವೊ, ಹೊಸ ಟ್ಯಾಬ್ ಒಂದನ್ನು ಬಿಡುಗಡೆ ಮಾಡಿದೆ. ಲೆನೋವೊ ಟ್ಯಾಬ್ ಪ್ಲಸ್ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆಕ್ಟಾಕೋರ್ MediaTek Helio G99 6nm ಮತ್ತು 8600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಈ ಹೊಸ ಲೆನೋವೊ ಟ್ಯಾಬ್‌ನ ವಿಶೇಷತೆಯಾಗಿದೆ. ಮತ್ತಷ್ಟು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

ಈ ಟ್ಯಾಬ್‌ನ ಫೀಚರ್ಸ್ ಮಸ್ತ್
ಲೆನೋವೊ ಟ್ಯಾಬ್ ಪ್ಲಸ್ 11.5-ಇಂಚಿನ (2,000 x 1,200 pixels) LCD ಡಿಸ್ಪ್ಲೇಯೊಂದಿಗೆ ಬರುತ್ತದೆ. 90Hz ರಿಫ್ರೆಶ್ ದರ ಮತ್ತು 450 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಹೆಚ್ಚಿನ ರಕ್ಷಣೆಯ ಮಾನದಂಡಗಳೊಂದಿಗೆ ತಡೆರಹಿತ ದೃಶ್ಯ ಅನುಭವವನ್ನು ಒದಗಿಸಲು ಪ್ರದರ್ಶನವನ್ನು ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ Lenovo Tab Plus ಬಿಡುಗಡೆಗೆ ಸಂಬಂಧಿಸಿದಂತೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಕ್ಯಾಶುಯಲ್ ಗೇಮಿಂಗ್‌ಗೆ ಬೆಸ್ಟ್
ಈ ಟ್ಯಾಬ್ಲೆಟ್ ಆಕ್ಟಾ-ಕೋರ್ MediaTek Helio G99 6nm ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಟ್ಯಾಬ್ಲೆಟ್ ದಿನನಿತ್ಯದ ಕಾರ್ಯಕ್ಷಮತೆಯನ್ನು ಖಾತ್ರಿಗೊಳಿಸುತ್ತದೆ. ಇದು ಆರ್ಮ್ ಮಾಲಿ G57 MC2 GPU ಅನ್ನು ಸಹ ಒಳಗೊಂಡಿದೆ. ಇದು ಕ್ಯಾಶುಯಲ್ ಗೇಮಿಂಗ್‌ಗೆ ಯೋಗ್ಯವಾಗಿದೆ. ಇದು Android 14 ನೊಂದಿಗೆ ಬಳಕೆದಾರರ ಅನುಭವವನ್ನು ಎಂಜಾಯ್ ಮಾಡಲು ಸಹಾಯ ಮಾಡುತ್ತದೆ. ಈ ಟ್ಯಾಬ್ಲೆಟ್ 8,600mAh ಬ್ಯಾಟರಿಯನ್ನು ಹೊಂದಿದೆ. ಇದು 45 ವ್ಯಾಟ್ ವೈರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ
ಲೆನೋವೊ ಟ್ಯಾಬ್ ಪ್ಲಸ್ ಟ್ಯಾಬ್ಲೆಟ್ ಎರಡು ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯವಿದೆ. ಒಂದು 8GB RAM ಮತ್ತು 128GB ಸ್ಟೋರೇಜ್ ಮತ್ತು ಇನ್ನೊಂದು 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್. ಹೆಚ್ಚುವರಿಯಾಗಿ, ಇದು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಮೆಮೊರಿ ವಿಸ್ತರಣೆಯನ್ನು ಬೆಂಬಲಿಸುತ್ತದೆ.
ಅತ್ಯಾಕರ್ಷಕ ಕ್ಯಾಮೆರಾ ಸೆಟಪ್
Lenovo Tab Plus ಬ್ಯಾಬ್ಲೆಟ್‌ನ ಕ್ಯಾಮೆರಾ ಸೆಟಪ್ ನೋಡುವುದಾದರೆ, ಸಂಪೂರ್ಣ HD ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು 8MP ಆಟೋಫೋಕಸ್ ಹಿಂಬದಿಯ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಹಲವಾರು ಇತರ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ.
ಬ್ಯಾಟರಿ ಬ್ಯಾಕಪ್ ಸೂಪರ್
ಈ ಟ್ಯಾಬ್ 8600mAh ಬ್ಯಾಟರಿಯನ್ನು ಹೊಂದಿದ್ದು, ಲೆನೊವೊ ಟ್ಯಾಬ್ ಪ್ಲಸ್ ದೀರ್ಘಾವಧಿಯ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಬಳಕೆದಾರರು ತಮ್ಮ ಟ್ಯಾಬ್ಲೆಟ್‌ಗಳನ್ನು ತ್ವರಿತವಾಗಿ ರೀಚಾರ್ಜ್ ಮಾಡಲು ಅನುಮತಿಸುತ್ತದೆ. ಈ ಟ್ಯಾಬ್ಲೆಟ್ ವೈ-ಫೈ 802.11 ಎಸಿ, ಯುಎಸ್‌ಬಿ ಟೈಪ್-ಸಿ ಮತ್ತು ಬ್ಲೂಟೂತ್ 5.2 ಸೇರಿದಂತೆ ಬಹು ಸಂಪರ್ಕ ಆಯ್ಕೆಗಳನ್ನು ಒದಗಿಸುತ್ತದೆ.
