Home
Tablets

ಜನ ಮೆಚ್ಚಿದ ಟ್ಯಾಬ್ಲೆಟ್‌ಗಳು.. ಯಾರೇ ಆಗಲಿ ಈಗಲೇ ಕೊಳ್ಳುವವರು! ಯಾವುದು ಬೆಸ್ಟ್?

OnePlus Pad 2 vs Realme Pad 2: ಒನ್‌ಪ್ಲಸ್ (OnePlus) ಇತ್ತೀಚೆಗೆ ಭಾರತದಲ್ಲಿ ನಡೆದ ತನ್ನ 'ಒನ್‌ಪ್ಲಸ್ ಸಮ್ಮರ್ ಲಾಂಚ್ ಈವೆಂಟ್'ನಲ್ಲಿ OnePlus Pad 2 ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ದೊಡ್ಡ ಬ್ಯಾಟರಿ ಮತ್ತು ಹಲವು ಅತ್ಯಾಕರ್ಷಕ ಫೀಚರ್ಸ್‌ಗಳೊಂದಿಗೆ ಈ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮತ್ತೊಂದೆಡೆ, ಈಗಾಗಲೇ ರಿಯಲ್‌ಮಿ (Realme) ಕಂಪನಿಯ Realme Pad 2 ಸಹ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೀಗಾಗಿ, OnePlus Pad 2 ಮತ್ತು Realme Pad 2 ಕುರಿತು ಗ್ರಾಹಕರ ಮನಸ್ಸಿನಲ್ಲಿ ಪ್ರಶ್ನೆಯೊಂದು ಉದ್ಭವಿಸಿದೆ. ಯಾವುದು ಆ ಪ್ರಶ್ನೆ? ಇದಕ್ಕೆ ಪರಿಹಾರ ಏನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಈ ಎರಡು ಟ್ಯಾಬ್ಲೆಟ್‌ಗಳಲ್ಲಿ ಯಾವುದನ್ನು ನಾವು ಖರೀದಿಸಬೇಕು? ಎಂಬ ಗೊಂದಲವಿದೆ. ಕೆಲವರು OnePlus Pad 2 ಖರೀದಿಸಿದರೆ, ಮತ್ತೆ ಕೆಲವರು Realme Pad 2 ಅನ್ನು ಆಯ್ಕೆ ಮಾಡಬಹುದು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಿಮ್ಮ ಚಿಂತೆಯನ್ನು ದೂರ ಮಾಡಲು, ನಾವು ಈ ಎರಡು ಟ್ಯಾಬ್ಲೆಟ್‌ಗಳ ಬಗೆಗಿನ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಈ ಮೂಲಕ ಯಾವ ಟ್ಯಾಬ್ಲೆಟ್ ನಿಮಗೆ ಉತ್ತಮ ಆಯ್ಕೆಯಾಗಿದೆ ಅನ್ನೋದನ್ನು ನೀವು ಸ್ಪಷ್ಟವಾಗಿ ಅರಿಯಬಹುದು.

OnePlus Pad 2 vs Realme Pad 2: ಯಾವ ಟ್ಯಾಬ್‌ ಬೆಸ್ಟ್? ಇಲ್ಲಿದೆ ಡೀಟೈಲ್ಸ್

OnePlus Pad 2 ಮತ್ತು Realme Pad 2 ಬೆಲೆ ಎಷ್ಟು?

ಭಾರತದಲ್ಲಿ OnePlus Pad 2ನ ಆರಂಭಿಕ ಬೆಲೆ 39,999 ರೂಪಾಯಿ. ಇದು OnePlus Pad 2ನ 8GB/128GB ಮೂಲ ಸ್ಟೋರೇಜ್‌ ಮಾದರಿಯ ಬೆಲೆ ಆಗಿದೆ. ಆದರೆ, ಇದರ 12GB/256GB ಸ್ಟೋರೇಜ್‌ ವೇರಿಯಂಟ್‌ನ ಬೆಲೆ 42,999 ರೂ. ಇದೆ. ಇದು ಕೇವಲ ಒಂದು ಬಣ್ಣದ ಆಯ್ಕೆ ಪಡೆದಿದೆ. ಸಿಂಗಲ್ ನಿಂಬಸ್ ಗ್ರೇ ಬಣ್ಣದಲ್ಲಿ OnePlus Pad 2 ಅನ್ನು ಖರೀದಿಸಬಹುದಾಗಿದೆ.