ಸಾಫ್ಟ್ವೇರ್ ಮತ್ತು ವೈಶಿಷ್ಟ್ಯಗಳು
ಈ ಟ್ಯಾಬ್ಲೆಟ್ ಸಾಫ್ಟ್‌ವೇರ್ ಬಗ್ಗೆ ಹೇಳುವುದಾದರೆ, ಇದು Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಜೂನ್ 2028 ರವರೆಗೆ 2 ವರ್ಷಗಳ ನಿಯಮಿತ Android ಅಪ್ಡೇಟ್‌ಗಳು ಮತ್ತು ಭದ್ರತಾ ಪ್ಯಾಚ್‌ಗಳನ್ನು ಸ್ವೀಕರಿಸುತ್ತದೆ. ಇದು Dolby Atmos ಬೆಂಬಲ, ಎಂಟು JBL ಸ್ಪೀಕರ್‌ಗಳು ಮತ್ತು ವರ್ಧಿತ ಆಡಿಯೊ ಅನುಭವಕ್ಕಾಗಿ 3.5mm ಆಡಿಯೊ ಜಾಕ್ ಅನ್ನು ಸಹ ಒಳಗೊಂಡಿದೆ.
Lenovo Tab Plus ಬೆಲೆ ಎಷ್ಟು?
ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಟ್ಯಾಬ್‌ನ ಬೆಲೆ ಬಗ್ಗೆ ಕುತೂಹಲ ಮತ್ತು ಪ್ರಶ್ನೆ ಮೂಡುವುದು ಸಹಜ. ಜಾಗತಿಕ ಮಾರುಕಟ್ಟೆಯಲ್ಲಿ Lenovo Tab Plus ಇನ್ನೂ ಲಭ್ಯವಿಲ್ಲ. ಈ ಟ್ಯಾಬ್ಲೆಟ್ ಖರೀದಿಸಲು ನೀವು ಸುಮಾರು 25,000 ರೂ. (EUR 279) ಖರ್ಚು ಮಾಡಬೇಕಾಗುತ್ತದೆ. ನೀವು ಇದನ್ನು ಆಫರ್ ಒಳಗೊಂಡಂತೆ ಅಂದಾಜು 24,200 ರೂ.ಗೆ ( $289.99) ಸಹ ನಿಮ್ಮದಾಗಿಸಿಕೊಳ್ಳಬಹುದು. ಇದು ಲೂನಾ ಗ್ರೇ ಬಣ್ಣದಲ್ಲಿ ಲಭ್ಯವಿದೆ.
ಲೆನೊವೊ ಟ್ಯಾಬ್ ಪ್ಲಸ್ ಸಂಪೂರ್ಣ ವಿಶೇಷತೆಗಳು
- ಬ್ರಾಂಡ್: ಲೆನೊವೊ
- ಮಾಡೆಲ್: ಟ್ಯಾಬ್ ಪ್ಲಸ್
- ಬಣ್ಣ: ಲೂನಾ ಗ್ರೇ
- ಭಾರತದಲ್ಲಿ ಬಿಡುಗಡೆ: ಇಲ್ಲ
- ಫಾರ್ಮ್ ಫ್ಯಾಕ್ಟರ್: ಟಚ್‌ಸ್ಕ್ರೀನ್
- ಅಳತೆ: (mm): 268.30 x 174.25 x 7.77
- ಬ್ಯಾಟರಿ: 8600mAh
- ಡಿಸ್ಲ್ಪೇ: ಡಿಸ್ಲ್ಪೇ ಗಾತ್ರ (inches)- 11.50, ರೆಸಲ್ಯೂಶನ್- 2000x1200 ಪಿಕ್ಸೆಲ್‌ಗಳು
- ಹಾರ್ಡ್‌ವೇರ್: ಪ್ರೊಸೆಸರ್- ಆಕ್ಟಾ-ಕೋರ್, ಪ್ರೊಸೆಸರ್ ಮೇಕ್- ಮೀಡಿಯಾಟೆಕ್ ಹೆಲಿಯೊ ಜಿ 99, 8 ಜಿಬಿ RAM
- ಸ್ಟೋರೇಜ್: 128 ಜಿಬಿ (ವಿಸ್ತರಿಸಬಹುದಾದ ಸಂಗ್ರಹ), ವಿಸ್ತರಿಸಬಹುದಾದ ಶೇಖರಣಾ ಪ್ರಕಾರ- ಮೈಕ್ರೊ ಎಸ್ಡಿ
- ಕ್ಯಾಮೆರಾ: ಹಿಂದಿನ ಕ್ಯಾಮೆರಾ 8 ಎಂಪಿ, ಫ್ರಂಟ್ ಕ್ಯಾಮೆರಾ 8 ಎಂಪಿ
- ಸಾಫ್ಟ್‌ವೇರ್: ಆಪರೇಟಿಂಗ್ ಸಿಸ್ಟಮ್- ಆಂಡ್ರಾಯ್ಡ್ 14
- ಕನೆಕ್ಟಿವಿಟಿ ಆಯ್ಕೆಗಳು: ಯುಎಸ್‌ಬಿ ಟೈಪ್-ಸಿ, ವೈ-ಫೈ, ವೈ-ಫೈ ಮಾನದಂಡಗಳು ಬೆಂಬಲಿತ- 802.11 ಎ/ಬಿ/ಜಿ/ಎನ್/ಎಸಿ, ಬ್ಲೂಟೂತ್ ಆವೃತ್ತಿ 5.20


Click it and Unblock the Notifications