Realme Pad 2 ಬೆಲೆ: ಕಂಪನಿಯು ಈ ಟ್ಯಾಬ್ಲೆಟ್‌ನ 6GB RAM + 128GB (Wi-Fi ರೂಪಾಂತರ) ಸ್ಟೋರೇಜ್‌ ವೇರಿಯಂಟ್‌ ಅನ್ನು 17,999 ರೂ. ಬೆಲೆಗೆ ಪರಿಚಯಿಸಿದೆ. ಈ ಟ್ಯಾಬ್ಲೆಟ್‌ನ 4G LTE ರೂಪಾಂತರವನ್ನು 6GB RAM + 128GB ಮತ್ತು 8GB RAM + 256GB ಎಂಬ ಎರಡು ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಖರೀದಿಸಬಹುದು. ಇದರ ಮೂಲ ರೂಪಾಂತರದ ಬೆಲೆ 19,999 ರೂಪಾಯಿ. ಟಾಪ್ ವೇರಿಯಂಟ್ ಬೆಲೆ 22,999 ರೂ. ಆಗಿದೆ.ಈ ಟ್ಯಾಬ್ಲೆಟ್ ಅನ್ನು ಇಮ್ಯಾಜಿನೇಶನ್ ಗ್ರೇ ಮತ್ತು ಇನ್ಸ್ಪಿರೇಷನ್ ಗ್ರೀನ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.

OnePlus Pad 2 ಮತ್ತು Realme Pad 2ನ ವಿಶೇಷತೆಗಳು

ಡಿಸ್‌ಪ್ಲೇ: OnePlus Pad 2 ಟ್ಯಾಬ್ಲೆಟ್‌ 12.1 ಇಂಚಿನ 3K (2,120x3,000 ಪಿಕ್ಸೆಲ್‌ಗಳು) IPS LCD ಡಿಸ್ಲ್ಪೇಯನ್ನು ಹೊಂದಿದೆ. ಇದು 7:5 ಆಕಾರ ಅನುಪಾತದೊಂದಿಗೆ ಬರಲಿದೆ. ಟ್ಯಾಬ್ಲೆಟ್ 144Hz ರಿಫ್ರೆಶ್ ರೇಟ್ ಮತ್ತು 540Hz ಟಚ್ ಸ್ಯಾಂಪ್ಲಿಂಗ್ ರೇಟ್‌ನೊಂದಿಗೆ ಬರುತ್ತದೆ. ಇದರ ಡಿಸ್ಲ್ಪೇಯು 900nits ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಟ್ಯಾಬ್ಲೆಟ್ ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ.

Realme Pad 2 ಟ್ಯಾಬ್ಲೆಟ್ 120Hz 2K ರೆಸಲ್ಯೂಶನ್‌ನೊಂದಿಗೆ 11.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಸ್ಮಾರ್ಟ್ ಅಡಾಪ್ಟಿವ್ ರಿಫ್ರೆಶ್ ರೇಟ್ ಫೀಚರ್ ಅನ್ನು ಇದರಲ್ಲಿ ನೀಡಲಾಗಿದೆ. ಇದಲ್ಲದೆ, ಇದು ನೀಲಿ ಬೆಳಕಿನ ರಕ್ಷಣೆ ಫೀಚರ್‌ ಅನ್ನು ಹೊಂದಿದೆ. ಈ ಟ್ಯಾಬ್ಲೆಟ್ 10.4 ಇಂಚಿನ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾದ ರಿಯಲ್‌ಮಿನ ಮೊದಲ ಟ್ಯಾಬ್ಲೆಟ್ ಆಗಿದೆ. ಈ ಟ್ಯಾಬ್ಲೆಟ್ ಡಾಲ್ಬಿ ಅಟ್ಮಾಸ್ ಮತ್ತು ಕ್ವಾಡ್ ಸ್ಪೀಕರ್‌ಗಳನ್ನು ಸಹ ಸಪೋರ್ಟ್‌ ಮಾಡಲಿದೆ.

ಸ್ಟೋರೇಜ್ ಆಯ್ಕೆಗಳು: ಒನ್‌ಪ್ಲಸ್‌ನ ಇತ್ತೀಚಿನ Android ಟ್ಯಾಬ್ಲೆಟ್‌ನಲ್ಲಿನ ಸ್ನಾಪ್‌ಡ್ರಾಗನ್ ಚಿಪ್ ಅನ್ನು 12GB RAM ಮತ್ತು 256GB ವರೆಗಿನ ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. Realme Pad 2ನಲ್ಲಿ MediaTek Helio G99 ಪ್ರೊಸೆಸರ್ ಇದೆ. ಇದಲ್ಲದೆ, ಇದು 6GB/8GB RAM ಮತ್ತು 128GB/256GB ಇಂಟರ್ನಲ್ ಸ್ಟೋರೇಜ್‌ ಅನ್ನು ಹೊಂದಿದೆ. ಈ ಟ್ಯಾಬ್ಲೆಟ್‌ನ ಇಂಟರ್ನಲ್‌ ಸ್ಟೋರೇಜ್‌ ಅನ್ನು ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು.

ಬ್ಯಾಟರಿ ಬ್ಯಾಕಪ್: OnePlus Pad 2 ಟ್ಯಾಬ್‌ 9,510mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W SUPERVOOC ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇನ್ನೂ, Realme Pad 2 ಟ್ಯಾಬ್ 8,360mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು 33W SuperVOOC ವೇಗದ ಚಾರ್ಜಿಂಗ್ ಮತ್ತು ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ನೀಡಲಾಗಿದೆ.

ಕ್ಯಾಮೆರಾ ಸೆಟಪ್: OnePlus Pad 2 ಟ್ಯಾಬ್ಲೆಟ್ 13MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಕ್ಲಿಕ್ಕಿಸಲು ಇದು 8MP ಫ್ರಂಟ್‌ ಕ್ಯಾಮೆರಾವನ್ನು ಹೊಂದಿದೆ. ಮತ್ತೊಂದೆಡೆ, Realme Pad 2 ಟ್ಯಾಬ್ 8MP AI ಕ್ಯಾಮೆರಾವನ್ನು ಹೊಂದಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ಸೆಟಪ್‌ಗೆ ಹೋಲಿಸಿದರೆ Realme Pad 2 ಉತ್ತಮ ಆಯ್ಕೆಯಾಗಿದೆ.

ಇತರೆ ಫೀಚರ್ಸ್‌ಗಳು: ಒನ್‌ಪ್ಲಸ್‌ನ ಈ ಹೊಸ ಟ್ಯಾಬ್ಲೆಟ್ Android 14 ಆಧಾರಿತ OxygenOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. OnePlus Pad 2 ಟ್ಯಾಬ್‌ ಬ್ಲೂಟೂತ್ 5.4, Wi-Fi 7, USB ಟೈಪ್-C ಪೋರ್ಟ್ ಸೇರಿದಂತೆ ಇನ್ನಿತರ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ. ಇದು 6 ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. OnePlus Stylo 2 ಮೂಲಕ ಸ್ಟೈಲಸ್ ಸಪೋರ್ಟ್‌ನೊಂದಿಗೆ ಬರುತ್ತದೆ.

ಇನ್ನೂ, Realme Pad 2 ಟ್ಯಾಬ್ಲೆಟ್‌ Android 13 ಆಧಾರಿತ Realme UI 4.0 ಅನ್ನು ಹೊಂದಿದೆ. ಈ ಟ್ಯಾಬ್ಲೆಟ್ ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ 5.2 ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
OnePlus has introduced OnePlus Pad 2 in its OnePlus Summer Event in India and Realme Pad 2 has already been introduced. Here we have brought complete information about both these tablets, so that you can understand the difference between them before buying the tablet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+